ಬಂಜೆತನ ಹೆಣ್ಣಲ್ಲಿ ಮಾತ್ರವಲ್ಲ; ಗಂಡಲ್ಲೂ ಉಂಟು!
Team Udayavani, May 31, 2017, 11:10 AM IST
ತಾಯಿಯಾಗುವ ಆಕಾಂಕ್ಷೆ ಇರುವ ಮಹಿಳೆಯರಿಗೆ ಮತ್ತು ದಂಪತಿಗಳಿಗೆ, ಮುದ್ದಾದ ಮಗುವಿನ ನಗುವನ್ನು ಮನೆ, ಮನದುಂಬಿಸಲು ಸಜ್ಜಾಗಿ ನಿಂತಿದೆ ‘ಗರ್ಭಗುಡಿ’. ಐವಿಎಫ್, ಐಯುಐ, ಹೆಚ್‌ಎಸ್‌ಜಿ, ಪುರುಷರ ಸಂತಾನಹೀನತೆ ನಿವಾರಣೆ ಮುಂತಾದ ರೀತಿ ಚಿಕಿತ್ಸೆಗಳನ್ನು ನೀಡುವ ಮೂಲಕ ಕರುಳಿನ ಕುಡಿಯ ಕನಸನ್ನು ನನಸಾಗಿಸುತ್ತಲಿದೆ ಗರ್ಭಗುಡಿ.
ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ವ್ಯಾಯಾಮರಹಿತ ದೈನಂದಿನ ಚಟುವಟಿಕೆಗಳು ಬಂಜೆತನ ಆಥವಾ ಗರ್ಭಕೋಶದ ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ. ಈ ಸಮಸ್ಯೆ ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ; ಪುರುಷರಲ್ಲೂ ಉಂಟು..!
ಬಂಜೆತನ ಅಥವಾ ಅರೆ ಬಂಜೆತನ ಒಂದು ವೈಯಕ್ತಿಕ ಸಮಸ್ಯೆಯಲ್ಲ. ಸಾಮಾನ್ಯ ಕಾಯಿಲೆಗಳಂತೆ ಇದು ಕೂಡ ಒಂದು ಸಮಸ್ಯೆ ಅಷ್ಟೇ. ಇನ್‌ಫರ್ಟಿಲಿಟಿ (ಬಂಜೆತನ) ನಿವಾರಣೆಗೆ ವೈದ್ಯಕೀಯ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆಯಾದ್ದರಿಂದ, ಬಂಜೆತನ ನಿವಾರಣೆಗೆ ದಾರಿ ಹುಡುಕಬೇಕೇ ಹೊರತು ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೆಡಿಸಿಕೊಳ್ಳಬಾರದು. ಬದಲಿಗೆ ತಜ್ಞರನ್ನು ವೈದ್ಯರನ್ನು ಸಂಪರ್ಕಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು.
ಹಿಂದೆ ದಂಪತಿಗಳಿಗೆ ಮಕ್ಕಳಾಗದಿದ್ದರೆ ಹೆಣ್ಣನ್ನು ಹೊಣೆ ಮಾಡಿ ದೂಷಿಸುತ್ತಿದ್ದರು. ಮುಂದುವರಿದು ನಾನಾ ರೀತಿ ಪರೀಕ್ಷೆಗಳಿಗೆ ಆಕೆಯನ್ನಷ್ಟೇ ಒಳಪಡಿಸುತ್ತಿದ್ದರು. ಗಂಡಸರು ಮಾತ್ರ ಇದರಿಂದ ಹೊರತಾಗಿರುತ್ತಿದ್ದರು. ಆದರೆ, ಇಂದು ಮಹಿಳೆಯರ ಜೊತೆ ಪುರುಷರನ್ನು ಸಹ ತಪಾಸಣೆಗೆ ಒಳಪಡಿಸುತ್ತಿರುವುದರಿಂದ ಅವರಲ್ಲೂ ಸಮಸ್ಯೆ ಇರುವುದು ಕಂಡುಬರುತ್ತಿದೆ.
ಪುರುಷರಲ್ಲಿ ಬಂಜೆತನ – ಜೀವನಶೈಲಿ ಕಾರಣ: ಡಾ. ಆಶಾ ಎಸ್. ವಿಜಯ್
ಇಂದಿನ ದಿನಗಳಲ್ಲಿ ಪ್ರತಿ ಐವರು ದಂಪತಿಗಳಲ್ಲಿ ಒಬ್ಬರಿಗೆ ಬಂಜೆತನ (ಇನ್‌ಫರ್ಟಿಲಿಟಿ) ನಿವಾರಣೆ ಚಿಕಿತ್ಸೆ ಬೇಕಾಗುತ್ತದೆ. ಅದೇ ರೀತಿ ಪ್ರತಿ 10 ದಂಪತಿಗಳಲ್ಲಿ ಒಂದು ದಂಪತಿಗೆ ಸಂತಾನೋತ್ಪತ್ತಿಯ ವಯಸ್ಸು ಮೀರಿರುತ್ತದೆ. ಇದರ ಅರ್ಧದಷ್ಟು ಸಮಸ್ಯೆಗಳು ಪುರುಷರಲ್ಲೇ ಹೆಚ್ಚು. ಪುರುಷನಲ್ಲಿ ಯಾವುದೇ ವೀರ್ಯಾಣು ಇಲ್ಲದಿರುವುದು ಅಥವಾ ಇನ್ನಿತರ ಸಮಸ್ಯೆಗಳಿಂದ ಸಂತಾನಹೀನತೆ ಸಂಭವಿಸುತ್ತದೆ.
ಇಷ್ಟೇ ಅಲ್ಲದೆ ಜೀವನಶೈಲಿಯೂ ಪ್ರಮುಖ ಕಾರಣವಾಗುತ್ತದೆ. ಅತಿಯಾದ ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ, ಅನಾಬಾಲಿಕ್ ಸ್ಟಿರಾಯಿಡ್ ತೆಗೆದುಕೊಳ್ಳುವುದು, ಅತಿಯಾದ ಮತ್ತು ಕಷ್ಟಕರ ವ್ಯಾಯಾಮ, ವಿಟಮಿನ್ ಸಿ, ಇ ಮತ್ತು ಜಿಂಕ್ ಕೊರತೆ, ವಿಪರೀತ ಮಾನಸಿಕ ಒತ್ತಡ, ಅಪೌಷ್ಟಿಕತೆ, ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನ ಗರಿಷ್ಠ ಬಳಕೆ, ಪರಿಸರದಲ್ಲಿರುವ ವಿಷಯುಕ್ತ ರಾಸಾಯನಿಕಗಳು (ಸತು, ಪೈಂಟ್, ವಿಕಿರಣ, ವಿಕಿರಣಶೀಲ ವಸ್ತುಗಳು, ಬೆನಿjನ್, ಪಾದರಸ, ಬೊರನ್, ಭಾರ ಲೋಹಗಳು) ಒಂದಲ್ಲ ಒಂದು ರೀತಿಯಲ್ಲಿ ದೇಹದೊಳಗೆ ಸೇರುತ್ತಿರುವುದು, ರಾತ್ರಿ ಪಾಳಿ ಕೆಲಸ, ಹಗಲು ನಿದ್ರೆ, ಹೆಚ್ಚು ಬಿಸಿಯಿರುವ ಪ್ರದೇಶದಲ್ಲಿ ಕೆಲಸ ಮಾಡುವುದು, ಬಿಗಿಯಾದ ಜೀನ್ಸ್ ಅಥವಾ ಒಳಉಡುಪು ಧರಿಸುವುದು, ರೇಡಿಯೊಥೆರಪಿ ಹಾಗೂ ಕೀಮೋಥೆರಪಿ ಪಡೆಯುತ್ತಿರುವುದು ಕೂಡ ಬಂಜೆತನಕ್ಕೆ ಕಾರಣ ಎಂದು ತಿಳಿದುಬಂದಿದೆ.
ವೀರ್ಯಾಣು ಕೌಂಟ್ ಎಷ್ಟಿರಬೇಕು: ಪುರುಷನ ಒಂದು ಎಂ.ಎಲ್. ವೀರ್ಯದಲ್ಲಿ 15 ಮಿಲಿಯನ್ ವೀರ್ಯಾಣುಗಳಿರಬೇಕು. ಆಗಲೇ ಫಲಪ್ರದ ಸಂತಾನ ಸಾಧ್ಯ. ಆ ಸಂಖ್ಯೆ 10 ಮಿಲಿಯನ್‌ಗಿಂತ ಕಡಿಮೆಯಿದ್ದರೆ ಅವನಲ್ಲಿ ತೊಂದರೆ ಇದೆ ಎಂದರ್ಥ. ಐದು ಮಿಲಿಯನ್‌ಗಿಂತಲೂ ಕಡಿಮೆ ಸಂಖ್ಯೆಯ ವೀರ್ಯಾಣು ಇದೆಯೆಂದರೆ ಅವನಿಗೆ ಗಂಭೀರ ತೊಂದರೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಏನೂ ಇಲ್ಲ ಎಂದರೆ ಮಗು ಆಗುವ ಸಾಧ್ಯತೆ ಇಲ್ಲವೆಂದೇ ಅರ್ಥ ಎಂದು ಹನುಮಂತನಗರದ ಗರ್ಭಗುಡಿ ಐವಿಎಫ್ ಸೆಂಟರ್‌ನ ತಜ್ಞೆ ಡಾ. ಆಶಾ ಎಸ್. ವಿಜಯ್ ಅಭಿಪ್ರಾಯ ಪಡುತ್ತಾರೆ.
ಆದರೆ, ಇದರಿಂದ ಹೆದರಬೇಕಾಗಿಲ್ಲ. ತಜ್ಞ ವೈದ್ಯರಲ್ಲಿ ಸೆಮೆನ್ ಅನಾಲಿಸಿಸ್ ಮಾಡಿಸುವ ಮೂಲಕ ಸೆಮೆನ್ ಕೌಂಟ್, ಮೊಟಿಲಿಟಿ ಮತ್ತು ಮಾರಾ#ಲಜಿ ಪತ್ತೆ ಹಚ್ಚಬಹುದು. ನಂತರ ಸೂಕ್ತ ಚಿಕಿತ್ಸೆ ಪಡೆದು ಸರಿಪಡಿಸಿಕೊಳ್ಳಬಹುದು. ವೀರ್ಯಾಣು ಕೊರತೆಗೆ ಕಾರಣಗಳು ಹಲವಾರು. ಸಾಮಾನ್ಯ ಕಾರಣಗಳ ಜೊತೆಗೆ ಪುರುಷರ ಟೆಸೀrಸ್ ಹಾಗೂ ಎಪಿಡಿಡೈಮಿಸ್ ಅಥವಾ ಅದಕ್ಕೆ ಸಂಬಂಧಪಟ್ಟ ರಕ್ತನಾಳಗಳು ಆತಿಯಾಗಿ ಉಬ್ಬಿರುವುದು ಸಮಾಗಮಕ್ಕೆ ತೊಂದರೆಯಾಗಿ ಪರಿಣಮಿಸಬಹುದು. ಒಂದು ಸಣ್ಣ ಶಸ್ತ್ರಚಿಕಿತ್ಸೆಯಿಂದ ಅಲ್ಲಿನ ರಕ್ತನಾಳಗಳನ್ನು ಸರಿಪಡಿಸಿದರೆ ಪುರುಷ ಮತ್ತೆ ಎಂದಿನಂತೆ ಕಾರ್ಯ ಪ್ರವೃತ್ತನಾಗುತ್ತಾನೆ.
ಅದೇ ರೀತಿ ಮೊದಲ ಮಗು ಯಾವುದೇ ತೊಂದರೆ ಇಲ್ಲದೆ ಜನಿಸಿರುತ್ತದೆ. ಮಗುವಿನ ಒತ್ತಡಕ್ಕೊ ಅಥವಾ ದಂಪತಿಗಳು ಅಪೇಕ್ಷೆಪಟ್ಟೋ ಇನ್ನೊಂದು ಮಗುವಿಗಾಗಿ ಪ್ರಯತ್ನಿಸುತ್ತಾರೆ. ಆದರೆ, ಗರ್ಭಧಾರಣೆ ಆಗುವುದಿಲ್ಲ. ಜೀವನಶೈಲಿಯ ವ್ಯತ್ಯಾಸ ಅಥವಾ ರೋಗದ ಕಾರಣ ಈ ಸ್ಥಿತಿ ಉದ್ಭವಿಸುತ್ತದೆ. ಈ ಸಮಸ್ಯೆಯನ್ನೂ ಪರಿಹರಿಸಿ ಗರ್ಭಧಾರಣೆ ಆಗುವಂತೆ ಮಾಡಬಹುದು. ಆದರೆ, ಎಂತಹ ವೈದ್ಯಕೀಯ ಚಿಕಿತ್ಸೆ ನೀಡಿದರೂ ಕೂಡ ಸಹಜ ಸಂತಾನೋತ್ಪತ್ತಿಗೆ ಮೊದಲು ದಂಪತಿಗಳು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಸ್ವಲ್ಪ ವಾಕಿಂಗ್ ಮಾಡಬೇಕು, ಸರಿಯಾದ ಸಮಯಕ್ಕೆ ಊಟ, ತಿಂಡಿ ಸೇವಿಸಬೇಕು. ಸದಾ ಒಂದೇ ಕಡೆ ಕುಳಿತು ಕೆಲಸ ಮಾಡಬಾರದು. ಬಿಗಿ ಬಟ್ಟೆಗಳನ್ನು ಧರಿಸಬಾರದು. ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರದಲ್ಲಿಟ್ಟುಕೊಳ್ಳಬೇಕು.
ಕೃತಕ ಗರ್ಭಧಾರಣೆ: ಕೆಲವು ಪುರುಷರಲ್ಲಿ ವೀರ್ಯಾಣುಗಳು ಇರುವುದೇ ಇಲ್ಲ. ಅಂಥವರಿಗೆ ಇರುವ ಸಮಸ್ಯೆಯಾದರೂ ಏನು ಎಂಬುದನ್ನು ಪತ್ತೆ ಹಚ್ಚಿ, ಖಚಿತಪಡಿಸಿಕೊಂಡು ನೂತನ ತಂತ್ರಜ್ಞಾನದ ಮೂಲಕ ಟೆಸೀrಸ್ ಮತ್ತು ಎಪಿಡಿಡೈಮಿಸ್‌ನಿಂದ ನೇರವಾಗಿ ವೀರ್ಯಾಣು ಪಡೆದು ಅಂಡಾಣುವಿನ ಜೊತೆ ಮಿಲನಗೊಳಿಸಿ ಕೃತಕ ಗರ್ಭಧಾರಣೆ ಮಾಡಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಡಾ. ಆಶಾ. ಇವರನ್ನು ಸಂಪರ್ಕಿಸಬೇಕಿದ್ದಲ್ಲಿ ಗರ್ಭಗುಡಿ ಐವಿಎಫ್ ಸೆಂಟರ್ ಮೊ.8026672277 ಅಥವಾ www.garbhagudi. com or Tollfree:1800-200-8288 ಕರೆ ಮಾಡಬಹುದು.
– ಗೋಪಾಲ್ ತಿಮ್ಮಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.