ಬಾಯಲ್ಲಿ ನೀರೂರಿಸುವ ನೀರ್‌ ದೋಸೆ

Team Udayavani, Sep 9, 2020, 5:53 PM IST

ಬಾಯಲ್ಲಿ ನೀರೂರಿಸುವ ನೀರ್‌ ದೋಸೆ

ಹಾಸನ- ಮೈಸೂರು ಸೀಮೆಯಲ್ಲಿ ಸೆಟ್‌ ದೋಸೆ, ಬೆಂಗಳೂರಿನಲ್ಲಿ ಮಸಾಲೆ ದೋಸೆ, ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹೇಗೆ ಪ್ರಸಿದ್ಧವೋ, ಹಾಗೆಯೇಮಲೆನಾಡು, ಮಂಗಳೂರು ಮತ್ತು ಕಾಸರಗೋಡು ಸೀಮೆಯಲ್ಲಿ ನೀರ್‌ ದೋಸೆ ಬಹಳ ಹೆಸರುವಾಸಿ. ಕೊಟ್ಟಿಗೆಹಾರದಲ್ಲಿ ಬಸ್‌ ಇಳಿದ ಹಲವರಿಗೆ ಅಲ್ಲಿ ನೀರ್‌ ದೋಸೆ ತಿನ್ನದಿದ್ದರೆ, ಏನನ್ನೋ  ಕಳೆದುಕೊಂಡಂತೆ ಫೀಲ್‌ ಆಗುವುದು ಸುಳ್ಳಲ್ಲ.

ನೀರ್‌ ದೋಸೆ ಮಾಡುವ ಅಥವಾ ನೀರ್‌ ದೋಸೆ ಹುಯ್ಯುವ ರೀತಿಯೇ ಬಹಳ ಸೊಗಸಿನದು. ಇಲ್ಲಿ ಒಂದು ವಿಚಾರವನ್ನು ಹೇಳಿಬಿಡಬೇಕು. ನೀರುದೋಸೆ ಮಾಡುವ ಚಾಕಚಕ್ಯತೆಯಲ್ಲಿ ಕರಾವಳಿಗರನ್ನು ಮೀರಿಸುವುದು ಕಷ್ಟ ಕಷ್ಟ.

ಕಾಸರಗೋಡು ಮತ್ತು ಮಂಗಳೂರು ಮತ್ತು ಮಲೆನಾಡು ಸೀಮೆಯಲ್ಲಿ ಈ ತಿನಿಸು ಅದೆಷ್ಟು ಜನಪ್ರಿಯ ಅಂದರೆ, ಹಾಸ್ಟೆಲ್‌ ನಿಂದ ಮನೆಗೆ ಬಂದ ಮಗ ಅಥವಾ ಮಗಳಲ್ಲಿ ಬೆಳಗ್ಗೆಗೆ ಏನು ತಿಂಡಿ ಮಾಡಲಿ ಎಂದು ರಾತ್ರೆ ಅಮ್ಮ ವಿಚಾರಿಸಿದರೆ, ಮುಸುಕಿನ ಒಳಗಿಂದಲೇ ಬರುವ ಸಿದ್ಧ ಉತ್ತರ- ನೀರು ದೋಸೆ. ಪ್ರೀತಿಪಾತ್ರರು ಅತಿಥಿಗಳಾಗಿ ಬಂದಾಗ ಕೂಡ ಹೆಚ್ಚಿನ ಕರಾವಳಿಗರು ಬೆಳಗಿನ ಉಪಾಹಾರಕ್ಕೆ ಮಾಡುವ ತಿಂಡಿಯೂ ಹೆಚ್ಚಾಗಿ ನೀರ್‌ ದೋಸೆಯೇ ಆಗಿರುತ್ತದೆ. ನೀರು ದೋಸೆ ಕರಾವಳಿಯ ಸ್ಪೆಶಲ್‌ ಕೂಡಾ. ಯಾವ ಗರಂ ಮಸಾಲೆ, ಜಿಡ್ಡು, ಖಾರವೂ ತಾಗದ ಮಲ್ಲಿಗೆ ಹೂವಿನ ಬಣ್ಣದ ತೆಳು ತೆಳು ದೋಸೆ.

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನುಅರ್ಧ ಗಂಟೆ ನೀರಿನಲ್ಲಿ ನೆನೆಸಿದರೆ ಸಾಕು. ಹಸಿ ಕೊಬ್ಬರಿ ಸುಳಿ ನಾಲ್ಕು ಚಮಚೆ ಹಾಕಿ ನಯವಾಗಿ ರುಬ್ಬಿದರೆ ಅಲ್ಲಿಗೆ ಅರ್ಧ ಕೆಲಸ ಮುಗೀತು. ಇಷ್ಟೇನಾ, ಉಫ್ ಅಂತ ತಾತ್ಸಾರ ಮಾಡಿದ್ದೇ ಆದರೆ ಸರಿಯಾಗದು. ಇನ್ನೀಗ ಇದೆ ಅದನ್ನು ತೆಳ್ಳಗೆ ಕಾವಲಿಗೆ ಎರಚಲು. ಕಾದ ಕಾವಲಿಗೆ ಅರ್ಧ ಚಮಚೆ ತುಪ್ಪಹಾಕಿ ನೀರಿನಷ್ಟು ತೆಳ್ಳಗೆ ಮಾಡಿದಹಿಟ್ಟನ್ನು ಕಾವಲಿಯ ತುಂಬ ಮೆಲ್ಲಗೆ ಎರಚಬೇಕು.ಸೌಟಿನಲ್ಲಿ ಹರಡಕೂಡದು.

ಅರೆನಿಮಿಷದಲ್ಲಿ ಹತ್ತಾರು ಕಣ್ಣುಕಣ್ಣುಗಳಾಗಿ ಕಾದ ದೋಸೆ ಬದಿಯಿಂದ ಮೆಲ್ಲಗೆ ಎದ್ದು ಬರುತ್ತದೆ. ಸಟ್ಟುಗ ತಾಗಿಸಿದರೆ ಸಾಕು. ಉರುಟಾದ ಮಲ್ಲಿಗೆ ವರ್ಣದ ದೋಸೆಯನ್ನು ಅರ್ಧದಲ್ಲಿಮಡಚಿ ಹಾಕಬೇಕು. ಮೆದು ಮೆದುವಾಗಿರುವ ಈ ತಿನಿಸಿನ ಜೊತೆಗೆ ಕಾಯಿ ಚಟ್ನಿ ಅಥವಾ ಕೆಂಪು ಚಟ್ನಿ ಒಳ್ಳೆಯ ಕಾಂಬಿನೇಷನ್‌. ಅದೂ ಬೇಡವೆಂದರೆ ಸಾಂಬಾರಿನ ಸಾಥ್‌ ಇರುತ್ತದೆ. ಈ ತಿನಿಸು, ಎಳೆಯಮಗುವಿಗೂ ಬೇಗನೆ ಅರಗುತ್ತದೆ.ಎಂಭತ್ತರ ಹಿರಿಯರೂ ಅಗಿಯುವಷ್ಟು ಮೆತ್ತಗೆ ಇರುತ್ತದೆ. ಅರಗದ ಸಮಸ್ಯೆಇಲ್ವೇಇಲ್ಲ. ಹಾಗೆಯೇ, ತಿಂಡಿ ಹೆವಿ ಆಯ್ತು ಅನ್ನುವ ಪ್ರಶ್ನೆಯೂ ಬರುವುದಿಲ್ಲ. ತುಳುನಾಡಿನಲ್ಲಿ ನೂತನ ಮದುಮಕ್ಕಳಿಗೆ ವಿವಾಹದ ಮಾರನೆ ದಿನ ಸನ್ಮಾನಕ್ಕೆ ಮಾಡುವ ತಿಂಡಿ ಕೂಡ ನೀರುದೋಸೆಯೇ ಆಗಿರುತ್ತದೆ ಅಂದರೆ, ನೀರು ದೋಸೆಯ ಮಹತ್ವವನ್ನು ಅಂದಾಜು ಮಾಡಿಕೊಳ್ಳಿ.

ಕೃಷ್ಣವೇಣಿ ಕಿದೂರ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.