ಪನೀರ್ ಪರಿಮಳ
Team Udayavani, Apr 1, 2020, 12:55 PM IST
ಮೊದಲೆಲ್ಲ ರೆಸ್ಟೋರೆಂಟ್‌ಗಳಿಗೆ ಹೋದಾಗ ತಪ್ಪದೇ ಪನೀರ್ನ ಖಾದ್ಯಗಳನ್ನು ಆರ್ಡರ್ ಮಾಡುತ್ತಿದ್ದೆವು. ಆದರೀಗ ಎಲ್ಲರ ಮನೆಯಲ್ಲೂ ಪನೀರ್ನ ತಿನಿಸುಗಳು ಸಿದ್ಧಗೊಳ್ಳುತ್ತಿವೆ. ಕೆಲವರು ರೆಡಿಮೇಡ್ ಪನೀರ್ ಅನ್ನು ಶಾಪ್‌ಗ್ಳಿಂದ ತಂದರೆ, ಮತ್ತೆ ಕೆಲವರು ಮನೆಯಲ್ಲೇ ಪನೀರ್ ತಯಾರಿಸುತ್ತಾರೆ. ಪನೀರ್‌ನಿಂದ ಮಾಡಬಹುದಾದ ಕೆಲವು ಖಾದ್ಯಗಳ ರೆಸಿಪಿ ಇಲ್ಲಿದೆ.
ಪನೀರ್ ಬಟರ್ ಮಸಾಲ :
ಬೇಕಾಗುವ ಸಾಮಗ್ರಿ: 200 ಗ್ರಾಮ್ ಪನೀರ್, 1 ಈರುಳ್ಳಿ, 1 ಟೊಮೇಟೊ, ಗೋಡಂಬಿ, ಲವಂಗ, ಚಕ್ಕೆ, ಉಪ್ಪು, ಖಾರದ ಪುಡಿ, ಗರಂ ಮಸಾಲ, ಬೆಣ್ಣೆ.
ಮಾಡುವ ವಿಧಾನ: ಬಾಣಲೆಗೆ ಸ್ವಲ್ಪಎಣ್ಣೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ. ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ಟೊಮೇಟೊ ಹಾಕಿ ಬೇಯಿಸಿ. ಅವುಗಳ ಜೊತೆಗೆ ಹುರಿದ ಗೋಡಂಬಿ, ಲವಂಗ, ಚಕ್ಕೆ ಕೂಡ ಸೇರಿಸಿ ಪಕ್ಕಕ್ಕೆ ಇಡಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಪುನಃ ಬಾಣಲೆಗೆ ಈ ಮಿಶ್ರಣವನ್ನು ಹಾಕಿ. ಬಿಸಿಯಾದ ನಂತರ, ಚೌಕಾಕಾರಕ್ಕೆ ಕತ್ತರಿಸಿದ ಪನೀರ್ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದರೆ ಮಿಶ್ರಣ ಹಾಗೂ ಪನೀರ್ ಬೆರೆತುಕೊಳ್ಳುತ್ತದೆ. ನಂತರ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಗರಂ ಮಸಾಲ ಹಾಕಿ 5 ನಿಮಿಷ ಕುದಿಸಿರಿ. ಕೊನೆಯಲ್ಲಿ ಬೆಣ್ಣೆ ಹಾಕಿದರೆ, ಪನೀರ್ ಬಟರ್ ಮಸಾಲ ಸಿದ್ಧ.
ಪಾಲಕ್ ಪನೀರ್ :
ಬೇಕಾಗುವ ಸಾಮಗ್ರಿ: ಪಾಲಕ್ ಸೊಪ್ಪು, 200 ಗ್ರಾಮ್ ಪನೀರ್, 1 ಈರುಳ್ಳಿ, 1 ಟೊಮೇಟೊ, ಲವಂಗ, ಚಕ್ಕೆ, ಉಪ್ಪು, ಖಾರದ ಪುಡಿ, ಗರಂ ಮಸಾಲ.
ಮಾಡುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ಟೊಮೇಟೊ ಹಾಕಿ ಬೇಯಿಸಿ. ಅವುಗಳ ಜೊತೆಗೆ ಪಾಲಕ್ ಸೊಪ್ಪನ್ನು ಹಾಕಿ ಫ್ರೈ ಮಾಡಿ, ಲವಂಗ, ಚಕ್ಕೆ ಕೂಡ ಸೇರಿಸಿ ಪಕ್ಕಕ್ಕೆ ಇಡಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಪುನಃ ಬಾಣಲೆಗೆ ಈ ಮಿಶ್ರಣವನ್ನು ಹಾಕಿ. ಅದು ಬಿಸಿಯಾದ ಮೇಲೆ, ಚೌಕಾಕಾರಕ್ಕೆ ಕತ್ತರಿಸಿದ ಪನೀರ್ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದರೆ ಮಿಶ್ರಣ ಹಾಗೂ ಪನೀರ್ ಬೆರೆತುಕೊಳ್ಳುತ್ತದೆ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಗರಂ ಮಸಾಲ ಹಾಕಿ 5 ನಿಮಿಷ ಕುದಿಸಿ.
ಬುರ್ಜಿ :
ಬೇಕಾಗುವ ಸಾಮಗ್ರಿ: 200 ಗ್ರಾಮ್ ತುರಿದ ಪನೀರ್, 1 ಈರುಳ್ಳಿ, 1 ಟೊಮೇಟೊ, 1 ಕ್ಯಾಪ್ಸಿಕಂ, ಜೀರಿಗೆ, ಇಂಗು, ಜಿಂಜರ್ ಗಾರ್ಲಿಕ್ ಪೇಸ್ಟ್, ಉಪ್ಪು, ಖಾರದ ಪುಡಿ.
ಮಾಡುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಒಗ್ಗರಣೆಗೆ ಜೀರಿಗೆ, ಇಂಗು ಹಾಕಿದ ನಂತರ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.ನಂತರ, ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ. ಅದರ ಹಸಿ ವಾಸನೆ ಹೋದ ಮೇಲೆ ಟೊಮೇಟೊ ಹಾಕಿ. ಅದು ಮೆತ್ತಗಾದ ಮೇಲೆ ಕ್ಯಾಪ್ಸಿಕಂ ಹಾಕಿ ಬೇಯಿಸಿ, ಉಪ್ಪು- ಖಾರ ಸೇರಿಸಿ. ನೀರು ಹಾಕಬಾರದು, ಎಣ್ಣೆಯಲ್ಲೇ ಬೇಯಿಸಿದರೆ ರುಚಿ ಜಾಸ್ತಿ. ನಂತರ ತುರಿದ ಪನೀರ್ ಹಾಕಿ 8-10 ನಿಮಿಷ ಮಗುಚಿದರೆ ಪನೀರ್ ಬುರ್ಜಿ ರೆಡಿ.
– ಸುಪ್ರೀತಾ ವೆಂಕಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.