ನಿಮಗೆ ಮಳೆಯ ಕನಸು ಬಿತ್ತೇ?


Team Udayavani, Oct 3, 2018, 12:51 PM IST

566.jpg

  ಕನಸಿನಲ್ಲಿ ಮಳೆಯನ್ನು ಕಾಣುವುದು ಧನಾತ್ಮಕ ಸನ್ನಿವೇಶ ಆಗಮನದ ಪ್ರತೀಕ. ಮಳೆಗಿಂತಲೂ ಅಧಿಕ ಮಿಂಚು, ಗುಡುಗುಗಳ ಕನಸು ಕಂಡಿತೆಂದರೆ ಮನಸ್ಸಿನಲ್ಲಿ ಕೋಪಕ್ಕೆ ಕಾರಣವಾಗಿರುವ ಸನ್ನಿವೇಶದ ಪ್ರಭಾವವನ್ನು ಅಂಥ ಕನಸು ಸೂಚಿಸುತ್ತದೆ...

ಕನಸಿನ ಸಾಮ್ರಾಜ್ಯದಲ್ಲಿ ಮಳೆಗೆ ವಿಶಿಷ್ಟ ಸ್ಥಾನವಿದೆ. ಕನಸಿನಲ್ಲಿ ಮಳೆಯನ್ನು ಕಂಡರೆ ಅದು ಕಾರ್ಯಸಿದ್ಧಿಯ ಸೂಚಕವಂತೆ. ಈ ಕುರಿತು ಕಾರ್ಲ್ ಯೂಂಗ್‌ ಅವರು ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಕುತೂಹಲಕಾರಿ ಅಂಶಗಳನ್ನು ಶ್ರುತಪಡಿಸಿ¨ªಾರೆ. ಮಳೆ ಬುವಿಗೆ ಶುದ್ಧ ನೀರನ್ನು ನೀಡುವ ಒಂದು ಮುಖ್ಯ ಜಲದ ಮೂಲ. ನೀರಿಲ್ಲದೆ ಜೀವನವಿಲ್ಲ. ಮಳೆಯ ನೀರು ಅಮೃತೋಪಮ. ಅಂತೆಯೇ ಇದು ಇಳೆಯ ಕೊಳೆಯನ್ನೆಲ್ಲ ತೊಳೆಯುವುದೂ ದಿಟ!
  ಕನಸಿನಲ್ಲಿ ಮಳೆಯನ್ನು ಕಾಣುವುದು ಧನಾತ್ಮಕ ಸನ್ನಿವೇಶ ಆಗಮನದ ಪ್ರತೀಕ. ಅಲ್ಲದೆ ಚಿಂತೆಯ, ಸಮಸ್ಯೆಗಳ ನಿವಾರಣೆಯ ಸೂಚಕ. ಮಳೆ ಬಂದು ಹೇಗೆ ಬಿಸಿಲಿನ ಧಗೆಯಲ್ಲಿ ಬೆಂದ ಬುವಿಯಲ್ಲಿ ತಂಪು, ತಂಗಾಳಿ ತರುವಂತೆ, ಮರಗಿಡ ಗಳಲ್ಲಿ ಹಸಿರೊಡೆಯುವಂತೆ, ಇಡೀ ಪ್ರಕೃತಿ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೋ ಅದೇ ರೀತಿಯಲ್ಲಿ ಕನಸಿನಲ್ಲಿ ಮಳೆಯನ್ನು ಕಂಡಾಗ ಅದು ಋಣಾತ್ಮಕ ಸಂಗತಿಯ ನಿವಾರಣೆಯನ್ನೂ, ಸಮಸ್ಯೆಗೆ ಚಿಂತೆಗೆ ಪರಿಹಾರವನ್ನೂ ಸೂಚಿಸುವಂಥ¨ªಾಗಿದೆ.

  ಸುಪ್ತಪ್ರಜ್ಞೆಯಲ್ಲಿ ಅಡಗಿರುವ ಭಾವನೆಗಳು, ಭೀತಿ, ಆತಂಕ, ಅಸಂತೋಷ ಮೊದಲಾದ ಭಾವಗಳ ಅಭಿವ್ಯಕ್ತಿಯಾಗಿಯೂ ಕನಸು ಕಾಣಿಸಿಕೊಳ್ಳುತ್ತದೆ. ಮಳೆಯ ಕನಸು ಅಥವಾ ಕನಸಿನಲ್ಲಿ ಮಳೆಯನ್ನು ಕಾಣುವುದೆಂದರೆ ಋಣಾತ್ಮಕವಾದ ಇಂತಹ ಋಣಾತ್ಮಕ ಭಾವಗಳನ್ನು ಮೀರಿ, ಸುಪ್ತಪ್ರಜ್ಞೆಯಲ್ಲಿ ಧನಾತ್ಮಕ ಯೋಚನೆ, ಯೋಜನೆ, ಆನಂದ ಲಹರಿ ಕಾಣಿಸಿಕೊಳ್ಳುವುದೇ ಆಗಿದೆ. ಮಳೆಯಂಥ ಹಲವು ಧನಾತ್ಮಕ ಅಂಶಗಳುಳ್ಳ ಕನಸುಗಳು ಪ್ರಜ್ಞೆಯು ವಿಕಸಿತವಾದುದನ್ನು ಸೂಚಿಸುವ ಸಾಂಕೇತಿಕ ತಣಿ¤àಗಳನ್ನು ಹೊಂದಿವೆ.

  ಹೀಗೆ ಮಳೆ, ಮಳೆ ಮತ್ತು ಗುಡುಗು ಮಿಂಚು, ಮಳೆ ಮತ್ತು ರಭಸದ ಗಾಳಿ ಇವೇ ಮೊದಲಾದವುಗಳ ಕನಸಿನ ಅಭಿವ್ಯಕ್ತತೆಯ ಕುರಿತು ಕಾರ್ಲ್ ಯೂಂಗ್‌ ಅಧ್ಯಯನ ಮಾಡಿದಂತೆ, ತದನಂತರ ಕ್ರಿಶ್ಚಿಯಾನಾ ಸ್ಪಾನಿಯಸ್‌ ಅಧ್ಯಯನ ಮಾಡಿ ಈ ಕುರಿತು ಮಾನವನ ಮನಸ್ಸಿಗೆ ಚಿಕಿತ್ಸಕವಾದ ತಣಿ¤àಗಳನ್ನು, ಪ್ರಯೋಗಗಳನ್ನು ಮಾಡಿದರು. ಮಳೆ ಮತ್ತು ಮೋಡ ಮುಸುಕಿದ ಕಗ್ಗತ್ತಲೆಯ ವಾತಾವರಣ ಹೊಂದಿರುವ ಕನಸು ಮನೋವಸಾದ ಅಥವಾ ಬೇಸರ, ಖನ್ನತೆ ರೋಗ ಚಿಹ್ನೆ ಅಥವಾ ಸನ್ನಿವೇಶಗಳನ್ನು ಸೂಚಿಸುವುದು.

  ಮಳೆಗಿಂತಲೂ ಅಧಿಕ ಮಿಂಚು, ಗುಡುಗುಗಳ ಕನಸು ಕಂಡಿತೆಂದರೆ ಮನಸ್ಸಿನಲ್ಲಿ ಕೋಪಕ್ಕೆ ಕಾರಣವಾಗಿರುವ ಸನ್ನಿವೇಶದ ಪ್ರಭಾವವನ್ನು ಅಂಥ ಕನಸು ಸೂಚಿಸುತ್ತದೆ. ಮಳೆಯೊಂದಿಗೆ, ಮಳೆಬಿಲ್ಲು ಅಥವಾ ಕಾಮನಬಿಲ್ಲಿನ ಕನಸು ಸಂತಸದ ಸನ್ನಿವೇಶದ ಸೂಚಕ. ಮಳೆಯಲ್ಲಿ ಛತ್ರಿ ಅಥವಾ ಕೊಡೆ ಹಿಡಿದಿರುವ ಕನಸು ಮನಸ್ಸಿನ ಅಭದ್ರತೆಯ ನಿವಾರಣೆಯನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

ಮಳೆಯ ಕನಸಿನ ಆಧ್ಯಾತ್ಮಿಕ ಮೋಹ
– ಮಳೆಯನ್ನು ಕನಸಲ್ಲಿ ಕಂಡರೆ ಅಥವಾ ಮಳೆಸದ್ದು ಕೇಳಿಸಿಕೊಂಡರೆ ಅದು ಕ್ಷಮಾಸೂಚಕ, ಆಶೀರ್ವಾದದ ಪ್ರತೀಕವಾಗಿದೆ.
– ಅಂತೆಯೇ ಮಳೆಹನಿಗಳಲ್ಲಿ ಮೀಯುವ ಕನಸು, ದುಃಖ ಅಥವಾ ಕಣ್ಣೀರು ಹರಿದು, ಮನಸ್ಸು ಶುಭ್ರ ಹಾಗೂ ಸಂತಸ ಭರಿತವಾಗುವ ಸೂಚಕ.
– ಬುವಿಗೆ ತಂಪನ್ನೀಯಲು ಮಳೆ ನೀಡುವಂತೆ ಋಗ್ವೇದದಲ್ಲಿ ಯಂತ್ರಗಳು (ಪರ್ಜನ್ಯ ಮಂತ್ರಗಳು) ಹಲವಾರು ಇವೆ. ಅಂತೆಯೇ ಅಧಿಕ ಮಳೆಯಿಂದ ಅತಿವೃಷ್ಟಿಯಿಂದ ಆಗುವ ಅನಾಹುತವನ್ನು ತಪ್ಪಿಸುವಂತೆಯೂ ಪ್ರಾರ್ಥಿಸುವ ಮಂತ್ರಗಳಿವೆ.
– ಇಸ್ಲಾಂನಲ್ಲಿ ಮಳೆಯ ಕನಸು, ಉತ್ತಮ ಬೆಳೆ, ಇಳೆಯ ಸಂತೃಪ್ತಿ, ಜನಜೀವನ ಸುಗಮತೆ ಮತ್ತು ಸಂತೋಷವನ್ನು ಸೂಚಿಸುತ್ತದೆ.
– ಆಯುರ್ವೇದ ಶಾಸ್ತ್ರದಲ್ಲೂ ಬತ್ತಿದ ಜಲಾಶಯ, ನೀರಿಲ್ಲದ ಕೆರೆ- ಬಾವಿ ತಟಾಕಗಳ ಕನಸು ದೇಹವನ್ನು ಕ್ಷೀಣಿಸುವಂಥ ಕಾಯಿಲೆ (ಕ್ಷಯರೋಗವೇ) ಮುಂತಾದವುಗಳ ಸೂಚಕ ಎಂದು ತಿಳಿಸಲಾಗಿದೆ. “ಕಾಲೇ ವರ್ಷತು ಪರ್ಜನ್ಯಃ ಪೃಥಿವೀಂ ಸಸ್ಯ ಶಾಲಿನೀಂ’ ಎಂದು ಶಾಂತಿಮಂತ್ರದಲ್ಲಿ ತಿಳಿಸಿರುವಂತೆ ಕಾಲಕಾಲಕ್ಕೆ ಮಳೆಯಾಗಲಿ.

 ಡಾ.ಅನುರಾಧಾ ಕಾಮತ್‌

ಟಾಪ್ ನ್ಯೂಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.