ಅಮ್ಮನ ಅಂತರಾಳವೂ ಮಗಳ ನಡವಳಿಕೆಯೂ…
ಪ್ರೀತಿಯ ಕೊರತೆಯೇ ನಿರಾಸಕ್ತಿಗೆ ಕಾರಣ
Team Udayavani, Dec 11, 2019, 5:22 AM IST
ನನಗೆ ಸಹಾಯ ಮಾಡುವವರು ಯಾರೂ ಇಲ್ಲ, ನಾನೆಂದಿಗೂ ವೃತ್ತಿ ಜೀವನದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂಬ ಮನಃಸ್ಥಿತಿಯಲ್ಲಿ ಶಾಂತಲಾ, ಮಗಳನ್ನು ಹೆಚ್ಚು ಹೆಚ್ಚು ಗದರುತ್ತಿದ್ದರು. ಆದರೆ, ಅದು ಆಕೆಯ ಗಮನಕ್ಕೆ ಬಂದೇ ಇರಲಿಲ್ಲ. ಅವರ ವರ್ತನೆ ಮತ್ತು ಕುಟುಂಬದ ಪರಿಸ್ಥಿತಿಗಳು, ಸಿರಿಯ ನಡವಳಿಕೆಯಲ್ಲಿ ಆದ ಬದಲಾವಣೆಗೆ ಕಾರಣಗಳಾಗಿದ್ದವು…
ಮೂವತ್ತೈದು ವರ್ಷದ ಶಾಂತಲಾ, ತನ್ನ ಮೊದಲನೇ ಮಗಳು; ಎಂಟು ವರ್ಷದ ಸಿರಿಯನ್ನು ಸಮಾಲೋಚನೆಗೆ ಕರೆ ತಂದಿದ್ದರು. ಸಿರಿ ಇತ್ತೀಚೆಗೆ ಅಮ್ಮನೊಂದಿಗೆ ಒಡನಾಟ ಕಡಿಮೆ ಮಾಡಿ¨ªಾಳೆ. ಅಮ್ಮನ ಮಾತಿಗೆ ಬೆಲೆ ಕೊಡುವುದಿಲ್ಲ. ಅಮ್ಮ ಹೇಳಿದ ಯಾವ ಕೆಲಸವನ್ನೂ ಮಾಡುವುದಿಲ್ಲ. ಇದನ್ನು ಗಮನಿಸಿದ ಶಾಂತಲಾ, ಬೇಕಂತಲೇ ಏನಾದರೂ ವಿಷಯ ತೆಗೆದೂ ತೆಗೆದು ಸಿರಿಯನ್ನು ಮಾತಿಗೆ ಹಚ್ಚುವ ಪ್ರಯತ್ನ ಮಾಡಿದ್ದರು. ಆದರೂ ಆಕೆ ಗರ ಬಡಿದವಳಂತೇ ಇರುತ್ತಿದ್ದಳು. ತನ್ನ ಪುಟ್ಟ ತಂಗಿಯ ಬಗ್ಗೆಯೂ ನಿರ್ಲಿಪ್ತತೆ. ಶಾಲೆಯಲ್ಲೇನೋ ಒಳ್ಳೆಯ ವಿದ್ಯಾರ್ಥಿ ಎಂದು ಹೆಸರು ಗಳಿಸಿ¨ªಾಳೆ. ಆದರೆ, ಶಾಂತಲಾ ಎಷ್ಟು ಪುಸಲಾಯಿಸಿದರೂ ಹೋಂವರ್ಕ್ ಬರೆಯಲು ಕೇಳುವುದಿಲ್ಲ.
ಈ ವಿವರಗಳನ್ನೆಲ್ಲ ಕೇಳಿದ ನಾನು ಮೊದಲು ಶಾಂತಲಾ ಬಗ್ಗೆ ಗಮನ ಹರಿಸಿದೆ. ಶಾಂತಲಾಗೆ ಎರಡನೇ ಮಗುವಾದ ಮೇಲೆ, ಹೆಚ್ಚು ರಜೆ ಕೇಳುತ್ತಿದ್ದಾರೆಂದು, ಆಫೀಸಿನಲ್ಲಿ ತೊಂದರೆ ಶುರುವಾಯಿತು. ಆಕೆಗೆ ಕೊಡುತ್ತಿದ್ದ ಪ್ರಾಧಾನ್ಯತೆಯನ್ನು ಬೇರೆಯವರಿಗೆ ಕೊಟ್ಟು, ಶಾಂತಲಾ ರಾಜೀನಾಮೆ ಕೊಡುವಂತೆ ಮಾಡಿದರು. ಇದು ಆಕೆಗಾದ ಬಹು ದೊಡ್ಡ ಆಘಾತ. ನೌಕರಿ ಕಳೆದುಕೊಂಡಿದ್ದು ವ್ಯಕ್ತಿತ್ವವನ್ನೇ ಕಳೆದುಕೊಂಡಂತೆ ಎಂದು ಭಾವಿಸಿದ ಆಕೆಯಲ್ಲಿ ಶೂನ್ಯತಾ ಭಾವ ಆವರಿಸಿದೆ.
ಜೊತೆಗೆ, ಮನೆಯ ಪರಿಸ್ಥಿತಿಯೂ ಶಾಂತಲಾರನ್ನು ಹೈರಾಣಾಗಿಸಿದೆ. ಮನೆಯಲ್ಲಿ ಅತ್ತೆ-ಮಾವ, ಓರಗಿತ್ತಿಗೆ ಮಾತ್ರ ನೆರವಾದರೆ, ಅಪ್ಪ-ಅಮ್ಮ ತಮ್ಮನ ಹೆಂಡತಿಗೆ ನೆರವಾಗುತ್ತಿದ್ದಾರೆ ತನಗೆ ಸಹಾಯ ಮಾಡುವವರು ಯಾರೂ ಇಲ್ಲ ಎಂದು ಅನಿಸತೊಡಗಿದೆ. ನಾನೆಂದಿಗೂ ನನ್ನ ವೃತ್ತಿ ಜೀವನದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂಬ ಮನಃಸ್ಥಿತಿಯಲ್ಲಿ ಶಾಂತಲಾ, ಸಿರಿಯನ್ನು ಹೆಚ್ಚು ಹೆಚ್ಚು ಗದರುತ್ತಿದ್ದುದು ಆಕೆಯ ಗಮನಕ್ಕೆ ಬಂದೇ ಇಲ್ಲ. ಇದರ ಪರಿಣಾಮ ಸಿರಿಯ ನಡವಳಿಕೆಯಲ್ಲಿ ಬದಲಾವಣೆ ಆಗತೊಡಗಿತ್ತು.
ಸಿರಿಯಲ್ಲಿ ವಯಸ್ಕ ನಡವಳಿಕೆಯನ್ನು ಬಯಸುವುದು ತಪ್ಪು ಎಂದು ಶಾಂತಲಾಗೆ ಅರಿವು ಮೂಡಿಸಿದೆ. ಸಿರಿಯ ಜೊತೆಗೆ ಮಾತನಾಡುವಾಗ ಸೂಚನೆಗಳನ್ನು ನೀಡದೆ, ಉತ್ತೇಜನ ಕೊಡುವ ಪದಗಳನ್ನು ಬಳಸುವಂತೆ ಉದಾಹರಣೆ ಮೂಲಕ ತಿಳಿಸಿಕೊಟ್ಟೆ. ಹಾಗೆಯೇ, ಸ್ವತಂತ್ರವಾಗಿ ಉದ್ಯೋಗ ಮಾಡುವುದಕ್ಕೆ ಶಾಂತಲಾಗೆ ಕೆಲವು ಐಡಿಯಾಗಳನ್ನು ಕೊಟ್ಟೆ. ಅದು ಆಕೆಯ ಮನಸ್ಸಿಗೆ ನೆಮ್ಮದಿ ಕೊಟ್ಟಿತು.
ಸಿರಿ, ಆ ಕುಟುಂಬದ ಮೊದಲನೇ ಮೊಮ್ಮಗುವಾದ್ದರಿಂದ, ಸಹಜವಾಗಿಯೇ ಎಲ್ಲರ ಅತೀ ಪ್ರೀತಿಗೆ ಪಾತ್ರಳಾಗಿದ್ದಳು. ಕಾಲಕ್ರಮೇಣ ಚಿಕ್ಕಪ್ಪನ ಮದುವೆಯಾಗಿ, ಅವರಿಗೆ ಮಗುವಾದ ಮೇಲೆ, ಚಿಕ್ಕಪ್ಪ ಮತ್ತು ಸಿರಿಯ ನಡುವಿನ ವಿಶೇಷ ಬಾಂಧವ್ಯಕ್ಕೆ ಧಕ್ಕೆಯಾಗಿತ್ತು. ಅವರು ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ವ್ಯತ್ಯಾಸಗಳಾಗಿವೆ. ಜೊತೆಗೆ, ಅಜ್ಜಿ-ತಾತನ ಸಮಯವೂ ಕೂಡಾ ಮೊಮ್ಮಕ್ಕಳ ನಡುವೆ ಹಂಚಿಹೋಗಿದೆ. ಸಿರಿಯ ಪುಟ್ಟ ತಂಗಿ, ಚೂಟಿಯಾಗಿದ್ದು ಎಲ್ಲರ ಗಮನ ಸೆಳೆದುಕೊಳ್ಳುತ್ತಿದ್ದಾಳೆ. ಇತ್ತೀಚೆಗೆ ಸಿರಿಯ ಅಪ್ಪನಿಗೆ ಆಫೀಸಿನಲ್ಲಿ ಬಡ್ತಿ ಸಿಕ್ಕಿ, ಕೆಲಸದ ಒತ್ತಡದಿಂದಾಗಿ ಆಕೆಯ ಬಗ್ಗೆ ಗಮನ ನೀಡಲಾಗುತ್ತಿಲ್ಲ. ಇದೆಲ್ಲವನ್ನು ಗುಬ್ಬಚ್ಚಿಯ ಕಥೆಯಂತೆ ಶಾಂತಲಾ, ಮಗಳಿಗೆ ನಿಧಾನವಾಗಿ ತಿಳಿಸಿ ಹೇಳಿದರು. ತಂದೆಯೂ ಮಕ್ಕಳಿಗಾಗಿ ಬಿಡುವು ಮಾಡಿಕೊಡರು. ಈಗ ಸಿರಿ, ಸಹಜ ಸ್ಥಿತಿಗೆ ಬಂದಿದ್ದಾಳೆ.
ಮಕ್ಕಳ ಕೇಸುಗಳು ಬಂದಾಗ, ಮೊದಲಿಗೆ ಅಪ್ಪ-ಅಮ್ಮನನ್ನು, ವಿವರವಾಗಿ ಸಂದರ್ಶನ ಮಾಡಬೇಕಾಗುತ್ತದೆ. ಕೌಟುಂಬಿಕ ವೃತ್ತಾಂತವನ್ನು ವಿಷದವಾಗಿ ಪಡೆದುಕೊಂಡಾಗ ಮಗು ಮಂಕಾಗಲು ಕಾರಣಗಳೇನೆಂದು ದೊರೆಯುತ್ತವೆ. ಕನ್ನಡಿಯ ಮೇಲಿನ ಧೂಳು ಒರೆಸಿದಾಗಲೇ ತಾನೇ ಮುಖದ ಅಂದ ಸ್ಪಷ್ಟವಾಗಿ ಕಾಣುವುದು?
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.