ಅವರೆ ಕಾಳಿನ ತಿನಿಸುಗಳು..
Team Udayavani, Jan 24, 2018, 3:02 PM IST
ವಿಶಿಷ್ಟ ರುಚಿಯ ಕಾರಣದಿಂದಲೇ ಇಷ್ಟವಾಗುವ ಕಾಳುಗಳ ಪೈಕಿ ಅವರೆಗೆ ಅಗ್ರಸ್ಥಾನ. ಅವರೆಕಾಳು ಸಾರು, ಅವರೆಕಾಳು ಉಪ್ಪಿಟ್ಟಿಗೆ ಮರುಳಾಗದ ಜನರಿಲ್ಲ. ಹೊಸವರ್ಷದ ಖುಷಿಯ ಜೊತೆಯಲ್ಲೇ ಅವರೆಕಾಳಿನ ಸೀಸನ್ ಕೂಡ ಆರಂಭವಾಗುತ್ತದೆ. ಅವರೆಯನ್ನು ಬಳಸಿ ಮಾಡಬಹುದಾದ ಮತ್ತಷ್ಟು ರುಚಿಕರ ತಿನಿಸುಗಳ ಪಟ್ಟಿ ಇಲ್ಲಿದೆ. ಹೊಸ ರುಚಿಗೆ ಹಂಬಲಿಸುವವರು ತಪ್ಪದೇ ಟ್ರೈ ಮಾಡಿ…
ಅವರೆಕಾಳಿನ ಉಸ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್, ತೆಂಗಿನ ತುರಿ- 1/2 ಕಪ್, ಕಾಳುಮೆಣಸಿನ ಪುಡಿ-1/2 ಚಮಚ, ಜೀರಿಗೆ ಪುಡಿ-1 ಚಮಚ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು-1/4 ಕಪ್, ಹಸಿಮೆಣಸಿನಕಾಯಿ- 5-6, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 4 ಚಮಚ, ಸಾಸಿವೆ-1 ಚಮಚ, ಉದ್ದಿನಬೇಳೆ- 3 ಚಮಚ, ಅರಿಶಿನ- 1/2 ಚಮಚ, ಇಂಗು- 1/4 ಚಮಚ.
ಮಾಡುವ ವಿಧಾನ: ಅವರೆಕಾಳುಗಳನ್ನು ಎಣ್ಣೆಯಲ್ಲಿ ಬಾಡಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಸಾಸಿವೆ- ಉದ್ದಿನಬೇಳೆ- ಅರಿಶಿನ- ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಬಾಡಿಸಿ, ಬೇಯಿಸಿದ ಅವರೆಕಾಳು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ ಕಲಕಿ. ನಂತರ ಅದಕ್ಕೆ ತೆಂಗಿನ ತುರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪುಷ್ಟಿದಾಯಕ ಅವರೆಕಾಳಿನ ಉಸ್ಲಿ ತಯಾರು. ತಿಂಡಿಯಾಗಿ ಅಥವಾ ಚಪಾತಿಯೊಂದಿಗೆ ತಿನ್ನಲು ಇದು ಬಲು ರುಚಿ.
ಅವರೆಕಾಳಿನ ಚಟ್ನಿ
ಬೇಕಾಗುವ ಸಾಮಗ್ರಿ: ಅವರೆಕಾಳು- 1 ಕಪ್, ತೆಂಗಿನ ತುರಿ- 1 ಕಪ್, ಸಾಸಿವೆ- 1 ಚಮಚ, ಮೆಂತ್ಯ- 1/2 ಚಮಚ, ಹಸಿಮೆಣಸಿನಕಾಯಿ- 5-6, ಕೊತ್ತಂಬರಿ ಸೊಪ್ಪು- 3 ಚಮಚ, ಕರಿಬೇವಿನ ಸೊಪ್ಪು, ಉಪ್ಪು- ರುಚಿಗೆ ತಕ್ಕಷ್ಟು, ಬೆಲ್ಲ-2 ಚಮಚ.
ಒಗ್ಗರಣೆಗೆ- ಎಣ್ಣೆ- 3 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಅರಿಶಿನ-1/2 ಚಮಚ
ಮಾಡುವ ವಿಧಾನ: ಅವರೆಕಾಳುಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ಸಾಸಿವೆ, ಮೆಂತ್ಯೆ ಸೇರಿಸಿ ಹುರಿದು ಪುಡಿ ಮಾಡಿ. ಅವರೆಕಾಳು, ತೆಂಗಿನ ತುರಿ, ಪುಡಿ ಮಾಡಿರಿಸಿದ ಸಾಸಿವೆ- ಮೆಂತ್ಯ, ಹಸಿಮೆಣಸಿನಕಾಯಿ, ಕರಿಬೇವು, ಉಪ್ಪು, ಬೆಲ್ಲ, ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ಅರೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ- ಇಂಗು- ಅರಿಶಿನ ಸೇರಿಸಿ ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿ.
ಅವರೆಕಾಳಿನ ವಡೆ
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್, ಕಡಲೆ ಹಿಟ್ಟು- 1 ಕಪ್, ಅಕ್ಕಿ ಹಿಟ್ಟು- 1/2 ಕಪ್, ತೆಂಗಿನ ತುರಿ- 1 ಕಪ್, ಕತ್ತರಿಸಿದ ಈರುಳ್ಳಿ- 1/2 ಕಪ್, ಹಸಿಮೆಣಸಿನಕಾಯಿ- 2-3, ಜೀರಿಗೆ- 1 ಚಮಚ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಸೋಡಾ- 1/4 ಚಮಚ, ಕರಿಯಲು ಎಣ್ಣೆ.
ಮಾಡುವ ವಿಧಾನ: ಅವರೆಕಾಳು, ತೆಂಗಿನತುರಿ, ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಅರೆದು, ಕಡಲೆ ಹಿಟ್ಟು ಹಾಗೂ ಅಕ್ಕಿಹಿಟ್ಟಿನೊಂದಿಗೆ ಸೇರಿಸಿ. ಮಿಶ್ರಣಕ್ಕೆ ಉಪ್ಪು ಹಾಗೂ ಸೋಡಾ ಬೆರೆಸಿ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲಸಿ. ಕಲಸಿದ ಹಿಟ್ಟಿನಿಂದ ಚಿಕ್ಕ ವಡೆಯಾಕಾರದಲ್ಲಿ ತಟ್ಟಿ ಅದನ್ನು ಕಾಯಿಸಿದ ಎಣ್ಣೆಯಲ್ಲಿ ಕರಿದರೆ ವಡೆ ಸಿದ್ಧ.
ಅವರೆಕಾಳಿನ ತಾಲೀಪಟ್ಟು
ಬೇಕಾಗುವ ಸಾಮಗ್ರಿ: ಬೇಯಿಸಿದ ಅವರೆಕಾಳು- 1 ಕಪ್, ಅಕ್ಕಿ ಹಿಟ್ಟು- 1 ಕಪ್, ಜೋಳದ ಹಿಟ್ಟು- 1/4 ಕಪ್, ಕಡಲೆ ಹಿಟ್ಟು- 1/4 ಕಪ್, ಗೋದಿ ಹಿಟ್ಟು- 1/4 ಕಪ್, ತೆಂಗಿನ ತುರಿ- 1/2 ಕಪ್, ಹಸಿಮೆಣಸಿನಕಾಯಿ- 4-5, ಕೊತ್ತಂಬರಿ ಸೊಪ್ಪು- 1/2 ಕಪ್, ಜೀರಿಗೆ- 3 ಚಮಚ, ಇಂಗು- 1/4 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ .
ಮಾಡುವ ವಿಧಾನ: ಬೇಯಿಸಿದ ಅವರೆಕಾಳು, ಹಸಿಮೆಣಸಿನಕಾಯಿ ಸೇರಿಸಿ ಅರೆಯಿರಿ. ಅರೆದ ಮಿಶ್ರಣಕ್ಕೆ ಎಲ್ಲಾ ಹಿಟ್ಟುಗಳು, ತೆಂಗಿನ ತುರಿ, ಉಪ್ಪು, ಜೀರಿಗೆ, ಇಂಗು, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಗಟ್ಟಿಯಾಗಿ ಕಲಸಿ. ಆ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಎಣ್ಣೆ ಸವರಿದ ಬಾಣಲೆ, ಇಲ್ಲವೇ ತವಾದ ಮೇಲೆ ತೆಳ್ಳಗೆ ತಟ್ಟಿ, ಎರಡೂ ಬದಿಗಳನ್ನು ಬೇಯಿಸಿದರೆ, ಅವರೆಕಾಳಿನ ತಾಲೀಪಟ್ಟು ರೆಡಿ.
ಅವರೆಕಾಳಿನ ಉಂಡೆ
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್, ಹುರಿಗಡಲೆ ಪುಡಿ- 1 ಕಪ್, ಒಣಕೊಬ್ಬರಿ ತುರಿ- 1 ಕಪ್, ತುರಿದ ಬೆಲ್ಲ- 2 ಕಪ್, ಎಳ್ಳು ಪುಡಿ- 3 ಚಮಚ, ಗಸಗಸೆ ಪುಡಿ- 2 ಚಮಚ, ಏಲಕ್ಕಿ ಪುಡಿ- 1/2 ಚಮಚ, ತುಪ್ಪ- 1 ಕಪ್
ಮಾಡುವ ವಿಧಾನ: ಅವರೆಕಾಳುಗಳನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ ಬಸಿದು, ನೆರಳಿನಲ್ಲಿ ಒಣಗಿಸಿ, ತರಿತರಿಯಾಗಿ ಪುಡಿ ಮಾಡಿ, ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಹುರಿಗಡಲೆ ಪುಡಿ, ಒಣಕೊಬ್ಬರಿ ತುರಿಯನ್ನು ಸ್ವಲ್ಪ ಬಿಸಿ ಮಾಡಿ. ಬಾಣಲೆಯಲ್ಲಿ ತುಪ್ಪ ಕಾಯಿಸಿ, ಬೆಲ್ಲ ಸೇರಿಸಿ ಕರಗಿಸಿ.
ಬೆಲ್ಲ ಕರಗಿದ ನಂತರ, ಹುರಿದ ಅವರೆಕಾಳಿನ ತರಿ, ಹುರಿಗಡಲೆ ಹಿಟ್ಟು, ಒಣಕೊಬ್ಬರಿ ತುರಿ, ಎಳ್ಳು- ಗಸಗಸೆ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿ. ನಂತರ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿದರೆ ಅವರೆಕಾಳಿನ ಉಂಡೆ ತಯಾರು.
ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.