ಫಟಾಫಟ್ ಚಾಟ್
Team Udayavani, Aug 7, 2019, 5:56 AM IST
ಇದು ಮಳೆಗಾಲ. ಸದಾ ಏನಾದರೂ ತಿನ್ನುತ್ತಾ ಇರೋಣ ಅನ್ನಿಸುವ ಕಾಲ. ಮನೆಯಲ್ಲಿ ಮಕ್ಕಳಿದ್ದರಂತೂ, “ಅಮ್ಮಾ, ಚಾಟ್ಸ್ ಕೊಡಿಸು’ ಅಂತ ದುಂಬಾಲು ಬೀಳುತ್ತವೆ. ಮಕ್ಕಳಿಗೆ, ಮನೆ ತಿಂಡಿಗಿಂತ ಬೀದಿ ಬದಿಯ ತಿಂಡಿ ಮೇಲೇ ಚಪಲ ಜಾಸ್ತಿ. ಹಾಗಂತ, ದಿನಾ ಹೊರಗಡೆ ತಿಂದರೆ ಆರೋಗ್ಯ ಕೆಡುವ ಭಯ. ಜೊತೆಗೆ, ಆ ತಿನಿಸುಗಳ ಬೆಲೆಯೂ ದುಬಾರಿ. ಇಂಥ ಸಂದರ್ಭಗಳಲ್ಲಿ ಇರುವ ದಾರಿಯೊಂದೇ- ಹೊರಗಡೆ ಸಿಗುವ ತಿಂಡಿಯನ್ನೇ, ಮನೆಯಲ್ಲಿ ತಯಾರಿಸುವುದು. ಸುಲಭವಾಗಿ ತಯಾರಿಸಬಲ್ಲ ಕೆಲವು ಚಾಟ್ಸ್‌ಗಳ ರೆಸಿಪಿ ಇಲ್ಲಿದೆ.
1. ಬ್ರೆಡ್ ಬೋಂಡಾ
ಬೇಕಾಗುವ ಸಾಮಗ್ರಿ: ಬ್ರೆಡ್ 6 ತುಂಡು, ಕಡಲೆ ಹಿಟ್ಟು- 1ಬಟ್ಟಲು,ಬೆಳ್ಳುಳ್ಳಿ- 2 ಗೆಡ್ಡೆ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಹಸಿಮೆಣಸಿನ ಕಾಯಿ-2, ಎಣ್ಣೆ- ಕರಿಯಲು.
ಮಾಡುವ ವಿಧಾನ: ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸನ್ನು ಒಟ್ಟಿಗೆ ರುಬ್ಬಿ. ಒಂದು ಪಾತ್ರೆಗೆ ನೀರು ಹಾಕಿ ಅದಕ್ಕೆ ರುಬ್ಬಿದ ಮಿಶ್ರಣ, ಉಪ್ಪು, ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಮಿಶ್ರಣವು ಬೋಂಡಾ ಹಿಟ್ಟಿನ ಹದಕ್ಕೆ ಬರಲಿ. ನಂತರ ಬ್ರೆಡ್ ಸ್ಲೆ„ಸ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿ, ಮಿಶ್ರಣದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ.
2. ಪನೀರ್ ಬ್ರೆಡ್ ರೋಲ್
ಬೇಕಾಗುವ ಸಾಮಗ್ರಿ: ತುರಿದ ಪನೀರ್, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ- ತಲಾ ಒಂದು ಬಟ್ಟಲು, ಸಣ್ಣಗೆ ಹೆಚ್ಚಿದ ಮಶ್ರೂಮ್ ಸ್ವಲ್ಪ, ಕರಿಮೆಣಸು ಪುಡಿ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಬ್ರೆಡ್ ಸ್ಲೆ„ಸ್-6, ಎಣ್ಣೆ ಕರಿಯಲು.
ಮಾಡುವ ವಿಧಾನ: ಹೆಚ್ಚಿದ ಎಲ್ಲಾ ಸಾಮಗ್ರಿಗಳನ್ನು ಪಾತ್ರೆಯಲ್ಲಿ ಹಾಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉಂಡೆ ಮಾಡಿಕೊಳ್ಳಿ. ಬ್ರೆಡ್ ತುಂಡಿಗೆ ಸ್ವಲ್ಪ ನೀರು ಚಿಮುಕಿಸಿ, ಉಂಡೆಯನ್ನು ಮಧ್ಯದಲ್ಲಿಟ್ಟು ಎಣ್ಣೆಯಲ್ಲಿ ಕರಿಯಿರಿ.
3. ಪಾನಿಪೂರಿ
ಬೇಕಾಗುವ ಸಾಮಗ್ರಿ: ತಯಾರಿಸಿಕೊಂಡ ಪೂರಿ, ಆಲೂಗಡ್ಡೆ, ಹೆಸರುಕಾಳು, ಈರುಳ್ಳಿ.
ಸಿಹಿ ಪಾನಿಗೆ ಬೇಕಾದ ಸಾಮಗ್ರಿ: ಬೆಲ್ಲ- ದೊಡ್ಡ ಉಂಡೆ, ಹುಣಸೆ ಹುಳಿ, ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, ಅಚ್ಚ ಖಾರದ ಪುಡಿ, ಸೈಂಧವ ಲವಣ. ಖಾರದ ಪಾನಿಗೆ ಬೇಕಾದ ಸಾಮಗ್ರಿ: ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿಮೆಣಸು, ಶುಂಠಿ, ಹುಣಸೆ ಹಣ್ಣು, ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, ಸೈಂಧವ ಲವಣ, ಉಪ್ಪು ಹಾಗೂ ನೀರು.
ಮಾಡುವ ವಿಧಾನ: ಮೊದಲು, ಖಾರದ ಪಾನಿಗೆ ಬೇಕಾದ ಸಾಮಗ್ರಿಗಳನ್ನೆಲ್ಲ ಒಟ್ಟಿಗೆ ರುಬ್ಬಿ, ಬೇಕಾಗುವಷ್ಟು ನೀರು, ಉಪ್ಪು ಹಾಕಿ. ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ, ಅದಕ್ಕೆ ಕುಟ್ಟಿ ಪುಡಿ ಮಾಡಿದ ಬೆಲ್ಲ ಹಾಕಿ ಕುದಿಸಿ. ನೀರಿನಲ್ಲಿ ನೆನೆಸಿ ರಸ ತೆಗೆದ ಹುಣಸೆ ಹಣ್ಣನ್ನು ಕುದಿಸಿದ ಬೆಲ್ಲದ ನೀರಿಗೆ ಹಾಕಿ. ಅಚ್ಚ ಖಾರದ ಪುಡಿ, ಸೈಂಧವ ಲವಣ, ಜೀರಿಗೆ ಪುಡಿ ಸೇರಿಸಿ, ಚೆನ್ನಾಗಿ ಕುದಿಸಿ, ಆರಿಸಿ.
ಆಲೂಗಡ್ಡೆ ಮತ್ತು ಹೆಸರುಕಾಳನ್ನು ಬೇಯಿಸಿ. ಈರುಳ್ಳಿ ಸಣ್ಣಗೆ ಕತ್ತರಿಸಿ. ಪೂರಿಯ ತುದಿ ಮಾತ್ರ ಕತ್ತರಿಸಿ, ಸ್ವಲ್ಪ ಪುಡಿ ಮಾಡಿದ ಆಲೂ ಗಡ್ಡೆ, ಹೆಸರು ಕಾಳು ಹಾಗೂ ಈರುಳ್ಳಿ ಹಾಕಿ, ಸಿಹಿ-ಖಾರದ ಪಾನಿ ಹಾಕಿ, ತಿನ್ನಲು ಕೊಡಿ.
4. ಮಂಡಕ್ಕಿ ಚಾಟ್
ಬೇಕಾಗುವ ಸಾಮಗ್ರಿ: ಮಂಡಕ್ಕಿ – 3 ಬಟ್ಟಲು, ಕಡಲೆ ಬೀಜ, ಅಚ್ಚ ಖಾರದ ಪುಡಿ- 1 ಚಮಚ, ಕರಿಬೇವು, ಸಾಸಿವೆ, ಎಣ್ಣೆ,
ಸಣ್ಣಗೆ ಹೆಚ್ಚಿದ ಈರುಳಿ, ಆಮ್ ಚೂರ್ ಪುಡಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್ ತುರಿ, ಲಿಂಬೆಹಣ್ಣಿನ ರಸ.
ಮಾಡುವ ವಿಧಾನ: ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ಕಡಲೆ ಬೀಜವನ್ನು ಹುರಿಯಿರಿ. ಕಡಲೆ ಬೀಜ ತೆಗೆದು, ಅದೇ ಎಣ್ಣೆಗೆ ಸಾಸಿವೆ, ಕರಿಬೇವು, ಅಚ್ಚ ಖಾರದ ಪುಡಿ ಹಾಗೂ ಮಂಡಕ್ಕಿ ಹಾಕಿ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಒಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಆಮ್ ಚೂರ್ ಪುಡಿ, ಲಿಂಬೆ ರಸ ಮಿಶ್ರಣ ಮಾಡಿ, ತಕ್ಷಣ ತಿನ್ನಲು ಕೊಡಿ. ಹುರಿದ ಮಂಡಕ್ಕಿ ಮಿಶ್ರಣವನ್ನು ಮೊದಲೇ ಮಾಡಿ ಡಬ್ಬಿ ಯಲ್ಲಿ ಹಾಕಿಡಬಹುದು.
5. ಅಮೆರಿಕನ್ ಸ್ವೀಟ್ ಕಾರ್ನ್ ಚಾಟ್
ಬೇಕಾಗುವ ಸಾಮಗ್ರಿ: ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್- ಒಂದು ಬಟ್ಟಲು, ಅಚ್ಚ ಖಾರದ ಪುಡಿ, ಚಾಟ್ ಮಸಾಲ ಸ್ವಲ್ಪ,
ಉಪ್ಪು ರುಚಿಗೆ ತಕ್ಕಷ್ಟು, ಕ್ಯಾರೆಟ್ ತುರಿ- ಅರ್ಧ ಕಪ್, ಬೆಣ್ಣೆ ಸ್ವಲ್ಪ, ಲಿಂಬೆ ರಸ ಸ್ವಲ್ಪ.
ಮಾಡುವ ವಿಧಾನ: ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ಪೋಷಕಾಂಶಯುಕ್ತ ಚಾಟ್ ರೆಡಿ.
–ಸಹನಾ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.