ದ್ವಿತೀಯ ಚುಂಬನಂ ದಂತ ಭಗ್ನಂ

ಅಂತರ ಗಂಗೆ

Team Udayavani, May 1, 2019, 6:25 AM IST

Avalu-Chumbana

ಹೆಣ್ಣು ಔದ್ಯೋಗಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಸಂತಾನೋತ್ಪತ್ತಿಯ ಫ‌ಲವತ್ತತೆಗೆ ಪ್ರಕೃತಿ ಸಹಜವಾದ ಸೀಮಾ ರೇಖೆ ಸ್ತ್ರೀಗೆ ಇದೆ. ಆ ಕಟ್ಟಳೆಯನ್ನು ಮೀರಲು ಸಾಧ್ಯವಿಲ್ಲ. ಈ ಸವಾಲನ್ನು ಸ್ತ್ರೀಯರು ಬುದ್ಧಿವಂತಿಕೆಯಿಂದ ಎದುರಿಸಬೇಕು.

ನಲವತ್ತೂಂದು ವರ್ಷದ ಸ್ವಾತಿ, ಸ್ತ್ರೀರೋಗ ತಜ್ಞರ ಬಳಿ ಅಂಡಾಶಯಗಳಿಗೆ ತಗುಲಿದ್ದ ಸೋಂಕಿಗೆ ಚಿಕಿತ್ಸೆ ಪಡೆದಿದ್ದಾರೆ. ಲೋಕಾರೂಢಿಯಂತೆ ವೈದ್ಯರು ಮದುವೆ- ಮಕ್ಕಳ ಬಗ್ಗೆ ಮಾತನಾಡಿ­ದಾಗ ಸ್ವಾತಿಗೆ ದುಃಖ ಒತ್ತರಿಸಿಕೊಂಡು ಬಂದಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಇದ್ದಿದ್ದರಿಂದ, ಕೆಲಸದ ಒತ್ತಡದಲ್ಲಿ ಮದುವೆಯ ಬಗ್ಗೆ ಗಮನ ಕೊಟ್ಟೇ ಇರಲಿಲ್ಲ.

ಎಂಟು ವರ್ಷಗಳ ಹಿಂದೆ, ಮದುವೆ- ಮಕ್ಕಳು ಮಾಡಿಕೊಂಡು, ಕೆಲಸವನ್ನೂ ಮಾಡಿಕೊಂಡು, ಆದರ್ಶ ಗೃಹಿಣಿಯೆನಿಸಿ­ಕೊಳ್ಳಬೇಕು ಎಂಬ ಆಸೆಯನ್ನು ಗೆಳೆಯನೊಬ್ಬ ಚಿವುಟಿಹಾಕಿದ್ದ. ಅವನು ಮೊದಲೇ ಮದುವೆಯಾಗಿ­­ರುವ ಸುದ್ದಿ ತಿಳಿಯುವಷ್ಟರಲ್ಲಿ ಏಳು ವರ್ಷಗಳು ಕಳೆದುಬಿಟ್ಟಿದೆ. ಈಗ ವಯಸ್ಸು ನಲವತ್ತು ದಾಟಿದೆ. ತನ್ನ time ಮುಗಿಯಿತು ಎಂದು ಸ್ವಾತಿ ಅಳುತ್ತಾರೆ.

ಕುಟುಂಬ ವಲಯದಲ್ಲಿ ಇವರ ಮದುವೆಯದ್ದೇ ಒಂದು ದೊಡ್ಡ ಚರ್ಚೆ. ಮದುವೆಯಾಗಿ ಮಕ್ಕಳಾದರೆ ಮಾತ್ರ ಜೀವನದಲ್ಲಿ ಸಾರ್ಥಕತೆ ಅನ್ನುವಂಥವರು ಸ್ವಾತಿಯನ್ನು ಕಂಡಾಗ ಕೊಂಕು ನುಡಿಯುತ್ತಾರೆ. ಇಲ್ಲವೇ “ಅಯ್ಯೋ ಪಾಪ’ ಅಂತ ಕರುಣೆ ಉಕ್ಕಿಸುತ್ತಾರೆ.

ಜನರು ಏನೇ ಮಾತಾಡಿದರೂ, ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ರೂಢಿಸಿಕೊಳ್ಳಲು ಸಾಧ್ಯವೇ ಎಂಬ ಸಂದೇಹವನ್ನಿಟ್ಟುಕೊಂಡು ನನ್ನ ಬಳಿ ಬಂದಿದ್ದರು; ಜೊತೆಗೆ ಮದುವೆ- ಮಕ್ಕಳು- ಸಂಸಾರ ಇದರ ಬಗ್ಗೆ ಅವರ ಅಭಿಪ್ರಾಯವನ್ನು ನನ್ನ ಬಳಿ ಮುಕ್ತವಾಗಿ ಹಂಚಿಕೊಳ್ಳಲು ಅವರು ಆಸಕ್ತಿ ತೋರಿದರು.

ಸ್ವಾತಿಯ ಇಪ್ಪತ್ತೈದನೇ ವಯಸ್ಸಿನಲ್ಲಿ, ಅಪ್ಪನ ಸ್ನೇಹಿತರ ಮಗ ಮದುವೆ ಮಾಡಿಕೊಳ್ಳುತ್ತೇನೆಂದು ಕೇಳಿಕೊಂಡು ಬಂದಿದ್ದರಂತೆ. ತಂದೆ ಇಲ್ಲದ ಕಾರಣ, ಅಮ್ಮ, ಮಗಳಿಗೆ ಜವಾಬ್ದಾರಿ ಕಳಕೊಳ್ಳುವ ಸಲುವಾಗಿ ಮದುವೆಯಾಗಲು ಒತ್ತಾಯಿಸಿದ್ದಾರೆ. ಆಗ ಸ್ವಾತಿಗೆ, ದೊಡ್ಡ ಹುದ್ದೆಗೆ ಏರಬೇಕೆಂಬ ಕನಸಿತ್ತು. ಮದುವೆಗೆ ಒಪ್ಪಲಿಲ್ಲ. ನಂತರ ಕೆಲಸದಲ್ಲಿ ಬೆಳೆದು ಮನೆಯ ಹಣಕಾಸು ಸ್ಥಿತಿ ಸುಧಾರಿಸಿದಾಗ ಸಂಗಾತಿಯ ಹುಡುಕಾಟ ಅಗತ್ಯ ಎನಿಸಿದೆ. ಆಗ ಅವರ ಸಹೋದ್ಯೋಗಿಯೇ ಇವರನ್ನು ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ಸಹೋದ್ಯೋಗಿಗೆ ಮೊದಲೇ ಮದುವೆಯಾಗಿದ್ದ ವಿಚಾರ ತಿಳಿಯುವಷ್ಟರಲ್ಲಿ ಕಾಲ ಕೈಯಿಂದ ತಪ್ಪಿಹೋದಂತೆ ಅನಿಸುತ್ತದೆ.

ಹೆಣ್ಣು, ಹದಿನೈದರಿಂದ ಮೂವತ್ತು ವರ್ಷಗಳಲ್ಲಿ ತನ್ನ ಭವಿಷ್ಯದ ನೆಲೆಗಟ್ಟನ್ನು ರೂಪಿಸಿಕೊಳ್ಳುವ ಚಿಂತನೆಯನ್ನು ಮೊದಲೇ ಮಾಡಿಕೊಳ್ಳಬೇಕು. ಔದ್ಯೋಗಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಸಂತಾನೋತ್ಪತ್ತಿಯ ಫ‌ಲವತ್ತತೆಗೆ ಪ್ರಕೃತಿ ಸಹಜವಾದ ಸೀಮಾರೇಖೆ ಸ್ತ್ರೀಗೆ ಇದೆ. ಆ ಕಟ್ಟಳೆಯನ್ನು ಮೀರಲು ಸಾಧ್ಯವಿಲ್ಲ. ಈ ಸವಾಲನ್ನು ಸ್ತ್ರೀಯರು ಬುದ್ಧಿವಂತಿಕೆಯಿಂದ ಎದುರಿಸಬೇಕು.

ಸ್ವಾತಿ ಮೊದಲೇ, ಮನೆಯಲ್ಲಿ ಗಂಡು ಹುಡುಕುವ ಮುಂಚೆಯೇ, ಐ.ವಿ.ಎಫ್. ವೈದ್ಯರ ಸಹಾಯ ಪಡೆದುಕೊಂಡು ಅಂಡಾಣುಗಳನ್ನು ಶೇಖರಿಸಿಟ್ಟರು. ಅವರಿಗೆ ತಕ್ಕುನಾದ ಸಂಬಂಧವೂ ಕೂಡಿಬಂತು. ಈಗ ಮಕ್ಕಳಾಗಿ, ತಮ್ಮಿಚ್ಛೆಯಂತೆ ಕೌಟುಂಬಿಕ ಜೀವನವನ್ನು ಆನಂದಿಸುತ್ತಿದ್ದಾರೆ.

ವಿ.ಸೂ.:- ಹೆಣ್ಣು ಮಕ್ಕಳ ಮದುವೆಯನ್ನು ಜವಾಬ್ದಾರಿ ಕಳೆದುಕೊಳ್ಳುವ ಸಲುವಾಗಿ ಮಾಡಬೇಡಿ. ತಂದೆಯಿಲ್ಲದ ಹುಡುಗಿಯೆಂದು ಅನುಕಂಪ ಬೇಡ. ಹೆಣ್ಣು ಮಕ್ಕಳಿಗೆ ತಮ್ಮ ಆಶೋತ್ತರಗಳನ್ನು ಸಮಾನಾಂತರವಾಗಿ ಸಾಧಿಸಲು ಪ್ರೇರಣೆ ಕೊಡಿ.
– ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.