ಕ್ವಿಕ್‌ ಕುಕ್‌

ದಿಢೀರ್‌ ಅಡುಗೆಯ ದರ್ಬಾರ್‌

Team Udayavani, Mar 27, 2019, 7:21 AM IST

w-24

“ಅಮ್ಮಾ, ನಂಗಿವತ್ತು ಊಟ ಬೇಡ. ಹೊರಗೆ ತಿಂದು ಬಂದೆ’… ಮಕ್ಕಳೇನಾದ್ರೂ ಹೀಗೆ ಹೇಳಿಬಿಟ್ಟರೆ, ಅಮ್ಮನ ಸಿಟ್ಟು ನೆತ್ತಿಗೇರುತ್ತದೆ. ಮಾಡಿದ ಅಡುಗೆಯನ್ನೆಲ್ಲ ಚೆಲ್ಲಬೇಕಲ್ಲ ಎಂಬ ಅಸಮಾಧಾನ ಆಕೆಯದ್ದು. ತರಕಾರಿ ಹಾಗೂ ದಿನಸಿ ಸಾಮಾನುಗಳ ಬೆಲೆ ಕೇಳಿದರೆ ಎಸೆಯುವುದಕ್ಕೂ ಹೊಟ್ಟೆ ಉರಿಯುತ್ತದೆ. ಇಂಥ ಸಂದರ್ಭಗಳಲ್ಲಿ ಸ್ವಲ್ಪ ತಲೆ ಓಡಿಸಿದರೆ, ಉಳಿದ ಅಡುಗೆಯನ್ನೇ ಬಳಸಿ, ಹೊಸರುಚಿ ತಯಾರಿಸಬಹುದು. ಅಂಥ ಕೆಲವು ದಿಢೀರ್‌ ತಿನಿಸುಗಳ ರೆಸಿಪಿ ಇಲ್ಲಿದೆ…

1. ವೆಜ್‌ ಕಟ್ಲೆಟ್‌
ಮಧ್ಯಾಹ್ನ ಮಾಡಿದ ಪಲ್ಯ ಮಿಕ್ಕಿದ್ದರೆ, ಅದನ್ನು ಹಾಗೆಯೇ ಪಾತ್ರೆಯಲ್ಲಿ ಮುಚ್ಚಿಡಿ. ಅದರ ಜೊತೆಗೆ ಒಂದೆರಡು ತರಕಾರಿಗಳನ್ನು ಸೇರಿಸಿ, ಸಂಜೆಗೆ ಸ್ನ್ಯಾಕ್ಸ್‌ ತಯಾರಿಸಬಹುದು.

ಬೇಕಾಗುವ ಸಾಮಗ್ರಿ: ಪಲ್ಯ ಎಷ್ಟು ಮಿಕ್ಕಿದೆಯೋ ಅಷ್ಟು, ಬೇಯಿಸಿದ ತರಕಾರಿಗಳು (ಕ್ಯಾರೆಟ್‌, ಬೀನ್ಸ್‌ ಹಾಗೂ ಬೀಟ್‌ರೂಟ್‌)- 1 ಕಪ್‌, ಚಿರೋಟಿ ರವೆ – 1/2 ಕಪ್‌, ಅಕ್ಕಿ ಹಿಟ್ಟು-1 ಹಿಡಿ, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ ಹಾಗೂ ಧನಿಯಾ ಪುಡಿ- ತಲಾ 1 ಚಮಚ, ಆಮ್‌ಚೂರ್‌ ಪುಡಿ-1/2 ಚಮಚ, ಉಪ್ಪು ಹಾಗೂ ಬೆಲ್ಲ ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಪಲ್ಯವನ್ನು, ಬೇಯಿಸಿದ ತರಕಾರಿಗಳ ಜೊತೆಗೆ ಸೇರಿಸಿ ಮಿಶ್ರಣ ಮಾಡಿ. ನಂತರ ಅದಕ್ಕೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಬೆರೆಸಿ 10 ನಿಮಿಷ ಇಡಿ. ಬಾಣಲೆಯಲ್ಲಿ ಎಣ್ಣೆ ಇಟ್ಟು, ಈ ಮಿಶ್ರಣವನ್ನು ವಡೆಯ ಆಕಾರದಲ್ಲಿ ತಟ್ಟಿ ಚಿರೋಟಿ ರವೆಯಲ್ಲಿ ಮುಳುಗಿಸಿ, ಕೆಂಪು ಬಣ್ಣ ಬರುವ ತನಕ ಕರಿದರೆ ಕಟ್ಲೆಟ್‌ ರೆಡಿ. ಇದನ್ನು ಕಾವಲಿ ಮೇಲೆ ಹಾಕಿಯೂ ಬೇಯಿಸಬಹುದು.

2.ಜೀರಾ ರೈಸ್‌
ಬೇಕಾಗುವ ಸಾಮಗ್ರಿ: ಬೆಳಗ್ಗೆ ಮಾಡಿದ ಅನ್ನ-1 ಕಪ್‌, ಹೆಚ್ಚಿದ ಈರುಳ್ಳಿ-1 ಕಪ್‌, ಬೇಯಿಸಿದ ಬಟಾಣಿ- 1/2 ಕಪ್‌, ಜೀರಿಗೆ- 1 ಚಮಚ, ಆಮ್‌ಚೂರ್‌ ಪುಡಿ- 1 ಚಮಚ, ಎಣ್ಣೆ ಹಾಗೂ ಉಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಇಟ್ಟು ಅದರಲ್ಲಿ ಈರುಳ್ಳಿ ಹುರಿದು, ಜೀರಿಗೆ ಹಾಕಿ. ಅದಕ್ಕೆ ಬೇಯಿಸಿದ ಬಟಾಣಿ ಹಾಗೂ ಅನ್ನ ಹಾಕಿ ಚೆನ್ನಾಗಿ ಮಗುಚಿ. ನಂತರ ಆಮ್‌ಚೂರ್‌ ಪುಡಿ, ಉಪ್ಪು ಉದುರಿಸಿದರೆ ಜೀರಾ ರೈಸ್‌ ಸಿದ್ಧ.

3. ಪಲ್ಯ-ಆಲೂ ಬೋಂಡ
ಬೇಕಾಗುವ ಸಾಮಗ್ರಿ: ಮಿಕ್ಕಿದ ಪಲ್ಯ- 1 ಕಪ್‌, ಬೇಯಿಸಿದ ಆಲೂಗಡ್ಡೆ- 2, ಅರಶಿನ ಪುಡಿ-1/4 ಚಮಚ, ಅಚ್ಚಖಾರದ ಪುಡಿ-1 ಚಮಚ, ಗರಂ ಮಸಾಲ ಪುಡಿ- 2 ಚಮಚ, ಚಿರೋಟಿ ರವೆ -1 ಕಪ್‌, ಉಪ್ಪು ಹಾಗೂ ಸಕ್ಕರೆ- ರುಚಿಗೆ ತಕ್ಕಂತೆ, ಎಣ್ಣೆ- ಕರಿಯಲು

ಮಾಡುವ ವಿಧಾನ: ಪಲ್ಯದ ಜೊತೆ ಆಲೂಗಡ್ಡೆ ಸೇರಿಸಿ ಮಗುಚಿ. ಅದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು ಹಾಗೂ ಸಕ್ಕರೆ ಸೇರಿಸಿ, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ 10 ನಿಮಿಷ ಹಾಗೇ ಬಿಡಿ. ನಂತರ ಚಿರೋಟಿ ರವೆಯಲ್ಲಿ ಆಲೂಗಡ್ಡೆ ಉಂಡೆಗಳನ್ನು ಹೊರಳಾಡಿಸಿ, ವೃತ್ತಾಕಾರವಾಗಿ ತಟ್ಟಿ ಎಣ್ಣೆಯಲ್ಲಿ ಕರಿಯಿರಿ. ಬೋಂಡವನ್ನು ಟೊಮೇಟೊ ಸಾಸ್‌ ಜೊತೆಗೆ ಸವಿದರೆ ಬಲು ರುಚಿ.

4. ಪೋಹ ಡಿಲೈಟ್‌
ಬೇಕಾಗುವ ಪದಾರ್ಥ: ಪುಡಿ ಮಾಡಿದ ತೆಳು ಅವಲಕ್ಕಿ -1 ಕಪ್‌, ಹುಣಸೆಹಣ್ಣಿನ ರಸ-1/4 ಕಪ್‌, ಸಾರಿನ ಪುಡಿ -2 ಚಮಚ, ಬೆಲ್ಲ -1 ತುಂಡು, ಉಪ್ಪು- ರುಚಿಗೆ, ಕರಿಬೇವು – 3 ಎಸಳು, ಹುರಿದ ಕಡಲೆ ಬೀಜ -1 ಕಪ್‌, ಗರಂ ಮಸಾಲ ಪುಡಿ -1 ಚಮಚ, ಸಾಸಿವೆ.

ಮಾಡುವ ವಿಧಾನ: ತೆಳು ಅವಲಕ್ಕಿಯನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿ, ಹುಣಸೆ ಹಣ್ಣಿನ ನೀರಿನಲ್ಲಿ 2 ಗಂಟೆ ನೆನೆಸಿಡಿ. ಅವಲಕ್ಕಿ ನೆನೆದ ನಂತರ ಬೇರೆ ಪಾತ್ರೆಗೆ ವರ್ಗಾಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕಡಲೆಕಾಯಿ ಬೀಜ ಹಾಗೂ ಕರಿಬೇವಿನ ಎಸಳು ಹಾಕಿ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಅವಲಕ್ಕಿ ಹಾಕಿ ಬೆರೆಸಿ, ಉಪ್ಪು ಹಾಗೂ ಗರಂ ಮಸಾಲ ಪುಡಿ ಹಾಕಿ ಬೆರೆಸಿ. (ಒಗ್ಗರಣೆ ಹಾಕಿದ ತೆಳು ಅವಲಕ್ಕಿ ಉಳಿದಿದ್ದರೆ ಅದನ್ನು ಬಳಸಿಯೂ ಪೋಹ ತಯಾರಿಸಬಹುದು)

ಹೀರಾ ರಮಾನಂದ್‌

ಟಾಪ್ ನ್ಯೂಸ್

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.