ಜಗತ್ತು ಗೆಲ್ಲುವ ಗುಟ್ಟೇನು?: ಪಿಂಕಿ ಹೇಳಿದ 6 ಪಾಠಗಳು

Team Udayavani, Apr 12, 2017, 7:10 AM IST

12-AVALU-5.jpg

ಮೂವ್ವತ್ನಾಲ್ಕರ ಸುಂದರಿ. ವಿಶ್ವದ ಎರಡನೇ ಅತಿ ಸುಂದರಿ! ಹದಿನೇಳು ವರ್ಷದಿಂದ ಗೆಲ್ಲುತ್ತಲೇ ಇರುವ ಪ್ರಿಯಾಂಕಾಳಿಂದ ನಮ್ಮ ಮನೆಯ ಹೆಣ್ಮಕ್ಕಳು ಕಲಿಯಬಹುದಾದ್ದು ಏನು?

ನಾನು ಸ್ಟಾರ್‌. ಆಕಾಶದಲ್ಲಿಲ್ಲ. ಇಲ್ಲಿಗೆ ನಾನು ಹಾರಿಯೂ ಬಂದಿಲ್ಲ. ಪರಿಶ್ರಮದ ಏಣಿ ಏರಿ ಬಂದಿರುವೆ. ಮೇಲೆ ಬಂದಿದ್ದೇನೆಂಬ ಕಾರಣಕ್ಕೆ ನನ್ನ ಕೆಳಗಿನ ಜಗತ್ತು ಚಿಕ್ಕದು ಅಂತಲೂ ಅನ್ನಿಸುತ್ತಿಲ್ಲ. ಅದಿನ್ನೂ ಮಹಾನ್‌ ಆಗಿ, ನನಗಿಂತ ದೊಡ್ಡದಾಗಿ, ನಾನೇ ಮುಚ್ಚಿಹೋಗುವಷ್ಟು ಬೃಹತ್ತಾಗಿ ಎದುರು ಕಾಣುತ್ತಿದೆ. ನಾನೆಷ್ಟೇ ಬೆಳೆದರೂ, ಆ ದೊಡ್ಡ ಜಗತ್ತನ್ನು ನೋಡುವ ನನ್ನ ಕಂಗಳು ಚಿಕ್ಕವು!

ಪ್ರಿಯಾಂಕಾ ಚೋಪ್ರಾ ಎಂಬ ಕೃಷ್ಣವರ್ಣದ ಚೆಲುವೆ ಹದಿನೇಳು ವರುಷದ ಹಿಂದೆ “ಭುವನ ಸುಂದರಿ’ ಕಿರೀಟ ತೊಟ್ಟು ನಕ್ಕಿದ್ದಳು. ಈಗ ವಿಶ್ವದ ಎರಡನೇ ಅತಿ ಸುಂದರಿಯಾಗಿ ಅದೇ ಮುಗುಳು ಬಿರಿದಿದ್ದಾರೆ. ಹಾಗಂತ ಇದು ಒಂದು ಮೆಟ್ಟಿಲು ಇಳಿದಿದ್ದಲ್ಲ. ಮೂವತ್ನಾಲ್ಕರ ವಯಸ್ಸಿನಲ್ಲಿ ಏರಿದ್ದು! ಪಿಂಕಿ ಆಗಸದಲ್ಲಿ ಕೂತಿದ್ದಾಳೆಂದು ನಾವೆಂದರೆ, ಆಕೆ “ಊಹೂnಂ’ ಎನ್ನುವಷ್ಟು ಸಿಂಪಲ್ಲು. ನೋಡ್ತಾ ನೋಡ್ತಾ ನ್ಯೂಯಾರ್ಕಿನ ಸ್ವಾತಂತ್ರ್ಯ ದೇವತೆ ಪಕ್ಕ ನಿಂತು ಜಗತ್ತನ್ನು ತನ್ನತ್ತ ತಿರುಗಿಸಿಕೊಂಡಿರುವ ಈ ಸುಂದರಿ ನಮ್ಮ ಮನೆಗಳ ಹೆಣ್ಮಕ್ಕಳಿಗೆ ದೊಡ್ಡ ಪಾಠ. ಪಿಂಕಿಯ ಬದುಕು ಹೇಳಿಕೊಡುವ 6 ಪಾಠವನ್ನು ಮಿಸ್‌ ಮಾಡ್ಕೊàಬೇಡಿ.

1. ಹೆಸರಿಂದ್ಲೆ ಬ್ಯೂಟಿ!
“ಟೀನೇಜ್‌ನಲ್ಲಿ ನನ್ನ ಕಾಲು ನನಗೆ ನಾಚಿಕೆ ಹುಟ್ಟಿಸುತ್ತಿದ್ದವು. ಕಾಲನ್ನು ಯಾರು ನೋಡಬಾರ್ದೆಂದು ಮುಚ್ಚಿಟ್ಕೊಳ್ತಿದ್ದೆ, ಅದರ ಮೇಲೆ ಮಲಗ್ತಿದ್ದೆ. ಈಗ ಅದೇ ನನ್ನ ಕಾಲುಗಳು 12- 15 ಪ್ರಾಡಕುrಗಳನ್ನು ಭಾರತದಲ್ಲಿ ಮಾರುತ್ತವೆ. ಕೋಟಿ ಕೋಟಿ ದುಡೀತವೆ. ಅವೀಗ ಜಗತ್ತಿನ ಸುಂದರ ಕಾಲುಗಳು’. ಪಿಂಕಿ ಹಿಂದೊಮ್ಮೆ ಹೇಳಿದ ಮಾತಿದು. ಸಾಧನೆ ಮಾಡುತ್ತಾ ಹೆಸರು ಬೆಳೆಯುತ್ತೆ. ಹೆಸರಿನಿಂದ ಜಗತ್ತಿಗೆ ಸೌಂದರ್ಯ ಕಾಣಿಸುತ್ತೆ!

2. ಯೋಗ್ಯ ಆಯ್ಕೆ 
ಪ್ರಿಯಾಂಕಾ ಆಯ್ಕೆಯಲ್ಲೇ ಗೆಲ್ತಾರೆ. ಸಭ್ಯರನ್ನಷ್ಟೇ ಅವರು ಫ್ರೆಂಡ್‌ ಮಾಡ್ಕೊàತಾರೆ. ಅವರ ಪಿಆರ್‌ ಟೀಂ ಸೂಪರ್‌. ಒಳ್ಳೆಯ ಹೇರ್‌ ಸ್ಟೈಲಿಸ್ಟ್‌, ಕಾಸ್ಟಿಂಗ್‌ ಏಜೆಂಟ್ಸ್‌ ಪಿಂಕಿಯನ್ನು “ಬ್ರಾಂಡ್‌’ ಆಗಿಸಿದ್ದಾರೆ. ಪಿಂಕಿ ಯಾವುದೇ ಫ‌ಂಕ್ಷನ್ನಿಗೆ, ಟಿವಿ ಶೋಗೆ ಹೋದರೂ ಅಲ್ಲಿ ಆಕೆಯ ಡ್ರೆಸ್ಸಿನ ಮೇಲೆ ಜಗತ್ತಿನ ಕಣ್‌ ಬೀಳುತ್ತೆ.

3. ನೆಗೆಟಿವ್‌ನಿಂದ ಪಾಸಿಟಿವ್‌
ಪ್ರಿಯಾಂಕಾ ಅವರ ಆರಂಭಿಕ ಚಿತ್ರ “ಐತ್ರಾಜ್‌’. ಅಲ್ಲಿ ಅವರದು ಮದ್ವೆಯಾದ ವ್ಯಕ್ತಿಯನ್ನು ಆಕರ್ಷಿಸುವ ನೆಗೆಟಿವ್‌ ರೋಲ್‌. ಅಂಥ ಪಾತ್ರ ಒಪ್ಕೋಬೇಡ ಅಂತ ಆರಂಭದಲ್ಲಿ ಎಲ್ರೂ ಹೇಳಿದಾಗ, ಪಿಂಕಿ ಕೇಳದೆ ನಿರ್ಧಾರಕ್ಕೆ ಬದ್ಧರಾಗಿದ್ರು. ಈಗ ಆ ಬದ್ಧತೆಯೇ ಅವರನ್ನೀಗ ಅಮೆರಿಕದ ಪ್ರತಿಷ್ಠಿತ “ಕ್ವಾಂಟಿಕೋ’ ಶೋಗೆ ತಂದು ಮುಟ್ಟಿಸಿದೆ.

4. ನಡೆದ ಹಾದಿ ಮರೆಯದಿರಿ
ನೀವೆಷ್ಟೇ ಎತ್ತರಕ್ಕೇರಿ, ಚಿನ್ನದ ತಟ್ಟೆಯಲ್ಲೇ ಇಡ್ಲಿ ತಿನ್ನಿ… ನಡೆದ ಹಾದಿಯನ್ನು ಮರೀಬೇಡಿ. ಪಿಂಕಿಯೂ ಮರೆತಿಲ್ಲ. ಹಾಲಿವುಡ್‌ ತಲುಪಿದರೂ, ಆಕೆ ಭಾರತದ ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. 

5. ಡ್ನೂಟಿ ಡ್ನೂಟಿ ಮತ್ತು ಬ್ಯೂಟಿ!
ಪ್ರಿಯಾಂಕಾಳ ಸೌಂದರ್ಯ ಆಕೆಯ ಕೆಲಸದಲ್ಲೇ ಇದೆ. ಸಾಧನೆಗಾಗಿ ಆಕೆ ತೆಗೆದಿಡೋದು ನಿತ್ಯ 16 ತಾಸುಗಳನ್ನ! ಮಲಗೋದು 5 ತಾಸು! ನಟನೆ ಇಲ್ಲದಿದ್ದಾಗ ಸುಮ್ಮನೆ ನಿದ್ದೆ ಮಾಡೋದಿಲ್ಲ. ವರ್ಲ್ಡ್ ಸಿನಿಮಾಗಳನ್ನು ನೋಡ್ತಾರೆ. ಓದೆಬೇಕಾದ ಪುಸ್ತಕದ ಮುಂದೆ ಕೂತಿರ್ತಾರೆ. ಇಲ್ಲಾ ಟ್ರಿಪ್‌ ಹೊಡೀತಾರೆ. ಕೂತರೆ ನೀವು ಸೋತಂತೆ!

6. ಗಾಸಿಪ್‌ಗೆ ಬರ್ತವೆ, ಹೋಗ್ತವೆ!
ಹಾಗೆ ನೋಡಿದ್ರೆ ಪಿಂಕಿಯನ್ನು ನೂರಾರು ಗಾಸಿಪ್‌ಗ್ಳು ಅಲುಗಾಡಿಸಲೆತ್ನಿಸಿವೆ. ಪ್ರೀತಿ, ಪ್ರಣಯ ಎನ್ನುವ ಗಾಳಿಸುದ್ದಿಗಳೂ ಆಕೆಯ ನಿದ್ದೆ ಕದಿಯಲೆತ್ನಿಸಿವೆ. ಆ ಬಗ್ಗೆ ಪ್ರಿಯಾಂಕಾ ತಲೆ ಕೆಡಿಸ್ಕೊಂಡಿಲ್ಲ. ಅವರಿಗೆ ಇವತ್ತಿಗೂ ಬಾಯ್‌ಫ್ರೆಂಡ್‌ ಇಲ್ಲ!

ಟಾಪ್ ನ್ಯೂಸ್

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.