ಫಟಾಫಟ್ ಫಲಾಹಾರಗಳು
Team Udayavani, Sep 19, 2018, 6:00 AM IST
“ನಾಳೆ ಲಂಚ್ ಬಾಕ್ಸ್‌ಗೆ ಏನು ತಿಂಡಿ ಮಾಡಬಹುದು?’.. ಇದು ಎಲ್ಲ ಮಹಿಳೆಯರನ್ನು ದಿನವೂ ಕಾಡುವ ಪ್ರಶ್ನೆ. ಬೆಳಗಿನ ಅವಸರದಲ್ಲಿ ಫಟಾಫಟ್ ಆಗುವ ಐಟಮ್‌ಗಳಾದರೆ ಒಳ್ಳೆಯದು. ಅದನ್ನೇ ಮಧ್ಯಾಹ್ನದ ಬಾಕ್ಸ್‌ಗೂ ತೆಗೆದುಕೊಂಡು ಹೋಗುವಂತಾದರೆ ಮತ್ತೂ ಒಳ್ಳೆಯದು. ಹೀಗೆ, ಅವಸರದಲ್ಲಿ ಮಾಡಬಹುದಾದ ಅನ್ನದ ಅಡುಗೆ ರೆಸಿಪಿಗಳು ಇಲ್ಲಿವೆ…
1. ಕರಿಬೇವಿನ ಅನ್ನ
ಬೇಕಾಗುವ ಸಾಮಗ್ರಿ: ಅನ್ನ- 1 ಕಪ್, ಕರಿಬೇವಿನ ಸೊಪ್ಪು- 1/2 ಕಪ್, ತೆಂಗಿನ ತುರಿ-1/2 ಕಪ್, ಸ್ವಲ್ಪ ಇಂಗು, ಸ್ವಲ್ಪ ಅರಿಶಿಣ, ಖಾರಕ್ಕೆ ತಕ್ಕಷ್ಟು ಬ್ಯಾಡಗಿ ಮೆಣಸು, ಬೆಳ್ಳುಳ್ಳಿ-5-6 ಎಸಳು, ಹುಣಸೆ ಹಣ್ಣು, ಉದ್ದು-1/2ಚಮಚ, ಸಾಸಿವೆ-1/2 ಚಮಚ, ಎಣ್ಣೆ, ಸಣ್ಣಗೆ ಹೆಚ್ಚಿದ ಈರುಳ್ಳಿ-1, ಸಣ್ಣಗೆ ಹೆಚ್ಚಿದ ಟೊಮೆಟೊ-1, (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಬಳಸಬಹುದು)
ಮಾಡುವ ವಿಧಾನ: ಮೊದಲು ಮಿಕ್ಸಿ ಜಾರಿಗೆ ತೆಂಗಿನ ತುರಿ, ಬ್ಯಾಡಗಿ ಮೆಣಸು, ಹುಣಸೆಹಣ್ಣು, ಕರಿಬೇವು, ಅರಿಶಿಣ,ಬೆಳ್ಳುಳ್ಳಿ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಉದ್ದು, ಸಾಸಿವೆ ಹಾಕಿ ಚಟಪಟ ಅನ್ನು ವಾಗ ಇಂಗು ಹಾಕಿ. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು ಪ್ರೈ ಆದ ಮೇಲೆ ಟೊಮ್ಯಾಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ. (ಸಣ್ಣಗೆ ಹೆಚ್ಚಿದ ಬೇರೆ ತರಕಾರಿಗಳನ್ನು ಹಾಕಬಹುದು) ಅದಕ್ಕೆ ರುಬ್ಬಿದ ಮಸಾಲೆ ಹಾಕಿ, ಹಸಿ ವಾಸನೆ ಹೋಗುವ ವರೆಗೆ ಫ್ರೈ ಮಾಡಿ. ಈಗ ಮೊದಲೇ ಮಾಡಿಟ್ಟ ಅನ್ನ ಹಾಕಿ ಮಿಕÕ… ಮಾಡಿ, ಸ್ವಲ್ಪ ತುಪ್ಪ ಹಾಕಿ ಒಮ್ಮೆ ಚೆನ್ನಾಗಿ ಕೈಯಾಡಿಸಿ.
2. ಶೇಂಗಾ (ಕಡ್ಲೆ ಬೀಜ) ಅನ್ನ
ಬೇಕಾಗುವ ಸಾಮಗ್ರಿ: ಅನ್ನ- 1 ಕಪ್, ಸ್ವಲ್ಪ ಹುರಿದು ಸಿಪ್ಪೆ ತೆಗೆದ ಶೇಂಗಾ- 1/2 ಕಪ್, ಎಣ್ಣೆ, ಸಣ್ಣಗೆ ಹೆಚ್ಚಿದ ಈರುಳ್ಳಿ- 1, ಉದ್ದು- 1 ಚಮಚ, ಕಡ್ಲೆಬೇಳೆ -1ಚಮಚ, ಜೀರಿಗೆ- 1 ಚಮಚ, ಸಾಸಿವೆ- 1ಚಮಚ, ಎಳ್ಳು – 1ಚಮಚ, ಬ್ಯಾಡಗಿ ಮೆಣಸು- 6, ತೆಂಗಿನ ತುರಿ- ಕಾಲು ಕಪ್, ಕರಿಬೇವಿನ ಎಸಳು- 6, ಚಿಟಿಕೆ ಇಂಗು, ತುಪ್ಪ- 2ಚಮಚ, ರುಚಿಗೆ ತಕ್ಕಷ್ಟು ಉಪ್ಪು, (ಬೇಕಿದ್ದರೆ ಬೆಳ್ಳುಳ್ಳಿ ಹಾಕಬಹುದು)
ತಯಾರಿಸುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಅದು ಕಾದ ನಂತರ ಶೇಂಗಾ, ಉದ್ದಿನ ಬೇಳೆ, ಕಡ್ಲೆಬೇಳೆ, ಜೀರಿಗೆ, ಸಾಸಿವೆ, ಎಳ್ಳು, ಬ್ಯಾಡಗಿ ಮೆಣಸು, (ಬೆಳ್ಳುಳ್ಳಿ) ತೆಂಗಿನ ತುರಿಯನ್ನು ಒಂದಾದ ಮೇಲೆ ಒಂದರಂತೆ ಹಾಕಿ ಫ್ರೈ ಮಾಡಿ. ಈಗ ಇದನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿ. ಇನ್ನೊಮ್ಮೆ ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಕಾಲು ಕಪ್(ಉಳಿದ) ಶೇಂಗಾ, ಹೆಚ್ಚಿದ ಈರುಳ್ಳಿ, ಕರಿಬೇವು, ಇಂಗು ಹಾಕಿ ಫ್ರೈ ಮಾಡಿ. ಈಗ ಅದಕ್ಕೆ ಮೊದಲೇ ಮಾಡಿಟ್ಟ ಅನ್ನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕÕ… ಮಾಡಿ. ಮೇಲಿಂದ ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸಿ.
3. ಕೊತ್ತಂಬರಿ ಸೊಪ್ಪಿನ ಅನ್ನ
ಬೇಕಾಗುವ ಸಾಮಗ್ರಿ: ಅನ್ನ -1 ಕಪ್, ಈರುಳ್ಳಿ- 1, ಲವಂಗ -4, ಚಕ್ಕೆ -2, ಹಸಿಮೆಣಸು -2, ಕೊತ್ತಂಬರಿ ಸೊಪ್ಪು -1 ಹಿಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಗೋಡಂಬಿ- 1/2 ಕಪ್, ಹೆಚ್ಚಿದ ಟೊಮ್ಯಾಟೊ- 1, ಹಸಿ ಬಟಾಣಿ ಸ್ವಲ್ಪ, (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಾಕಿ) ಎಣ್ಣೆ, ಉಪ್ಪು, ತುಪ್ಪ.
ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ ಹೆಚ್ಚಿದ ಈರುಳ್ಳಿ, ಲವಂಗ, ಚಕ್ಕೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕೊಳ್ಳಿ. ಒಂದು ಬಾಣೆಲೆಗೆ ಎಣ್ಣೆ ಹಾಕಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಸಣ್ಣಗೆ ಹೆಚ್ಚಿದ ಟೊಮ್ಯಾಟೊ ಹಾಕಿ ಫ್ರೈ ಮಾಡಿ, ಬಟಾಣಿ (ಬೇಯಿಸಿದ್ದು) ಹಾಕಿ. (ಬೇಕಿದ್ದರೆ ಬೇರೆ ತರಕಾರಿಗಳನ್ನು ಹಾಕಬಹುದು) ಈಗ ರುಬ್ಬಿದ ಮಸಾಲೆ ಮತ್ತು ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಮೊದಲೇ ಮಾಡಿಟ್ಟ ಅನ್ನ ಮಿಕÕ… ಮಾಡಿ ಚೆೆನ್ನಾಗಿ ಕೈಯಾಡಿಸಿ. ಈಗ ತುಪ್ಪದಲ್ಲಿ ಗೋಡಂಬಿಯನ್ನು ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ ಅನ್ನದ ಮೇಲೆ ಹಾಕಿ.
4. ಟೊಮ್ಯಾಟೊ ಬಾತ್
ಬೇಕಾಗುವ ಸಾಮಗ್ರಿ: ಟೊಮ್ಯಾಟೊ- 2, ಜೀರಿಗೆ- 1/2 ಚಮಚ, ಸೋಂಪು- 1/2 ಚಮಚ, ಬೆಳ್ಳುಳ್ಳಿ -5 ಎಸಳು, ಶುಂಠಿ- ಅರ್ಧ ಇಂಚು, ಸಣ್ಣಗೆ ಹೆಚ್ಚಿದ ಈರುಳ್ಳಿ- ಒಂದು ಕಪ್, ಕೊತ್ತಂಬರಿ ಸೊಪ್ಪು, ಉಪ್ಪು, ಅಚ್ಚ ಖಾರದ ಪುಡಿ, ಇಂಗು ಸ್ವಲ್ಪ, ಗರಂ ಮಸಾಲ- ಅರ್ಧ ಚಮಚ, ಅಕ್ಕಿ-1 ಕಪ್, ತುಪ್ಪ ಒಂದು ಚಮಚ, ನೀರು.
ಮಾಡುವ ವಿಧಾನ: ಮೊದಲು ಟೊಮ್ಯಾಟೊವನ್ನು ಬೇಯಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್‌ಗೆ ಶುಂಠಿ, ಬೆಳ್ಳುಳ್ಳಿ, ಸೊಂಪು ಹಾಕಿ ರುಬ್ಬಿಕೊಳ್ಳಿ. ಈಗ ಅದೇ ಜಾರ್‌ಗೆ ಬೇಯಿಸಿದ ಟೊಮ್ಯಾಟೊ, ಅಚ್ಚ ಖಾರದ ಪುಡಿ, ಗರಂ ಮಸಾಲ ಹಾಕಿ ರುಬ್ಬಿ. ಕುಕ್ಕರ್‌ಗೆ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ಇಂಗು ಹಾಕಿ. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ರುಬ್ಬಿದ ಮಸಾಲಾ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ತೊಳೆದ ಅಕ್ಕಿ, ಉಪ್ಪು, ಎರಡು ಕಪ್ ನೀರು ಹಾಕಿ ಕುಕ್ಕರ್ ಅನ್ನು ಮೂರು ವಿಷಲ್ ಕೂಗಿಸಿ. ತಣ್ಣಗಾದ ಮೇಲೆ ಲಿಡ್ ತೆಗೆದು ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸಿ.
ಪ್ರೇಮಾ ಲಿಂಗದಕೋಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.