ಮಿಸಸ್‌ ಅಂಡರ್‌ಸ್ಟಾಂಡಿಂಗ್‌! ಗಂಡ ಹೆಂಡಿರು ಮಾಡಬಾರದ ಈ ಐದು ತಪ್ಪುಗಳು


Team Udayavani, Jan 11, 2017, 3:45 AM IST

lead.jpg

“ಅವ್ಳು ನನ್ನ ಮಿಸ್ಸೆಸ್‌’ ಅಂತ ಪರಿಚಯ ಮಾಡಿಕೊಡ್ತಾನೆ ಗಂಡ. ಎದುರಿದ್ದವರು ಸೌಜನ್ಯದ ನಮಸ್ಕಾರ ಹಾಕುತ್ತಾರೆ. ಅವಳ ಹೆಸರೇನು, ಏನ್‌ ಮಾಡ್ತಿದ್ದಾಳೆ ಅನ್ನೋದರ ಬಗ್ಗೆ ಒಂದು ಲೈನ್‌ ಆದ್ರೂ ಹೇಳಬಹುದಾ ಅಂದೊRಳ್ತಾಳೆ. ನೆವರ್‌, ಅವರ ಮಾತುಕತೆ ಬೇರೆ ವಿಷಯಗಳತ್ತ ಹೊರಳುತ್ತದೆ. ಸಾಮಾನ್ಯದ ಪಾರ್ಟಿಯದು. ವೇದಿಕೆ ಮೇಲೆ ಒಬ್ಬೊಬ್ಬರೇ ದಂಪತಿಗಳಿಗೆ ಆಹ್ವಾನ ಹೋಗುತ್ತೆ. ಅಲ್ಲೂ ಅದೇ ಸೀನ್‌ ರಿಪೀಟ್‌, ಮಿಸ್ಟ್‌ರ್‌ ಆ್ಯಂಡ್‌ ಮಿಸ್ಸೆಸ್‌ ಗೌತಮ್‌. ಅವಳು ಸಣ್ಣ ಮುಜುಗರವನ್ನು ತೋರಗೊಡದೇ ವೇದಿಕೆ ಮೇಲೇರುತ್ತಾಳೆ. ಇಡೀ ಪಾರ್ಟಿಯಲ್ಲಿ ಅವಳ ಅಸ್ತಿತ್ವ ಹೆಸರಿರುವ ಒಬ್ಬನ ಹೆಂಡತಿಯಾಗಿ ಅಷ್ಟೇ. 

1. ನಿರ್ಲಕ್ಷ್ಯ ಎಂಬ ನಿರ್ಲಜ್ಜ!
“ನೆಗ್ಲೆಜೆನ್ಸ್‌ ಈಸ್‌ ಬೆಸ್ಟ್‌ ಮೆಡಿಸಿನ್‌’. ನಿಮ್ಮ ಅಕ್ಕಪಕ್ಕದಲ್ಲೇ ಹಿತಶತ್ರುವೊಬ್ಬನಿದ್ದಾನೆ ಅಂತ ನಿಮಗೊಮ್ಮೆ ಗೊತ್ತಾಗುತ್ತೆ. ಮೈಕೈ ಪರಚಿಕೊಂಡರೂ ಅವನನ್ನು ಮಟ್ಟ ಹಾಕುವ ಬಗೆ ತಿಳಿಯಲ್ಲ. ಮತ್ತೇನು ಬೇಡ, ಅವನಿದ್ದಾನೆ ಅನ್ನೋದನ್ನೇ ಮರೆತುಬಿಟ್ಟವರಂತಿರಿ. ಧೂಳಿನ ಕಣದಷ್ಟು ಅವನನ್ನು ಪರಿಗಣಿಸಬೇಡಿ. ಕುಗ್ಗುತ್ತಾ ಹೋಗುವ ಆತ ಒಂದಿನ ತಾನೇ ನಿಮಗೆ ಜೀ ಹುಜೂರ್‌ ಅನ್ನುತ್ತಾನೆ. ಇದು ತುಸು ಹಳೆಯ ವಾದ. ಆದರೆ ಬಾಳ ಸಂಗಾತಿ ಯಾವ ರೀತಿಯಿಂದ ಹಿತಶತ್ರುವಾದಾಳು, ಅರಿವಿಗೆ ಬರದಂತೆ ಆಕೆಯನ್ನು ನಿರ್ಲಕ್ಷಿಸುತ್ತಾ ಬರುತ್ತಾರೆ. ಬೇರೆಲ್ಲ ಬಿಡಿ, ಸಮಾರಂಭಗಳಲ್ಲೋ, ಪಬ್ಲಿಕ್‌ ಪ್ಲೇಸ್‌ನಲ್ಲೋ ಅವಳ ಹೆಸರು ಹೇಳಿದರೆ ಇವರ ದೊಡ್ಡಸ್ತಿಕೆಗೆ ಏನು ಕುಂದೋ ಗೊತ್ತಿಲ್ಲ, ತನ್ನ ಹೆಂಡತಿ ಅಂದ ಮಾತ್ರಕ್ಕೆ ಅವಳಿಗೆ “ಮಿಸ್ಸೆಸ್‌’ ಮಾತ್ರ. ಹಸುಗೂಸಾಗಿದ್ದಾಗ ಅವಳ ಅಪ್ಪ ಅಮ್ಮ ಎಳೆಗಿವಿಯಲ್ಲಿ ಮೂರು ಸಲ ಹೇಳಿದ ಅವಳ ಹೆಸರು? ಊಹೂಂ, ಮದುವೆ ಆದಮೇಲೆ ಅದೆಲ್ಲ ಲೆಕ್ಕಕ್ಕಿಲ್ಲ. ಜೈಲ್‌ನಲ್ಲಿ ಖೈದಿಗಳನ್ನು ಹೆಸರಿಡಿದು ಕೂಗಲ್ಲ. ಅವರ ನಂಬರ್‌ ಹಿಡಿದೇ ಕರೆಯುತ್ತಾರೆ, ಅದಕ್ಕಿಂತ ಇದೇನು ದೊಡ್ಡದಲ್ಲ ಅಂತಾಳೆ ಸಿಮಾನ್‌ ದ ಬೋವ ಎಂಬ ಮಹಾನ್‌ ಚಿಂತಕಿ. 

ಟಿಪ್ಸ್‌: ದಯವಿಟ್ಟು ನೀವು ಗಂಡಸಾಗಿದ್ದಲ್ಲಿ ಅವಳಿಗೆ ಸಣ್ಣಮಟ್ಟದ ಗೌರವ ಕೊಡೋದನ್ನು ರೂಢಿಸಿಕೊಳ್ಳಿ, ನಿಮಗಷ್ಟೇ ಅವಳು ಪತ್ನಿ, ಉಳಿದವರಿಗೆ ಬರೀ ನಿಮ್ಮ ಪತ್ನಿಯಷ್ಟೇ ಅಲ್ಲ ಅನ್ನೋದು ಗೊತ್ತಿರಲಿ. ನೀವು ಹೆಣ್ಮಕ್ಕಳಾಗಿದ್ರೆ ಈ ಬಗೆಯ ಗಂಡಸರನ್ನು ನೀವೂ ಅದೇ ರೀತಿ ಟ್ರೀಟ್‌ ಮಾಡಿ. ನಿಮ್ಮ ಕಡೆಯ ಸಮಾರಂಭಗಳಲ್ಲೆಲ್ಲ ನನ್ನ ಗಂಡ ಅಂತಷ್ಟೇ ಪರಿಚಯ ಮಾಡ್ತಾ ಬನ್ನಿ, ಸ್ವಲ್ಪ ಸೂಕ್ಷ್ಮದವರಾದರೆ ಅರ್ಥ ಮಾಡ್ಕೊಳ್ತಾರೆ, ಇಲ್ಲಾಂದ್ರೆ ಬಿಡಿಸಿ ಹೇಳಿ. 

2. ಹೆಂಡ್ತಿಗೆ ಎರಡನೇ ಪ್ರಿಫ‌ರೆನ್ಸು!
ಇತ್ತೀಚೆಗೆ ಸೆಲೆಬ್ರಿಟಿಯೊಬ್ಬರ ಮನೆಗೆ ಹೋಗಿದ್ದಾಗ ಅವರೊಂದು ವಿಷಯ ಹೇಳಿದ್ರು, ಅವರಿಗೆ ಪತ್ನಿ ಅಂದ್ರೆ ತನ್ನ ಮಕ್ಕಳನ್ನು, ಫ್ಯಾಮಿಲಿಯನ್ನು ನೋಡ್ಕೊಳ್ಳುವವಳು. ಹೆಂಡತಿಗೆ ಬಟ್ಟೆಯನ್ನೂ ಅವರೇ ತರುತ್ತಾರೆ, ಹೋಗೋ ಮೊದಲು ಅವರೇ ಆಕೆ ಯಾವ ಡ್ರೆಸ್‌ ಹಾಕ್ಕೊಳ್ಳಬೇಕು ಅಂತ ನಿರ್ಧರಿಸುತ್ತಾರೆ. ಆಕೆ ಮರುಮಾತಾಡದೇ ಒಪ್ಪಿಕೊಳ್ಳಬೇಕು, ಇಲ್ಲಾಂದರೆ ತನಗೆ ಸಿಟ್ಟು ಬರುತ್ತೆ, ಆಕೆ ತನಗೆ ಗೊತ್ತಾಗದ ಹಾಗೆ ಡ್ರೆಸ್‌ ತಗೊಂಡರೂ ಹಾಗೇ ಅನಿಸುತ್ತೆ ಅಂದ್ರು. ಅವರು ಪತ್ನಿಯಲ್ಲಿ ಕೇಳಿದೆ, ಇದು ನಿಮಗೆ ಬೇಸರ ತಂದಿಲ್ವಾ ಅಂತ. “ಅವರು ನಮ್ಮ ಮೇಲಿನ ಪ್ರೀತಿಗೆ ತಾನೆ ಹಾಗ್ಮಾಡೋದು’ ಅಂದು ಸುಮ್ಮನಾದರು. ಆದರೆ ಅವರ ಕಣ್ಣುಗಳು ಸತ್ಯ ಹೇಳುತ್ತಿದ್ದವು. ಗಂಡ, “ನೀನು ಈ ಬಟ್ಟೆಯಲ್ಲಿ ಚೆಂದ ಕಾಣಿ¤àಯ ‘ ಅಂದ್ರೆ ಓಕೆ, ಆಕೆ ಅದನ್ನೇ ಆಯ್ಕೆ ಮಾಡ್ತಾಳೆ, ಬದಲಿಗೆ, ಯೂ ಶುಡ್‌! ಅಂತ ಅಬ್ಬರಿಸಿದರೆ ಆಕೆಗಿಷ್ಟ ಆಗಲ್ಲ ಅನ್ನೋ ಸತ್ಯ ಆ ವಡ್ಡ ಗಂಡನಿಗೆ ಅರ್ಥ ಆಗಲ್ಲ. 

ಹೊಂದಾಣಿಕೆ ಎಲ್ಲ ಹೆಂಡತಿ ಮಾತ್ರ, ತನಗೆಲ್ಲ ಅನ್ವಯಿಸಲ್ಲ ಅನ್ನೋ ಒಣಹಮ್ಮು ಆಕೆಯನ್ನು ಅರ್ಥಮಾಡಿಕೊಳ್ಳಲು ಅವಕಾಶ ಕೊಡಲ್ಲ. ಹಾಗಾಗಿ ಮತ್ತೂಂದು ಆಕೆ ಪ್ರೀತಿಯ ಕಡೆ ಇಣುಕುತ್ತಾಳೆ. 

ಟಿಪ್ಸ್‌: ನೀವು ಹೆಂಡತಿಯಾಗಿದ್ರೆ ಒಂದು ವಿಷ್ಯ ಗಮನಿಸಿ, ನೀವು ಆತನ ಒಣಹಮ್ಮನ್ನು ನಿರ್ಲಕ್ಷಿಸಿ, ಧೈರ್ಯವಾಗಿ ಆತನನ್ನು ಎದುರಿಸಿ, ತಾನು ಪ್ರೀತಿಗೆ ಮಾತ್ರ ಕರಗುವವಳು, ದಾರ್ಷréಕ್ಕಲ್ಲ, ಅನ್ನೋದನ್ನು ನಿಮ್ಮದೇ ರೀತಿಯಲ್ಲಿ ಮನದಟ್ಟು ಮಾಡಿ. ನಿಮ್ಮ ಸಂಬಂಧ ಸುಧಾರಿಸಬಹುದು.

3. ಮಕ್ಕಳೆದುರು, ಬಂದವರೆದುರು ಹಂಗಿಸಿ ಮಾತಾಡೋ ಬುದ್ಧಿ
ಶ್ರೀದೇವಿ ಅಭಿನಯದ ಗೌರಿ ಶಿಂಧೆ ನಿರ್ದೇಶನದ “ಇಂಗ್ಲೀಷ್‌ ವಿಂಗ್ಲೀಷ್‌’ ಸಿನಿಮಾ ನೋಡಿದ್ರೆ ನಿಮಗೆ ಇದರ ಸೂಕ್ಷ್ಮ ತಿಳಿಯುತ್ತೆ. ತನ್ನ ಪತ್ನಿ ಶಶಿ ಅದ್ಭುತವಾಗಿ ಲಡ್ಡು ಮಾಡುತ್ತಾಳೆ ಅನ್ನುವ ವಿಚಾರವನ್ನು ಅವಳ ಪತಿ ಹಂಗಿಸಿ ಹಂಗಿಸಿ ಬಂದವರ ಮುಂದೆ ಹೇಳುತ್ತಾನೆ. ಅವಳಿಗೆ ಇಂಗ್ಲೀಷ್‌ ಸರಿಯಾಗಿ ಬರದ ವಿಷಯವನ್ನು ಹೀಗೇ ಲೇವಡಿ ಮಾಡುತ್ತಾನೆ.ಅವಳು ಒಳಗೊಳಗೇ ಕುಗ್ಗುತ್ತಾಳೆ, ಮತ್ತು ಅವಳದೇ ರೀತಿಯಲ್ಲಿ ಮುಳ್ಳಿನಂತ ಸಮಸ್ಯೆಯನ್ನು ನಾಜೂಕಿನಿಂದ ಬಿಡಿಸುತ್ತಾಳೆ.ಆ ಸಿನಿಮಾದಲ್ಲಿರೋದು ನಮ್ಮ ವಿದ್ಯಾವಂತ ಮನೆಗಳಲ್ಲೇ ಅನೇಕ ಸಲ ನಡೆಯುತ್ತೆ. ಮಕ್ಕಳೆದುರು ಅವಳನ್ನು ಕೀಳಾಗಿ ಹಂಗಿಸಿ ಮಾತಾಡೋದು ಅವಳನ್ನೆಷ್ಟು ಕುಗ್ಗಿಸಬಹುದು ಅನ್ನೋದನ್ನು ಯೋಚಿಸೋದೇ ಇಲ್ಲ. ಇದನ್ನು ಕೇಳಿ ಕೇಳಿ ಬೆಳೆದ ಮಕ್ಕಳು ತಾವೂ ಅಮ್ಮನನ್ನು ಕೀಳಾಗಿ ನೋಡಲು ಶುರುಮಾಡುತ್ತಾರೆ. ಹಂಗಿಸಿ ಮಾತಾಡೋದು ದಾಂಪತ್ಯದಲ್ಲಿ ಅರಿವಿಲ್ಲದ ಹಾಗೆ ಬಿರುಕು ಮೂಡಲು ಕಾರಣವಾಗುವ ದೊಡ್ಡ ವಿಚಾರ. 

ಟಿಪ್ಸ್‌: ಈ ಬಗೆಯ ಹಂಗಿಸುವಿಕೆಯನ್ನು ಬುಡದಲ್ಲೇ ಚಿವುಟಿ ಹಾಕಿ, ಇಲ್ಲವಾದರೆ ಇದು ಭವಿಷ್ಯದಲ್ಲಿ ನಿಮ್ಮ ಆತ್ಮಸ್ಥೈರ್ಯ ಕುಗ್ಗಿಸುವುದರಲ್ಲಿ ಅನುಮಾನವೇ ಇಲ್ಲ. ಮುಳ್ಳನ್ನು ಮುಳ್ಳಿಂದಲೇ ತೆಗೆಯಿರಿ.

4. ಪತ್ನಿಯಿಂದ ವಿಷಯ ಮುಚ್ಚಿಡೋದು, ಸುಳ್ಳು ಹೇಳ್ಳೋದು ಇತ್ಯಾದಿ
ಆಫೀಸ್‌ನ ವಿಷಯಗಳನ್ನು ಹೆಂಡತಿಗ್ಯಾಕೆ ಹೇಳ್ಳೋದು, ಅವಳ ನೆಮ್ಮದಿಯೂ ಕೆಡುತ್ತೆ ಅನ್ನೋದು ಗಂಡಸರು ಯಾವತ್ತೂ ಕೊಡುವ ಸಾಬೂಬು. ಆದರೆ  ಅವಳು ಸಂಗಾತಿ, ನಿಮ್ಮ ಖುಷಿಯನ್ನು ಹಂಚಿಕೊಂಡಷ್ಟೇ ನಿವ್ಯಾìಜವಾಗಿ ದುಃಖವನ್ನೂ ಹಂಚಿಕೊಳ್ಳಲು ಆಕೆಗಿಂತ ಬೆಸ್ಟ್‌ ಯಾವ ಗೆಳೆಯನೂ ಅಲ್ಲ. ನಿಮ್ಮ ದುಃಖ ಆಕೆಯ ನೆಮ್ಮದಿ ಕೆಡಿಸುವುದಿಲ್ಲ, ಬದಲಿಗೆ ಆಕೆಗೆ ನಿಮ್ಮ ಬಗ್ಗೆ ಇರೋ ಒಲವನ್ನು ಹೆಚ್ಚಿಸುತ್ತೆ. ಈ ವಿಷಯವನ್ನು ಅರ್ಥಮಾಡಿಕೊಂಡರೆ ದಾಂಪತ್ಯ ಸುಗಮ. ಕೆಲವೊಮ್ಮೆ ಆಕೆಯ ಗಮನಕ್ಕೇ ಬರದಂತೆ ಒಂದಿಷ್ಟು ವ್ಯವಹಾರಗಳನ್ನೂ ಮಾಡುತ್ತಾರೆ. ಅದು ಒಂದಲ್ಲ ಒಂದು ಬಗೆಯಲ್ಲಿ ಆಕೆಯ ಕಿವಿಗೆ ಬಿದ್ದಾಗ ಅವಾಂತರವಾಗುತ್ತೆ. ಹೆಂಡತಿಯೆದುರು ಅಥವಾ ಗಂಡನೆದುರು ಸುಳ್ಳು ಹೇಳ್ಳೋದು ಕಡಿಮೆ ಮಾಡಿದಷ್ಟು ದಾಂಪತ್ಯ ಹಸಿರಾಗಿರುತ್ತದೆ. 

ಟಿಪ್ಸ್‌: ಎಲ್ಲ ಜಂಜಾಟಗಳ ನಡುವೆ ಒಂದಿಷ್ಟು ಸಮಯವನ್ನು ಸಂಗಾತಿಗಾಗಿ ಮೀಸಲಿಡೋದು ಒಳ್ಳೆಯದು. ಎಲ್ಲ ವಿಷಯಗಳನ್ನು ಕೂತು ಮಾತನಾಡುವುದು ಬಾಂಧವ್ಯ ಹೆಚ್ಚಿಸುತ್ತದೆ.

5. ವಿವಾಹಬಾಹಿರ ಸಂಬಂಧ
ಇದು ದೊಡ್ಡ ಬಾಂಬ್‌! ನಿಜವಾಗಿ ಇರಬೇಕಿಲ್ಲ, ಸಣ್ಣದೊಂದು ರೂಮರ್‌ ಸಂಗಾತಿಯ ಕಿವಿಗೆ ಬಿದ್ದರೂ ಸಾಕು, ಅನುಮಾನದ ಕಿಡಿಯೇಳುತ್ತದೆ, ಅದು ಕಾಳಿYಚ್ಚಿನಂತೆ ಹಬ್ಬಲು ಹೆಚ್ಚು ಸಮಯ ಬೇಡ. ಮದುವೆಯ ಮೊದಲು ದೈಹಿಕ ಆಕರ್ಷಣೆ, ನಂತರ ಆ ಆಕರ್ಷಣೆ ಕುಂದುತ್ತ ಬಂದು ಕಣ್ಣು ಅತ್ತಿತ್ತ ಇಣುಕುತ್ತದೆ ಅಂತಾರೆ. ಆದರೆ ಮನಃಶಾಸ್ತ್ರಜ್ಞರ ಪ್ರಕಾರ, ಕಾಮ ಅನ್ನುವುದು ಮನಃಸ್ಥಿತಿ, ಅದು ದೈಹಿಕತೆಗಿಂತಲೂ ಮಾನಸಿಕತೆಗೆ ಹತ್ತಿರವಾದ್ದು. ತನ್ನ ಸಂಗಾತಿಯಲ್ಲಿ ಆಸಕ್ತಿ ಇಲ್ಲ ಅಂದುಕೊಂಡರೆ ನಿರಾಸಕ್ತಿ ಬೆಳೆಯುತ್ತಾ ಹೋಗುತ್ತದೆ. ಅದೇ ಕ್ಷೀಣಿಸುವ ಆಸಕ್ತಿಯನ್ನು ಚಿಗುರಿಸುತ್ತ ಹೋದರೆ ಅದೇ ಹೆಮ್ಮರವಾಗುತ್ತದೆ. ಹೆಸರು ನೆನಪಿಲ್ಲದ ಸಿನಿಮಾದ ಒಂದು ಕತೆ. ಗಂಡನಿಗೆ ಇನ್ನೊಬ್ಬಳ ಜೊತೆಗೆ ಆಕರ್ಷಣೆಯಾಗಿ ಸಂಬಂಧ ಬೆಳೆಯುತ್ತದೆ, ಆತ ಪತ್ನಿಯನ್ನು ಬಿಟ್ಟು ಆಕೆಯ ಬಳಿ ಹೋಗಿ ಬಿಡುತ್ತಾನೆ. ಅವರಿಬ್ಬರ ಸಂಬಂಧ ಮುಂದುವರಿಯುತ್ತದೆ. ಈ ನಡುವೆ ಒಂದು ವಿಷಯ ಗಂಡನ ಕಿವಿಗೆ ಬೀಳುತ್ತದೆ, ಅದು ಆತನ ಪತ್ನಿ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಳೆ ಅನ್ನುವ ವಿಷಯ. ಈ ಸಂಬಂಧವನ್ನೆಲ್ಲ ಬಿಟ್ಟು ಆತ ಪತ್ನಿಯ ಧಾವಿಸುತ್ತಾನೆ ಮತ್ತು ಆಕೆಯ ಸೇವೆಯಲ್ಲೇ ದಿನಗಳೆಯುತ್ತಾನೆ, ಇದು ಪತ್ನಿಪತ್ನಿ ಸಂಬಂಧದ ಉತ್ಕಟತೆಗೆ ಒಂದು ಉದಾಹರಣೆ. ಇದು ಉಳಿದ ಸಂಬಂಧಗಳಲ್ಲೂ ಇರಬಹುದು, ಆದರೆ ಅದಕ್ಕಿಂತ ಅರ್ಥಪೂರ್ಣ ಅನಿಸುವುದು ಗಂಡ ಹೆಂಡತಿ ಸಂಬಂಧ.
ಪಾಯಿಂಟ್‌ ಮಾಡ್ಕೊಳ್ತಾ ಹೋದರೆ ಇನ್ನೊಂದಿಷ್ಟು ಸಿಗಬಹುದು. ಸ್ವಲ್ಪ ಸಮಯ ಮಾಡಿಕೊಂಡು ಇದರಲ್ಲಿ ನಿಮಗ್ಯಾವ ಸಮಸ್ಯೆ ಇದೆ ಅಂತ ಲೀಸ್ಟ್‌ ಮಾಡ್ಕೊಳ್ಳಿ ಮತ್ತು ಅವನ್ನು ಸರಿ ಮಾಡುತ್ತ ಬನ್ನಿ. ಬದುಕು ಸಮುದ್ರ ಅಲ್ಲ, ಅದು ನಿರಂತರ ಹರಿಯುವ ನದಿ. ಚಳಿ, ಮಳೆ, ಬೇಸಿಗೆ ಎಲ್ಲ ಋತುಮಾನಗಳೂ ಇಲ್ಲಿ ಬಂದು ಹೋಗುತ್ತವೆ. ಅವುಗಳನ್ನ ಆನಂದಿಸಿ, ಅದಕ್ಕೆ ದಾಂಪತ್ಯ ಪೂರಕವಾಗಿರಲಿ. 

– ಪ್ರಿಯಾ 

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

3-alur

Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.