ಮುತ್ತೇ ಪ್ರಥಮಾ!
Team Udayavani, Mar 18, 2020, 5:39 AM IST
ಇದು ಮದುವೆಯ ಸೀಸನ್. ಆಭರಣಗಳನ್ನು ಕೊಳ್ಳುವ, ಧರಿಸುವ ಸುಗ್ಗಿ ಕಾಲ. ಚಿನ್ನದ ಒಡವೆಗಳನ್ನು ಸುಲಭವಾಗಿ ಧರಿಸಿ, ಬಿಚ್ಚಿ ಇಡಬಹುದು. ಆದರೆ, ನಾಜೂಕಾಗಿ ಮಾಡಲ್ಪಟ್ಟ ಮುತ್ತಿನ ಆಭರಣಗಳನ್ನು ಹೆಚ್ಚಿನ ಮುತುವರ್ಜಿಯಿಂದ ನೋಡಿಕೊಳ್ಳುವುದು ಅಗತ್ಯ. ಮುತ್ತಿನ ಒಡವೆಗಳನ್ನು ಧರಿಸುವ ಮತ್ತು ಜೋಪಾನ ಮಾಡುವ ಕೆಲವು ವಿಧಾನಗಳು ಇಲ್ಲಿವೆ-
-ಮುತ್ತಿನ ಆಭರಣಗಳನ್ನು ಧರಿಸುವಾಗ ಒಂದು ಕ್ರಮವಿದೆ. ಅದೇನೆಂದರೆ, ಅವುಗಳನ್ನು ಕೊನೆಯಲ್ಲಿ ಧರಿಸಬೇಕು ಮತ್ತು ಎಲ್ಲಕ್ಕಿಂತ ಮುಂಚೆ ಬಿಚ್ಚಿ, ಎತ್ತಿಡಬೇಕು. ಮೇಕ್‌ಅಪ್, ಹೇರ್‌ಸ್ಟೈಲ್, ಪರ್ಫ್ಯೂಮ್, ಬಾಡಿ ಲೋಷನ್ ಲೇಪನ…ಹೀಗೆ ಎಲ್ಲವೂ ಮುಗಿದ ನಂತರ, ಮುತ್ತಿನ ಒಡವೆ ಹಾಕಿಕೊಳ್ಳಬೇಕು. ನಂತರ, ಎಲ್ಲಕ್ಕಿಂತ ಮೊದಲು ಬಿಚ್ಚಿಡಬೇಕು.
-ಪ್ರತಿ ಬಾರಿ ಧರಿಸಿದ ನಂತರವೂ, ಮೃದುವಾದ ಹತ್ತಿಯ ಬಟ್ಟೆಯಿಂದ ಒರೆಸಬೇಕು. ಹೀಗೆ ಮಾಡುವುದರಿಂದ, ವಾತಾವರಣದ ಕಲ್ಮಶದಿಂದ ಮುತ್ತುಗಳು ಕಪ್ಪಾಗುವುದನ್ನು ತಡೆಯಬಹುದು.
– ಮುತ್ತಿನ ಮೇಲೆ ಎದ್ದು ಕಾಣುವಂತೆ ಕೊಳೆ/ಕಲೆ ಆಗಿದ್ದರೆ ಮಾತ್ರ ಅದನ್ನು ಸ್ವತ್ಛವಾದ ನೀರಿನಲ್ಲಿ, ಒದ್ದೆ ಬಟ್ಟೆ ಅದ್ದಿ, ಮೃದುವಾಗಿ ಒರೆಸಿ. ಯಾವುದೇ ಕಾರಣಕ್ಕೂ, ಒಡವೆಯನ್ನು ನೇರವಾಗಿ ನೀರಿನಲ್ಲಿ ಅದ್ದಿ ಬಿಡಬೇಡಿ.
-ಸ್ವಚ್ಛಗೊಳಿಸಿದ ನಂತರ, ನೀರಿನ ಪಸೆ ಆರಿದ ನಂತರವೇ ಒಡವೆಗಳನ್ನು ಎತ್ತಿಡಬೇಕು.
-ಸ್ಟೀಮ್/ ಅಲ್ಟ್ರಾಸೋನಿಕ್ ಜ್ಯುವೆಲರಿ ಕ್ಲೀನರ್‌ಗಳಿಂದ ಯಾವತ್ತೂ ಮುತ್ತನ್ನು ಸ್ವತ್ಛಗೊಳಿಸಬೇಡಿ. ಇದರಿಂದ ಮುತ್ತಿನ ಹೊರ ಪದರಕ್ಕೆ ಹಾನಿಯಾಗುತ್ತದೆ.
-ಜ್ಯುವೆಲರಿ ರ್ಯಾಕ್‌ಗಳಲ್ಲಿ ಮುತ್ತಿನ ಹಾರಗಳನ್ನು ನೇತು ಹಾಕುವುದಕ್ಕಿಂತ, ಪೆಟ್ಟಿಗೆಯೊಳಗೆ ಫ್ಲಾಟ್ (ಮಲಗಿಸಿದಂತೆ) ಇಡುವುದು ಉತ್ತಮ.
-ಮುತ್ತಿನ ಒಡವೆಗಳನ್ನು ಪ್ರತ್ಯೇಕವಾಗಿ, ರೇಷ್ಮೆ ಅಥವಾ ಹತ್ತಿಯಿಂದ ಮಾಡಲ್ಪಟ್ಟ ಪೌಚ್‌ಗಳಲ್ಲಿ ಹಾಕಿ ಇಡಿ. ಬೇರೆ ಒಡವೆಗಳ ಜೊತೆ ಇಟ್ಟರೆ, ಮುತ್ತುಗಳು ಬಿರುಕು ಬಿಡಬಹುದು. ಪ್ಲಾಸ್ಟಿಕ್ ಕವರ್ ಅಥವಾ ಜ್ಯುವೆಲರಿ ಬಾಕ್ಸ್‌ಗಳು ಕೂಡಾ ಮುತ್ತನ್ನು ಹಾಳುಗೆಡವಬಹುದು.
-ಆದ್ರ ವಾತಾವರಣದಲ್ಲಿ ಮುತ್ತುಗಳು ಹಾಳಾಗುವುದನ್ನು ತಡೆಯಬಹುದು (ಮುತ್ತುಗಳು ನೀರಿನಿಂದ ಬಂದವು). ಹಾಗಾಗಿ, ಮೂರು-ನಾಲ್ಕು ತಿಂಗಳಿಗೊಮ್ಮೆಯಾದರೂ ಒಡವೆಗಳನ್ನು ಧರಿಸಬೇಕು. ದೇಹದಲ್ಲಿ ಉತ್ಪತ್ತಿಯಾಗುವ ಬೆವರು, ಎಣ್ಣೆಯಿಂದ ಮುತ್ತುಗಳ ಆಯಸ್ಸು ಹೆಚ್ಚುತ್ತದೆ. ವರ್ಷಗಳ ಕಾಲ ಹಾಗೆಯೇ ಪೆಟ್ಟಿಗೆಯಲ್ಲಿ ಇಟ್ಟರೆ ಮುತ್ತುಗಳಲ್ಲಿ ಬಿರಕು ಕಾಣಿಸುತ್ತದೆ.
– ಕ್ಲೋರಿನ್, ಹೈಡ್ರೋಜನ್ ಪೆರಾಕ್ಸೆ„ಡ್, ವಿನೇಗರ್, ಅಮೋನಿಯಾ, ಹೇರ್‌ಸ್ಪ್ರೆ, ಪರ್ಫ್ಯೂಮ್, ಕಾಸ್ಮೆಟಿಕ್ಸ್ ಮುಂತಾದ ರಾಸಾಯನಿಕಗಳಿಂದ ಮುತ್ತುಗಳನ್ನು ದೂರವೇ ಇಡಬೇಕು.
-ಮುತ್ತಿನ ಆಭರಣ ಧರಿಸಿ ನೀರಿಗಿಳಿಯುವುದು, ಸ್ನಾನ ಮಾಡುವುದು, ಸಲ್ಲ. ಮುತ್ತಿನ ಉಂಗುರ, ಬಳೆಗಳನ್ನು ನೀರು ತಾಕದಂತೆ ಜೋಪಾನ ಮಾಡಿ.
-ಅತಿ ಶಾಖ, ಅತೀ ಶೀತ ಸ್ಥಳಗಳಲ್ಲಿ ಮುತ್ತನ್ನು ಇಡಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.