ಪ್ರಿನ್ಸಿಪಾಲ್ ಆಗಿ ನೀವು ಕಸ ಗುಡಿಸ್ತೀರಾ?
Team Udayavani, Nov 18, 2020, 8:20 PM IST
ಅದೊಮ್ಮೆ, ನಮ್ಮಕಾಲೇಜಿನ ಗ್ರೂಪ್ “ಡಿ’ ನೌಕರಳಿಗೆ ಯಾವುದೋ ವಿಚಿತ್ರಕಾಯಿಲೆ ಬಂದು,ಒಂದು ವರ್ಷ ಕಾಲೇಜಿ ಗೆ ಬರದಂತಾಯಿತು. ನಮ್ಮ ವಿದ್ಯಾರ್ಥಿಗಳೇ ಕಾಲೇಜನ್ನು ಸ್ವಚ್ಛ ಮಾಡಿ, ಗಿಡಗಳಿಗೆ ನೀರು ಹಾಕುತ್ತಿದ್ದರು. ಅವರೊಂದಿಗೆ ನಾನೂ, ಉಪನ್ಯಾಸಕರೂ ಆಗಾಗಕೈ ಜೋಡಿಸುತ್ತಿದ್ದೆವು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪರೀಕ್ಷೆ ನಡೆಯುವಾಗ ಯಾರೂ ಇರಲಿಲ್ಲ. ಹಾಗಾಗಿ, ನಾನು ನನ್ನ ಚೇಂಬರ್‌ಕಸ ಗುಡಿಸಿ, ಗಿಡಕ್ಕೆ ನೀರು ಹಾಕಿ, ಆವರಣದಲ್ಲಿಕಸಕಡ್ಡಿಗಳು ಬಿದ್ದಿದ್ದರೆ ತೆಗೆದು ಹಾಕಿ, ಶೌಚಾಲಯಕ್ಕೆ ನೀರು ಹಾಕಿ,ಕೆಲಸ ಮಾಡಲು ಕುಳಿತುಕೊಳ್ಳುತ್ತಿದ್ದೆ.
ಒಂದು ದಿನ ಒಬ್ಬ ಹೆಂಗಸು ಮಗಳನ್ನು ಮೇ ತಿಂಗಳಲ್ಲಿ ದಾಖಲು ಮಾಡಿಸಲು ವಿವರಗಳನ್ನುಕೇಳಲು ಬಂದಿದ್ದಳು. “ಅವರಿಲ್ವಾ?’ ಎಂದಳು. “ಯಾರು?’ ಎಂದೆ. “ಅದೇ ಪ್ರಿನ್ಸಿಪಾಲರು’ ಅಂದಳು. ನನಗೆ ಅಚ್ಚರಿಯಾಯಿತು. “ನಾನೇಕಣಮ್ಮ ಪ್ರಿನ್ಸಿಪಾಲ್’ ಅಂದೆ. ನನ್ನನ್ನೇ ಒಮ್ಮೆ ವಿಚಿತ್ರವಾಗಿ ನೋಡಿ ಹೀಗೆ ಹೇಳಿದಳು. “ಅದೇ, ಮೂರು ದಿನದಿಂದ ಪ್ರಿನ್ಸಿಪಾಲ್ ಯಾಕೆ ಬಂದಿಲ್ಲ, ಇವತ್ತು ಕೇಳೇ ಬಿಡೋಣ ಅಂತ ಬಂದೆ. ಈ ಕಾಲೇಜಿನಲ್ಲಿ ಕಸ ಗುಡಿಸುವವರು ನೋಡೋದಕ್ಕೆ ಚೆನ್ನಾಗಿದ್ದಾರೆ, ಎಷ್ಟು ಚೆನ್ನಾಗಿ ಸೀರೆ ಉಟ್ಕೊಂಡಿರ್ತಾರೆ.ಕಸ ಗುಡಿಸುವವರೂ ಹೀಗಿದ್ದ ಮೇಲೆ ಕಾಲೇಜು ಚೆನ್ನಾಗಿರಬೇಕು ಅಂತ ಮಗಳಿಗೆ ಹೇಳ್ತಿದ್ದೆ. “ಅಯ್ಯೋ, ಪ್ರಿನ್ಸಿಪಾಲ್ ಆಗಿ ನೀವು ಕಸಗುಡಿಸ್ತೀರಾ? ಆ ಕೆಲಸದವಳು ಯಾಕೆಬಂದಿಲ್ಲ? ಅವಳಿಗೆ ಉಗಿದುಉಪ್ಪು ಹಾಕಬಾರದಾ? ಅವಮಾನ ಆಗಲ್ವಾ ನಿಮಗೆ?ನಾವು ಬಡವರು ಇರಬಹುದು, ಇಂಥ ದರಿದ್ರಕಾಲೇಜಿಗೆ ಮಾತ್ರ ಸೇರಿಸಲ್ಲ’ ಅಂತ ಮಗಳನ್ನು ವಾಪಸ್ ಕರೆದುಕೊಂಡುಹೋದಳು! ಸದಾ ಆಳಿಸಿಕೊಳ್ಳಲು ಇಷ್ಟಪಡುವ, ಜೀವನ ನಿರ್ವಹಣೆಗೆ ಮಾಡುವ ವೃತ್ತಿಗಳಲ್ಲಿ ಮೇಲು- ಕೀಳನ್ನು ಸೃಷ್ಟಿಸಿ ಅಗೌರವಿಸುವ ಜನರ ರೀತಿ ನನ್ನನ್ನು ದಂಗುಬಡಿಸಿತು.
– ಎಂ.ಆರ್. ಕಮಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.