ಕ್ರೇಜಿ ಕಿನ್ನರಿ ಆಶಿಕಾ, ಭಟ್ಟರ ಸಿನಿಮಾದಲ್ಲಿ ಬಟ್ಟೆ ಕಳ್ಳಿ!
Team Udayavani, Jul 26, 2017, 6:50 AM IST
ಬರೀ ಹಾಲಿವುಡ್‌ನಲ್ಲಿ ಮಾತ್ರವೇ ನಾಯಕ ನಾಯಕಿಯರನ್ನು ಫೇಸ್‌ಬುಕ್‌ನಿಂದ ಆಯ್ಕೆ ಮಾಡುತ್ತಾರೆ ಎಂದುಕೊಂಡಿದ್ದವರಿಗೆ ಇಲ್ಲಿದೆ ಸರ್‌ಪ್ರೈಸ್. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಫೋಟೋದಿಂದಲೇ ಕನ್ನಡ ಸಿನಿಮಾ “ಕ್ರೇಝಿ ಬಾಯ್’ಗೆ ನಾಯಕಿಯಾಗಿ ಆಯ್ಕೆಯಾಗಿದ್ದ ಹುಡುಗಿ “ಕ್ರೇಝಿ ಹುಡುಗಿ’ ಆಶಿಕಾ. ಲೇಟ್ ಆದರೂ ಲೇಟೆಸ್ಟಾಗಿ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿರುವ ಅವರು ಈಗ ಯೋಗರಾಜ ಭಟ್‌ರ ಸಿನಿಮಾದಲ್ಲಿ “ಮುಗುಳ್ನಗು’ ಬೀರುತ್ತಿದ್ದಾರೆ. ತುಮಕೂರು ಮೂಲದ ಇವರು ಸದ್ಯ ನೆಲೆಸಿರುವುದು ಬೆಂಗಳೂರಿನಲ್ಲಿ. ರಾಂಗ್ ಕ್ವೆಶ್ಚನ್‌ಗಳಿಗೆ ಮಗುಮ್ಮಾಗಿ ಸುಮ್ಮನಿದ್ದುಬಿಡುವ ಈ ಹುಡುಗಿ ಕಾಲೇಜು ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. “ದೊಡ್ಡ ಸ್ಟಾರ್ ಆಗಬೇಕೆನ್ನುವ ಮಹತ್ವಾಕಾಂಕ್ಷೆಯೇನೂ ಇಲ್ಲ. ಉತ್ತಮ ನಟಿ ಎನಿಸಿಕೊಂಡರೆ ಸಾಕು’ ಎನ್ನುವ ಇವರ ಅಂತರಂಗದ ಮಾತುಗಳು ಇಲ್ಲಿವೆ.
ನಂದೂ, ರಶ್ಮಿಕಾ ಮಂದಣ್ಣ ಇಬ್ಬರದೂ “ಫ್ರೆಶ್ ಫೇಸ್’!
ನಾನು ಮತ್ತು ರಶ್ಮಿಕಾ ಹಳೆಯ ಸ್ನೇಹಿತೆಯರು. ಇಬ್ಬರೂ “ಫ್ರೆಶ್ ಫೇಸ್- 2014′ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ಅವಳು ವಿನ್ನರ್ ಆದಳು, ನಾನು ರನ್ನರ್ ಅಪ್ ಆದೆ. ಆಗಿನಿಂದಲೂ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್. ಚಿತ್ರರಂಗದಲ್ಲಿ ಸದ್ಯಕ್ಕೆ ನನಗೆ ತುಂಬಾ ಇಷ್ಟದ ನಟಿ ರಶ್ಮಿಕಾ. ತುಂಬಾ ಒಳ್ಳೇ ಹುಡುಗಿ. ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ದೊಡ್ಡ ಸ್ಟಾರ್ ಆಗಿಬಿಟ್ಟಿದ್ದಾಳೆ. ಆದರೂ ಅವಳು ಮೊದಲಿನಂತೆಯೇ ಈಗಲೂ ತುಂಬಾ ಡೌನ್ ಟು ಅರ್ತ್.
“ಅಪ್ಪು’ ಚಿತ್ರ ಬಿಡುಗಡೆಯಾದಾಗ ನಾನು 1ನೇ ತರಗತಿಯಲ್ಲಿದ್ದೆ.
ಅಪ್ಪು ಸರ್ ಹತ್ರ ಹೊಗಳಿಸಿಕೊಂಡಿದ್ದು ಜೀವನದ “ಬೆಸ್ಟ್ ಮೊಮೆಂಟ್’. “ಅಪ್ಪು’ ಚಿತ್ರ ಬಿಡುಗಡೆಯಾದಾಗ ನಾನು 1ನೇ ತರಗತಿಯಲ್ಲಿದ್ದೆ. ಅಬ್ಟಾ… ಆ ಸಿನಿಮಾದಲ್ಲಿ ಎಷ್ಟು ಚಂದ ಡ್ಯಾನ್ಸ್ ಮಾಡಿದ್ದಾರೆ ಅವರು. ನಾನು ಆಗಿನಿಂದಲೇ ಅವರ ಫ್ಯಾನ್ ಆಗಿಬಿಟ್ಟೆ. ಅವರ ಎಲ್ಲಾ ಚಿತ್ರಗಳನ್ನೂ ಮಿಸ್ ಮಾಡದೇ ನೋಡಿದ್ದೇನೆ. ಅವರ ಡ್ಯಾನ್ಸ್ ನೋಡಿ ನಾನೂ ಡ್ಯಾನ್ಸ್ ಕಲಿತಿದ್ದೇನೆ. ಇತ್ತೀಚೆಗೆ “ಲೀಡರ್’ ಚಿತ್ರದ ಸಮಾರಂಭವೊಂದರಲ್ಲಿ ನಾನು ಡ್ಯಾನ್ಸ್ ಮಾಡಿದ್ದೆ. “ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀಯ’ ಎಂದು ಅಭಿನಂದಿಸಿದರು. ನಿಜಕ್ಕೂ ಎಷ್ಟು ಖುಷಿ ಆಯ್ತು ಗೊತ್ತಾ? ನನ್ನ ಫೇವರೆಟ್ ಸ್ಟಾರ್ ಹತ್ರ ಹೊಗಳಿಸಿಕೊಳ್ಳುವ ದಿನ ಇಷ್ಟು ಬೇಗ ಬರುತ್ತೆ ಅಂತ ಅಂದುಕೊಂಡಿರಲೇ ಇಲ್ಲ.
ಇವರಿಂದ ನಾನು ಕದಿಯಲಿಚ್ಛಿಸುವುದೇನು ಗೊತ್ತಾ?
ರಾಧಿಕಾ ಪಂಡಿತ್- ನಟನೆ, ವೃತ್ತಿಜೀವನದಲ್ಲಿ ಅವರು ಕಾಪಾಡಿಕೊಂಡ ಸ್ಥಿರತೆ
ಶೃತಿ ಹರಿಹರನ್- ಅವರ ನಗು ಮತ್ತು ಮಾತಿನ ಶೈಲಿ
ಶ್ರದ್ಧಾ ಶ್ರೀನಾಥ್- ಎಷ್ಟು ಒಳ್ಳೆ ಒಳ್ಳೆ ಸಿನಿಮಾ ಅವಕಾಶಗಳು ಸಿಗ್ತಿವೆ ಅವರಿಗೆ! ಚಾನ್ಸ್ ಸಿಕ್ಕರೆ ಅವರಿಗೆ ಸಿಗುತ್ತಿರುವ ಅವಕಾಶಗಳನ್ನೇ ಕದೀತೀನಿ.
ರಮ್ಯಾ- ಕಣ್ಣು, ಸೌಂದರ್ಯ
-ನಿಮಗೆ ಫೇಸ್‌ಬುಕ್‌ನಿಂದ ಸಿನಿಮಾ ಅವಕಾಶ ಸಿಕ್ತಂತೆ, ಹೌದಾ?
ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದೆನಲ್ಲಾ? ಅಲ್ಲಿನ ಕೆಲ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದೆ. ಇದೇ ವೇಳೆ ನಿರ್ದೇಶಕರಾದ ಮಹೇಶ್ ಬಾಬು ಸರ್ “ಕ್ರೇಜಿ ಬಾಯ್’ ಚಿತ್ರಕ್ಕೆ ಹೀರೊಯಿನ್ ಹುಡುಕುತ್ತಿದ್ದರು. ಫೇಸ್‌ಬುಕ್‌ನಲ್ಲಿ ನನ್ನ ಫೋಟೊ ನೋಡಿ ಆಡಿಷನ್‌ಗೆ ಕರೆದರು. ಚಿತ್ರಕ್ಕೆ ಆಯ್ಕೆಯಾದೆ.
-ಬ್ಯುಸಿ ನಟಿಯಾಗಿದ್ದೀರಿ ಈಗ. ಕಾಲೇಜು ಕಡೆಗೂ ಗಮನ ಕೊಡ್ತೀರಾ?
ಹೂಂ… ನಾನು ಎಂಇಎಸ್ ಕಾಲೇಜಿನಲ್ಲಿ ಬಿ.ಕಾಂ ಮಾಡ್ತಾ ಇದ್ದೀನಿ. ಕಾಲೇಜಿನವರು ನನಗೆ ತುಂಬಾ ಪ್ರೋತ್ಸಾಹ ಕೊಡುತ್ತಿದ್ದಾರೆ. ಸಾಧ್ಯವಾದಷ್ಟು ತರಗತಿಗಳಿಗೆ ಹಾಜರಾಗು ಎಂದು ಅಧ್ಯಾಪಕರು ಹೇಳಿದ್ದಾರೆ. ನಿಜ ಹೇಳಬೇಕೆಂದರೆ ನಾನು ಕಾಲೇಜಿಗೆ ಹೋಗಿದ್ದಕ್ಕಿಂತ ಬಂಕ್ ಹೊಡೆದಿದ್ದೇ ಜಾಸ್ತಿ.
– ನಟಿಯಾಗುವುದಕ್ಕೆ ಮೊದಲೂ ಕೂಡ ಹೀಗೆ ಬಂಕ್ ಮಾಡ್ತಾ ಇದ್ರಾ?
ಮಾಡ್ತಿದ್ದೆ. ಆದರೆ ಇಷ್ಟೆಲ್ಲಾ ಮಾಡ್ತಿರಲಿಲ್ಲ. ಅದೂ ಅಲೆª ಆಗ ಬೇಕೂಂತ ಮಾಡುತ್ತಿದ್ದೆ, ಈಗ ಅನಿವಾರ್ಯವಾಗಿ ಮಾಡಬೇಕಾಗಿ ಬಂದಿದೆ. ಕೆಲವೊಮ್ಮೆ ಕಾಲೇಜ್ ಲೈಫನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನಿಸುತ್ತೆ.
-ನಿಮ್ಮ ಅಕ್ಕ ಕೂಡ ಕಲಾವಿದೆ ಅಂತ ಗೊತ್ತಾಯ್ತು. ಅವರಿಂದ ನಟನೆ ವಿಷಯದಲ್ಲಿ ಏನಾದರೂ ಕಲಿತಿದ್ದೀರಾ?
ಅಕ್ಕ ಅನುಷಾ “ಗೋಕುಲದಲ್ಲಿ ಸೀತೆ’ ಧಾರಾವಾಹಿಯ ಹೀರೋಯಿನ್ ಆಗಿದ್ದಳು. ಈಗ ಧಾರಾವಾಹಿ, ಸಿನಿಮಾ ಅಂತ ಅವಳೂ ತುಂಬಾ ಬ್ಯುಸಿ ಆಗಿದ್ದಾಳೆ. ಅವಳೇ ನನ್ನ ಬೆಸ್ಟ್ ಫ್ರೆಂಡ್. ನನ್ನ ಶಾಪಿಂಗ್, ಮೇಕಪ್ ಎಲ್ಲದರಲ್ಲೂ ನಾನು ಆಕೆಯ ಸಲಹೆಯನ್ನೇ ಕೇಳ್ಳೋದು.
-ನಿಮ್ಮಿಬ್ಬರಲ್ಲಿ ಜಗಳಗಂಟಿ ಯಾರು?
ನಾನೇ ಸ್ವಲ್ಪ ಜೋರು. ನನ್ನಕ್ಕ ತುಂಬಾ ಪಾಪದವಳು. ನನ್ನ ಬಳಿ ಎಷ್ಟೇ ಒಳ್ಳೆಯ ಬಟ್ಟೆ, ಚಪ್ಪಲಿ ಇದ್ದರೂ ನಾನು ಅವಳ ಬಟ್ಟೆ, ಚಪ್ಪಲೀನ ಕದ್ದು ಹಾಕಿಕೊಂಡು ಓಡಾಡುತ್ತಿದ್ದೆ. ಈ ವಿಷಯವಾಗಿಯೇ ನಮ್ಮ ನಡುವೆ ಜಗಳಗಳಾಗುತ್ತಿರುತ್ತವೆ. ಈಗ ಇಬ್ಬರಿಗೂ ಸಿನಿಮಾ ಶೂಟಿಂಗ್ ಇರೋದರಿಂದ ಜಗಳವಾಡೋಕೂ ಸಮಯ ಸಿಕ್ತಿಲ್ಲ. ಇನ್ನೊಂದು ವಿಷ್ಯ ಏನೂಂದ್ರೆ ಅಕ್ಕನ ಬಟ್ಟೆ ಹಾಕೊಳ್ಳೋದನ್ನೂ ನಿಲ್ಲಿಸಿದ್ದೇನೆ. ಎಲ್ಲಿ ಯಾರಾದರೂ ಗೇಲಿ ಮಾಡುತ್ತಾರೋ ಅಂತ.
-ಅಲಂಕಾರದ ಬಗ್ಗೆ ನಿಮಗೆ ತುಂಬಾ ಆಸಕ್ತಿ ಇದೆಯಾ?
ಚಿಕ್ಕವಳಿದ್ದಾಗಿನಿಂದಲೂ ನನಗೆ ಚಂದ ಕಾಣೆºàಕು, ಅಲಂಕಾರ ಮಾಡ್ಕೊàಬೇಕು ಅಂತ ತುಂಬಾ ಆಸೆ. ಚಿಕ್ಕ ಹುಡುಗಿಯಾಗಿದ್ದಾಗ ದೊಡ್ಡವರು ಮಾಡಿಕೊಳ್ಳುವ ಅಲಂಕಾರವನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೆ. ಉದ್ದ ಜಡೆ ಬೇಕು, ಹೂವು ಮುಡಿಯಬೇಕು. ಕತ್ತಿನ ತುಂಬಾ ಸರ ಹಾಕಿಕೊಳ್ಳಬೇಕು ಅಂತ ಆಸೆ ಆಗ್ತಾ ಇತ್ತು. ಮುಖದ ತುಂಬಾ ಪೌಡರ್ ಬಳಿದುಕೊಂಡು, ದೊಡ್ಡ ಬಿಂದಿ ಇಟ್ಟುಕೊಂಡು ಓಡಾಡುತ್ತಿದ್ದೆ. ಕಾಲೇಜಿಗೆ ಸೇರಿದ ಬಳಿಕ ಸೆನ್ಸಿಬಲ್ ಆಗಿ ಅಲಂಕಾರ ಮಡಿಕೊಳ್ಳುವುದನ್ನು ಕಲಿತೆ. ಈಗ ಸಹಜವಾಗಿಯೇ ಸುಂದರವಾಗಿ ಕಾಣುವ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ.
-ನಿಮ್ಮ ಅಲಂಕಾರ ಹೇಗಿರುತ್ತದೆ?
ನಾರ್ಮಲ್ ಜೀನ್ಸ್, ಫುಲ್ ಆರ್ಮ್ ಶರ್ಟ್, ಕುರ್ತಾ ಹೆಚ್ಚಾಗಿ ಧರಿಸುತ್ತೇನೆ. ಫ್ರೀಹೇರ್ ಬಿಡುತ್ತೇನೆ. ಚಪ್ಪಲಿಗಿಂತ ಶೂ ನನಗೆ ತುಂಬಾ ಕಂಫರ್ಟೆಬಲ್. ಸಮಾರಂಭಗಳಿಗೆ ಹೋಗಬೇಕಾದರೆ ಲೈಟಾಗಿ ಮೇಕಪ್ ಮಾಡಿಕೊಳ್ಳುತ್ತೇನೆ. ಕನ್ಸಿàಲರ್, ಕಾಜಲ್, ಐಲೈನರ್ ಬಳಸುತ್ತೇನೆ. ತುಟಿಗೆ ನ್ಯೂಡ್ ಲಿಪ್‌ಸ್ಟಿಕ್ ಹಾಕುತ್ತೇನೆ.
-ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಫ್ಯಾನ್ಸ್ ಇರಬೇಕಲ್ಲಾ
ತುಂಬಾ ಏನಿಲ್ಲ. ಕೆಲವೊಮ್ಮೆ ಫೋಟೊಗಳನ್ನು ಅಪ್‌ಲೋಡ್ ಮಾಡ್ತೀನಿ. ತುಂಬಾ ಜನ ಕಮೆಂಟ್‌ಗಳನ್ನು ಮಾಡ್ತಾರೆ. ಎಲ್ಲರಿಗೂ ರಿಪ್ಲೆ„ ಮಾಡಲು ಸಮಯ ಇರುವುದಿಲ್ಲ. ಕೆಲವೊಬ್ಬರು ಮನಸ್ಸಿನಾಳದಿಂದ ಹರಸಿರುತ್ತಾರೆ ಅಂಥವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು ಕೆಲವರು ಮೀಟ್ ಮಾಡಿ, ನಿಮ್ಮ ಫೋನ್ ನಂಬರ್ ಕೊಡಿ, ನಿಮಗೆ ಬಾಯ್‌ಫ್ರೆಂಡ್ ಇದಾನ? ಅಂತೆಲ್ಲಾ ಪ್ರಶ್ನೆ ಕೇಳ್ತಾರೆ. ಆಗ ನಗು ಬರುತ್ತೆ.
-ಸಿನಿಮಾ ರಂಗಕ್ಕೆ ಬಂದಮೇಲೆ ನೀವು ಮಾಡಬೇಕಾಗಿ ಬಂದ ದೊಡ್ಡ ತ್ಯಾಗ ಯಾವುದು?
ಮೊದಲು ವಾರಕ್ಕೆ 3 ಬಾರಿ ಬಿರಿಯಾನಿ ತಿಂತಿದ್ದೆ. ಈಗ 10 ದಿನಗಳಿಗೊಮ್ಮೆ ತಿನ್ನುತ್ತಿದ್ದೇನೆ. ಅದನ್ನೇ ತ್ಯಾಗ ಅಂತ ಬೇಕಾದರೆ ಹೇಳಬಹುದು. ಯಾಕೆಂದರೆ ನನಗೆ ಬಿರಿಯಾನಿ ಎಂದರೆ ಅಷ್ಟಿಷ್ಟ.
-ನಿಮ್ಮ ನೆಚ್ಚಿನ ಹವ್ಯಾಸಗಳ ಬಗ್ಗೆ ಹೇಳಿ?
ಡ್ಯಾನ್ಸ್ ಮತ್ತು ಅಡುಗೆ.
-ಅಡುಗೆ ಮಾಡುವಾಗ ಏನಾದರೂ ಪಜೀತಿ ಆಗಿದ್ದಿದೆಯೇ?
ಆವಾಗ ಯು.ಕೆ.ಜಿಯಲ್ಲಿ ಇದ್ದೆ. ಮನೆಯಲ್ಲಿ ಅಪ್ಪ, ಅಮ್ಮ ಇಬ್ಬರೂ ಇಲ್ಲದಿದ್ದಾಗ ನಾನು, ನನ್ನ ಅಕ್ಕ ಇಬ್ಬರೂ ಸೇರಿಕೊಂಡು ಪಾನಿಪೂರಿ ತಯಾರಿಸುತ್ತಿದ್ದೆವು. ಆಗ ಬಿಸಿ ಎಣ್ಣೆ ನನ್ನ ಮುಖದ ಮೇಲೆ ಬಿದ್ದು ಚಿಕ್ಕದೊಂದು ಕಲೆಯಾಯಿತು. ಲಕ್ಕೀಲಿ ಗಂಭೀರ ಗಾಯ ಆಗಿರಲಿಲ್ಲ. ಈಗಲೂ ಆ ಕಲೆ ಸವಿಸವಿ ನೆನಪಿನ ಹಾಗೆ ನನ್ನ ಮುಖದ ಮೇಲೆಯೇ ಇದೆ.
– ರಸ್ತೆ ಬದಿ ತಿನಿಸು ಅಥವಾ ಸ್ಟಾರ್ ಹೋಟೆಲ್ ತಿನಿಸು. ಎರಡರಲ್ಲಿ ನಿಮಗಿಷ್ಟವಾದದ್ದು ಯಾವುದು?
ರಸ್ತೆ ಬದಿಯಲ್ಲಿ ಸಿಗುವಷ್ಟು ರುಚಿಯಾದ ಚಾಟ್ಸ್ ಯಾವ ರೆಸ್ಟೋರೆಂಟ್‌ನಲ್ಲೂ ಸಿಗುವುದಿಲ್ಲ. ಮೊದಲ ಅಯ್ಕೆ ಸ್ಟ್ರೀಟ್ ಫುಡ್. ಅದು ಬಿಟ್ಟರೆ ಮೆಕ್ ಡೊನಾಲ್ಡ್, ಎಂಪೈರ್‌ಗೆ ಹೋಗಿ ಚಿಕನ್ ತಿನ್ನಲು ಇಷ್ಟ ಪಡ್ತೀನಿ.
-ನಿಮ್ಮ ಸ್ನೇಹಿತೆ ರಶ್ಮಿಕಾ ಮದುವೆಯಾಗುತ್ತಿದ್ದಾರಲ್ವಾ, ಅದರ ಬಗ್ಗೆ ಏನನ್ನಿಸುತ್ತೆ?
ನಿಶ್ಚಿತಾರ್ಥಕ್ಕೆ ನಾನೂ ಹೋಗಿದ್ದೆ. ಮದುವೆಯಾಗುತ್ತಿರುವ ಬಗ್ಗೆ ಅವಳಿಗೆ ಖುಷಿ ಇದೆ. ಮದುವೆಯಾದ ಮೇಲೂ ಅವಳು ನಟಿಸುವುದನ್ನು ಮುಂದುವರಿಸಬೇಕು. ಮದುವೆಯಾದ ಮೇಲೆ ನಟಿಯರು ಸಿನಿಮಾದಿಂದ ದೂರ ಸರಿಯುತ್ತಾರೆ ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಅದನ್ನು ರಶ್ಮಿಕಾ ಸುಳ್ಳು ಮಾಡಬೇಕು.
-ನಿಮ್ಮ ಬಾಯ್‌ಫ್ರೆಂಡ್ ಅಗೋನು ಹೇಗಿರಬೇಕು?
ನಾನಿನ್ನೂ ತುಂಬಾ ಚಿಕ್ಕವಳು! ರಾಂಗ್ ಕ್ವೆಶ್ಚನ್!
– ಚೇತನ ಜೆ.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.