ರಸಪೂರಿ ಚೆಲುವು
Team Udayavani, Mar 28, 2018, 3:43 PM IST
ಸಿಪ್ಪೆ ಸುಲಿದು ಕತ್ತರಿಸಿದರೆ ಸವಿಯಾದ ಹೋಳು, ಏಲಕ್ಕಿ- ಸಕ್ಕರೆ- ಹಾಲು ಸೇರಿಸಿದರೆ ರಸಾಯನ, ಮಿಕ್ಸಿಗೆ ಹಾಕಿದರೆ ತಣ್ಣನೆಯ ಜ್ಯೂಸು… ಹೀಗೆ ಮಾವಿನ ಉಪಯೋಗಗಳು ಅನೇಕ. ಅಬ್ಟಾ, ಅಂತೂ ಮಾವಿನ ಸೀಸನ್ ಬಂತಲ್ಲ ಅಂತ ಮಾವುಪ್ರಿಯರು ಸಂಭ್ರಮಿಸುತ್ತಿದ್ದಾರೆ. ವಿವಿಧ ಜಾತಿಯ, ರುಚಿಯ, ವಾಸನೆಯ ಮಾವುಗಳು ಕೇವಲ ತಿನ್ನಲಷ್ಟೇ ಅಲ್ಲ, ಫೇಸ್‌ಪ್ಯಾಕ್ ಆಗಿಯೂ ಚರ್ಮಕ್ಕೆ ತಂಪು ತಂಪು. ಮಾವಿನ ಕೆಲವು ಫೇಸ್‌ಪ್ಯಾಕ್ ಇಲ್ಲಿವೆ…
1. ಮಾವು- ಮುಲ್ತಾನಿ ಮಿಟ್ಟಿ
ಚೆನ್ನಾಗಿ ಹಣ್ಣಾದ ಮಾವಿನ ಸಿಪ್ಪೆ ಸುಲಿದು ಅದರ ತಿರುಳಿಗೆ 2-3 ಚಮಚ ಮುಲ್ತಾನಿಮಿಟ್ಟಿ ಸೇರಿಸಿ ಚೆನ್ನಾಗಿ ಕಲೆಸಿ. ಟೂತ್‌ಪೇಸ್ಟಿನ ಹದಕ್ಕೆ ಬಂದ ಮೇಲೆ ಅದನ್ನು ಮುಖಕ್ಕೆ ಹಚ್ಚಿ. ಇತರೆ ಫೇಸ್‌ಪ್ಯಾಕ್‌ಗಳಂತೆ ಇದು ಸುಲಭದಲ್ಲಿ ಒಣಗುವುದಿಲ್ಲ. 15 ನಿಮಿಷದ ನಂತರ ವೃತ್ತಾಕಾರವಾಗಿ ಮಸಾಜ್ ಮಾಡುತ್ತಾ ತಣ್ಣೀರಿನಿಂದ ಮುಖ ತೊಳೆಯಿರಿ. ಮುಖದ ಚರ್ಮ ಮೃದುವಾಗುವುದಲ್ಲದೆ, ಸಾಕಷ್ಟು ತೇವಾಂಶವೂ ಸಿಗುತ್ತದೆ.
2. ಮಾವು- ಬಾದಾಮಿ- ಹಾಲು
ಮಧ್ಯಮ ಗಾತ್ರದ ಮಾವಿನ ಹಣ್ಣಿನ ತಿರುಳಿಗೆ, 8-9 ಬಾದಾಮಿ ಅರೆದು ಅದರ ಪೇಸ್ಟ್ ಅನ್ನು ಸೇರಿಸಿ. ಅದಕ್ಕೆ 2 ಚಮಚ ಹಾಲು, 2-3 ಚಮಚ ಓಟ್ಸ್, 3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಅರೆದು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆಯಿರಿ. ಈ ಫೇಸ್‌ಪ್ಯಾಕ್ ಅನ್ನು ಎಲ್ಲ ರೀತಿಯ ಚರ್ಮದವರೂ ವಾರಕ್ಕೊಮ್ಮೆ ಬಳಸಬಹುದು.
3. ಮಾವು- ಮೊಸರು- ರೋಸ್ ವಾಟರ್
ಗಳಿತ ಮಾವಿನ ತಿರುಳಿಗೆ 3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ. ಅದಕ್ಕೆ 1 ಚಮಚ ಮೊಸರು, 1 ಚಮಚ ರೋಸ್ ವಾಟರ್ ಸೇರಿಸಿ ನುಣ್ಣಗಿ ಪೇಸ್ಟ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖವನ್ನು ಸðಬ್ ಮಾಡಿ ತೊಳೆಯಿರಿ. ರೋಸ್ ವಾಟರ್ ಬಳಸುವುದರಿಂದ ಈ ಫೇಸ್ ಪ್ಯಾಕ್ ಸೂಕ್ಷ್ಮ ಚರ್ಮದವರಿಗೂ ಹೊಂದುತ್ತದೆ.
4. ಮಾವು- ಕಡಲೆಹಿಟ್ಟು
ಮಾವಿನ ಹಣ್ಣಿನ ತಿರುಳಿಗೆ ನಾಲ್ಕು ಚಮಚ ಕಡಲೆಹಿಟ್ಟು, ಬಾದಾಮಿ ಪುಡಿ, 1 ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಬಿಸಿಲಿಗೆ ಕಪ್ಪಾದ ಕುತ್ತಿಗೆ, ಮುಖ, ಕೈಗೆಲ್ಲ ಪೇಸ್ಟ್ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಬಿಸಿಲಿನಿಂದ ಕಪ್ಪಾದ ಚಮರ್ಚ ಸಹಜ ಬಣ್ಣಕ್ಕೆ ತಿರುಗುತ್ತದೆ.
5. ಮಾವು- ಬ್ರೌನ್ ಶುಗರ್
ಮಾವಿನ ತಿರುಳಿಗೆ 2 ಚಮಚ ಹಸಿ ಹಾಲು, ಜೇನುತುಪ್ಪ, ಅರ್ಧ ಕಪ್ ಬ್ರೌನ್ ಶುಗರ್ ಸೇರಿಸಿ (ಸತ್ತ ಚರ್ಮಗಳನ್ನು ತೆಗೆಯಲು ಬ್ರೌನ್ ಶುಗರ್ ಸಹಕಾರಿ) ಚೆನ್ನಾಗಿ ಮಿಕ್ಸ್ ಮಾಡಿ. ಆ ಪೇಸ್ಟ್ ಅನ್ನು ಮೈಗೆಲ್ಲಾ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಅರೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.