ಔಟ್ ಆಫ್ ಟ್ರ್ಯಾಕ್…
ಟ್ರ್ಯಾಕ್ ಸೂಟ್ ಈಗ ಎಲ್ಲೆಲ್ಲೂ...
Team Udayavani, Dec 11, 2019, 5:39 AM IST
ಟ್ರ್ಯಾಕ್ ಪ್ಯಾಂಟ್ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ ಆಫೀಸಿಗೂ ಹೋಗುವ ಹೊಸ ಟ್ರೆಂಡ್ ಶುರುವಾಗಿದೆ. ದಿನಕ್ಕೊಂದು ಬಗೆಯ ಫ್ಯಾಷನ್ ಸೃಷ್ಟಿಯಾಗುವ ಈ ಸಂದರ್ಭದಲ್ಲಿ ಟ್ರ್ಯಾಕ್‌ಸೂಟ್‌ಗಳಿಗೆ ರಾಜಯೋಗ ಶುರುವಾಗಿದೆ
ಈಗೀಗ ಜನರು ಬಹುತೇಕ ಕೆಲಸಗಳನ್ನು ಕಂಪ್ಯೂಟರ್ ಮುಂದೆ ಕೂತೇ ಮಾಡಬೇಕಾಗುತ್ತದೆ. ಹೆಚ್ಚು ಸಮಯ ಒಂದೇ ಕಡೆ ಕೂರುವ ಕಾರಣದಿಂದ ಹಾಗೂ ಸುದೀರ್ಘ ಅವಧಿಯವರೆಗೆ ಕಂಪ್ಯೂಟರ್ ಅನ್ನು ದಿಟ್ಟಿಸಿ ನೋಡುವುದರಿಂದ ಆರೋಗ್ಯ ಹದಗೆಡುತ್ತದೆ. ಆದ್ದರಿಂದ, ಬಹಳಷ್ಟು ಮಂದಿ ಒಳ್ಳೆ ಆಹಾರ ಸೇವಿಸುವುದರ ಜೊತೆಗೆ ವ್ಯಾಯಾಮ ಕೂಡ ಮಾಡಲು ಶುರು ಮಾಡಿದ್ದಾರೆ. ವ್ಯಾಯಾಮ ಮಾಡಲು ಬಿಡುವಿಲ್ಲದ ಕಾರಣ, ಹಲವರು ಲಿಫ್ಟ್ ಬಳಸುವ ಬದಲಿಗೆ ಆಫೀಸ್‌ನ ಮೆಟ್ಟಿಲು ಹತ್ತಿ ಇಳಿಯುವ ಅಭ್ಯಾಸ ರೂಢಿಸಿಕೊಳ್ಳುತ್ತಿದ್ದಾರೆ.
ಆಫೀಸ್‌ಗೆ ಹೋಗಲು ತೊಡುವ ಉಡುಪಿನಲ್ಲಿ ವ್ಯಾಯಾಮ ಮಾಡುವಂತೆ ಓಡಾಡಲು ಅಥವಾ ಸರಾಗವಾಗಿ ಕೈ ಕಾಲು ಆಡಿಸಲು ಕಷ್ಟವಾಗುತ್ತದೆ. ಹಾಗಾಗಿ ಓಡಾಡಲು ಸುಲಭವಾಗಬೇಕು, ಆರಾಮದಾಯಕವಾಗಿರಬೇಕು ಮತ್ತು ಸ್ಟೈಲಿಶ್ ಕೂಡ ಆಗಿರಬೇಕು ಅಂದ್ರೆ ಯಾವ ಉಡುಗೆ ತೊಡಬೇಕು?
ಟ್ರ್ಯಾಕ್‌ಪ್ಯಾಂಟ್, ಶರ್ಟ್, ಶಾರ್ಟ್ಸ್, ಶೂಸ್ ಅಥವಾ ಜರ್ಸಿಯನ್ನು ಕ್ರೀಡೆಗೆ, ಜಿಮ್, ಜಾಗಿಂಗ್, ವಾಕಿಂಗ್ ಅಥವಾ ಯೋಗಾಭ್ಯಾಸಕ್ಕೆ ಹೋಗುವಾಗ ತೊಡುವುದು ಸಹಜ. ಟ್ರ್ಯಾಕ್ ಕ್ರೀಡೆಯಲ್ಲಿ ಇದನ್ನು ಧರಿಸುವ ಕಾರಣ, ಈ ಉಡುಪಿಗೆ ಟ್ರ್ಯಾಕ್ ಸೂಟ್ ಎಂದು ಕರೆಯಲಾಗುತ್ತದೆ ಕೂಡ.
ಟ್ರ್ಯಾಕ್‌ಗಷ್ಟೇ ಅಲ್ಲ…
ಆದರೀಗ ಈ ಉಡುಪು ಟ್ರ್ಯಾಕ್‌ಗಷ್ಟೇ ಸೀಮಿತವಾಗದೆ ಏರ್‌ಪೋರ್ಟ್, ರಾಂಪ್, ಶಾಪಿಂಗ್, ಹಾಲಿಡೇ, ಪಾರ್ಟಿ, ಕಾಲೇಜು ಮತ್ತು ಆಫೀಸ್‌ನಲ್ಲೂ ಕಾಣಿಸಿಕೊಳ್ಳಲು ಶುರುವಾಗಿದೆ! ದೊಡ್ಡ ಸ್ಪೋರ್ಟ್ಸ್ ಬ್ರಾಂಡ್‌ಗಳಾದ ನೈಕಿ, ಅಡಿಡಾಸ್, ರೀಬಾಕ್, ಪ್ಯೂಮಾ, ಡಿಕ್ಯಾತ್ಲಾನ್, ಜಾಕಿ ಮುಂತಾದವುಗಳು ಬಣ್ಣ ಬಣ್ಣದ,ಬಗೆ ಬಗೆಯ, ವಿಶಿಷ್ಟ ವಿನ್ಯಾಸದ ಟ್ರ್ಯಾಕ್‌ಸೂಟ್‌ಗಳನ್ನು ಮಾರುಕಟ್ಟೆಗೆ ತಂದಿವೆ. ಸೆಲೆಬ್ರಿಟಿಗಳು ಇವುಗಳನ್ನು ಕೊಂಡು, ಹೋದಲ್ಲೆಲ್ಲಾ ತೊಟ್ಟು ಕಾಣಿಸಿಕೊಳ್ಳುತ್ತಿರುವ ಕಾರಣ, ಇಂಥ ಟ್ರ್ಯಾಕ್‌ಸೂಟ್‌ಗಳಿಗೆ ಇದೀಗ ಬೇಡಿಕೆಯೂ ಹೆಚ್ಚಾಗಿದೆ.
ಸೆಲೆಬ್ರಿಟಿ ಟ್ರೆಂಡ್
ಆರೋಗ್ಯ, ಫಿಟ್ನೆಸ್ ಮತ್ತು ಫ್ಯಾಷನ್ ಬಗ್ಗೆ ಕಾಳಜಿ ವಹಿಸುವವರು ಅಂತಿಂಥ ಟ್ರ್ಯಾಕ್ ಸೂಟ್ ತೊಡಲಾರರು. ಉತ್ಕೃಷ್ಠ ಗುಣಮಟ್ಟದ ಹಾಗೂ ಬಹಳ ಕಾಲ ಬಾಳಿಕೆ ಬರುವ ಒಳ್ಳೊಳ್ಳೆ ಮೆಟೀರಿಯಲ…ನಿಂದ ತಯಾರಿಸಿದ ಟ್ರ್ಯಾಕ್ ಸೂಟ್ ಗಳನ್ನೇ ಖರೀದಿಸುತ್ತಾರೆ. ನಟಿಯರು, ಕ್ರೀಡಾಪಟುಗಳು, ಮುಂತಾದ ಸೆಲೆಬ್ರಿಟಿಗಳು ದೊಡ್ಡ ಬ್ರಾಂಡ್‌ನ ಟ್ರ್ಯಾಕ್ ಸೂಟ್ ಧರಿಸಿದರೆ ತಾನಾಗೇ ಆಬ್ರಾಂಡ್‌ನ ಪ್ರಚಾರವಾದಂತೆ, ಅಲ್ಲವೆ? ಹಾಗಾಗಿ, ಹಲವು ಬ್ರಾಂಡ್‌ಗಳು ತಮ್ಮ ಟ್ರ್ಯಾಕ್ ಸೂಟ್ ಗಳನ್ನು ಸೆಲೆಬ್ರಿಟಿಗಳಿಗೆ ಸ್ಪಾನ್ಸರ್ ಕೂಡ ಮಾಡುತ್ತವೆ. ತಮ್ಮ ಸ್ವಂತ ಲೇಬಲ… ಉಳ್ಳ ವಸ್ತ್ರವಿನ್ಯಾಸಕರೂ, ಸೆಲೆಬ್ರಿಟಿಗಳಿಗೆ ಕಸ್ಟಮೈಸ್ಡ್ ಟ್ರ್ಯಾಕ್ ಸೂಟ್‌ಗಳನ್ನು ಮಾಡಿ ಕೊಡುತ್ತಾರೆ.
ಸ್ಟೈಲ್ ಹಾಗೂ ಕಂಫರ್ಟ್
ಟ್ರ್ಯಾಕ್ ಸೂಟ್‌ಗಳು ಧರಿಸಲು ಆರಾಮದಾಯಕ ಮಾತ್ರವಲ್ಲದೆ, ನೋಡಲು ಸ್ಟೈಲಿಶ್ ಕೂಡ ಆಗಿವೆ. ಮ್ಯಾಚಿಂಗ್ ಬಣ್ಣದ ಕೋಟ್/ ಜರ್ಸಿ ಮತ್ತು ಪ್ಯಾಂಟ್ ಅಥವಾ ಶಾರ್ಟ್ಸ್ ಜೊತೆ ಬೇರೊಂದು ಬಣ್ಣದ ಅಂಗಿ, ಟಿ-ಶರ್ಟ್, ಕ್ರಾಪ್ ಟಾಪ್, ವೆಸ್ಟ್, ಟ್ಯಾಂಕ್ ಟಾಪ್ ಅಥವಾ ಟ್ಯೂನಿಕ್ ತೊಟ್ಟು, ರನ್ನಿಂಗ್/ವಾಕಿಂಗ್/ಜಿಮ್ ಶೂಸ್ ತೊಟ್ಟರೆ ಟ್ರ್ಯಾಕ್ ಸೂಟ್ ಗೆಟ್ ಅಪ್ ರೆಡಿ! ತೊಟ್ಟ ಅಂಗಿ ಜೊತೆ ಶೂಸ್ ಮ್ಯಾಚ್ ಆದರೆ ಇನ್ನೂ ಚೆನ್ನ. ಅಂಗಿ ಎಂದರೆ ಆಫ್ ಶೋಲ್ಡರ್/ ಕೋಲ್ಡ… ಶೋಲ್ಡರ್ ಅಥವಾ ಸ್ಲಿವ್‌ಲೆಸ್ ಟಾಪ್ ಕೂಡ ಆಗಿರಬಹುದು.
ಬಹಳಷ್ಟು ಆಯ್ಕೆಗಳಿವೆ
ಪ್ಯಾಂಟ್‌ನಲ್ಲೂ ಹಲವು ಪ್ರಕಾರಗಳಿವೆ. ಸಡಿಲವಾದುದು, ಬಿಗಿಯಾದುದು, ತೀರಾ ಸಡಿಲವಾದುದು, ಪೈಜಾಮವನ್ನು ಹೋಲುವಂಥ ಪ್ಯಾಂಟ್, ಹೀಗೆ ನಿಮಗಿಷ್ಟದ ಪ್ಯಾಂಟ್ ಆರಿಸಿಕೊಳ್ಳಲು ಅವಕಾಶವಿದೆ. ಸಡಿಲವಾದ ಪ್ಯಾಂಟ್‌ನ ತುದಿ ಮಾತ್ರ ಸ್ವಲ್ಪ ಬಿಗಿಯಾಗಿದ್ದರೆ ಅದನ್ನು ಜಾಗರ್ಸ್ ಎನ್ನುತ್ತಾರೆ. ಶಾರ್ಟ್ಸ್ ತೊಡುವುದಾದರೆ ಸೈಕ್ಲಿಂಗ್ ಶಾರ್ಟ್ಸ್ನಂಥ ಬಿಗಿಯಾದ ದಿರಿಸು ಅಥವಾ ಬಾಕ್ಸಿಂಗ್ ಶಾರ್ಟ್ಸ್ನಂಥ ಸಡಿಲವಾದ “ಡೈರಿಸೋ’ ಲಭ್ಯವಿದೆ. ಈ ಪ್ಯಾಂಟ್ ಮತ್ತು ಶಾರ್ಟ್ಸ್ನಲ್ಲಿ ಜೇಬು ಇರುತ್ತವೆ. ಸೊಂಟದಲ್ಲಿ ಬಿಗಿಯಾಗಿ ನಿಲ್ಲಲು ಲಾಡಿ ಅಥವಾ ಇಲಾಸ್ಟಿಕ್‌ನ ಆಯ್ಕೆಯೂ ಇರುತ್ತದೆ. ಕೋಟ್ ಅಥವಾ ಜರ್ಸಿಯಲ್ಲಿ ಹೆಚ್ಚಾಗಿ ಕಾಲರ್ ಮತ್ತು ಜೇಬುಗಳು ಇರುತ್ತವೆ. ಜಿಪ್ ಅಥವಾ ಬಟನ್ (ಗುಂಡಿ) ಆಯ್ಕೆಗಳೂ ಸಿಗುತ್ತವೆ. ಇನ್ನೂ ಕೆಲವು ಕೋಟ್‌ಗಳು ಹುಡಿ ಮಾದರಿಯಲ್ಲೂ ಇರುತ್ತವೆ.
ಒಂದು ವೇಳೆ ನೀವೂ ಫಿಟ್ ಆಗಿರಲು ಬಯಸುವುದಾದರೆ ಇಂಥ ಟ್ರ್ಯಾಕ್ ಸೂಟ್‌ಗಳನ್ನು ತೊಡುವುದರಿಂದ ಅನುಕೂಲವಾಗುತ್ತದೆ. ಅಲ್ಲದೆ ಹೊಸ ಮೇಕ್ ಓವರ್ ಸಿಗುತ್ತದೆ. ಹಾಗಾಗಿ ಇಂದೇ ನಿಮ್ಮ ವಾರ್ಡ್‌ರೋಬ್ ಅನ್ನು ಟ್ರೆಂಡಿ ಟ್ರ್ಯಾಕ್ ಸೂಟ್ ಜೊತೆ ಅಪ್ಡೆಟ್ ಮಾಡಿ.
-ಅದಿತಿ ಮಾನಸ ಟಿ. ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.