ಅನ್ನ ಕೊಟ್ಟ ಅವಲಕ್ಕಿ!


Team Udayavani, Feb 19, 2020, 5:56 AM IST

skin-3

ಎಸ್ಸೆಸ್ಸೆಲ್ಸಿವರೆಗಷ್ಟೇ ಓದಿರುವ ಸುಬ್ಬಲಕ್ಷ್ಮಿ, ಕುಟುಂಬ ನಿರ್ವಹಣೆಗಾಗಿ ಅವಲಕ್ಕಿ ತಯಾರಿಸಿ ಮಾರಲು ಆರಂಭಿಸಿದರು. ಅದೀಗ, ಒಂದು ಫ್ಯಾಕ್ಟರಿಯಾಗಿ ಬೆಳೆದಿದೆ…

ಅಕ್ಕಿ ಮಿಲ್‌, ಹಿಟ್ಟಿನ ಗಿರಣಿ ಅಥವಾ ಬೇರೆ ಯಾವುದೇ ಕಾರ್ಖಾನೆಯಿರಬಹುದು, ಅಲ್ಲಿ ಮಹಿಳೆಯರು ಕೆಲಸ ಮಾಡುತ್ತಿರಬಹುದು. ಆದರೆ, ಮಾಲೀಕರು ಮಾತ್ರ ಗಂಡಸರೇ. ಯಾಕಂದ್ರೆ, “ಹೆಂಗಸೊಬ್ಬಳು ಕಾರ್ಖಾನೆ ನಡೆಸೋದು ಸುಲಭದ ಮಾತಲ್ಲ’ ಎಂಬ ಅಭಿಪ್ರಾಯವಿದೆ. “ಸುಲಭವಲ್ಲ, ಹಾಗಂತ ಕಷ್ಟವೂ ಅಲ್ಲ’ ಅನ್ನುತ್ತಿದ್ದಾರೆ ಸುಬ್ಬಲಕ್ಷ್ಮಿ. ಇವರು,

ವಿಜಯಪುರದ ಇಂಡಿ ಬೈಪಾಸ್‌ ರಸ್ತೆಯಲ್ಲಿರುವ ಅವಲಕ್ಕಿ ಕಾರ್ಖಾನೆಯ ಮಾಲಕಿ. ದಿನಕ್ಕೆ 150 ಚೀಲ ಅವಲಕ್ಕಿ ಉತ್ಪಾದಿಸುವ ಈ ಕಾರ್ಖಾನೆಯಲ್ಲಿ, ಮಹಿಳೆಯರೇ ಅವಲಕ್ಕಿ ತಯಾರಿಸುವುದು ವಿಶೇಷ.

ಅನ್ನ ನೀಡಿದ ಅವಲಕ್ಕಿ
ಸುಬ್ಬಲಕ್ಷ್ಮಿ ಅವರು ಓದಿದ್ದು 10ನೇ ತರಗತಿ ಮಾತ್ರ. ಗಂಡನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಸ್ಥಿರವಾದಾಗ, ಅವರ ಜೀವನಕ್ಕೆ ದಾರಿ ತೋರಿಸಿದ್ದು ಅವಲಕ್ಕಿ ತಯಾರಿಕೆ. ಹತ್ತು ಸಾವಿರ ರೂ. ಬಂಡವಾಳ ಹಾಕಿ, ಅಗತ್ಯ ಸಾಮಗ್ರಿಗಳನ್ನು ಖರೀದಿಸಿ, ಚಿಕ್ಕ ಪ್ರಮಾಣದಲ್ಲಿ ಉತ್ಪಾದನೆ ಶುರುಮಾಡಿದರು. ಚಿಕ್ಕ ಚಿಕ್ಕ ಕಡಾಯಿಗಳಲ್ಲಿ ಮರಳಿನೊಂದಿಗೆ ಭತ್ತವನ್ನು ಹುರಿದು ಅವಲಕ್ಕಿ ತಯಾರಿಸತೊಡಗಿದರು. ನಂತರ, ಸ್ವತಃ ಮಾರುಕಟ್ಟೆಗೆ ತೆರಳಿ ಅವಲಕ್ಕಿ ಮಾರಾಟಕ್ಕೂ ಮುಂದಾದರು.

ಹತ್ತರಿಂದ ನೂರೈವತ್ತು !
ಉತ್ಪಾದನೆ, ಮಾರಾಟ; ಎರಡರಲ್ಲೂ ಸುಬ್ಬಲಕ್ಷ್ಮಿ ಅವರು ಪರಿಶ್ರಮಪಟ್ಟರು. ಪ್ರತಿಫ‌ಲವಾಗಿ, ಅವರ ವ್ಯಾಪಾರ ದಿನದಿನಕ್ಕೂ ಹೆಚ್ಚತೊಡಗಿತು. ಪ್ರಾರಂಭದಲ್ಲಿ 10 ಚೀಲದಷ್ಟು ಅವಲಕ್ಕಿ ತಯಾರಿಸುತ್ತಿದ್ದ ಸುಬ್ಬಲಕ್ಷ್ಮಿ, ನಂತರ ಇಬ್ಬರು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಅವಲಕ್ಕಿ ತಯಾರಿಸತೊಡಗಿದರು. 2001ರಲ್ಲಿ ಚಿಕ್ಕ ಬಂಡವಾಳದಲ್ಲಿ ಕಾರ್ಖಾನೆ ಪ್ರಾರಂಭವಾಯಿತು. ಈಗ ಸಹಕಾರಿ ಸಂಘಗಳಿಂದ 50 ಲಕ್ಷ ರೂ. ಬಂಡವಾಳದ ನೆರವಿನಿಂದ ರೋಸ್ಟರ್‌, ರೋಲರ್, ಗ್ರೈಂಡಿಂಗ್‌ ಉಪಕರಣಗಳು ಮತ್ತು ಇಂಡಸ್ಟ್ರಿಯಲ್‌ ಎರಿಯಾದಲ್ಲಿ ಒಂದು ಎಕರೆ ಭೂಮಿ ಖರೀದಿಸಿ ದೊಡ್ಡ ಮಟ್ಟ ತಲುಪಿದೆ. ಈಗ ದಿನಕ್ಕೆ 150 ಚೀಲಗಳಷ್ಟು ಅವಲಕ್ಕಿ ತಯಾರಿಸುತ್ತಿದ್ದಾರೆ.

ಅವಲಕ್ಕಿ ಮಾಡುವ ವಿಧಾನ
ಕೆಂಬಾವಿ, ಗಂಗಾವತಿ, ಬೆಳಗಾವಿ ಸುತ್ತಲಿನ ಊರುಗಳಿಂದ “”64-ಭತ್ತ” ಎಂಬ ದಪ್ಪ ಕಾಳಿನ ಭತ್ತ ಖರೀದಿಸುತ್ತಾರೆ. ನಂತರ, ನಿಗದಿತ ಉಷ್ಣಾಂಶದಲ್ಲಿ ಭತ್ತವನ್ನು ರಾತ್ರಿ ಇಡೀ ನೆನೆ ಹಾಕಿ, (ಕನಿಷ್ಠ 8 ಗಂಟೆ ಕಾಲ ಭತ್ತ ನೆನೆಯಬೇಕು) ಆಮೇಲೆ ಅದನ್ನು ರೋಸ್ಟರ್‌ನಲ್ಲಿ ಹುರಿದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಭತ್ತ ಮತ್ತು ರಾಗಿಯ ಅವಲಕ್ಕಿ (ಫ್ಲೇಕ್ಸ್‌) ತಯಾರಿಸುತ್ತಿದ್ದರು. ಈಗ ಜೋಳದ ಅವಲಕ್ಕಿ ತಯಾರಿಕೆಗೂ ಕೈ ಹಾಕಿದ್ದಾರೆ. ಈಗಾಗಲೇ, ಬೆಂಗಳೂರು ಮತ್ತು ತಂಜಾವೂರಿಗೆ ಜೋಳದ ಅವಲಕ್ಕಿಯ ಸ್ಯಾಂಪಲ್‌ ಅನ್ನೂ ಕಳಿಸಿದ್ದಾರೆ. ಒಂದು ಟನ್‌ ಅವಲಕ್ಕಿಯಿಂದ 15 ಸಾವಿರ ರೂ. ಲಾಭ ಪಡೆಯುವ ಸುಬ್ಬಲಕ್ಷ್ಮಿ, ಕಾರ್ಖಾನೆಯಲ್ಲಿ ಅನೇಕ ಮಹಿಳೆಯರಿಗೆ ಕೆಲಸ ಕೊಟ್ಟು ಮಾದರಿ ಉದ್ಯಮಿಯಾಗಿದ್ದಾರೆ.

-ವಿದ್ಯಾಶ್ರೀ ಗಾಣಿಗೇರ

ಟಾಪ್ ನ್ಯೂಸ್

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.