ಅಡುಗೆ ಮನೆಯ ಬೊಜ್ಜು ನಿವಾರಕಗಳು
Team Udayavani, Dec 19, 2018, 6:00 AM IST
ಅಡುಗೆ ಮನೆಯೆಂಬ ಪುಟ್ಟ ಪ್ರಪಂಚದೊಳಗೆ ಸಂಜೀವಿನಿ ಲೋಕವೇ ಇದೆ. ಸಾಲಾಗಿ ಕೂಡಿಸಿಟ್ಟ ಡಬ್ಬಿಯ ದಿನಸಿಗಳಲ್ಲಿ, ಹರಡಿಟ್ಟ ತರಕಾರಿಗಳಲ್ಲಿ ಬೊಜ್ಜಿಗೂ ಔಷಧವಿದೆ. ಅವು ಯಾವುವು?
1. ಕೊತ್ತಂಬರಿ ಸೊಪ್ಪಿನ ಪೇಯ
ಸ್ವಲ್ಪ ನೀರು ಬೆರೆಸಿ ಕೊತ್ತಂಬರಿ ಸೊಪ್ಪನ್ನು ಮಿಕ್ಸರ್‌ನಲ್ಲಿ ತಿರುವಿ ಜ್ಯೂಸ್ ತಯಾರಿಸಬೇಕು. ತದನಂತರ ಇದಕ್ಕೆ 1/2 ಲಿಂಬೆಹಣ್ಣಿನ ರಸ, 2 ಚಮಚ ಜೇನು ಬೆರೆಸಿ ಸೇವಿಸಬೇಕು. ನಿತ್ಯ ಖಾಲಿ ಹೊಟ್ಟೆಯಲ್ಲಿ 3-4 ತಿಂಗಳು ಸೇವಿಸಿದರೆ ಬೊಜ್ಜು ಕರಗುವುದು ಮಾತ್ರವಲ್ಲ, ಆರೋಗ್ಯವೂ ವರ್ಧಿಸುತ್ತದೆ. ಇವುಗಳಲ್ಲಿನ ಅಧಿಕ ವಿಟಮಿನ್ “ಸಿ’ಯ ಅಂಶವು ಫ್ಯಾಟ್ ಆಕ್ಸಿಡೇಶನ್ ಉತ್ಪತ್ತಿ ಮಾಡಿ, ಬೊಜ್ಜು ಕರಗಿಸುತ್ತದೆ.
2. ಕರಿಬೇವು, ಮೆಂತ್ಯದ ಕಷಾಯ
8-10 ಕರಿಬೇವಿನ ಎಲೆಗಳನ್ನು ಎಣ್ಣೆ ಹಾಕದೆ ಕಾವಲಿಯಲ್ಲಿ ರೋಸ್ಟ್ ಮಾಡಬೇಕು. ಎಲೆಗಳು ಆರಿದ ಬಳಿಕ ಪುಡಿ ಮಾಡಬೇಕು. 4-5 ಚಮಚ ಮೆಂತ್ಯೆ ಕಾಳುಗಳನ್ನು ಕಾವಲಿಯಲ್ಲಿ ಹುರಿದು ಆರಿದ ಬಳಿಕ ಹುಡಿ ಮಾಡಿ ಇಡಬೇಕು. ತದನಂತರ ಇವೆರಡನ್ನೂ ಬೆರೆಸಿ ಗಾಜಿನ ಕರಡಿಗೆಯಲ್ಲಿ ಸಂಗ್ರಹಿಸಬೇಕು. ನಿತ್ಯ 1 ಅಥವಾ 2 ಬಾರಿ (ಬೆಳಗ್ಗೆ ಮತ್ತು ಸಂಜೆ) ಈ ಪುಡಿಯನ್ನು 2 ಚಮಚಗಳಷ್ಟು ತೆಗೆದುಕೊಂಡು 1 ಕಪ್ ನೀರಿಗೆ ಬೆರೆಸಿ, ಕುದಿಸಿ, ಸೇವಿಸಿದರೆ ಬೊಜ್ಜು ಕರಗುತ್ತದೆ. ಮಧುಮೇಹಿಗಳಿಗೂ ರಾಮಬಾಣ.
3. ದಾಲ್ಚಿನ್ನಿ ಪುಡಿ, ನಿಂಬೆಯ ಪಾನೀಯ
1 ಕಪ್ ನೀರಿಗೆ 1/2 ಚಮಚ ದಾಲ್ಚಿನ್ನಿ ಪುಡಿ ಬೆರೆಸಿ 10 ನಿಮಿಷ ಹಾಗೇ ಇಡಬೇಕು. ತದನಂತರ 1/2 ನಿಂಬೆರಸ, 2 ಚಿಟಿಕೆ ಮೆಣಸಿನ ಕಾಳಿನ ಹುಡಿ ಬೆರೆಸಿ ಈ ಪಾನೀಯವನ್ನು ಖಾಲಿಹೊಟ್ಟೆಯಲ್ಲಿ ದಿನಕ್ಕೆ 1-2 ಬಾರಿ ಸೇವಿಸಬೇಕು. ದಾಲಿcನ್ನಿಯು ಚಯಾಪಚಯ ಕ್ರಿಯೆ (ಮೆಟಬಾಲಿಕ್ ರೇಟ್) ವೇಗ ವರ್ಧಿಸುವುದರಿಂದ ಶೀಘ್ರ ಬೊಜ್ಜು ನಿವಾರಣೆಗೆ ಹಿತಕರ.
4. ಶುಂಠಿ ಚಹಾ
1 ಕಪ್ ನೀರಿಗೆ 1 ಚಮಚ ಶುಂಠಿಯ ತುರಿ ಬೆರೆಸಿ ಸಣ್ಣ ಉರಿಯಲ್ಲಿ 2 ನಿಮಿಷ ಕುದಿಸಬೇಕು. ಆರಿದ ಬಳಿಕ ಇದನ್ನು ಸೋಸಿ, ತದನಂತರ ಜೇನು ಸೇರಿಸಬೇಕು. ಇದಕ್ಕೆ ನಿಂಬೆರಸವನ್ನು ಬೆರೆಸಬಹುದು. ಈ ಶುಂಠಿಯ ಚಹಾವನ್ನು ನಿತ್ಯ ಖಾಲಿಹೊಟ್ಟೆಯಲ್ಲಿ 1-2 ಬಾರಿ ಸೇವಿಸಿದರೆ 3-4 ತಿಂಗಳಲ್ಲಿ ಅಧಿಕ ಬೊಜ್ಜು ಕರಗುತ್ತದೆ.
5. ಹುರಿದ ಬೆಳ್ಳುಳ್ಳಿ ಸೇವನೆ
ಬೆಳ್ಳುಳ್ಳಿಯನ್ನು ಸಣ್ಣಗೆ ತುರಿದುಕೊಳ್ಳಬೇಕು. ತದನಂತರ 2 ಚಮಚ ಶುದ್ಧ ಕೊಬ್ಬರಿ ಎಣ್ಣೆ ಬೆರೆಸಿ, ಸಣ್ಣ ಉರಿಯಲ್ಲಿ ಬೆಚ್ಚಗೆ ಮಾಡಬೇಕು. ಇದನ್ನು ನಿತ್ಯ ಸೇವಿಸಿದರೆ ಬೊಜ್ಜು ಕರಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಬೊಜ್ಜು ನಿವಾರಕ ಗುಣಗಳೊಂದಿಗೆ ಕೊಬ್ಬರಿ ಎಣ್ಣೆಯಲ್ಲಿರುವ ಮಧ್ಯಮ ಫ್ಯಾಟಿ ಆಮ್ಲದ ಅಂಶವು ಬೊಜ್ಜು ಕರಗಲು ನೆರವಾಗುತ್ತದೆ.
ಡಾ. ಅನುರಾಧಾ ಕಾಮತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.