ನೆಂಟರು ಬರುತಾರೆ!
Team Udayavani, Nov 1, 2017, 12:10 PM IST
ಮನೆಗೆ ಅತಿಥಿಗಳು ಬರುತ್ತಿದ್ದಾರೆ ಎಂದರೆ ಸಾಕು, ಮನೆಯೊಡತಿಯ ಕಿವಿ, ಕೈಕಾಲುಗಳು ಎಚ್ಚರವಾಗಿಬಿಡುತ್ತವೆ. ಮನೆ, ಮನೆಯವರ ಕುರಿತು ಬಹಳಷ್ಟು ಸಂಗತಿಗಳನ್ನು ಹೇಳಬಲ್ಲುದು. ಅದಕ್ಕೇ ಬಂದವರೆದುರು ಮನೆಯ ಮತ್ತು ಮನೆಯವರ ಗೌರವ ಕಾಪಾಡಿಕೊಳ್ಳಲು ಮನೆಯೊಡತಿ ನಾನಾ ಪಡಿಪಾಟಲುಗಳನ್ನು ಪಡುತ್ತಾಳೆ.
ಮನೆಯ ನೆಲ ಗುಡಿಸಲ್ಪಡುತ್ತೆ, ಒರೆಸಲ್ಪಡುತ್ತೆ, ಶೋಕೇಸು ಫಳಫಳ ಹೊಳೆಯಲ್ಪಡುತ್ತೆ. ಬಾಕ್ಸ್‌ನಿಂದ ಹೊರತೆಗೆಯದೆ ವರ್ಷಗಳೇ ಆಗಿಹೋದ ಹೊಚ್ಚ ಹೊಸ ಗಾಜಿನ ಲೋಟ, ಟ್ರೇಗಳಿಗೆ ಮುಕ್ತಿ ದೊರೆಯುತ್ತದೆ. ಇಷ್ಟು ಮಾಡಿದರೆ ಸಾಕೇ? ಊಹುಂ! ಮನೆಗೆ ಬಂದ ಅತಿಥಿಗಳ ಕಣ್ಣು ಮೊದಲು ಯಾವ ಯಾವ ವಸ್ತುಗಳ ಮೇಲೆ ಬೀಳುತ್ತೆ, ಅವರ ಕಣ್ಣಲ್ಲಿ “ಗುಡ್’ ಅನ್ನಿಸಿಕೊಳ್ಳಲು ಏನು ಮಾಡಬೇಕು ಎನ್ನುವುದರ ಪಟ್ಟಿ ಇಲ್ಲಿದೆ…
ಕೋಟ್ ರ್ಯಾಕ್: ಕೋಟ್ ರ್ಯಾಕ್‌ನಲ್ಲಿ ಎಷ್ಟು ಹುಕ್‌ಗಳಿದ್ದರೂ ಬಹಳ ಬೇಗನೇ ಫುಲ್ ಆಗಿಬಿಡುತ್ತದೆ. ಹಾಗೆ ಭರ್ತಿಯಾದ ಮೇಲೂ ಕೆಲವರು ಒಂದರ ಮೇಲೊಂದರಂತೆ ಬಟ್ಟೆಗಳನ್ನು ನೇತುಹಾಕುತ್ತಾರೆ. ಹೀಗೆಲ್ಲಾ ಮಾಡಿದರೆ ಅದು ನೋಡಲು ಚೆನ್ನಾಗಿಯೂ ಕಾಣದು. ಅಲ್ಲದೇ, ಡ್ರೆಸ್‌ಗಳ ಬಗ್ಗೆ ನಿಮ್ಮ ಟೇಸ್ಟ್ ಎಂಥದ್ದು ಎಂಬುದೂ ಅತಿಥಿಗಳಿಗೆ ಗೊತ್ತಾಗುತ್ತದೆ. ಹಾಗಾಗಿ, ಕೋಟ್ ರ್ಯಾಕ್ ಅನ್ನು ನೀಟಾಗಿ ಇಡಿ.
ಚಪ್ಪಲಿ ಸ್ಟಾಂಡ್: ಮನೆಯ ಒಳಗೆ ಬರುತ್ತಿದ್ದಂತೆಯೇ ಮೊದಲು ಕಾಣಿಸೋದು ಚಪ್ಪಲಿ ಸ್ಟಾಂಡ್. ಕೆಸರಾಗಿರುವ ಚಪ್ಪಲಿ, ವಾಸನೆ ಬರುತ್ತಿರುವ ಶೂ-ಸಾಕ್ಸ್‌ಗಳನ್ನು ನೋಡಿ ಅತಿಥಿಗಳು ಮುಖ ಕಿವುಚದೇ ಇರಲಿ.
ಗೋಡೆ ಮೇಲಿನ ಫೋಟೊ ಫ್ರೆಮುಗಳು: ಅತಿಥಿಗಳು ಆಸೀನರಾಗಿ ಮೊದಲು ಹಾಲ್ ಸುತ್ತ ಕಣ್ಣು ಹಾಯಿಸುತ್ತಾರೆ. ಆಗ ಅವರು ನೋಡೋದೇ ಗೋಡೆಯ ಮೇಲೆ, ಶೋಕೇಸಲ್ಲಿಟ್ಟ ಫೋಟೋ ಫ್ರೆಮುಗಳನ್ನು. ಈ ಫೋಟೋಗಳನ್ನು ನೋಡಿಯೇ ಅತಿಥಿಗಳು ಮನೆ ಮಾಲೀಕರ ವ್ಯಕ್ತಿತ್ವವನ್ನು, ಸೃಜನಶೀಲತೆಯನ್ನು ಅಳೆಯುತ್ತಾರೆ ಎನ್ನುತ್ತದೆ ಒಂದು ಸಮೀಕ್ಷೆ.
ಟೀಪಾಯಿ ಮೇಲಿನ ಮ್ಯಾಗಜಿನ್, ಪತ್ರಿಕೆಗಳು: ನೀವು ಹತ್ತಾರು ಪತ್ರಿಕೆ, ಮ್ಯಾಗಜಿನ್‌ಗಳಿಗೆ ಚಂದಾದಾರರಿರಬಹುದು. ಹಾಗಂತ ಎಲ್ಲವನ್ನೂ ಟೀಪಾಯಿ ಮೇಲೆ ಇಟ್ಟು, ಪ್ರದರ್ಶಿಸುವ ಅಗತ್ಯವೇನೂ ಇಲ್ಲ. ಅಲ್ಲಿ ಹಳೆಯ ಪತ್ರಿಕೆ ಅಥವಾ ಮ್ಯಾಗಝಿನ್‌ಗಳನ್ನು ಇಡದಿರಿ. ಇದರಿಂದ ನೀವು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುವವರಲ್ಲ ಎಂದು ಅತಿಥಿಗಳು ಭಾವಿಸುವ ಅಪಾಯವಿದೆ.
ಬುಕ್ ಶೆಲ್ಫ್: ಕಾಫಿ ತಿಂಡಿ ಸ್ವೀಕರಿಸಿದ ನಂತರ ಅತಿಥಿಗಳು ಮನೆಯೊಳಗೊಂದು ಟೂರ್ ಬರುವ ಸಾಧ್ಯತೆ ತುಂಬಾ ಇರುತ್ತದೆ. ಆ ಸಂದರ್ಭದಲ್ಲಿ ಅವರನ್ನು ಗಮನ ಸೆಳೆಯುವ ವಸ್ತು ಬುಕ್ ಶೆಲ್ಫ್. ಅಲ್ಲಿ ಎಷ್ಟು ಪುಸ್ತಕಗಳಿವೆ, ಯಾವ ರೀತಿಯ ಪುಸ್ತಕಗಳಿವೆ ಎಂಬಿತ್ಯಾದಿ ವಿಚಾರಗಳ ಕುರಿತು ಅತಿಥಿಗಳು ಕುತೂಹಲಿಗಳಾಗಿರುತ್ತಾರೆ. ಪುಸ್ತಕಗಳೂ ವ್ಯಕ್ತಿಗಳ ಮನಃಸ್ಥಿತಿಯನ್ನು ಹೇಳಬಲ್ಲುದು ಎಂಬುದು ನೆನಪಿರಲಿ. ಜೊತೆಗೆ ಅಸ್ತವ್ಯಸ್ತವಾಗಿ ಬಿದ್ದಿರುವ ಹತ್ತಾರು ಪುಸ್ತಕಗಳು ನಿಮ್ಮ ಘನತೆಯನ್ನು ಹೆಚ್ಚಿಸುವ ಬದಲು, ಕುಗ್ಗಿಸುತ್ತವೆ.
ಅಡುಗೆ ಮನೆ ಶೆಲ್ಫ್: ಕಿಚನ್ ಶೆಲ್ಫ್/ ಕಟ್ಟೆಯ ಮೇಲೆ ತರಕಾರಿಗಳನ್ನು, ಅಡುಗೆ ಪದಾರ್ಥಗಳನ್ನು ಹರಡಿಕೊಂಡಿರುವುದು ಒಳ್ಳೆಯ ಲಕ್ಷಣವಲ್ಲ. ಇದರಿಂದ ಅಡುಗೆಮನೆಯಲ್ಲಿ ನೊಣ, ಸೊಳ್ಳೆಗಳು ಸೇರಿಕೊಳ್ಳುತ್ತವೆ. ವಾಸನೆಗೂ ಇದು ಕಾರಣವಾಗಬಹುದು. ಮನೆಯೊಡತಿಯ ಕೈಯಡುಗೆ ಎಷ್ಟು ರುಚಿಯೋ, ಅಡುಗೆಮನೆಯ ಶುಚಿತ್ವವೂ ಅಷ್ಟೇ ಮುಖ್ಯ.
ಕಸದ ಬುಟ್ಟಿ: ಮೂಲೆಯಲ್ಲಿದ್ದರೂ ಕಸದಬುಟ್ಟಿಗಳತ್ತ ಎಲ್ಲರ ಗಮನ ಹರಿಯುವುದು ಸಹಜ. ಪ್ರತಿದಿನವೂ ಡಸ್ಟ್‌ಬಿನ್‌ಗಳನ್ನು ಖಾಲಿ ಮಾಡಿ, ತೊಳೆದಿಡಿ. ತುಂಬಿದ, ತೆರೆದಿಟ್ಟ ಕಸದಬುಟ್ಟಿ ಅಸಹ್ಯ ಹುಟ್ಟಿಸುತ್ತದೆ. ಮುಚ್ಚಳವಿರುವ, ಕ್ಲೋಸ್ ಮಾಡಬಹುದಾದ ಕಸದಬುಟ್ಟಿಗಳನ್ನೇ ಬಳಸಿ.
ಹಾಸಿಗೆ: ಮನೆಗೆ ಬಂದವರು ಬೆಡ್‌ರೂಮು ಎಷ್ಟು ದೊಡ್ಡದಿದೆಯೆಂದು ಖಂಡಿತವಾಗಿಯೂ ಕಣ್ಣು ಹಾಯಿಸುತ್ತಾರೆ. ಆ ಸಮಯದಲ್ಲಿ ಹಾಸಿಗೆಯ ಮೇಲೆ ಹಳೆಯ ಅಂಗಿಯೋ, ಹಸಿ ಟವೆಲ್ಲೋ ಕಂಡುಬಂದರೆ ಮನಸೊÕಳಗೇ ನಕ್ಕು ನಿಮ್ಮ ಕುರಿತು ಹಾಸ್ಯಾಸ್ಪದ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆದ್ದರಿಂದ ಹಾಸಿಗೆಯ ಮೇಲೆ ಬಳಸಿದ ಬಟ್ಟೆ, ಒದ್ದೆ ಟವೆಲ್, ಯಾವುದೋ ಚೀಟಿ ಎಸೆಯುವ ಅಭ್ಯಾಸದಿಂದ ದೂರವಿರಿ. ನಾವು ವಿಶ್ರಾಂತಿ ಪಡೆಯುವ ಜಾಗ ಸ್ವತ್ಛವಾಗಿ, ಪ್ರಶಾಂತವಾಗಿ ಇದ್ದರೆ ಚೆನ್ನ.
ಸ್ನಾನದ ಮನೆಯ ತಂತಿ: ಕೆಲವು ಮನೆಗಳ ಸ್ನಾನದ ಮನೆಯಲ್ಲಿ ತಂತಿಗಳ ಮೇಲೆ ಅಥವಾ ಎಲ್ಲೆಂದರಲ್ಲಿ ಉಡುಪುಗಳನ್ನು ಶೇಖರಿಸಿ ಗುಡ್ಡೆ ಮಾಡಿರುತ್ತಾರೆ. ಮನೆಯೆಲ್ಲಾ ಚೆನ್ನಾಗಿದ್ದು, ಒಪ್ಪ ಓರಣದಿಂದ ಕೂಡಿದ್ದರೂ ಸ್ನಾನದ ಮನೆಯ ತಂತಿಯೊಂದು ಹಳೆಬಟ್ಟೆಗಳಿಂದ ತುಂಬಿಕೊಂಡಿದ್ದರೆ ಸಾಕು ಮನೆಯ ಅಂದ, ಗೌರವ ಕೆಡಿಸಲು. ಅಷ್ಟೇ ಅಲ್ಲ, ಖಾಲಿ ಶಾಂಪೂ, ಹಳೇ ಸೋಪ್, ಬ್ರಶ್‌ಗಳನ್ನು ಬಾತ್‌ರೂಮ್‌ನ ಕಟ್ಟೆಯ ಮೇಲೆ ಇಡಬೇಡಿ. ಎಕ್ಸ್‌ಪೈರ್ಡ್ ಆದ ಕಾಸ್ಮೆಟಿಕ್ಸ್ ಡಬ್ಬಿಗಳನ್ನು ತೆಗೆದು ಬಾತ್‌ರೂಮ್‌ನ್ನು ಸ್ವತ್ಛವಾಗಿಡಿ.
ಆಟಿಕೆಗಳು: ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಆಟಿಕೆಗಳು ನೆಲದಲ್ಲಿ ಎಸೆಯಲ್ಪಟ್ಟಿರುವುದು ಸಾಮಾನ್ಯ ವಿಷಯ. ಆದರೂ ನಿಮ್ಮ ಮನೆ ಆಟಿಕೆಗಳ ಫ್ಯಾಕ್ಟರಿಯಂತೆ ಕಾಣಿಸದಿದ್ದರೆ ಒಳ್ಳೆಯದು. ಮಕ್ಕಳ ಆಟ ಮುಗಿದ ಮೇಲೆ ಅವುಗಳನ್ನು ಒಂದೆಡೆ ಎತ್ತಿಡಿ.
* ಪ್ರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.