ನನ್ನ ಕನಸಿನ ಹುಡುಗ ಹೇಗಿರ್ಬೇಕು ಅಂದ್ರೆ…


Team Udayavani, Nov 27, 2019, 6:00 AM IST

as-12

ಹೆಣ್ಣು ಎಷ್ಟೇ ಆಧುನಿಕವಾಗಿದ್ದರೂ, ಮದುವೆಯಾಗಲು ಬಯಸುವ ಹುಡುಗನ ಬಗ್ಗೆ ಕೇಳಿದರೆ, ತುಸುವೇ ನಾಚಿ ಕೆಂಪಾಗುತ್ತಾಳೆ. ನನ್ನನ್ನು ವರಿಸುವವ ಶ್ರೀಮಂತನಾಗಬೇಕಿಲ್ಲ, ಹೃದಯ ಶ್ರೀಮಂತಿಕೆ ಇದ್ದರೆ ಸಾಕು ಎಂಬುದು ಈಗಿನ ಬಹುತೇಕ ಹುಡುಗಿಯರ ಮಾತು. ಮದುವೆಯನ್ನು ಬಂಧನವಾಗಿಸದೆ, ಸ್ವಾತಂತ್ರ್ಯ-ಸಮಾನತೆ ನೀಡುವ ಹುಡುಗನಾಗಿರಲಿ. ಇಬ್ಬರ ಕನಸು- ಅಭಿರುಚಿಗಳು ಒಂದೇ ದಿಕ್ಕಿನಲ್ಲಿ ಸಾಗಿ, ಬದುಕಿಗೊಂದು ಜೋಶ್‌ ಸಿಗಲಿ ಎಂಬುದು ಅವರ ಆಸೆ. ಅಂಥ ಕೆಲವು ಕನಸುಗಣ್ಣಿನ ಯುವತಿಯರಲ್ಲಿ, “ತಂಗೀ, ನಿನ್‌ ಹುಡುಗ ಹೇಗಿರಬೇಕು?’ ಅಂತ ಕೇಳಿದಾಗ ಸಿಕ್ಕ ಉತ್ತರಗಳಿವು…

ನಾನು ಮೌನಿ, ಅವನು ಮಾತಾಡಲಿ
ಕೆಲವು ಹುಡುಗಿಯರು, “ನನ್ನ ಹುಡುಗ ಆರಡಿ ಎತ್ತರ ಇರಬೇಕು, ನೋಡೋಕೆ ಹೀರೋ ಥರ ಇರಬೇಕು’ ಅಂತೆಲ್ಲಾ ಹೇಳ್ತಾರೆ. ನಾನು, ಇಷ್ಟೇ ಎತ್ತರ, ಇಷ್ಟೇ ದಪ್ಪ, ಇದೇ ಬಣ್ಣದ ಹುಡುಗ ಬೇಕು ಅಂತೆಲ್ಲಾ ಬಯಸೋದಿಲ್ಲ. ಹುಡುಗನ ಮನಸ್ಸು, ಗುಣ ಒಳ್ಳೆಯದಿರಬೇಕು ಅಷ್ಟೇ. ನಾನೀಗ ಸಿ.ಎ ಮಾಡ್ತಾ ಇದ್ದೇನೆ. ಆದರೆ, ನನ್ನ ಹುಡುಗ ಸಿ.ಎ ಆಗಿರಬಾರದು. ಒಂದೇ ಪ್ರೊಫೆಷನ್‌ನವರು ಮದುವೆಯಾದರೆ ಏನೂ ಮಜಾ ಇರುವುದಿಲ್ಲ. ನಾನೇನು ಕೆಲಸ ಮಾಡುತ್ತೇನೋ, ಅವನೂ ಅದೇ ಕೆಲಸ ಮಾಡುತ್ತಾನೆ ಅನ್ನುವಾಗ, ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ಹಂಚಿಕೊಳ್ಳಲು ಹೊಸ ವಿಷಯಗಳು, ಕಲಿಯಲು ಹೊಸ ಸಂಗತಿಗಳೇನೂ ಇರೋದಿಲ್ಲ. ಹೊಸ ಹೊಸ ವಿಷಯಗಳಿಗೆ ತೆರೆದುಕೊಳ್ಳಲು ಸಾಧ್ಯವಾಗೋದಿಲ್ಲ ಅಂತ ನನ್ನ ನಂಬಿಕೆ. ಆರ್ಮಿ ಅಥವಾ ಪೊಲೀಸ್‌ ಇಲಾಖೆಯಲ್ಲಿರೋ ಒಳ್ಳೆಯ ಹುಡುಗ ಸಿಕ್ಕರೆ, ಬೇಗ ಮದುವೆಗೆ ಒಪ್ಪಿಕೊಳ್ಳುತ್ತೇನೆ. ಯಾಕಂದ್ರೆ, ಆ ಎರಡು ವೃತ್ತಿಗಳ ಮೇಲೆ ನನಗೆ ಬಹಳ ಗೌರವ ಇದೆ. ಹುಡುಗ ಶ್ರೀಮಂತನೇ ಆಗಿರಬೇಕಿಲ್ಲ. ಇಬ್ಬರೂ ನೆಮ್ಮದಿಯಾಗಿ ಬದುಕಲು ಎಷ್ಟು ಹಣ ಬೇಕೋ, ಅಷ್ಟು ಹಣ ಇದ್ದರೆ ಸಾಕು. ಮುಂದೆ ಇಬ್ಬರೂ ದುಡಿದು, ಜೊತೆಗೆ ಬದುಕು ಕಟ್ಟುವುದರಲ್ಲಿ ಮಜಾ ಇರುತ್ತದೆ. ನನಗೆ ಸುತ್ತಾಡೋಕೆ ಇಷ್ಟ. ಇಬ್ಬರೂ ಜೊತೆಯಾಗಿ ಊರು ಸುತ್ತಬೇಕಂತ ಆಸೆ ಇದೆ. ನಾನು ಸ್ವಲ್ಪ ಮೌನಿ. ಎಲ್ಲರ ಜೊತೆಗೂ ಬೆರೆಯುವುದಿಲ್ಲ. ಆತ್ಮೀಯರ ಜೊತೆ ಮಾತಾಡಲು ಶುರು ಮಾಡಿದರೆ ನಿಲ್ಲಿಸುವುದೇ ಇಲ್ಲ. ಆದರೆ, ಅವನು ಎಲ್ಲರ ಜೊತೆ ಬೆರೆಯುವ ಗುಣ ಹೊಂದಿರಬೇಕು, ಜಾಸ್ತಿ ಮಾತನಾಡುವವನಾಗಿರಬೇಕು.
 -ಚೈತ್ರಾ ಬಿ.ಎಸ್‌., ತಿಪಟೂರು

ಹಣಕ್ಕಿಂತ ಗುಣ-ಸಂಸ್ಕಾರವೇ ಮುಖ್ಯ
ಬಾಳಸಂಗಾತಿಯ ಬಗ್ಗೆ ಎಲ್ಲ ಹುಡುಗ- ಹುಡುಗಿಯರೂ ಕನಸು ಕಾಣುತ್ತಾರೆ. ಅದರಲ್ಲೂ, ನನ್ನ ಕೈ ಹಿಡಿಯುವವನು ಹೀಗೇ ಇರಬೇಕು ಅಂತ ಹುಡುಗಿಯರಿಗೆ ಸ್ಪಷ್ಟ ಚಿತ್ರಣ ಇರುತ್ತದೆ. ನನಗೂ ಹಾಗೇ ಕೆಲವೊಂದಿಷ್ಟು ಕನಸುಗಳಿವೆ. ಬದುಕಿಗೆ ಹಣಕ್ಕಿಂತ, ಸಂಸ್ಕಾರಗಳು ಮುಖ್ಯ ಅಂತ ನಂಬಿರುವ ಹುಡುಗಿ ನಾನು. ಹಾಗಾಗಿ, ನನ್ನ ಹುಡುಗನಲ್ಲಿ ಮೊದಲು ಅಪೇಕ್ಷಿಸುವುದು ಒಳ್ಳೆಯ ಗುಣ, ನಡತೆ, ಸಂಸ್ಕಾರ. ಬಾಹ್ಯ ರೂಪಕ್ಕೆ ಎರಡನೆಯ ಆದ್ಯತೆ. ನೋಡಲು ಲಕ್ಷಣವಾಗಿದ್ದರೆ ಸಾಕು. ಬದುಕೋಕೆ ದುಡ್ಡು ಬೇಕು, ನಿಜ. ಆದರೆ, ದುಡ್ಡೇ ಎಲ್ಲವೂ ಅಲ್ಲ. ದುಡ್ಡು ದುಡ್ಡು ಅಂತ ಕೌಟುಂಬಿಕ ಆದ್ಯತೆಗಳಿಗೆ, ಮನಸ್ಸಿನ ಖುಷಿಗೆ ಬೆಲೆ ಕೊಡದವನು ನನಗೆ ಬೇಡ. ಆರ್ಥಿಕ ಸ್ವಾತಂತ್ರ್ಯ ಕೊಡುವಂಥ ಒಂದು ಕೆಲಸವಿದ್ದರೆ ಸಾಕು. ಪುಸ್ತಕ ಓದೋದು, ಚಿತ್ರ ಬಿಡಿಸೋದು, ಕಥೆ-ಕವನ ಬರೆಯೋದು, ಸುತ್ತಾಡೋದು, ಮೂವಿ ನೋಡೋದು, ಹಾಡು ಕೇಳ್ಳೋದು- ಇವು ನನ್ನ ಅಭಿರುಚಿಗಳು. ಅವನಿಗೂ ಇವೇ ಅಭಿರುಚಿಗಳಿರಬೇಕು ಅಂತೇನಿಲ್ಲ. ಸಮಾನ ಅಭಿರುಚಿ ಇರದಿದ್ದರೂ, ಪರಸ್ಪರರ ಅಭಿರುಚಿಗಳನ್ನು ಪ್ರೋತ್ಸಾಹಿಸುವ, ಗೌರವಿಸುವ ಮನಸ್ಸಿರಬೇಕು. ಆದ್ರೆ, ನನ್ನ ಜೊತೆ ಊರು ಸುತ್ತೋಕೆ ಮಾತ್ರ, ಯಾವಾಗಲೂ ಬ್ಯಾಗ್‌ ಹಿಡ್ಕೊಂಡು ತಯಾರಿರಬೇಕು! ಅವನಿಂದ ಕೇವಲ ಪ್ರೀತಿ ಕಾಳಜಿಯನ್ನಷ್ಟೇ ಅಲ್ಲ, ಗೌರವ, ಅರ್ಥಮಾಡಿಕೊಳ್ಳುವ ಗುಣ, ಸಮಾನತೆಯನ್ನೂ ಬಯಸ್ತೀನಿ. ಬದುಕನ್ನು ಪಾಸಿಟಿವ್‌ ಆಗಿ ನೋಡುವ, ಎಲ್ಲರಲ್ಲೂ ಒಳ್ಳೆತನವನ್ನು ಕಾಣುವ, ತಾಳ್ಮೆ ಇರುವ ಲವಲವಿಕೆಯ ಹುಡುಗ ಆದ್ರೆ ಒಳ್ಳೇದು!
-ಸಂಧ್ಯಾ ಭಾರತಿ, ಕೊಪ್ಪ

ಬಾಳಸಂಗಾತಿಯೇ ಆಪ್ತ ಸ್ನೇಹಿತ
ನಾನು ಮದುವೆಯಾಗುವ ಹುಡುಗ ನೋಡೋಕೆ ಸ್ಪುರದ್ರೂಪಿ ಆಗಿರದಿದ್ದರೂ ಪರವಾಗಿಲ್ಲ, ಆದರೆ, ಆತನ ವ್ಯಕ್ತಿತ್ವ ಮಾತ್ರ ಸುಂದರವಾಗಿರಬೇಕು. ಇಬ್ಬರಲ್ಲೂ ಇರುವ ಸಮಾನ ಅಭಿರುಚಿಗಳನ್ನು ಒಟ್ಟಿಗೇ ಸಂಭ್ರಮಿಸಿ, ವೈರುಧ್ಯಗಳನ್ನೂ ಸ್ವಾಗತಿಸೋ ಮನೋಭಾವವಿದ್ದರೆ ಬದುಕು ಚೆನ್ನ. ಈಗಂತೂ ಯಾರನ್ನು ಕೇಳಿದರೂ ಟೈಮ್‌ ಇಲ್ಲ, ಟೈಮ್‌ ಇಲ್ಲ ಅಂತ ಹೇಳ್ತಾರೆ. ಈ ನಿರಂತರ, ನಾಗಾಲೋಟದ ಬದುಕಿನಲ್ಲಿ ನಾನು ಅವನಿಂದ ಬಯಸೋದು ಸಮಯ ಮಾತ್ರ. ಬೇರೆ ಯಾವ ರೀತಿಯ ಉಡುಗೊರೆಗಳನ್ನು ಅವನು ಕೊಡದಿದ್ದರೂ ಪರವಾಗಿಲ್ಲ. ನನಗೋಸ್ಕರ ಟೈಮ್‌ ಮಾಡಿಕೊಳ್ಳಬೇಕು. ಅತಿಯಾಗಿ ಹಣ, ಅಂತಸ್ತಿನ ಬೆನ್ನಟ್ಟಬಾರದು. ಬದುಕು ನಡೆಸುವಷ್ಟು ಹಣ ಇದ್ದರೆ ಸಾಕು. ಸಂಸಾರದ ಜವಾಬ್ದಾರಿ ಹೊರಬಲ್ಲವನಾಗಿರಬೇಕು. ಬಾಳಸಂಗಾತಿಯಲ್ಲಿ ಒಬ್ಬ ಒಳ್ಳೆಯ ಸ್ನೇಹಿತನನ್ನು ಎಲ್ಲರೂ ಬಯಸುತ್ತಾರೆ, ನಾನೂ ಕೂಡಾ. ನಮ್ಮಿಬ್ಬರ ನಡುವಿನ ಚರ್ಚೆಗಳು ಕೇವಲ ಮನೆ, ಸಂಸಾರ ಅಂತ ವ್ಯಾವಹಾರಿಕವಾಗಿರದೆ, ನಮ್ಮ ನಡುವಿನ ಭಾವನೆಗಳನ್ನೂ ಚರ್ಚಿಸುವಷ್ಟು ಮುಕ್ತವಾಗಿರಬೇಕು. ಮದುವೆ ಅನ್ನೋದು ಯಾವತ್ತೂ ಬಂಧನ ಅನ್ನಿಸಿಕೊಳ್ಳಬಾರದು. ನನ್ನನ್ನು ರಕ್ಷಣೆ ಮಾಡುತ್ತಲೇ, ಸ್ವತಂತ್ರವಾಗಿರಲೂ ಬಿಡಬೇಕು. ಜೀವನದ ಪಯಣದಲ್ಲಿ ಗಂಡ-ಹೆಂಡತಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು. ಆಗಲೇ ಜೀವನ ಹಿತವಾಗಿರುತ್ತದೆ.
-ಅನುಷಾ ಗೋಪಾಲಕೃಷ್ಣ, ಕಲಬುರಗಿ

ಮಗುವಿನಂತೆ ಪ್ರೀತಿಸಲಿ ನನ್ನ
ಹೆಣ್ಣು, ಮದುವೆಯ ನಂತರ ತನ್ನ ಇಡೀ ಕುಟುಂಬವನ್ನು ಬಿಟ್ಟು, ಹೊಸ ಮನೆಗೆ ಕಾಲಿಡುತ್ತಾಳೆ. ಹೊಸ ಬದುಕಿನಲ್ಲಿ ಕೆಲವೊಂದಷ್ಟು ಅಡೆತಡೆಗಳು, ಅಡಚಣೆಗಳು ಆಕೆಗೆ ಎದುರಾಗೋದು ಸಹಜ. ಆಗ ಅವಳಿಗೆ ಗಂಡನ ಸಂಪೂರ್ಣ ಬೆಂಬಲ ಬೇಕು. ನನ್ನ ಬಾಳಸಂಗಾತಿಯಿಂದ ನಾನು ಬಯಸೋದು ಅದನ್ನೇ. ಅವನ್ನು ಯಾವತ್ತೂ, ಯಾರ ಮುಂದೆಯೂ ನನ್ನನ್ನು ಬಿಟ್ಟುಕೊಡಬಾರದು. ಸಣ್ಣ ಮಗುವನ್ನು ಪ್ರೀತಿಸುತ್ತಾರಲ್ಲ, ಹಾಗೆ ಅವನು ನನ್ನನ್ನು ನೋಡಿಕೊಳ್ಳಬೇಕು. ನನ್ನ ಸಣ್ಣಪುಟ್ಟ ಆಸೆಗಳನ್ನು ಪೂರೈಸಿ, ತರಲೆ-ಕೀಟಲೆಗಳನ್ನು ಸಹಿಸಿಕೊಳ್ಳಬೇಕು. ನೋಡೋಕೆ ಹೀರೋ ಥರ ಇರಬೇಕು ಅಂತೇನಿಲ್ಲ, ಆದ್ರೆ ನಮ್ಮ ಜೋಡಿ ನೋಡಿದವರೆಲ್ಲ, “ಆಹಾ, ಎಂಥಾ ಜೋಡಿ!’ ಅಂತ ಹೊಗಳುವ ಹಾಗಿರಬೇಕು. ನನ್ನ ಹವ್ಯಾಸ, ಅಭಿರುಚಿಗಳಿಗೆ ಸಹಕಾರ ನೀಡುವ ಮನಸ್ಸುಳ್ಳವನಾದರೆ ಒಳ್ಳೆಯದು. ಕೆಲವೊಮ್ಮೆ ನನ್ನಿಂದ ತಪ್ಪುಗಳಾಗಬಹುದು. ಅದನ್ನೆಲ್ಲ ತಿದ್ದಿ, ಸರಿಯಿದ್ದಾಗ ಪ್ರೋತ್ಸಾಹಿಸೋ ಗುಣ ಬೇಕು. ಇನ್ನು, ರಾಣಿಯಂತೆ ಲಕ್ಷುರಿಯಾಗಿ ಬದುಕಬೇಕು ಅಂತ ಬಯಕೆಯೇನಿಲ್ಲ. ಆದ್ರೆ. ಇದ್ದುದರಲ್ಲಿ ಅಚ್ಚುಕಟ್ಟಾಗಿ ಸಂಸಾರ ಮಾಡಿ, ನನ್ನನ್ನ ರಾಣಿಯಂತೆ ನೋಡಿಕೊಂಡರೆ ಸಾಕು! ನನಗೆ ಸುತ್ತಾಟ ಅಂದ್ರೆ ತುಂಬಾ ಇಷ್ಟ. ಅವನಿಗೂ ಪ್ರವಾಸದಲ್ಲಿ ಆಸಕ್ತಿಯಿರಬೇಕು. ಆಗ ಇಬ್ಬರೂ ಜೋಡಿಯಾಗಿ ಜಗತ್ತನ್ನೇ ಸುತ್ತಬಹುದಲ್ಲ! ನಾನು ಹಣದ ಲೆಕ್ಕಾಚಾರ ಹಾಕೋ ಕಾಮರ್ಸ್‌ ಹುಡುಗಿ, ನನ್ನ ಹುಡುಗನದ್ದು ಬೇರೆ ಪ್ರೊಫೆಷನ್‌ ಆಗಿದ್ದರೆ ಒಳ್ಳೇದು. ಆಗ ಅವನ ಕೆಲಸದ ಬಗ್ಗೆಯೂ ನಂಗೆ ಗೊತ್ತಾಗುತ್ತೆ. ಒಟ್ಟಿನಲ್ಲಿ ಬೋರಿಂಗ್‌ ಹುಡುಗ ಬೇಡವೇ ಬೇಡ. ದಿನ ದಿನವೂ ಹೊಸ ದಿನ, ಹೊಸತನ ಅಂತ ಭಾವನೆಯುಳ್ಳ ಹುಡುಗ ಬೇಕು.
-ದೀಪಿಕಾ ಭಟ್‌, ಸಾಗರ

ಸಕಲ ಕಲಾವಲ್ಲಭ ಆಗಿದ್ದರೆ ಚೆನ್ನ…
ಓದು ಮುಗೀತಾ ಬಂತು, ಇನ್ನೇನು ಮದುವೆ ಮಾಡದೇ..ಎಂದು ಅಪ್ಪ ಅಮ್ಮ ಹೀಯಾಳಿಸುವಾಗ, ಸಿಟ್ಟಿನಿಂದ ದಿಟ್ಟಿಸಿ ನೋಡುತ್ತೇನೆ. ಆದ್ರೆ, ಒಳಗೊಳಗೇ “ನನ್‌ ಹುಡ್ಗ ಹೀಗಿರಬೇಕು’ ಅಂತ ಕನಸು ಕಾಣುವುದು ಸುಳ್ಳಲ್ಲ ಬಿಡಿ. ಇಲ್ಲಿದೆ ನೋಡಿ, ನನ್ನ ಕಲ್ಪನೆಯ ಹುಡುಗನ ಬಗ್ಗೆ.

ನನ್ನ ಹುಡುಗನಿಗೆ ಒಳ್ಳೆ ಗುಣ, ಅಂತಸ್ತು, ಸೌಂದರ್ಯ ಇರಬೇಕು ಅಂದರೆ ಮಾಮೂಲಿ ಆಗಿಬಿಡುತ್ತೆ. ದೇಶ ಸುತ್ತು, ಕೋಶ ಓದು ಅಂತಾರಲ್ಲ, ಆ ಗಾದೆಗೆ ತಕ್ಕವನಾಗಿರಬೇಕು ಅವನು. ಹೊಸ ಹೊಸ ಜಾಗಗಳಿಗೆ ಆಗಾಗ ಕರ್ಕೊಂಡು ಹೋಗ್ಬೇಕು. ಚಿಕ್ಕದಾಗಿ ಹೇಳ್ಬೇಕು ಅಂದ್ರೆ, “ಬೋರ್‌ ಆಗ್ತಿದೆ ಕಣೋ’ ಅಂದಾಗೆಲ್ಲಾ, “ತಿರ್ಗಕ್‌ ಹೋಗಣ ಬಾರೇ’ ಅನ್ಬೇಕು. ಸಮಯ ಸಿಕ್ಕಿದಾಗೆಲ್ಲಾ ಸುತ್ತಾಡುತ್ತಿರಬೇಕು. ಒಂದು ಪ್ರವಾಸ ಮುಗಿಯುತ್ತಿದ್ದಂತೆ, ಮುಂದಿನ ಪ್ರಯಾಣ ಎಲ್ಲಿಗೆ ಹೋಗೋಣ ಅಂತ ಅವನಾಗಿಯೇ ಕೇಳಬೇಕು. ಇಬ್ಬರೂ ಕಾಲಿಗೆ ಚಕ್ರ, ಬೆನ್ನಿಗೆ ರೆಕ್ಕೆ ಕಟ್ಟಿಕೊಂಡು ಸುತ್ತಾಡಬೇಕೆಂದರೆ, ಸಂಬಳನೂ ಜಾಸ್ತಿನೇ ಇರಬೇಕು ಅಲ್ವಾ?! ಅವನೂ ನನ್ನ ಥರಾನೇ ಪುಸ್ತಕಪ್ರೇಮಿ ಆಗಿರಬೇಕು. ಸಂಗೀತದಲ್ಲಿ ಆಸಕ್ತಿ ಇರಬೇಕು, ಹಾಡಲು ಬರದಿದ್ದರೂ, ಕತ್ತೆ ರಾಗ ಆಗದಿದ್ದರೆ ಸಾಕು. ಅಪರೂಪಕ್ಕಾದರೂ ನನ್ನ ಬಗ್ಗೆ ಕವನ ಬರೆದು ಮೆಚ್ಚಿಸಬೇಕು.ಇಷ್ಟೆಲ್ಲಾ ಇದ್ದರೆ ಅವನು ಸಕಲ ಕಲಾವಲ್ಲಭನೇ ಆಗಿರಬೇಕು ತಾನೇ? ನನ್ನ ಕಲ್ಪನೆಯ ಹುಡುಗನ ಬಗ್ಗೆ ಹೇಳುತ್ತಾ ಹೋದರೆ ಅದೊಂದು ಕಾದಂಬರಿಯೇ ಆದೀತು. ಇಷ್ಟೆಲ್ಲಾ ಬರೆದಿದ್ದು, ಅಪ್ಪ ಅಮ್ಮನಿಗೆ ನನಗೆ ಹುಡ್ಗನ್ನ ಹುಡುಕಲು ಸಹಾಯ ಆಗ್ಲಿ ಅಂತ!

ಅಪ್ಪ-ಅಮ್ಮ ಇದನ್ನೆಲ್ಲ ಓದಿ ನನ್ನ ಕನಸನ್ನು ನನಸು ಮಾಡ್ತಾರೆ ಅನ್ನೋ ಭರವಸೆ ಒಂದೆಡೆಯಾದ್ರೆ, ಇನ್ನೊಂದು ಕಡೆ, ಈಗಲೇ ಮದುವೆ ಮಾಡ್ತೀವಿ ಅಂತ ಕೂರದಿದ್ದರೆ ಸಾಕಪ್ಪಾ!
-ಮೇದಿನಿ ಎಚ್‌.ಆರ್‌., ರಿಪ್ಪನ್‌ಪೇಟೆ

ಹ್ಯಾಂಡ್‌ಸಮ್‌, ಹ್ಯೂಮನ್‌,
ಹ್ಯಾಂಡ್‌ಫ‌ುಲ್‌ ಸ್ಯಾಲರಿ! (ಬೇಕಿದ್ದರೆ ಮಾತ್ರ ತಗೊಳ್ಳಿ)
ನನ್ನ ಕನಸಿನ ಹುಡುಗಲ್ಲಿ 3H ಗುಣಗಳಿರಬೇಕು. ಅಂದ್ರೆ, handsome human with handful. ಹ್ಯಾಂಡ್‌ಸಮ್‌ ಇರಬೇಕು. ಕೈ ತುಂಬಾ ಸಂಬಳ ಬರಬೇಕು ಸರಿ; ಏನಿದು ಹ್ಯೂಮನ್‌ ಅಂದ್ರಾ? ಹೂಂ ಮತ್ತೆ, ಕೋತ್‌ ಕೋತಿ ಥರ ಆಡಬಾರದು. ಹರಿದ ಜೀನ್ಸ್‌, ಕತ್ತಲ್ಲಿ, ಕಿವಿಯಲ್ಲಿ ಸರ, ಓಲೆ ಎಲ್ಲ ಹಾಕೋ ಹುಡುಗ ನನಗೆ ಬೇಡವೇ ಬೇಡ. ಮಾನವೀಯ ಗುಣಗಳನ್ನು ಹೊಂದಿರೋ ಒಳ್ಳೆ ಹುಡುಗನಾಗಿರಬೇಕು. ನನಗೆ ಅಡುಗೆಯ ಗಂಧ ಗಾಳಿಯೂ ಗೊತ್ತಿಲ್ಲವಾದ್ದರಿಂದ, ಅವನಿಗೆ ಅಲ್ಪ ಸ್ವಲ್ಪ ಅಡುಗೆ ಗೊತ್ತಿದ್ದರೆ ಒಳ್ಳೆಯದು. ಹಾಗಂತ, ಎಲ್ಲ ಕೆಲಸವನ್ನೂ ಅವನೇ ಮಾಡಬೇಕಿಲ್ಲ. ಕುಕ್ಕರ್‌ನಲ್ಲಿ ಅನ್ನಕ್ಕಿಟ್ಟರೆ ಸಾಕು (ನಂಗೆ ಕುಕ್ಕರ್‌ ಕಂಡ್ರೆ ತುಂಬಾ ಭಯ). ಉಳಿದಿದ್ದನ್ನು ನಾನು ಹೇಗಾದರೂ ಬೇಯಿಸಿ, ಬಡಿಸುತ್ತೇನೆ. ಕಷ್ಟಪಟ್ಟು ಮಾಡಿದ ಅಡುಗೆಯ ಬಗ್ಗೆ ಕಮೆಂಟ್‌ ಮಾಡಬಾರದು, ತಟ್ಟೆಯನ್ನು ಪಕ್ಕಕ್ಕೆ ಸರಿಸಿ, ಎದ್ದು ಹೋಗಬಾರದು. (ಒಂದ್ವೇಳೆ ಹಾಗೆ ಮಾಡಿದರೆ, ಮುಂದೆ ಅಡುಗೆ ಮನೆಯ ಕೆಲಸವನ್ನೆಲ್ಲ ತಲೆಯ ಮೇಲೆ ಹೊರಲು ರೆಡಿಯಾಗಿಬೇಕು) ಅಪ್ಪಿಕೊಂಡಾಗ ಅವನ ಎದೆ ಬಡಿತ ಸರಿಯಾಗಿ ನನ್ನ ಕಿವಿಗೆ ಕೇಳುವಷ್ಟು ಹೈಟ್‌ ಇದ್ದರೇ…. ಅಂತ ಸಿನಿಮಾ ಸ್ಟೈಲ್‌ ಅಲ್ಲಿ ಆಗಾಗ ಕನಸು ಕಾಣುತ್ತೇನೆ. ಇನ್ನು ನಂಗೆ ಹಳೆಯ ಹಾಡುಗಳಂದ್ರೆ ಇಷ್ಟ. ಅವನೂ ಅದನ್ನು ಕೇಳಬೇಕು. ಅಬ್ಬರದ ಮ್ಯೂಸಿಕ್‌ ಇಷ್ಟ ಅನ್ನುವವರಿಗೆ ನನ್ನ ಬದುಕಲ್ಲಿ ಪ್ರವೇಶವಿಲ್ಲ.
-ರೋಹಿಣಿ ಸಿ.ಎಚ್‌, ಹಾಸನ

ಟಾಪ್ ನ್ಯೂಸ್

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.