ಸುಂದರ ಆರೋಗ್ಯಕ್ಕೆ ‘ಪಂಚಕರ್ಮ ಚಿಕಿತ್ಸೆ’


Team Udayavani, Jun 6, 2018, 9:15 AM IST

ayurvedamuseum.jpg

ಆಯುರ್ವೇದ ಶಾಸ್ತ್ರ, ಕೇವಲ ವೈದ್ಯ ಪದ್ಧತಿ ಮಾತ್ರವಲ್ಲ. ಇದೊಂದು ಜೀವನ ವಿಧಾನ. ಹಲವಾರು ವರ್ಷಗಳು ಆನಂದದಿಂದ ಜೀವಿಸಬೇಕೆಂಬ ಹಂಬಲವುಳ್ಳವರು ಅನುಸರಿಸುವ ಆರೋಗ್ಯ ಪದ್ಧತಿ. ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು ನೀಡುವ ಪಂಚಕರ್ಮ ಚಿಕಿತ್ಸೆ ಆರೋಗ್ಯ ಕ್ಷೇತ್ರದ ಅದ್ಭುತಗಳಲ್ಲೊಂದು…
– – –
ಆಧುನಿಕ ಜೀವನ ಶೈಲಿಯಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಆಯುರ್ವೇದ ಔಷಧ ಪದ್ಧತಿ ಎಂತಹ ಕಾಯಿಲೆ, ಒತ್ತಡಗಳಿದ್ದರೂ ಮೂಲದಿಂದಲೇ ವಾಸಿ ಮಾಡುವ ಗುಣ ಹೊಂದಿದೆ. 

ಇಲ್ಲಿ ವೈದ್ಯರು ಕೇವಲ ಕಾಯಿಲೆಗೆ ಮಾತ್ರ ಔಷಧ ಕೊಡುವುದಿಲ್ಲ. ದೇಹ, ಮನಸ್ಸು, ಪ್ರಕೃತಿ, ಆತ್ಮ ಮತ್ತು ದೋಷಗಳು, ಮಲ ಮತ್ತು ಧಾತುಗಳ ಸ್ಥಿತಿಯತ್ತಲೂ ಗಮನ ಹರಿಸುತ್ತಾರೆ.

ದೇಹದಲ್ಲಿ ಅಡಗಿರುವ ವಾತ, ಪಿತ್ತ, ಕಫ ಎಂಬ ಮೂರು ಗುಣಗಳ ಸಮತೋಲನದಿಂದ ಹಾಗೂ ದೈಹಿಕ ಅಂಗಗಳ ಸಾಮರಸ್ಯದಿಂದ, ಉತ್ತಮ ಆಹಾರ ಪಚನ ಮತ್ತು ತ್ಯಾಜ್ಯ ವಿಸರ್ಜನೆಗಳಿಂದ ಕೂಡಿದ ವ್ಯಕ್ತಿಯು ಆರೋಗ್ಯವಂತ ವ್ಯಕ್ತಿ ಎನ್ನಿಸಿಕೊಳ್ಳುತ್ತಾನೆ. ವಾತ, ಪಿತ್ತ, ಕಫದಲ್ಲಿ ಸಮತೋಲನ ತಪ್ಪಿದರೆ ಹಾಗೂ ಮನೋ ದೈಹಿಕ ಬಲಗಳ ನಡುವೆ ಏರುಪೇರು ಉಂಟಾದರೆ ಕಾಯಿಲೆ ಕಂಡುಬರುತ್ತವೆ. ವಾತ, ಪಿತ್ತ, ಕಫವನ್ನು ಸಮತೋಲನದಿಂದ ಕಾಯ್ದುಕೊಳ್ಳಲು ಆನುಕೂಲ ಮಾಡಿಕೊಡುವ ಪಂಚಕರ್ಮ ಚಿಕಿತ್ಸೆ ಆರೋಗ್ಯ ಕ್ಷೇತ್ರದ ಅದ್ಭುತಗಳಲ್ಲೊಂದಾಗಿದೆ. 

ಸಾಧಾರಣವಾಗಿ ಬರುವ ಅಜೀರ್ಣದಿಂದ ಹಿಡಿದು, ಮಲಬದ್ಧತೆ, ಮೂಲವ್ಯಾಧಿ, ಬೆನ್ನು-ಸೊಂಟ ನೋವು, ತಲೆನೋವು, ನಪುಂಸಕತೆ, ಪೋಲಿಸಿಸ್ಟಿಕ್‌ ಓವೇರಿಯನ್‌ ಡಿಸೀಸ್‌ ನಂತರ ಮುಟ್ಟಿನ ಸಮಸ್ಯೆ, ಸಂತಾನಹೀನತೆ, ಆಥೆùìಟಿಸ್‌ ಮುಂತಾದ ರೋಗಗಳು ಹುಟ್ಟುತ್ತವೆ. ರೋಗ ಪ್ರತಿರೋಧ ಶಕ್ತಿ ಹೆಚ್ಚಿರುವ ಶರೀರವು ಈ ತಡೆಗಳನ್ನು ಹೋಗಲಾಡಿಸುವ ಸಾಮರ್ಥ್ಯ ಹೊಂದಿರುತ್ತವೆ. ಇನ್ನು ಕೆಲವು ಶರೀರಗಳಿಗೆ ಇದಕ್ಕಾಗಿ ಸಣ್ಣ ಪ್ರಮಾಣದ ಚಿಕಿತ್ಸಾ ಸಹಾಯ ಬೇಕಾಗುತ್ತದೆ.

ಬಿಝಿ ಲೈಫ್‌ನಲ್ಲೂ ಪಂಚಕರ್ಮ ಸಾಧ್ಯ: ಡಾ. ಕೇಶವ ಭಟ್‌ ಸರ್ಪಂಗಳ ಇಂದಿನ ಬಿಝಿ ಲೈಫ್‌ ಮಂದಿಗೆ ಅನ್ನಪಚನಾಂಗದ ದಿನಂಪ್ರತಿ ಚಟುವಟಿಕೆಗಳ ವ್ಯತ್ಯಯವೇ ಸಕಲ ರೋಗಗಳಿಗೂ ಮೂಲ ಕಾರಣ. ಪಚನಕ್ರಿಯೆಯ ರೂವಾರಿ ಶಾರೀರಿಕ ‘ಅಗ್ನಿ’ ಎನ್ನಿಸಿದ ‘ಪಿತ್ತ’ವನ್ನು ಹತೋಟಿಯಲ್ಲಿರಿಸುವುದು ಬಹುಮುಖ್ಯ.

ಅದಕ್ಕಾಗಿ ಸಾಮಾನ್ಯವಾಗಿ ಬಿಡುವಿಲ್ಲದ ವೃತ್ತಿ ಜೀವನದೆಡೆಯಲ್ಲೂ ಪಂಚಕರ್ಮ ಚಿಕಿತ್ಸೆ ಅಗತ್ಯ. ಔಪಚಾರಿಕವಾದ ಸ್ನೇಹ ಪ್ರಯೋಗ (ಔಷಧೀಯ ತುಪ್ಪ ಸೇವನೆ) ಮತ್ತು ಸ್ವೇದನ (ಬೆವರಿಸುವಿಕೆ)ದ ನಂತರ ಆಯ್ದ ಶೋಧನ ಪ್ರಯೋಗ (ವಮನ, ವಿರೇಚನ, ವಸ್ತಿ, ಸಸ್ಯ, ರಕ್ತಮೋಕ್ಷ ಇವುಗಳಲ್ಲಿ ಸೂಕ್ತವಾದುದು)ವನ್ನು ಚುಟುಕಾಗಿ ಸುಲಭ ರೀತಿಯಲ್ಲಿ ಕಾಲೀಯವಾಗಿ ಮಾಡುವುದರಿಂದ ಶಾಸ್ತ್ರೋಕ್ತವಾದ ಫಲಿತಾಂಶ ಸಿಗದೇ ಇದ್ದರೂ ಮಲಾಂಶವು ಶರೀರದಲ್ಲಿ ವೃದ್ಧಿಸುವುದನ್ನು ತಡೆಗಟ್ಟಬಹುದು. ಆದ್ದರಿಂದಲೇ ಪಂಚಕರ್ಮಗಳು ಈ ನಿಟ್ಟಿನಲ್ಲಿ ಬಹು ಪರಿಣಾಮಕಾರಿ ಎಂದಿದ್ದಾರೆ ಬೆಂಗಳೂರಿನ ವೈದ್ಯರತ್ನಂ ಚಿಕಿತ್ಸಾಲಯದ  ಹಿರಿಯ ವೈದ್ಯ ಮತ್ತು ವ್ಯವಸ್ಥಾಪಕ ಡಾ. ಕೇಶವ ಭಟ್‌ ಸರ್ಪಂಗಳ.

ವೈದ್ಯರತ್ನಂ ಆಯುರ್ವೇದ ಫೌಂಡೇಶನ್‌ನಡಿ ವೈದ್ಯರತ್ನಂ ಔಷಧಶಾಲಾ, ವೈದ್ಯರತ್ನಂ ನರ್ಸಿಂಗ್‌ ಹೋಂ, ವೈದ್ಯರತ್ನಂ ಆಯುರ್ವೇದ ಕಾಲೇಜ್‌, ರಿಸರ್ಚ್‌ ಮತ್ತು ಡೆವಲಪ್‌ಮೆಂಟ್‌ ಲ್ಯಾಬ್‌, ವೈದ್ಯ ವಿದ್ಯಾರ್ಥಿಗಳ ತರಬೇತಿ ಕೇಂದ್ರ ಹಾಗೂ ವೈದ್ಯರತ್ನಂ ಆಯುರ್ವೇದ ಮ್ಯೂಸಿಯಂ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಹೆಚ್‌ಎಸ್‌ಆರ್‌ ಬಡಾವಣೆಯ ವೈದ್ಯರತ್ನಂನ ಚಿಕಿತ್ಸಾ ಕೇಂದ್ರದಲ್ಲಿ ಪರಿಣಿತ ಹಾಗೂ ಅನುಭವಿ ವೈದ್ಯರ ಸಮಾಲೋಚನೆ (ಕೌನ್ಸಿಲಿಂಗ್‌) ಕೂಡ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿ 080-22580020, ಮೊ. 9449593130 ಅಥವಾ  ಇಮೇಲ್‌ನಲ್ಲಿ cಚrಛಿಃvಚಜಿಛyಚrಚಠಿnಚಞಚಿlr.cಟಞ  ಪಡೆಯಬಹುದು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.