ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ: ಪ್ರತಿ ಅಮ್ಮಂದಿರ ನಿತ್ಯದ ಆತಂಕ


Team Udayavani, Sep 27, 2017, 1:05 PM IST

27-STATE-41.jpg

ಬೆಳಗಾಗುತ್ತಿದೆ. “ಕತ್ತಲಾಗುವ ಮುನ್ನ ಮಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸು ದೇವರೇ’ ಎಂದು ತಾಯಿ ಆತಂಕಿಸುತ್ತಲೇ ದೀಪ ಬೆಳಗುತ್ತಿದ್ದಾಳೆ. ಕಾಲೇಜಿಗೆ ಬ್ಯಾಗ್‌ ಏರಿಸಿ ಹೊರಟ ಮಗಳೊಂದಿಗೆ, ತಾಯಿ ಮನಸ್ಸೂ ಮನೆಯಿಂದ ಹೊರಡುತ್ತದೆ. ಇದು ಇಂದು ಎಲ್ಲ ತಾಯಂದಿರ ಆತಂಕ…

ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಪುಸ್ತಕ ತೆಗೆದು ಜೋರಾಗಿ ಇಂಗ್ಲಿಷಿನಲ್ಲಿ ಓದಿಕೊಳ್ಳುವ ಮಗಳು, ಐದು ಗಂಟೆಗೆ ಸ್ನಾನ ಮಾಡಿ, ನಾ ಮಾಡಿಕೊಟ್ಟ ತಿಂಡಿಯ ಗಬಗಬನೆ ತಿಂದುಕೊಂಡು, ಅಲ್ಲೇ ಟೇಬಲ್ಲಿನ ಮೇಲಿಟ್ಟಿರುವ ಒಂದೆರಡು ಪುಸ್ತಕಗಳನ್ನು ಬ್ಯಾಗಿಗೆ ತುರುಕಿಕೊಂಡು ಗಂಟೆ ಆರಕ್ಕೆ ಮುಟ್ಟುವ ಮೊದಲೇ ಕಾಲೇಜಿಗೆ ಹೊರಟು ಬಿಡುತ್ತಾಳೆ.

ಕಾಡಿನ ನಡುವೆ ಮೂರು ಮೈಲು ಒಬ್ಬಳೇ ನಡೆಯುವ ಅವಳು, ಏಳು ಗಂಟೆಯ ಬಸ್ಸನ್ನು ಹಿಡಿಯಲೇಬೇಕು. ಅವಳು ಹೋಗುವ ದೂರದ ಕಾಲೇಜಿಗೆ ಇರುವುದು ಅದೊಂದೇ ಬಸ್ಸು. ಬೇರೆ ಬಸ್ಸಿಲ್ಲಾ ಎಂದೇನಿಲ್ಲ, ಹತ್ತು ಗಂಟೆಗೆ ಒಂದಿದೆ. ಅದಕ್ಕೆ ಹೋದರೆ, ಅವಳ ಕ್ಲಾಸಿಗೆ ತಡವಾಗುತ್ತದಂತೆ. “ಚೆನ್ನಾಗಿ ಬೆಳಕು ಬಿಟ್ಟ ಮೇಲೆ ಸೂರ್ಯದೇವನ ಕಿರಣಗಳು ಭೂ ತಾಯಿಯ ಮಡಿಲಿಗೆ ಇಣುಕಿದ ಮೇಲೆ ಕಾಲೇಜಿಗೆ ಮನೆಯಿಂದ ಹೊರಟರಾಯಿತು, ಇಷ್ಟು ಮುಂಚೆ ಬೇಡ’ ಎಂದು ಹೇಳಿದಾಗಲೆಲ್ಲಾ ಅವಳು ನನಗೆ “ತಡವಾಗುವ’ ಮಾತನ್ನು ಹೇಳುತ್ತಿರುತ್ತಾಳೆ. 

ಅವಳೇನೋ ಬೆಳಗಾಗುವುದರೊಳಗೆ ಕಾಲೇಜಿಗೆ ಹೊರಟುಬಿಡುತ್ತಾಳೆ. ಆ ಮೇಲೆ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಅಡುಗೆ ಮಾಡುವುದು, ಅದು- ಇದು ವಿಪರೀತ ಮನೆಗೆಲಸ.  ದಿನವಿಡೀ ಮನೆಯಲ್ಲಿ ನಾನೊಬ್ಬಳೇ. ಬಿಡುವಿಲ್ಲದಷ್ಟು ಕೆಲಸ. ಇವುಗಳ ಮಧ್ಯೆ ನನ್ನ ಮನಸ್ಸಿನ ಪಲ್ಲಟದಲಿ ನೂರಾರು ಆತಂಕಗಳು ಅವಳ ಬಗೆಗೆ. ಕಾಲೇಜಿಗೆ ಹೋಗಿರುತ್ತಾಳಲ್ಲ ನನ್ನ ವಯಸ್ಸಿಗೆ ಬಂದ ಮುದ್ದು ಮಗಳು; ಅವಳ ಬಗೆಗೆನೇ.

ಬಸ್ಸಿನಲ್ಲಿ ಯಾರ ಜೊತೆ ಹೋಗುತ್ತಾಳ್ಳೋ? ಆಕೆಯ ಪಕ್ಕದಲ್ಲಿ ಇನ್ನಾರು ಕೂರುತ್ತಾರೋ? ಆ ಬಸ್ಸಿನ ಕಂಡಕ್ಟರ್‌ ಹೇಗೋ? ಆಟೋದಲ್ಲಿ ಹೊದರೇ ಡ್ರೆ„ವರ್‌ ಹೇಗೋ? ವ್ಯಾನಿನಲ್ಲಿ ಹೋದಳ್ಳೋ ಏನೋ? ಬೈಕಿನಲ್ಲಿ ಯಾರ ಜೊತೆ ಹೋಗುತ್ತಾಳ್ಳೋ? ಕಾಲೇಜಿನಲ್ಲಿ ಯಾರ ಜೊತೆ ತಿರುಗುತ್ತಾಳ್ಳೋ ಏನೋ? ಪಕ್ಕದ ಮನೆಯ ಅಂಕಲ್‌, ಮಾವ, ಊರಿನ ಪರಿಚಿತರು ಎನ್ನುವ ವಿಶ್ವಾಸದಲ್ಲಿ ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆಯಲ್ಲಿ ಅವರ ಕಾರಿನಲ್ಲೋ, ಬೈಕಿನಲ್ಲೋ ಹೋಗುತ್ತಾಳ್ಳೋ ಏನೋ? ಒಬ್ಬಳೇ ನೆಮ್ಮದಿಯಿಂದ ಏನೆಂದು ನಂಬಿ ಮನೆಯಲ್ಲಿ ನಾನಿರಲಿ?

ಕಾಲೇಜಿಗೆ ಹೋದವಳು ಕ್ಲಾಸ್‌ಮೇಟ್‌, ಸ್ನೇಹಿತ ಎಂದೆಲ್ಲಾ ನಂಬಿಕೊಂಡು ಒಬ್ಬೊಬ್ಬಳೇ ಯಾವುದಾದರೂ ಹುಡುಗನ ಜೊತೆ ಅಲಿಲ್ಲಿ ಸುತ್ತುತ್ತಾಳ್ಳೋ ಏನೋ? ಯಾವುದಾದರೂ ಹುಡುಗನ ಬೈಕಿನ ಹಿಂದೆ ಕುಳಿತು ಹೋದರೆ? ಮುಂದೆ ಪ್ರೀತಿ, ಪ್ರಣಯ ಎಂದೆಲ್ಲಾ ಹುಸಿಯಾಟಗಳು ನಡೆದು, ಅಲ್ಲಿ ಮೋಸವಾಗುವುದೋ? ನನ್ನ ಮಗಳಿಗೆ ಏನು ತೊಂದರೆಯಾಗುತ್ತದೋ? ಅವಳ ಕಾಲೇಜಿನ ಪ್ರಿನ್ಸಿಪಾಲರು, ಲೆಕ್ಚರರೂ, ಅಟೆಂಡರ್‌ಗಳು ಹೇಗೋ ಏನೋ? ಅವಳಿಗೆ ಪಾಠ ಮಾಡುವ ಲೆಕ್ಚರರ್‌ಗಳಲ್ಲಿ ಯಾರಾದರೊಬ್ಬರು ಅವಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡಲಾರರು ಎನ್ನುವುದಕ್ಕೆ ನನಗೆ ಗ್ಯಾರಂಟಿ ಏನು? ದೇವರೇ, ನನ್ನ ಮುದ್ದು ಮಗಳ ಮೇಲೆ ಯಾವ ಕೆಟ್ಟ ಕಣ್ಣೂ ಬೀಳದಿರಲಿ…

ಕೈ ಹಿಡಿದು ಕಾಪಾಡಬೇಕಿದ್ದ ಅಪ್ಪ, ತಂಗಿಯೆಂದು ಕಾಳಜಿವಹಿಸಬೇಕಿದ್ದ ಅಣ್ಣ, ಮಗಳೆಂದು ಕಾಣಬೇಕಿದ್ದ ಚಿಕ್ಕಪ್ಪ- ದೊಡ್ಡಪ್ಪಂದಿರು, ವಿದ್ಯಾರ್ಥಿನಿ ಎಂದು ಪಾಠ ಮಾಡಬೇಕಿದ್ದ ಶಿಕ್ಷಕ, ಗೆಳತಿಯೆಂದು ಗೌರವಿಸಬೇಕಿದ್ದ ಗೆಳೆಯರು, ತಂಗಿ/ ಅಕ್ಕ ಎಂದು ಕಾಣಬೇಕಿದ್ದ ನೆರೆ-ಹೊರೆಯವನು, ಅದಿರಲಿ ಕಡೇ ಪಕ್ಷ ಹೆಣ್ಣೂ ಒಂದು ಜೀವ ಎಂದು ಪ್ರೀತಿಸಬೇಕಿದ್ದ ಇನ್ನೊಂದು ಜೀವಿಯೇ ಆಕೆಯಪಾಲಿಗೆ ಇಂದು ರಕ್ಷಕನಾಗದೇ, ರಾಕ್ಷಸನಾಗಿ ಮೈಮೇಲೆರಗುವುದನ್ನು ಪ್ರತಿದಿನ ಟಿವಿ ವಾರ್ತೆಗಳಲ್ಲಿ, ಪೇಪರಿನ ಮುಖಪುಟಗಳಲ್ಲಿ ನೋಡಿದಾಗ, ಮಗಳೇ ನಿನ್ನನ್ನು ಹೊತ್ತು ಮೂಡುವ ಮೊದಲೇ ಕಳುಹಿಸಿರುವ ನಾನು, ಪ್ರತಿ ಕ್ಷಣಕ್ಷಣವೂ ಆತಂಕಗಳಿಂದ ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತೇನೆ. ನಿನ್ನ ಬರುವಿಕೆಗಾಗಿ ದಾರಿಯ ಕಾಯುತಿರುತ್ತೇನೆ. ನಿನ್ನ ಮುಖ ಕಂಡ ಮೆಲೆಯೇ ನೆಮ್ಮದಿಯ ನಿಟ್ಟುಸಿರು. ಕಾಲೇಜಿಗೆ ಹೋಗಿದ್ದ ನನ್ನ ಮಗಳು ಸುರಕ್ಷಿತವಾಗಿ ಮನೆಗೆ ಬಂದಿದ್ದಾಳೆಂದು.

ಮಗಳೇ, ನಾನು ಇಂದು ಯಾರನ್ನು ನಂಬಲಿ? ಈ ಸಮಾಜದಲ್ಲಿ ನಿನಗೆ ನಂಬಿಕಸ್ಥರು ಯಾರಿದ್ದಾರೆ? ಅಪ್ಪನಂತೆ, ಅಣ್ಣನಂತೆ, ತಮ್ಮನಂತೆ, ಗೆಳೆಯನಂತೆ. ಈ ಭಾವಗಳನ್ನ, ಮಾನವೀಯ ಸಂಬಂಧಗಳನ್ನ ನಾನೆಲ್ಲಿಂದ ಹುಡುಕಲಿ? ಮನುಷ್ಯತ್ವವನ್ನು ನಾನೆಲ್ಲಿ ಕಾಣಲಿ? ಎಲ್ಲೆಲ್ಲೋ ವಿಕೃತಿ, ಎಲ್ಲೆಲ್ಲೋ ಅತ್ಯಾಚಾರ, ಕಾಮುಕರು ಒಂದು ವರ್ಷದ ಪುಟ್ಟ ಮಗುವನ್ನೂ ಬಿಡುವುದಿಲ್ಲ. ಹಣ್ಣು ಹಣ್ಣು ಮುದುಕಿಯನ್ನೂ ಬಿಡುವುದಿಲ್ಲ. ಇಂತಹುದರಲ್ಲಿ ನಾನು ಹೇಗೆ, ಮಗಳು ಕಾಲೇಜಿನಿಂದ ಮನೆಗೆ ಸುರಕ್ಷಿತವಾಗಿ ಬಂದೇ ಬಿಡುತ್ತಾಳೆಂದು ನಂಬಲಿ? ದೇವರೇ, ನಿನ್ನಲ್ಲಿ ಪ್ರತಿಕ್ಷಣ ಪ್ರಾರ್ಥಿಸುತ್ತೇನೆ: “ನನ್ನ ಮುದ್ದು ಮಗಳ ಮೇಲೆ ಯಾವ ಕೆಟ್ಟ ಕಣ್ಣೂ ಬೀಳದೇ, ಅವಳನ್ನು ರಕ್ಷಿಸು’ ಎಂದು. ನನ್ನ ಸುತ್ತಲಿನ ಈ ವ್ಯವಸ್ಥೆಯಿಂದ ಎಲ್ಲಾ ನ್ಯಾಯದ ಭರವಸೆಗಳ್ಳನ್ನು ಕಳೆದುಕೊಂಡಿದ್ದೇನೆ. ದೇವರೇ ನಿನ್ನನ್ನೇ ನಂಬಿಕೊಂಡಿದ್ದೇನೆ.

ಇದು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮೊದಲಾದ ಹೇಯಕೃತ್ಯಗಳು ಎಗ್ಗಿಲ್ಲದೇ ದಿನೇದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಯಸ್ಸಿಗೆ ಬಂದಿರುವ ಮಗಳೊಬ್ಬಳನ್ನು ಪ್ರತಿದಿನ ಬೆಳಿಗ್ಗೆಯೇ ಮನೆಯಿಂದ ಕಾಲೇಜಿಗೆ ಕಳುಹಿಸುವ ತಾಯಿಯೊಬ್ಬಳ ಮನಸ್ಸಿನಲ್ಲಿ ಉಂಟಾಗುವ ಆತಂಕಗಳ- ತಲ್ಲಣಗಳ ಚಿತ್ರಣ. ಪರಿಸರ- ವಾತಾವರಣ ಭಿನ್ನವಾಗಿರಬಹುದು, ವಿಷಯದ ಮಜಲು ಬೇರೆಯಾಗಿರಬಹುದು, ನಿರೂಪಣೆಯ ಧಾಟಿಯಲ್ಲಿ ಒಂದಷ್ಟು ಏರುಪೇರುಗಳಿರಬಹುದು. ಅದಾಗ್ಯೂ ದಿನಂಪ್ರತಿ ಪ್ರತೀ ಹೆಣ್ಣೊಬ್ಬಳ ತಾಯಿಯ ಮನಸ್ಸಿನಲ್ಲಿ ಹೀಗೋಂದು ಕಹಿಯಾದ ಆತಂಕ ಗಿರಕಿ ಹೊಡೆಯುತ್ತಲೇ ಇರುತ್ತದೆ.

ನಾಗರಾಜ ಕೂವೆ, ಶೃಂಗೇರಿ
ಚಿತ್ರಕೃಪೆ: ಶಿವಮೊಗ್ಗ ನಂದನ್‌

ಟಾಪ್ ನ್ಯೂಸ್

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

hdk-office

Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.