ರಾಮನ ಪಾದ ಭರತನ ಶಿರವೇರಿತು…
Team Udayavani, May 2, 2018, 12:36 PM IST
ರಾಮನಿಗೆ ಧರ್ಮ ಎಂದೂ ಮಾತಿನ ವಿಷಯವಲ್ಲ, ಅನುಷ್ಠಾನದ ವಿಷಯ. ಸತ್ಯ- ಧರ್ಮ, ಕರ್ತವ್ಯಪ್ರಜ್ಞೆ ವಿಷಯದಲ್ಲಿ ರಾಮನಿಗಿದ್ದ ಜ್ಞಾನ ಅಪಾರ. ನಾವು ಚಿತ್ರಕೂಟದಲ್ಲಿದ್ದಾಗ ಹೀಗಾಯಿತು…. ರಾಮನಿಗೇ ಮರಳಿ ರಾಜ್ಯವನ್ನು ವಹಿಸುತ್ತೇನೆಂದು ಭರತ ಪರಿವಾರ ಸಹಿತ ಬಂದಿದ್ದನಲ್ಲ; ಆಗ ಅವನಿಗೆ ರಾಜಧರ್ಮ, ಕರ್ತವ್ಯ ಪಾಲನೆ, ವ್ಯಷ್ಟಿ-ಸಮಷ್ಟಿ ಧರ್ಮಗಳ ಬಗ್ಗೆ ಉತ್ತರಸಹಿತವಾದ ಸುಮಾರು 90 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದ. ರಾಮನ ವಿಷಯಜ್ಞಾನಕ್ಕೆ ಮುನಿದಂಡು ದಂಗು.
ನನಗೆ ಭರತನ ವ್ಯಕ್ತಿತ್ವದ ಪೂರ್ಣ ಪರಿಚಯವಾಗಿದ್ದೂ ಚಿತ್ರಕೂಟದಲ್ಲೇ. ಕಾಡಿಗೆ ಬಂದವನೇ ಅಣ್ಣನ ಪಾದಗಳನ್ನು ಹಿಡಿದು, ಗೊಳ್ಳೋ ಎಂದು ಅತ್ತ. “ನಿನ್ನಂಥ ಅಣ್ಣನಿಗೆ ತಮ್ಮನಾಗುವ ಯೋಗ್ಯತೆ ನನಗಿಲ್ಲ, ನನ್ನಮ್ಮನ ಸ್ವಾರ್ಥ ನಿನ್ನನ್ನು ಘೋರ ಕಷ್ಟಕ್ಕೆ ನೂಕಿತು, ಅಣ್ಣಾ, ಈ ತಮ್ಮನನ್ನು ಕ್ಷಮಿಸಲಾರೆಯಾ? ನೀನು ಅಯೋಧ್ಯೆಗೆ ಮರಳಿ ಬರುತ್ತೇನೆ ಎಂದು ಮಾತು ಕೊಡುವವರೆಗೂ ನಿನ್ನ ಕಾಲು ಬಿಡುವುದಿಲ್ಲ’ ಎಂದು ಅಂಗಲಾಚಿದ.
ಮಾತಿನಲ್ಲಿ ನಾಟಕೀಯತೆಯ ಲವಲೇಶವೂ ಇಲ್ಲ.
ಒಂದೊಂದೂ ಹೃದಯದಿಂದ ಚಿಮ್ಮಿದ ಮಾತುಗಳು. ಅದೆಂಥ ಆದ್ರìತೆ! ಇತ್ತ ಅಣ್ಣ, ಅಪ್ಪನ ಮಾತು ಉಳಿಸಲು ರಾಜ್ಯ ಬಿಟ್ಟು ಬಂದಿದ್ದರೆ; ಅತ್ತ ತಮ್ಮ, ಅಪ್ಪ ಕೈಯಾರೆ ಕೊಟ್ಟ ರಾಜ್ಯವನ್ನು ಎಡಗಾಲಿನಿಂದ ಒದ್ದು ಕಾಡಿಗೆ ಓಡಿಬಂದಿದ್ದ. ಭರತನಂಥ ಭರತನಿಗೆ ಮಾತ್ರ ಇದು ಸಾಧ್ಯ! ಅದಿರಲಿ, ರಾಜ್ಯ ಪಡೆದ ಭರತನೇ ಬಂದು ಕಾಲು ಹಿಡಿದುಕೊಂಡು, ನೀನೇ ರಾಜ್ಯ ಒಪ್ಪಿಸಿಕೋ ಅಂದರೂ ಒಪ್ಪದ ಈ ಅಣ್ಣ ರಾಮ. ತ್ಯಾಗದಲ್ಲಿ ರಾಮ ಹೆಚ್ಚೋ, ಭರತ ಹೆಚ್ಚೋ? ನಾ ಬರಲಾರೆ, ನಾ ಬಿಡಲಾರೆ.
ಈ ಬರೆ, ಬಿಡೆ ಎಲ್ಲಿವರೆಗೆ ಬಂತು ಗೊತ್ತೆ? ಭರತ ನಮ್ಮ ಆಶ್ರಮದ ಬಾಗಿಲಲ್ಲಿ ದಭೆì ಹಾಸಿ ಧರಣಿಗಿಳಿದ. ಬಹುಶಃ ಸತ್ಯಾಗ್ರಹ, ಧರಣಿ ಪ್ರಪಂಚದಲ್ಲೇ ಮೊದಲು ನಡೆದದ್ದು ಚಿತ್ರಕೂಟದ ಕಾಡಿನಲ್ಲಿರಬೇಕು! ಕೊನೆಗೆ ರಾಮ ಹೇಳಿದ: “ನೋಡು ತಮ್ಮಾ, ನಾನು ವನವಾಸ ಮಾಡಿ ಅಪ್ಪನ ಮಾತು ಉಳಿಸಬೇಕು. ನೀನೂ ರಾಜ್ಯವಾಸ ಮಾಡಿ ಅಪ್ಪನ ಮಾತು ಉಳಿಸಬೇಕು. ನಮ್ಮಬ್ಬರಿಗೂ ಇದು ಸಮಾನ ಹೊಣೆಗಾರಿಕೆ. ಹೊಣೆಗಾರಿಕೆಯ ನಿರ್ವಹಣೆಯೇ ನಿಜವಾದ ಧರ್ಮ. ಅತಿಯಾದ ಪ್ರೀತಿ ಕರ್ತವ್ಯಕ್ಕೆ ಬಾಧಕ. ನೀನು ಪ್ರಾಜ್ಞನಿದ್ದೀಯ’.
“ಸಮಗ್ರ ನಾಡೂ, ಕಾಡೂ ಕೋಸಲದ್ದೇ. ಎಲ್ಲವೂ ಇûಾÌಕುಗಳಿಗೇ ಸೇರಿದ್ದು. ಹದಿನಾಲ್ಕು ವರ್ಷ ನಾನು ಕಾಡಿಗೆ ರಾಜನಾಗಿರ್ತೇನೆ, ನೀನು ನಾಡಿಗೆ ರಾಜನಾಗಿರು. ನೀನೂ ರಾಜ, ನಾನೂ ರಾಜ! ಕಾಡೂ ಉಳಿಯಲಿ, ನಾಡೂ ಉಳಿಯಲಿ. ಇಲ್ಲಿ ಕಾಡಿನ ಸಜ್ಜನರಿಗೆ ನನ್ನಿಂದ ರಕ್ಷಣೆ, ಅಲ್ಲಿ ನಾಡಿನ ಪ್ರಜೆಗಳಿಗೆ ನಿನ್ನಿಂದ ರಕ್ಷಣೆ. ನೀನು ಇದನ್ನು ಒಪ್ಪಲೇಬೇಕು’. ಅಂತೂ ಭರತ ವಾಸ್ತವಕ್ಕೆ ಬಂದ. ತಾನು ತಂದಿದ್ದ ಚಿನ್ನದ ಪಾದುಕೆಗಳನ್ನು ರಾಮನ ಮುಂದಿಟ್ಟ. “ಅಣ್ಣಾ, ಈ ಪಾದುಕೆಗಳ ಮೇಲೆ ನಿನ್ನ ಪಾದಗಳನ್ನಿಡು’ ಎಂದ.
ರಾಮ ಹಾಗೆ ಮಾಡಿದ. “ಇವು ಪಾದುಕೆಗಳಲ್ಲ, ನಿನ್ನ ನಿಜಪಾದಗಳು. ಮುಂದೆ ಹದಿನಾಲ್ಕು ವರ್ಷ ಈ ಪಾದುಕೆಗಳೇ (ಪಾದಗಳೇ) ರಾಜ್ಯವಾಳುತ್ತವೆ. ನಾನು ಆಳಾಗಿ ಮಾತ್ರ ಇರುತ್ತೇನೆ. ಪಾದಗಳು ತೋರಿಸಿದ್ದನ್ನು ಶಿರದಲ್ಲಿ ಹೊತ್ತು ಮಾಡುತ್ತೇನೆ. ಇಡೀ ರಾಜ್ಯ ನಿನ್ನ ಇಡುಗಂಟು (ನ್ಯಾಸ). ಅದನ್ನು ರಕ್ಷಿಸುವ ನಂಟು ಮಾತ್ರ ನನ್ನದು’. “ಆದರೆ, ಒಂದು ಮಾತು: 14 ವರ್ಷ ಕಳೆದ ದಿನ ನೀ ಅಯೋಧ್ಯೆಗೆ ಬರದಿದ್ದರೆ, ಈ ತಮ್ಮನನ್ನು ಮತ್ತೆ ಈ ಜಗತ್ತಿನಲ್ಲಿ ನೋಡಲಾರೆ. ಬರುತ್ತೇನೆಂದು ಭಾಷೆ ಕೊಡು’ ಎಂದ. ರಾಮ, “ತಥಾಸ್ತು’ ಅಂದ.
ಭರತ ಪಾದುಕೆಗಳನ್ನು ತಲೆಯ ಮೇಲೆ ಹೊತ್ತ. ಮುಂದೆ ಅಂಬಾರಿಸಹಿತವಾದ ಆನೆ ಮೇಲಿಟ್ಟ. ಭವ್ಯ ಮೆರವಣಿಗೆಯೊಂದಿಗೆ ಹೊರಟ. ನಿಜಕ್ಕೂ ಆ ದೃಶ್ಯ ನನ್ನ ಕಂಗಳನ್ನು ತುಂಬುವಂತೆ ಮಾಡಿತು. ಹಾಗೆಯೇ, ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ರಾಮ ಭರತನಿಗೆ ಕೂಗಿ ಹೇಳಿದ್ದು ಮನಸ್ಸನ್ನೂ ತುಂಬಿತು.ಇದೇ ಸಂದರ್ಭದಲ್ಲಿ ಇನ್ನೊಂದು ಅಂಶ ನಾನು ಗಮನಿಸಿದ್ದು… ಅಯೋಧ್ಯೆಯಿಂದ ಬಂದಿದ್ದ ಕೈಕೇಯಿ ಅತ್ತೆಯ ಮನಸ್ಸಿನಲ್ಲೂ, ರಾಮ ಮರಳಿ ಅಯೋಧ್ಯೆಗೆ ಬರಲಿ ಎಂಬ ಅಭಿಪ್ರಾಯವಿದ್ದಂತೆ ತೋರಿತು!
ಚರಿತ್ರೆಯಲ್ಲಿ ತ್ಯಾಗಕ್ಕೆ, ನಿಸ್ಪೃಹತೆಗೆ ನಿಜವಾದ ಮೌಲ್ಯ ಒದಗಿದ್ದಿದ್ದರೆ ಈ ಇಬ್ಬರಿಂದಲೇ ಇರಬೇಕು. ಜಗತ್ತಿನಲ್ಲಿ ಹಣ, ಅಧಿಕಾರ ಬೇಕು ಬೇಕು ಎಂದು ಬೇಕಾದಷ್ಟು ಜಗಳವಾಗುತ್ತೆ, ಬೇಡ ಬೇಡ ಎಂದು ಜಗಳವಾಡುವುದನ್ನು ಹೇಗೆ ವಿಶ್ಲೇಷಿಸುವುದು? ಧರಣಿಯೊಳೀಪರಿ ಜೋಡಿಯುಂಟೇ! ಸೋಜಿಗವುಂಟೇ ಎಂದು ಜೋರಾಗಿ ಹಾಡಿಬಿಡಲೇ? ಎನ್ನಿಸಿತು. ಕಾಡುದಾರಿಯಲ್ಲಿ ಮುಂದೆ ಮುಂದೆ ಸಾಗತೊಡಗಿದೆವು. ಈಗ ಇನ್ನೊಂದು ಅಚ್ಚರಿ ಎದುರಾಯಿತು.
* ಸಿ.ಎ. ಭಾಸ್ಕರ ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.