ಪಾದದ ಮೇಲೆ ಕೈಚಳಕ…ಶೂ ಕೇಸ್
Team Udayavani, Apr 15, 2020, 12:11 PM IST
ಎನ್ನುವುದನ್ನು ಕೇಳಿದ್ದೀರಿ. ಆದರೆ, ಲಾಕ್‌ಡೌನ್‌ನ ಈ ಸಮಯದಲ್ಲಿ ಮನೆಯೇ ಜಗತ್ತು. ಆ ಸಣ್ಣ ಜಗತ್ತಿನೊಳಗೆ ಏನೇನೆಲ್ಲ ಮಾಡಬಹುದು, ಹೇಗೆಲ್ಲ ಸಮಯ
ಕಳೆಯಬಹುದು ಎಂಬ ಮಾಹಿತಿ, ಇಂಟರ್ನೆಟ್‌ನಲ್ಲಿ ದಂಡಿಯಾಗಿ ಲಭ್ಯ ಇವೆ. ಮನೆಯಲ್ಲೇ ಇರುವ ವಸ್ತುಗಳನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲು
ಸಾಧ್ಯವಿದೆ.
ಉದಾಹರಣೆಗೆ- ಬಟ್ಟೆ ಬಳಸಿ ತಯಾರಿಸಲಾದ ಪಾದರಕ್ಷೆಗಳ ಮೇಲೆ, ಚಿತ್ರಕಲೆ ಮೂಡಿಸಬಹುದು. ಬಿಳಿ ಅಥವಾ ಯಾವುದೇ ತಿಳಿ ಬಣ್ಣದ ಶೂ ಮೇಲೆ,
ಗಾಢ ಬಣ್ಣಗಳಿಂದ ಚಿತ್ರ ಬಿಡಿಸಬೇಕಾಗುತ್ತದೆ. ಕಪ್ಪು ಅಥವಾ ಗಾಢ ಬಣ್ಣದ ಶೂ ಆಗಿದ್ದರೆ, ತಿಳಿ ಬಣ್ಣಗಳಿಂದ ಚಿತ್ರ ಬಿಡಿಸಬೇಕು.
ನೋಡಿ ಕಲಿ, ಮಾಡಿ ನಲಿ
ಚಿತ್ರ ಬಿಡಿಸಲು ಬರುವವರಿಗೆ, ಶೂ ಮೇಲೆ ಚಿತ್ತಾರ ಮೂಡಿಸುವುದು ಕಷ್ಟದ ಕೆಲಸವಲ್ಲ. ಇದುವರೆಗೆ ಕುಂಚ ಹಿಡಿಯದೇ ಇದ್ದವರು, ಯುಟ್ಯೂಬ್ ಅಥವಾ
ಸಾಮಾಜಿಕ ಜಾಲತಾಣಗಲ್ಲಿ ಸಿಗುವ ವಿಡಿಯೋ ಟ್ಯುಟೋರಿಯಲ್ ನೋಡಿ ಕಲಿಯಬಹುದು. ಶೂ ಮೇಲೆ, ಸಣ್ಣ ಪುಟ್ಟ ಚಿಹ್ನೆಗಳನ್ನು, ವಿವಿಧ ಆಕೃತಿಗಳನ್ನು
ಮೂಡಿಸಿದರೆ ಅಂದವಾಗಿ ಕಾಣುತ್ತದೆ.
ಯಾವ ಪಾದರಕ್ಷೆ ಸೂಕ್ತ?
ಈ ಪ್ರಯೋಗ ಮಾಡಲು, ಚರ್ಮದ ಶೂಸ್ ಅಥವಾ ಬೂಟ್ಸ್ ಉತ್ತಮ ಆಯ್ಕೆ ಅಲ್ಲ. ಕಾನ್ವರ್ಸ್, ಸ್ನೀಕರ್ಸ್, ಕ್ಯಾನ್ವಾಸ್ ಶೂಗಳ ಮೇಲೆ ಸುಲಭವಾಗಿ
ಚಿತ್ರ ಬಿಡಿಸಬಹುದು. ಮನೆಯಲ್ಲಿ ಈ ಬಗೆಯ ಶೂಸ್ ಇಲ್ಲದಿದ್ದರೆ, ಫ್ಯಾಬ್ರಿಕ್ ಪೇಂಟ್ ಬಳಸಿ, ಹಳೆಯ ಪಾದರಕ್ಷೆಗಳ ಮೇಲೆ ಚಿತ್ರ ಬಿಡಿಸಬಹುದು.
ಮಿರರ್ ಇಮೇಜ್ ಬಿಡಿಸಿ
ಎಡ ಮತ್ತು ಬಲ ಪಾದರಕ್ಷೆಗಳ ಮೇಲೆ, ಎರಡು ವಿಭಿನ್ನ ಬಗೆಯ ಚಿತ್ತಾರ ಮೂಡಿಸಬಹುದು. ಎರಡೂ ಶೂಗಳ ಮೇಲೆ ಒಂದೇ ರೀತಿಯ ಬಣ್ಣ, ಆಕಾರ
ಅಥವಾ ಚಿತ್ರ ಮೂಡಿಸುವುದಾದರೆ, ಅವು ಮಿರರ್ ಇಮೇಜ್‌ನಂತೆ ಇರಬೇಕು. ಅಂದರೆ, ಬಲಗಾಲಿನ ಶೂ ಅನ್ನು ಕನ್ನಡಿ ಮುಂದೆ ಇಟ್ಟರೆ ಯಾವ
ರೀತಿ ಕಾಣುವುದೋ, ಆ ರೀತಿ, ಎಡಕಾಲಿನ ಶೂ ಮೇಲೆ ಚಿತ್ತಾರವಿರಬೇಕು. ಇದಕ್ಕೆ ವಾಶೆಬಲ್ ಪೇಂಟ್ ಕೂಡ ಬಳಸಬಹುದು. ಆಗ, ಶೂಗಳ ಮೇಲಿನ ಬಣ್ಣ ನೀರಿನಲ್ಲಿ ತೊಳೆದು ಹೋಗುತ್ತದೆ. ಹೊಸದಾಗಿ ಚಿತ್ರ ಬಿಡಿಸಲು ಕಲಿಯುತ್ತಿರುವವರಿಗೆ ಈ ಪೇಂಟ್ ಸೂಕ್ತ. ಚಿತ್ರ, ವಿನ್ಯಾಸ, ಚಿತ್ತಾರಗಳು ಹಾಗೆಯೇ ಉಳಿಯಬೇಕು ಅಂದರೆ, ನಾನ್ ವಾಶೆಬಲ್ ಪೇಂಟ್ ಬಳಸಬೇಕು. ಮೊದಲು ಪಾದರಕ್ಷೆಯನ್ನು ಶುಚಿಗೊಳಿಸಿ, ನಂತರ ಅದರ ಮೇಲೆ ಪೆನ್ಸಿಲ್ ಅಥವಾ ಮಾರ್ಕರ್ ಬಳಸಿ ಚಿತ್ರ ಬಿಡಿಸಿ. ನಂತರ ಅವುಗಳಿಗೆ ಬಣ್ಣ ತುಂಬಿಸಿ. ಸಲೀಸಾಗಿ ಚಿತ್ರ ಬಿಡಿಸಬಲ್ಲವರು ಪೆನ್ಸಿಲ…, ಸ್ಟೆನ್ಸಿಲ್ ಅಥವಾ ಮಾರ್ಕರ್ ಬಳಸುವ ಅಗತ್ಯವಿಲ್ಲ.
ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.