ಮೈ ಪ್ಲೆಷರ್ ಆಥ್ಲೆಶರ್
ಕಸರತ್ತಿಗೂ ಜೈ, ಕೆಲಸಕ್ಕೂ ಸೈ...
Team Udayavani, Aug 14, 2019, 5:21 AM IST
ವ್ಯಾಯಾಮ, ಜಿಮ್, ಯೋಗ ಆಟೋಟಗಳಂಥ ಚಟುವಟಿಕೆಗಳಿಗೆ ಅಂತಲೇ ವಿಶೇಷ ಉಡುಗೆ ತೊಡುಗೆಗಳಿವೆ. ಯಾಕಂದ್ರೆ, ಮಾಮೂಲಿ ಬಟ್ಟೆ ತೊಟ್ಟು, ಅವುಗಳನ್ನೆಲ್ಲ ಸಲೀಸಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಅಥ್ಲೆಟಿಕ್ಸ್‌ಗೆ ಧರಿಸುವ ಬಟ್ಟೆಗಳನ್ನು ಬೇರೆ ಸಂದರ್ಭಗಳಲ್ಲಿಯೂ ಆರಾಮಾಗಿ ತೊಡಬಹುದಲ್ಲವೆ?
ನಮ್ಮ ಈಗಿನ ಜನಾಂಗದ ಫಿಟ್‌ನೆಸ್‌ನ ಹಿಂದೆ ಬಿದ್ದಿದೆ. ದಪ್ಪಗಿರಲಿ, ತೆಳ್ಳಗಿರಲಿ ಎಲ್ಲರೂ ಜಿಮ್, ಯೋಗ, ಜಾಗಿಂಗ್ ಅಂತ ಬೆವರಿಳಿಸುವವರೇ. ಬೆಳಗ್ಗೆದ್ದು ಯೋಗ-ವ್ಯಾಯಾಮವನ್ನೂ ಮಾಡಬೇಕು, ಆಮೇಲೆ ಸ್ಕೂಲು, ಕಾಲೇಜು, ಆಫೀಸಿಗೂ ಹೋಗಬೇಕು.
ಜಿಮ್‌ನ ಪಕ್ಕವೇ ಆಫೀಸ್ ಇದ್ದರೂ, ಮನೆಗೆ ಬಂದು, ನ್ಪೋರ್ಟ್ಸ್ ಡ್ರೆಸ್ ಬದಲಿಸಿ ಮತ್ತೆ ಆಫೀಸ್‌ಗೆ ಹೋಗಬೇಕು. ಜಿಮ್‌ನಿಂದ ನೇರವಾಗಿ, ಅದೇ ಉಡುಗೆಯಲ್ಲಿ ಕೆಲಸಕ್ಕೆ ಹೋಗುವಂತಿದ್ದರೆ ಸಮಯ ಉಳಿಸಬಹುದಿತ್ತಲ್ಲವೆ?
ಹಾಗಾದ್ರೆ, ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಉಡುವ ಬಟ್ಟೆ, ಯೋಗ, ಜಾಗಿಂಗ್, ಕಸರತ್ತು, ಕ್ರೀಡೆಯ ಸಮಯದಲ್ಲಿ ಧರಿಸುವ ಉಡುಪನ್ನು ಆಫೀಸ್, ಶಾಪಿಂಗ್, ಕಾಲೇಜು, ಪಾರ್ಟಿ ಅಥವಾ ಇನ್ನಿತರ ಸ್ಥಳಗಳಿಗೆ ಹಾಕಿಕೊಂಡು ಹೋಗಬಾರದೇ? ಯಾಕೆ ಹೋಗಬಾರದು? ಆಥ್ಲೆಶರ್ ದಿರಿಸುಗಳು ಟ್ರೆಂಡ್ ಆಗಿವೆಯಲ್ಲ…
ಅಥ್ಲೆಷರ್ ಅಂದ್ರೆ…
ಬ್ರಿಟಿಷ್ ಇಂಗ್ಲಿಷ್ ಪ್ರಕಾರ ಲೆಶರ್, ಅಮೆರಿಕನ್ ಇಂಗ್ಲಿಷ್ ಪ್ರಕಾರ ಲೀಶರ್, ಅಂದರೆ ಬಿಡುವು. ಅಥ್ಲೆಟಿಕ್ಸ್‌ಗಾಗಿ ಉಡುವ ಉಡುಗೆಯನ್ನು ಬಿಡುವಿನ ವೇಳೆಯಲ್ಲೂ ತೊಡಬಹುದು ಎಂದಾದರೆ ಅದು ಆಥ್ಲೆಶರ್. ಈ ದಿರಿಸುಗಳು ತೊಡಲೂ ಆರಾಮದಾಯಕ, ನೋಡಲೂ ಸ್ಟೈಲಿಶ್.
ಬಿಂದಾಸ್ ಆಗಿ ತಿರುಗಾಡಿ
ಜಿಮ್‌ಗೆ ತೊಡುವ ಅಂಗಿ, ಪ್ಯಾಂಟ್, ಪಾದರಕ್ಷೆಗಳನ್ನು ಜಾಕೆಟ್ ಜೊತೆಗೆ ತೊಟ್ಟು ಕಚೇರಿಗೆ, ಕಾಲೇಜಿಗೆ, ಶಾಪಿಂಗ್‌ಗೆ ಹೀಗೆ ಎಲ್ಲಿ ಬೇಕಾದರೂ ಆರಾಮಾಗಿ ಹೋಗಬಹುದು. ಆಥ್ಲೆಶರ್ ಪ್ಯಾಂಟ್‌ಗಳಲ್ಲಿ ಲೆಗಿಂಗ್ಸ್, ಟ್ರ್ಯಾಕ್ ಪ್ಯಾಂಟ್ಸ್, ಯೋಗ ಪ್ಯಾಂಟ್ಸ್, ಜಾಗರ್ಸ್, ಕ್ಯಾಪ್ರಿ, ಟೈಟ್ಸ್ ಮುಂತಾದ ಹಲವಾರು ಬಗೆಗಳಿವೆ. ಅಷ್ಟೇ ಅಲ್ಲದೆ, ಬಾಕ್ಸರ್, ಶಾರ್ಟ್ಸ್, ಸ್ಕರ್ಟ್ಸ್, ಥ್ರಿ- ಫೋರ್ತ್ ಕೂಡ ಲಭ್ಯ ಇವೆ. ಇವುಗಳನ್ನು ಟಿ-ಶರ್ಟ್, ಶರ್ಟ್, ಟ್ಯಾಂಕ್ ಟಾಪ್ಸ್, ಲೂಸೆಶ್ ಟಾಪ್, ಸ್ಪೋರ್ಟ್ಸ್ ಬ್ರಾ, ಕೋಲ್ಡ್ ಶೋಲ್ಡರ್‌ಟಾಪ್ ಗಳ ಜೊತೆ ತೊಡಬಹುದು.
ಜಾಕೆಟ್, ಜೆರ್ಸಿ ಇತ್ಯಾದಿ
ಜಾಕೆಟ್‌ಗಳಲ್ಲೂ ಲೇಸರ್ ಕಟ್ ಜಾಕೆಟ್, ಟ್ರ್ಯಾಕ್ ಜಾಕೆಟ್, ಲೇಯರಿಂಗ್ ಜಾಕೆಟ್, ಪ್ಲೀಟೆಡ್‌ಬ್ಯಾಕ್ ಜಾಕೆಟ್‌ನಂಥ ಆಯ್ಕೆಗಳಿವೆ. ಹೂಡೀಸ್‌ನಲ್ಲಿ ಕೌಲ್‌ನೆಕ್ ಹೂಡಿ, ಡಿಸ್ಟ್ರೆಸ್ ಹೂಡಿ, ಸ್ಲಿವ್‌ಲೆಸ್ ಹೂಡಿ ಆಯ್ಕೆಗಳೂ ಲಭ್ಯ. ಇವಲ್ಲದೆ ಕೋಟ್‌ಗಳು, ವೆಸ್ಟ್‌ಗಳು, ಬಾಡಿಸೂಟ್, ಶ್ರಗ್, ಕ್ರಾಪ್‌ಟಾಪ್ ಮತ್ತು ಜರ್ಸಿಗಳೂ ಇವೆ.
ಸ್ಟೈಲಿಶ್ ಕಾಲು
ಆಥ್ಲೆಶರ್ ದಿರಿಸಿನ ಜೊತೆಗೆ ಸರಿಯಾದ ಪಾದರಕ್ಷೆಗಳನ್ನು ಧರಿಸುವುದು ಅತೀ ಮುಖ್ಯ ಇಲ್ಲದಿದ್ದರೆ, ಇಡೀ ಡ್ರೆಸ್‌ನ ಲುಕ್ ಹಾಳಾಗಬಹುದು. ಪಾದರಕ್ಷೆ ಎಂದಾಗ ಸ್ನೀಕರ್, ಸ್ಕೆಚರ್, ರನ್ನಿಂಗ್ ಶೂ ಮತ್ತು ವಾಕಿಂಗ್ ಶೂಗಳಿಗೆ ಮೊದಲ ಆದ್ಯತೆ. ಇವುಗಳು ಹೆಚ್ಚಾಗಿ ಬ್ರಿದಬಲ್ (ಚರ್ಮಉಸಿರಾಡಬಲ್ಲ) ಮತ್ತು ವಾಟರ್‌ಪ್ರೂಫ್ ಆಗಿರುತ್ತವೆ. ಇವುಗಳನ್ನು ಆಂಕಲ್ ಲಾಕ್ಸ್ ಅಥವಾ ಇನ್ವಿಸಿಬಲ್ ಲಾಕ್ಸ್ ಜೊತೆಗೆ ತೊಡಲಾಗುತ್ತದೆ.
ಬೆವರಿನ ಭಯವಿಲ್ಲ
ಆಥ್ಲೆಶರ್‌ನಲ್ಲಿ ಆಕ್ಟಿವ್‌ವೇರ್ ಎಂಬ ವಿಶೇಷ ಆಯ್ಕೆಯೂ ಇದೆ. ಈ ಉಡುಗೆ ಮೈಗೆ ಅಂಟಿರುತ್ತದೆ. ಆದರೆ, ಇದಕ್ಕೆ ಬೆವರನ್ನು ಹೀರುವ ಶಕ್ತಿಯೂ ಇರುತ್ತದೆ. ಹಾಗಾಗಿ, ಎಷ್ಟೇ ಬೆವರಿದರೂ ದೇಹದಿಂದ ದುರ್ವಾಸನೆ ಬಾರದಂತೆ ಈ ಆ್ಯಕ್ಟಿವ್ ವೇರ್ ತಡೆಯುತ್ತದೆ. ಆದ್ದರಿಂದ, ಇತ್ತೀಚೆಗೆ ಇದನ್ನು ಜಿಮ್, ಟ್ರ್ಯಾಕ್, ಫೀಲ್ಡ… ಅಲ್ಲದೆ ಬೇರೆ ಕಡೆಯೂ ಹಾಕಿಕೊಂಡು ಓಡಾಡಲು ಮಹಿಳೆಯರು ಇಷ್ಟಪಡುತ್ತಾರೆ. ಇನ್ನು ಮುಂದೆ ವ್ಯಾಯಾಮ ಮಾಡಲು ಪುರುಸೊತ್ತಿಲ್ಲ ಎಂಬ ಕಾರಣ ಕೊಡುವ ಹಾಗಿಲ್ಲ. ಯಾಕಂದ್ರೆ, ವ್ಯಾಯಾಮ ಮಾಡಿ ಬೆವರಿಳಿಸಿದರೂ, ನೇರವಾಗಿ ಬೇರೆ ಕೆಲಸ ಮಾಡಲು ಹೊರಡುವ ಅವಕಾಶವೂ ನಿಮ್ಮೆದುರಿದೆ. ಏನಂತೀರಾ?
1. ಈ ಬಟ್ಟೆಗಳು ಫಿಟ್ ಸೈಝ್ ಇದ್ದರೇ ಧರಿಸಲು ಚೆನ್ನ.
2. ಆಥ್ಲೆಶರ್ ಸ್ಟೈಲ್‌ನಲ್ಲಿ ಮೇಕಪ್ ಸಿಂಪಲ್ ಆಗಿರಬೇಕು.
3. ವಾಟರ್‌ಪ್ರೂಫ್ ಐ ಲೈನರ್‌ನಿಂದ ಕಣ್ಣುಗಳನ್ನು ಅಲಂಕರಿಸಬಹುದು.
4. ಆಥ್ಲೆಶರ್ ದಿರಿಸಿಗೆ ಸರಿಯಾದ ನ್ಪೋರ್ಟ್ಸ್ ಬ್ರಾ ಮತ್ತು ಶೂ/ ಸ್ನೀಕರ್ ಖರೀದಿಸಿ.
5. ಈ ಉಡುಪಿನ ಮೇಲೆ ಜಾಕೆಟ್ ಧರಿಸಿ, ಸ್ಟೈಲಿಶ್ ಬ್ಯಾಗ್ ಹಿಡಿದರೆ, ಟ್ರೆಂಡಿ ಲುಕ್ ಸಿಗುತ್ತದೆ.
– ಅದಿತಿಮಾನಸ ಟಿ. ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.