ಶೀತಕ್ಕೆ ಆರಾಮ ಸಿಗಲು…
Team Udayavani, Dec 11, 2019, 4:09 AM IST
ಶೀತ, ಕೆಮ್ಮು ಇದ್ದಾಗ ಏನೇನು ಮಾಡಬೇಕು ಅಂತೆಲ್ಲಾ ಗೊತ್ತೇ ಇದೆ. ಕಷಾಯ ಕುಡಿಯಬೇಕು, ದೇಹವನ್ನು ಬೆಚ್ಚಗಿಡಬೇಕು ಇತ್ಯಾದಿ. ಆದರೆ, ಏನೇನೆಲ್ಲಾ ತಿನ್ನಬಾರದು ಅಂತ ಗೊತ್ತಿದೆಯಾ?
– ದೇಹದಲ್ಲಿ ಕಫ ಹೆಚ್ಚಾಗುವಂತೆ ಮಾಡುವ ಮೊಸರು, ಯೋಗರ್ಟ್‌ನಿಂದ ದೂರವಿರಿ.
– ಶೀತ- ಜ್ವರ ಇದ್ದಾಗ ನೀರು ಕುಡಿಯುತ್ತಾ ಇರಬೇಕು. ಆದರೆ, ಹಣ್ಣಿನ ರಸ ಸೇವಿಸುವುದು ಒಳ್ಳೆಯದಲ್ಲ. ಜ್ಯೂಸ್‌ನಲ್ಲಿರುವ ಸಕ್ಕರೆ ಅಂಶವು, ರೋಗದ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳ ಕ್ಷಮತೆಯನ್ನು ಕಡಿಮೆ ಮಾಡುತ್ತದೆ.
– ಶೀತವಿದ್ದಾಗ ನಾಲಗೆ ಜಡ್ಡುಗಟ್ಟಿ ಕುರುಕಲು ತಿಂಡಿಗಳನ್ನು ತಿನ್ನೋಣ ಅನ್ನಿಸೋದು ಸಹಜ. ಹಾಗೇನಾದ್ರೂ ನಾಲಗೆಯ ಮಾತು ಕೇಳಿದಿರೋ, ಕೆಮ್ಮು ಹೆಚ್ಚಾಗೋದು ಖಂಡಿತ.
– ನೆಗಡಿಯಿದ್ದಾಗ ಆದಷ್ಟು ಸಪ್ಪೆ ಇರುವ ಆಹಾರ ಸೇವಿಸಿ.
– ಶೀತ-ತಲೆನೋವಿಗೆ ಕಾಫಿ ರಾಮಬಾಣ ಅನ್ನುವ ಮಾತಿದೆ. ಆದರೆ, ಕಾಫಿ ಕುಡಿಯುವುದರಿಂದ ಗಂಟಲು ಒಣಗಿ, ಕೆಮ್ಮು ಹೆಚ್ಚಾಗುವ ಸಂಭವವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.