ಪಾಲಕ್‌ ಪರಪಂಚ


Team Udayavani, Mar 14, 2018, 7:13 PM IST

6.jpg

ಪಾಲಕ್‌ ಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು: ರುಬ್ಬಿ ಕೊಳ್ಳಲು- ಪಾಲಕ್‌ ಸೊಪ್ಪು ಒಂದು ಚಿಕ್ಕ ಕಟ್ಟು, ಈರುಳ್ಳಿ ಎರಡು, ಹಸಿ ಮೆಣಸಿನಕಾಯಿ
ಮೂರರಿಂದ ನಾಲ್ಕು, ತೆಂಗಿನಕಾಯಿ ತುರಿ ಅರ್ಧ ಕಪ್‌, ಶುಂಠಿ ಒಂದು ಇಂಚು, ಇಂಗು ಕಾಲು ಟೀ ಚಮಚ, ಜೀರಿಗೆ ಒಂದು ಟೀ
ಚಮಚ, ಅಕ್ಕಿ ಅರ್ಧ ಕಪ್‌, ಹೆಸರು ಕಾಳು ಅರ್ಧ ಕಪ್‌, ಹೆಸರು ಬೇಳೆ ಅರ್ಧ ಕಪ್‌, ಬೇಯಿಸಲು ಎಣ್ಣೆ ಅಥವಾ ತುಪ್ಪ.

ಮಾಡುವ ವಿಧಾನ: ಅಕ್ಕಿ, ಹೆಸರು ಕಾಳು ಮತ್ತು ಹೆಸರು ಬೇಳೆಯನ್ನು ಆರು ಗಂಟೆಗಳ ಕಾಲ ನೆನೆಸಿಡಿ. ನಂತರ ಬೇಳೆ
ಮತ್ತು ಅಕ್ಕಿಯ ಜೊತೆಗೆ ಉಳಿದ ಸಾಮಗ್ರಿಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಮಸಾಲೆ ದೋಸೆ ಹದಕ್ಕೆ ಇರಲಿ. ಒಂದು
ತವಾಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಮಸಾಲೆ ದೋಸೆ ರೀತಿಯಲ್ಲಿ ದೋಸೆ ಹಾಕಿ. ಅದರ ಮೇಲೆ ಚಿಕ್ಕದಾಗಿ ಹೆಚ್ಚಿಕೊಂಡಿದ್ದ
ಈರುಳ್ಳಿಯನ್ನು ಹಾಕಿ. ಮಧ್ಯಮ ಉರಿಯಲ್ಲಿ ಗರಿಗರಿಯಾಗಿ ಬೇಯಿಸಿಕೊಳ್ಳಿ. ತೆಂಗಿನಕಾಯಿ ಚಟ್ನಿ, ಅಲೂಗಡ್ಡೆ ಪಲ್ಯ, ಸಾಂಬಾರ್‌ ಜೊತೆಗೆ ರುಚಿಯಾಗಿರುತ್ತದೆ.

ಪಾಲಕ್‌ ಸೊಪ್ಪಿನ ಪೂರಿ
ಬೇಕಾಗುವ ಸಾಮಗ್ರಿಗಳು: ಕತ್ತರಿಸಿದ ಪಾಲಕ್‌ ಸೊಪ್ಪು ಒಂದು ಕಪ್‌, ಕತ್ತರಿಸಿದ  ಕೊತ್ತಂಬರಿ ಸೊಪ್ಪು ಅರ್ಧ ಕಪ್‌, ಹಸಿ ಮೆಣಸಿನಕಾಯಿ 1-2. ಈ ಮೂರನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಗೋಧಿ ಹಿಟ್ಟು ಒಂದು ಕಪ್‌, ಚಿರೋಟಿ ರವೆ 2 ಚಮಚ,  ಕಡಲೆಹಿಟ್ಟು 2 ಚಮಚ, ಅಚ್ಚ ಖಾರದ ಪುಡಿ 1/2 ಚಮಚ, ಕಸೂರಿ ಮೇತಿ ಸ್ವಲ್ಪ, ಇಂಗು ಚಿಟಿಕೆ, ತುಪ್ಪ 1 ಚಮಚ, ಅರಿಶಿನ 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.

ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಒಂದು ಬೌಲ್‌ಗೆ ಗೋಧಿ ಹಿಟ್ಟು, ಚಿರೋಟಿ ರವೆ, ಕಡಲೆಹಿಟ್ಟು, ಖಾರದ ಪುಡಿ, ಇಂಗು, ಕಸೂರಿ ಮೇತಿ, ಉಪ್ಪು, ಅರಿಶಿನದ ಪುಡಿ, ತುಪ್ಪ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ
ರುಬ್ಬಿಕೊಂಡ ಪಾಲಕ್‌ ಸೊಪ್ಪಿನ ಮಿಶ್ರಣ ಹಾಕಿ ಚೆನ್ನಾಗಿ ನಾದಿ. ನಂತರ ಪೂರಿಯ ಅಳತೆಯ ಉಂಡೆಗಳನ್ನು ಮಾಡಿ ಲಟ್ಟಿಸಿಕೊಳ್ಳಿ. ಲಟ್ಟಿಸಿದ ಪೂರಿ ಹಿಟ್ಟನ್ನು ಬಿಸಿಯಾದ ಎಣ್ಣೆಗೆ ಬಿಡಿ. ಎರಡೂ ಬದಿಯನ್ನು ಬೇಯಿಸಿ. ರುಚಿಯಾದ ಪಲಾಕ್‌ ಸೊಪ್ಪಿನ
ಪೂರಿಯನ್ನು ಸಾಗು,ಚಟ್ನಿ, ಪಲ್ಯ ಅಥವಾ ಯಾವುದೇ ಕರಿಯೊಂದಿಗೆ ಸವಿಯಿರಿ. ಕಡಲೆಹಿಟ್ಟು ಮತ್ತು ಚಿರೋಟಿ ರವೆ ಹಾಕುವುದರಿಂದ ಪೂರಿ ಗರಿ ಗರಿಯಾಗಿರುತ್ತದೆ.

ಪಾಲಕ್‌ ಸೊಪ್ಪಿನ ಪಲಾವ್‌
ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಕತ್ತರಿಸಿದ ಪಾಲಕ್‌ ಸೊಪ್ಪು ಒಂದು ಕಪ್‌, ಬಾಸುಮತಿ ಅಕ್ಕಿ ಒಂದು ಕಪ್‌, ಅರಿಶಿನ ಅರ್ಧ
ಚಮಚ, ಖಾರದ ಪುಡಿ ಅರ್ಧ ಚಮಚ, ಗರಂ ಮಸಾಲೆ ಅರ್ಧ ಚಮಚ, ಹಸಿ ಮೆಣಸಿನಕಾಯಿ ನಾಲ್ಕು, ಬೆಳ್ಳುಳ್ಳಿ ಹತ್ತು, ಶುಂಠಿ ಒಂದು
ಇಂಚು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ 2 ಚಮಚ, ಚಕ್ಕೆ ಒಂದು ಇಂಚು, ಲವಂಗ ನಾಲ್ಕು, ಏಲಕ್ಕಿ ಎರಡು, ಪಲಾವ್‌ ಎಲೆ ಒಂದು, ಈರುಳ್ಳಿ ಉದ್ದಕ್ಕೆ ಹೆಚ್ಚಿದ್ದು, ಅರ್ಧ ಕಪ್‌ ಕ್ಯಾರೆಟ್‌, ಹುರುಳಿ ಕಾಯಿ, ಬಟಾಣಿ, ಹೂಕೋಸು, ಆಲೂಗಡ್ಡೆ ಒಂದು ಕಪ್‌, ಚಿಕ್ಕದಾಗಿ ಕತ್ತರಿಸಿದ ಟೊಮೆಟೋ ಎರಡು, ಕೊತ್ತಂಬರಿ ಸೊಪ್ಪು ಸ್ವಲ್ಪ 

ತಯಾರಿಸುವ ವಿಧಾನ
ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಉಪ್ಪು, ಗರಂಮಸಾಲೆ, ಪಾಲಕ್‌ ಸೊಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿಯಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಪಲಾವ್‌ ಎಲೆ ಹಾಕಿ ಒಗ್ಗರಣೆ ಮಾಡಿ. ಈರುಳ್ಳಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ. ಟೊಮೆಟೊ ಹಾಕಿ ಬಾಡಿಸಿ. ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮಿಶ್ರಣ ಮಾಡಿ. ತರಕಾರಿಗಳನ್ನು ಸೇರಿಸಿ. ಅರಿಶಿನ ಮತ್ತು ಖಾರದ ಪುಡಿಯನ್ನು ಮಿಶ್ರಣಕ್ಕೆ ಸೇರಿಸಿ ಬೇಯಿಸಿ. ಅಕ್ಕಿಯನ್ನು ತೊಳೆದು ಒಂದು ಕಪ್‌ ಅಕ್ಕಿಗೆ ಎರಡು ಕಪ್‌ ನೀರು ಹಾಕಿ ಕುಕ್ಕರ್‌ ಮುಚ್ಚಳ ಮುಚ್ಚಿ. ಎರಡು ವಿಷಲ್‌ ನಂತರ ತೆಗೆಯಿರಿ. ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ. ರುಚಿಯಾದ ಹಾಗೂ ಆರೋಗ್ಯಕರವಾದ ಪಲಾಕ್‌ ಪಲಾವ್‌ನ್ನು ರಯತಾದೊಂದಿಗೆ ಸವಿಯಿರಿ.

ಅವಲಕ್ಕಿ-ಪಾಲಕ್‌ ಸೊಪ್ಪಿನ ಕಟ್ಲೆಟ್‌
ಬೇಕಾಗುವ ಸಾಮಗ್ರಿಗಳು: ತೆಳು ಅವಲಕ್ಕಿ ಎರಡು ಕಪ್‌, ಕತ್ತರಿಸಿದ ಪಾಲಕ್‌ ಸೊಪ್ಪು ಒಂದು ಕಪ್‌, ಕೊತ್ತಂಬರಿ ಸೊಪ್ಪು
ಅರ್ಧ ಕಪ್‌, ಹಸಿ ಮೆಣಸಿನಕಾಯಿ ಎರಡರಿಂದ ಮೂರು, ಶುಂಠಿ ಚಿಕ್ಕದಾಗಿ ಹೆಚ್ಚಿದ್ದು ಒಂದು ಚಮಚ, ಗರಂ ಮಸಾಲೆ ಅರ್ಧ
ಚಮಚ, ಖಾರದ ಪುಡಿ ಅರ್ಧ ಚಮಚ, ಅರಿಶಿನ ಪುಡಿ ಅರ್ಧ ಚಮಚ, ಧನಿಯಾ ಪುಡಿ ಅರ್ಧ ಚಮಚ, ಅಮ್‌ ಚೂರ್‌ ಪೌಡರ್‌
ಅರ್ಧ ಚಮಚ, ಚಾಟ್‌ ಮಸಾಲೆ ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.

ಮಾಡುವ ವಿಧಾನ: ಅವಲಕ್ಕಿಯನ್ನು ತೊಳೆದು ಪೂರ್ತಿ ನೀರನ್ನು ಹಿಂಡಿ ತೆಗೆಯಿರಿ. ಒಂದು ಬೌಲ್‌ನಲ್ಲಿ ಅವಲಕ್ಕಿ ಮತ್ತು
ಮೇಲಿನ ಎಲ್ಲ ಮಸಾಲೆ ಪದಾರ್ಥಗಳನ್ನು ಹಾಗೂ ಪಲಾಕ್‌ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ.
ಆ ಹಿಟ್ಟಿನಿಂದ ನಿಮಗೆ ಬೇಕಾದ ಗಾತ್ರದ ಉಂಡೆಗಳನ್ನು ಮಾಡಿ. ಅದನ್ನು ಬೇಕಾದ ಆಕಾರದಲ್ಲಿ ತಟ್ಟಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಿ.
ಅದಕ್ಕೆ ತಟ್ಟಿದ ಕಟ್ಲೆಟ್‌ ಹಾಕಿ ಮಧ್ಯಮ ಉರಿಯಲ್ಲಿ ನಿಧಾನವಾಗಿ ಗರಿ ಗರಿಯಾಗುವವರೆಗೆ ಬೇಯಿಸಿ. ರುಚಿಯಾದ ಕಟ್ಲೆಟ್‌ನ್ನು
ಟೊಮೆಟೊ ಸಾಸ್‌ ಅಥವಾ ಚಟ್ನಿಯೊಂದಿಗೆ ಸಂಜೆಯ ಕಾಫಿ ಜೊತೆ ಸವಿಯಿರಿ. ಮಕ್ಕಳಿಗೆ ಇಷ್ಟವಾದ ರೆಸಿಪಿ ಇದು. ಸುಲಭವಾಗಿ
ಮಾಡಬಹುದು. ಮಕ್ಕಳ ಲಂಚ್‌ ಬಾಕ್ಸ್ಗೂ ಒಳ್ಳೆಯ ತಿಂಡಿ. 

 ವೇದಾವತಿ ಹೆಚ್‌.ಎಸ್‌

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.