ಇವರೇ “ರಿಯಲ್ ಹೀರೋ’!
Team Udayavani, Dec 11, 2019, 5:23 AM IST
ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ ಹಿಂದೆ ಕುಳಿತವನು ಮೈ ಮುಟ್ಟಿದರೆ… ಹೀಗೆ ಭಯದಲ್ಲಿಯೇ ಆಕೆ ಪ್ರಯಾಣ ಮಾಡಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ, ಕತ್ತಲ ರಾತ್ರಿಯಲ್ಲಿ “ಹೆದರಬೇಡ ಮಗಳೇ’ ಎಂದು ಭದ್ರತೆ ಮೂಡಿಸುವವರೂ ಇದ್ದಾರೆ ಅಂತ ಹೇಳಿದರೆ ಅಚ್ಚರಿಯಾಗುತ್ತದೆ. ಅಂಥ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.
ಎಲ್ಸಿನಾ ಎಂಬ ಯುವತಿ (ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿನಿ) ಎರ್ನಾಕುಲಂ- ಮಧುರೈ ಬಸ್‌ನಲ್ಲಿ ಪೋಡಿಯಟ್ಟಂ ಎಂಬಲ್ಲಿಗೆ ಹೊರಟಿದ್ದಳು. ಆಕೆ ಕಂಜರಪಲ್ಲಿ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಬಸ್ಸು ಅಲ್ಲಿಗೆ ಹತ್ತು ನಿಮಿಷ ಮುಂಚಿತವಾಗೇ ತಲುಪಿತು. ಎಲ್ಸಿನಾಳನ್ನು ಕರೆದೊಯ್ಯಲು ಬರಬೇಕಾದವರು, ಇನ್ನೂ ಬಂದಿರಲಿಲ್ಲ. ಆಗ ಸಮಯ ರಾತ್ರಿ 11 ಗಂಟೆ. ನಿಲ್ದಾಣ ನಿರ್ಜನವಾಗಿತ್ತು. ಬಂದ್‌ನ ಕಾರಣದಿಂದ ಎಲ್ಲ ಅಂಗಡಿಗಳ ಬಾಗಿಲುಗಳು ಮುಚ್ಚಿದ್ದವು. ಬಸ್ ನಿರ್ವಾಹಕ ಪಿ. ಶಜುದ್ದೀನ್‌ಗೆ, ಆಕೆಯೊಬ್ಬಳನ್ನೇ ಅಲ್ಲಿ ಇಳಿಸಿ ಹೋಗುವುದು ಸರಿಯಲ್ಲ ಅನ್ನಿಸಿತು. ತಕ್ಷಣ, ಚಾಲಕ ಡೆನ್ನಿಸ್ ಕ್ಸೇವಿಯರ್‌ಗೆ ವಿಷಯ ತಿಳಿಸಿ, ಬಸ್ ನಿಲ್ಲಿಸಲು ಹೇಳಿದರು. ಆಕೆಯ ಸಂಬಂಧಿಕರು ಬರುವವರೆಗೂ ಬಸ್ ನಿಲ್ಲಿಸುತ್ತೇವೆ ಅಂತ ಡೆನಿಸ್ ಹೇಳಿದಾಗ, ಪ್ರಯಾಣಿಕರ್ಯಾರೂ ತಕರಾರು ಎತ್ತಲಿಲ್ಲ. ಹದಿನೈದು ನಿಮಿಷಗಳ ನಂತರ ಎಲ್ಸಿನಾಳ ಸಂಬಂಧಿ ಬಂದರು. ಅಲ್ಲಿಯವರೆಗೂ ಆಕೆಗೆ ಕಾವಲಾಗಿ ಇಡೀ ಬಸ್ಸು ನಿಂತಿತ್ತು. ಕೇರಳ ಬಸ್ ಸಾರಿಗೆ ಸಿಬ್ಬಂದಿಯ ಈ ನಡೆ ಎಲ್ಲರಿಗೂ ಮಾದರಿಯಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.