ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ…
Team Udayavani, Jun 13, 2018, 6:00 AM IST
ಚೂಡಿ, ಟಿಶರ್ಟು- ಪ್ಯಾಂಟಿನ ನಡುವೆ ಸೀರೆ ತನ್ನ ಎಂದಿನ ಸೌಂದರ್ಯವನ್ನು ಬಿಟ್ಟುಕೊಟ್ಟೇ ಇಲ್ಲ. ಉದ್ಯೋಗಿ ಮಹಿಳೆಯರಲ್ಲೂ ಅನೇಕರಿಗೆ ಸೀರೆಯೇ ಅಚ್ಚುಮೆಚ್ಚು. ಇಂದು ಉಟ್ಟ ಸೀರೆ, ಮುಂದಿನ ತಿಂಗಳಿಗೆ ಹಳತು ಎಂದು ಪೈಪೋಟಿಯಲ್ಲಿ ಸೀರೆ ಖರೀದಿಸುವ ಸ್ತ್ರೀಯರೂ ಇದ್ದಾರೆ. ಸೀರೆ ಯಾವತ್ತೂ ಬೋರಿಂಗ್ ಅಲ್ಲ. ಆದರೆ, ದಿನಾ ಸೀರೆ ಉಡುವವರು ಹೇಗೆ ಡಿಫರೆಂಟಾಗಿ ಕಾಣಿಸಿಕೊಳ್ಳಬಹುದು? ವಾರದಲ್ಲಿ ಐದು ದಿನ ಹೇಗೆ ಸೀರೆಯುಟ್ಟು ಮಿಂಚಬಹುದು? ಇಲ್ಲಿವೆ ಟಿಪ್ಸ್…
1. ಮ್ಯಾಜಿಕಲ್ ಮಂಡೇ
ಸೋಮವಾರ ಕಾಡುವ “ಮಂಡೇ ಬ್ಲೂ’ ಬೇಸರವನ್ನು ನೀಗಿಸಲು ಗುಲಾಬಿ ಬಣ್ಣದ ಲಿನನ್ ಸೀರೆ ಉಡಬಹುದು. ಅದರ ಮೇಲೆ ಕಸೂತಿ ಚಿತ್ತಾರವಿದ್ದರಂತೂ, ಇನ್ನೂ ಚೆನ್ನ.
2. ಥ್ರಿಲ್ಲಿಂಗ್ ಟ್ಯೂಸ್‌ಡೇ
ಭಾನುವಾರವಿನ್ನೂ ದೂರವಿದೆ ಅನ್ನುವ ಬೇಸರ ಕಳೆಯಲು, ಹತ್ತಿಯಷ್ಟೇ ಹಗುರವಾಗಿರುವ ಭಾಗಲ್‌ಪುರಿ ರೇಷ್ಮೆ ಸೀರೆ ಉಡಬಹುದು. ನೋಡಲು ಅತಿ ಅದ್ಧೂರಿ ಅನಿಸದ ಈ ಸೀರೆ ಆಫೀಸ್‌ಗೆ ಉಡಲು ಹೇಳಿ ಮಾಡಿಸಿದಂತಿದೆ.
3. ವ್ಹಾವ್ ವೆನ್ಸ್‌ಡೇ
ದಕ್ಷಿಣ ಭಾರತೀಯ ಶೈಲಿಯ ಕಾಟನ್ ಸೀರೆಗಳು ಉಡಲು ಬಹಳ ಸುಲಭ ಹಾಗೂ ನೋಡಲೂ ಅಷ್ಟೇ ಚಂದ. ವಾರದ ಮಧ್ಯದ ದಿನದಂದು ಎಲ್ಲರೂ “ವ್ಹಾವ್’ ಅನ್ನುವಂತೆ ಸೀರೆ ಉಡಿ.
4. ಟ್ರೆಂಡಿ ಥರ್ಡೇ
ಇನ್ನೇನು ಒಂದೇ ದಿನ ಅಂತ, ವಾರಾಂತ್ಯದ ರಜೆಗೆ ಕಾಯುತ್ತಿರುವವರು ಕಸೂತಿ ಚಿತ್ತಾರದ ಕಾಟನ್ ಸೀರೆ ಉಡಬಹುದು. ಈ ಸೀರೆಯಲ್ಲಿ ನೀವು ಕ್ಲಾಸಿ ಮತ್ತು ಸೂಪರ್ ಸ್ಟೈಲಿಶ್ ಆಗಿ ಕಾಣಿಸುತ್ತೀರಿ.
5. ಫನ್ ಫ್ರೈಡೇ
ಕಪ್ಪುಬಣ್ಣದ ಸಿಂಪಲ್ ಸೀರೆಗೆ ಬಂಗಾರ ಬಣ್ಣದ ಬಾರ್ಡರ್ ಇರುವ ಸೀರೆಯುಟ್ಟು ವಾರಾಂತ್ಯವನ್ನು ಬರಮಾಡಿಕೊಳ್ಳಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.