ಮಾತಾಡು ಸಾಕು ಮೌನ ಬಿಸಾಕು…


Team Udayavani, Jan 8, 2020, 5:29 AM IST

11

ತಾನು ಸೊಸೆಯಲ್ಲಿ ಮಗಳನ್ನು ಕಾಣುವಂತೆ, ಅವಳ್ಯಾಕೆ ಅತ್ತೆಯಲ್ಲಿ ಅಮ್ಮನನ್ನು ಕಾಣುತ್ತಿಲ್ಲ ಅಂತ ಕೊರಗು ಶುರುವಾಗಿತ್ತು ರುಕ್ಮಿಣಮ್ಮನಿಗೆ.

ರುಕ್ಮಿಣಮ್ಮ ತಮ್ಮ ಒಬ್ಬನೇ ಮಗನಿಗೆ ಇತ್ತೀಚೆಗೆ ಮದುವೆ ಮಾಡಿದ್ದರು. ಅವರ ಮಗನಿಗೆ ಒಳ್ಳೆಯ ಕೆಲಸವಿತ್ತು. ಸೊಸೆಯೂ ಒಳ್ಳೆಯ ಮನೆತನದದಿಂದ ಬಂದವಳು. ಅವಳೂ ಕೈ ತುಂಬಾ ಸಂಪಾದಿಸುವ ಒಳ್ಳೆಯ ಕೆಲಸದಲ್ಲಿದ್ದಳು. ಗುಣದಲ್ಲಿ, ಕೆಲಸ ಕಾರ್ಯಗಳಲ್ಲಿ, ಯಾವುದೇ ರೀತಿಯಲ್ಲೂ ದೂರುವಂಥ ಹೆಣ್ಣಾಗಿರಲಿಲ್ಲ. ಎಲ್ಲ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು.

ಆದರೂ, ರುಕ್ಮಿಣಮ್ಮನಿಗೆ ಸೊಸೆಯ ಬಗ್ಗೆ ಅಸಮಾಧಾನ, ಬೇಸರ ಮೂಡತೊಡಗಿದೆ. ಯಾಕೆಂದರೆ, ಇದ್ದೊಬ್ಬ ಮಗನಿಗೆ ಮದುವೆ ಮಾಡಿದಾಗ, ಮನೆಗೆ “ಮಗಳು’ ಬಂದಳು ಅಂತ ಅವರು ಸಂಭ್ರಮಿಸಿದ್ದರು. ಸೊಸೆಯೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುವ ತವಕ ಅವರಿಗೆ. ಇಷ್ಟು ದಿನ ಹೆಣ್ಣುಮಕ್ಕಳಿಲ್ಲದೆ ಕಾಡಿದ್ದ ಒಂಟಿತನವನ್ನು, ಸೊಸೆ ನೀಗಿಸುತ್ತಾಳೆಂದು ರುಕ್ಮಿಣಮ್ಮ ಕನಸು ಕಂಡಿದ್ದರು. ಆದರೆ, ಸೊಸೆ ಸ್ವಲ್ಪ ಮೌನಿ. ಅತ್ತೆಯೊಂದಿಗೆ ಒಂದು ಅಂತರವನ್ನು ಕಾಯ್ದುಕೊಂಡೇ ಬರುತ್ತಿದ್ದಾಳೆ. ತಾನಾಯಿತು, ತನ್ನ ಕೆಲಸ ಕಾರ್ಯವಾಯ್ತು. ಅತ್ತೆಯೊಂದಿಗೆ ಎಷ್ಟು ಮಾತು ಬೇಕೋ, ಅಷ್ಟೇ! ರುಕ್ಮಿಣಮ್ಮ ಹತ್ತು ಮಾತನಾಡಿದರೆ, ಸೊಸೆ ಒಂದು ಮಾತನಾಡುತ್ತಿದ್ದಳು. ಸೊಸೆಯ ಅತಿ ಕಡಿಮೆ ಮಾತುಗಳು ರುಕ್ಮಿಣಮ್ಮನಿಗೆ ಬೇಸರ ತರಿಸಿತ್ತು.

ಅವಳ್ಯಾಕೆ ಮಗಳಾಗಲಿಲ್ಲ?
ಮನದೊಳಗಿನ ತಳಮಳವನ್ನು ಮಗನಲ್ಲಿ ಹೇಳ್ಳೋಣವೆಂದರೆ, ಎಲ್ಲಿ ಮಗ ತನ್ನನ್ನು ತಪ್ಪಾಗಿ ಭಾವಿಸುತ್ತಾನೋ ಎಂಬ ಆತಂಕ. ಮಗ-ಸೊಸೆಯ ಮಧ್ಯೆ ವಿರಸ ಮೂಡಿಸುವುದು ಅವರಿಗೂ ಇಷ್ಟವಿಲ್ಲ. ತಾನು ಸೊಸೆಯಲ್ಲಿ ಮಗಳನ್ನು ಕಾಣುವಂತೆ, ಅವಳ್ಯಾಕೆ ಅತ್ತೆಯಲ್ಲಿ ಅಮ್ಮನನ್ನು ಕಾಣುತ್ತಿಲ್ಲ? ನಾನೇನಾದರೂ ಅವಳೊಂದಿಗೆ ತಪ್ಪಾಗಿ ನಡೆದುಕೊಂಡಿದ್ದೀನಾ ಅಂತ ಸಂದೇಹ, ಕೊರಗು ಶುರುವಾಗಿತ್ತು ರುಕ್ಮಿಣಮ್ಮನಿಗೆ. ಕೊನೆಗೊಮ್ಮೆ, ಮಗನೇ ಆಕೆಯನ್ನು ಕೇಳಿದ್ದ. “ಯಾಕಮ್ಮಾ, ಒಂಥರಾ ಮಂಕಾಗಿರುತ್ತೀಯಲ್ಲ? ನನ್ನಿಂದ ಅಥವಾ ಅವಳಿಂದ ಏನಾದ್ರೂ ತಪ್ಪಾಗಿದೆಯಾ?’ ಅಂತ.

ಮಗನ ಮಾತಿಗೆ ಏನು ಹೇಳಬೇಕೆಂದು ತಿಳಿಯದೆ, ಮನಸ್ಸಿನ ಮಾತನ್ನು ಸಂಕೋಚದಿಂದಲೇ ಬಿಚ್ಚಿಟ್ಟರು ರುಕ್ಮಿಣಮ್ಮ. “ನನಗೊಂದು ಆಸೆಯಿತ್ತು. ಸೊಸೆಯಾಗಿ ಬರುವವಳು ನನ್ನೊಂದಿಗೆ ಸಲಿಗೆಯಿಂದ ಇರಬೇಕು. ನಾನೂ ಅವಳನ್ನು ಮಗಳ ರೀತಿಯಲ್ಲಿ ಪ್ರೀತಿಯಿಂದ ನೋಡಿಕೊಳ್ಳಬೇಕು ಅಂತ. ಆದರೆ, ಇವಳು ನನ್ನೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದೇ ಇಲ್ಲ. ಆಫೀಸಿನಿಂದ ಮನೆಗೆ ಬಂದವಳೇ, ತನ್ನ ಪಾಡಿಗೆ ತಾನು ಕೆಲಸ ಮುಗಿಸಿಕೊಂಡು, ಮಲಗಿಬಿಡುತ್ತಾಳೆ. ಬೆಳಗ್ಗೆಯೂ ಆಫೀಸ್‌ಗೆ ಹೋಗುವ ಗಡಿಬಿಡಿಯಲ್ಲಿ ಮಾತೇ ಆಡುವುದಿಲ್ಲ. ನನ್ನ ಒಂಟಿ ಜೀವನ ಹಿಂದಿನಂತೆಯೇ ಈಗಲೂ ಮುಂದುವರಿದಿದೆ’ ಎಂದು ನಿಟ್ಟುಸಿರಾದರು.

ಸೊಸೆ ಏನಂತಾಳೆ?
ತಾಯಿಯ ಮಾತನ್ನು ಅರ್ಥ ಮಾಡಿಕೊಂಡ ಮಗ, ಹೆಂಡತಿಯ ಬಳಿ ನಿಧಾನವಾಗಿ ವಿಷಯ ಬಿಚ್ಚಿಟ್ಟ. ಅಮ್ಮನಿಂದ ಏನಾದ್ರೂ ಬೇಸರವಾಗಿದ್ದರೆ ಕ್ಷಮಿಸಿ, ಅವರನ್ನು ಮಾತನಾಡಿಸು ಅಂತ ನಯವಾಗಿ ಕೇಳಿಕೊಂಡ. ಆಗ ಅವಳು, “ಅಯ್ಯೋ ರೀ, ಅತ್ತೆಯ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ. ಆದರೆ, ಅವರಿಗೆ ವಯಸ್ಸಾಗಿದೆಯಲ್ಲ, ಎಲ್ಲಾ ಕೆಲಸದಲ್ಲೂ ತುಂಬಾ ನಿಧಾನ. ಬೆಳಗ್ಗೆ ಅವರಲ್ಲಿ ಮಾತಾಡುತ್ತಾ ಕೂರಲು ಸಾಧ್ಯವಿಲ್ಲ. ಎಂಟು ಗಂಟೆಗೆ ಆಫೀಸ್‌ ಕ್ಯಾಬ್‌ ಬರುವುದರೊಳಗೆ, ತಿಂಡಿ- ಊಟ ಎಲ್ಲವನ್ನೂ ರೆಡಿ ಮಾಡಬೇಕು. ಅವರಿಂದ ಕೆಲಸ ಮಾಡಿಸಲೂ ನನಗಿಷ್ಟವಿಲ್ಲ. ಹಾಗಾಗಿ, ಎಲ್ಲ ಕೆಲಸವನ್ನೂ ನಾನೊಬ್ಬಳೇ ಮಾಡುತ್ತೇನೆ. ಈ ಮಧ್ಯೆ ಅವರ ಜೊತೆ ಮಾತಾಡಲು ಸಾಧ್ಯವಿಲ್ಲ. ಇನ್ನು ನಾನು ಬರೋದು ಸಂಜೆ ಏಳರ ನಂತರವೇ. ಅದು ಅವರ ಧಾರಾವಾಹಿ ನೋಡುವ ಸಮಯ. ಅವರು ಟಿ.ವಿ. ನೋಡುವಾಗ ನಾನು ಮಾತನಾಡಿಸುವುದು ಸರಿಯಲ್ಲ ಅಂತ ಸುಮ್ಮನಿರುತ್ತೇನೆ. ಬೆಳಗ್ಗಿನಿಂದ ಕೆಲಸ ಮಾಡಿ, ಮಾಡಿ ಸುಸ್ತಾಗಿರುವಾಗ ನನಗೂ ಮಾತು ಬೇಡವಾಗಿರುತ್ತದೆ. ಅಡುಗೆ ಕೆಲಸ ಮುಗಿಸಿ, ಊಟ ಮಾಡುವಷ್ಟರಲ್ಲಿ ದಿನವೇ ಕಳೆದು ಹೋಗಿರುತ್ತದೆ. ಮತ್ತೆ ಮರುದಿನದಿಂದ ಅದೇ ಪುನರಾವರ್ತನೆ. ಈಗ ಹೇಳಿ, ಮಾತನಾಡಲು ನನಗಾದರೂ ಎಲ್ಲಿ ಪುರುಸೊತ್ತಿರುತ್ತದೆ?’

ಇಲ್ಲಿ ಬರುವ ಅತ್ತೆ-ಸೊಸೆಯರಲ್ಲಿ ಯಾವುದೇ ದ್ವೇಷ ಭಾವನೆಗಳಿಲ್ಲ. ಅವರಿಬ್ಬರಿಗೂ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ ಸಮಯದ ಅಭಾವ. ದಿನವಿಡೀ ಮನೆಯಲ್ಲಿ ಇರುವ ಅತ್ತೆಗೆ, ಸೊಸೆಯೊಡನೆ ಕುಳಿತು ಹರಟುವ ಆಸೆ. ಆದರೆ, ಸೊಸೆಗೆ ಯಾವಾಗಲೂ ಕೆಲಸದ್ದೇ ಚಿಂತೆ. ಹೀಗಾಗಿ ಒಂದೇ ಮನೆಯಲ್ಲಿದ್ದರೂ ಮಾತಿನ ಅಭಾವದಿಂದ ಅತ್ತೆ ಸೊಸೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಕಷ್ಟಪಡುವಂತಾಗಿದೆ.

ಅತ್ತೆ-ಸೊಸೆ ಇಬ್ಬರೂ ಸ್ವಲ್ಪ ಸಮಯ ಹೊಂದಿಸಿಕೊಂಡರೆ, ಸಮಸ್ಯೆಯೇ ಇರುವುದಿಲ್ಲ. ಅತ್ತೆಯಾದವಳು ಸೊಸೆಯ ಅಡುಗೆ ಕೆಲಸಕ್ಕೆ ಕೈ ಜೋಡಿಸಿದರೆ, ಆಕೆಗೂ ಎಲ್ಲ ಕೆಲಸವನ್ನು ಮುಗಿಸಿ ಆಫೀಸಿಗೆ ಹೋಗಬೇಕೆಂಬ ಒತ್ತಡವಿರುವುದಿಲ್ಲ. ಅಷ್ಟೇ ಅಲ್ಲದೆ, ಇಬ್ಬರೂ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಲೇ ಸ್ವಲ್ಪ ಹೊತ್ತು ಮಾತಾಡಬಹುದು. ಆಗ ಸೊಸೆಗೂ ಅತ್ತೆಯೊಂದಿಗೆ ಸಮಯ ಕಳೆಯಲು ಕಾಲಾವಕಾಶ ಸಿಗುತ್ತದೆ. ಸಂಜೆ ಆಫೀಸ್‌ನಿಂದ ಬಂದಮೇಲೆ, ಅತ್ತೆ-ಸೊಸೆಯರಿಬ್ಬರೂ ಒಟ್ಟಿಗೇ ಕುಳಿತು ಕಾಫಿ ಕುಡಿದು, ನಂತರ ಮುಂದಿನ ಕೆಲಸಗಳನ್ನು ಮಾಡಬಹುದು. ಸೊಸೆ ಬರುವ ಸಮಯದಲ್ಲಿ, ಅತ್ತೆ ಟಿವಿ ಮುಂದೆ ಕುಳಿತಿದ್ದರೆ, ಸಂವಹನ ಸಾಧ್ಯವಿಲ್ಲ. ನಿತ್ಯದ ಆಗುಹೋಗುಗಳನ್ನು, ಕೌಟುಂಬಿಕ ವಿಚಾರಗಳನ್ನು ಪರಸ್ಪರ ಹಂಚಿಕೊಂಡರೆ ಅಂತರ ಕಡಿಮೆಯಾಗುತ್ತದೆ. ಮನಸ್ಸಿನ ಭಾವನೆಗಳನ್ನು ಮಾತಿನಲ್ಲಿ ತೋರ್ಪಡಿಸಿದರೆ, ಒಡೆದು ಹೋಗುವ ಮನಸ್ಸುಗಳು ಹತ್ತಿರವಾಗುತ್ತದೆ.

-ವೇದಾವತಿ ಎಚ್‌. ಎಸ್‌.

ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.