ತಾರಸಿ ಚಿಗುರಲಿ


Team Udayavani, Oct 30, 2019, 5:06 AM IST

r-8

ಗಾರ್ಡನಿಂಗ್‌ನಿಂದ ಆಗುವ ಪ್ರಯೋಜನವೆಂದರೆ, ಮಕ್ಕಳು ಎಳವೆಯಿಂದಲೇ ಗಿಡಮರ ಬಳ್ಳಿಗಳ ಜೊತೆ ನಂಟು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಗಳದಲ್ಲಿ ಬೆಳೆದ ಕಾಯಿಪಲ್ಲೆಯನ್ನು, ನಾವೇ ಬೆಳೆದಿದ್ದು ಎಂಬ ಖುಷಿಯಲ್ಲಿ ಇಷ್ಟಪಟ್ಟು ತಿನ್ನುತ್ತಾರೆ.

ಇತ್ತೀಚೆಗೆ ನಾನೊಂದು ಎರೆಹುಳು ಸಾಕಾಣಿಕೆಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಅದ್ಭುತವಾದ ಒಳನೋಟಗಳುಳ್ಳ ಈ ಕಾರ್ಯಕ್ರಮದಲ್ಲಿ ಸಾವಯವ ಆಹಾರವನ್ನು ನಾವೇ ಬೆಳೆದುಕೊಳ್ಳುವ ಅಗತ್ಯವನ್ನು, ಎರೆಹುಳುಗಳನ್ನು ಬಳಸಿಕೊಂಡು ತ್ಯಾಜ್ಯದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳಬಹುದಾದ ಸಾಧ್ಯತೆಗಳನ್ನು ಬಹಳ ಚೆನ್ನಾಗಿವಿವರಿಸಿದರು.

ಇತ್ತೀಚೆಗೆ ಎರೆಹುಳು ಸಾಕಣೆ, ಪಾಟ್‌ಟು ಪ್ಲೇಟ್‌ನಂಥ ಕೃಷಿಗೆ ಸಂಬಂಧಿಸಿದ ಆಂದೋಲನಗಳು ಹೆಚ್ಚುತ್ತಿವೆ. ಸ್ಕೂಲು- ಕಾಲೇಜುಗಳಲ್ಲಿನ ಮಳೆಕೊಯ್ಲು ಯೋಜನೆಗಳು, ಇಕೋ ಕ್ಲಬ್‌, ಹಸಿರು ಹೊದಿಕೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಸಾಗುತ್ತಿದೆ. ಈ ನಿಟ್ಟಿನಲ್ಲೊಂದು ಪುಟ್ಟ ಹೆಜ್ಜೆಯೆಂದರೆ ಗಾರ್ಡನಿಂಗ್‌ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಕೃಷಿಯ ಬಗ್ಗೆ ಪ್ರೀತಿ ಹೆಚ್ಚಿಸುವುದು. ಇದರಿಂದಾಗುವ ಪ್ರಯೋಜನವೆಂದರೆ, ಎಳವೆಯಿಂದಲೇ ಮಕ್ಕಳು ಗಿಡಗಳ ಬಗ್ಗೆ ನಂಟು ಬೆಳೆಸಿಕೊಂಡು ಶುದ್ಧ ನೆಲ, ಜಲ, ಗಾಳಿಯ ಬಗ್ಗೆ ನೈಜ ಅನುಭವ ಪಡೆಯುತ್ತಾರೆ. ತಾವೇ ಗಿಡ ನೆಟ್ಟು ಬೆಳೆಸುವುದರಿಂದ ಆಗುವ ಲಾಭವೆಂದರೆ, ನಾವೇ ಬೆಳೆದಿದ್ದು ಎಂಬ ಖುಷಿಯಲ್ಲಿ ಹಣ್ಣು, ತರಕಾರಿಗಳನ್ನು ತಿನ್ನಲು ಶುರುಮಾಡುತ್ತಾರೆ. ಈ ನೆಪದಿಂದಾದರೂ ನಿಧಾನವಾಗಿ ಅವರನ್ನು ಜಂಕ್‌ಫ‌ುಡ್‌ನಿಂದ ದೂರವಿರಿಸಿ, ಪೌಷ್ಟಿಕ ಆಹಾರ ಸೇವಿಸುವಂತೆ ಮಾಡಬಹುದು. ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ಇಕೋ ಕ್ಲಬ್‌ ಎಂದೆಲ್ಲ ಯುವಕರು ನೆಲ ಅಗೆದು ಗಿಡ ನೆಡುವಾಗ, ಗದ್ದೆಯಲ್ಲಿ ನೇಜಿ ನೆಟ್ಟು ಸಂಭ್ರಮಿಸುವಾಗ ಅವರಲ್ಲಿನ ಕಾಯಕ ಸಂಸ್ಕೃತಿಗೆ ಹೆಮ್ಮೆ ಪಡುವಂತಾಗುತ್ತದೆ. ಹಾಗೆಯೇ ಈ ಪಠ್ಯೇತರ ಚಟುವಟಿಕೆಗಳು ಅವರಲ್ಲಿ ಹುಟ್ಟು ಹಾಕುವ ಕತೃತ್ವ ಶಕ್ತಿಯ ಬಗ್ಗೆ ಕೂಡ. ಇದರಿಂದ ವಿವಿಧ ಬೆಳೆಗಳನ್ನು ಬೆಳೆಯುವ, ಸಂರಕ್ಷಿಸುವ, ಕೊಯ್ಲು ಮಾಡುವ ಅಂತೆಯೇ ತಳಿಗಳನ್ನು, ನೀರನ್ನು ಸಂರಕ್ಷಿಸುವ ವಿಧಾನವೂ ಅವರಿಗೆ ಅರಿವಾಗುತ್ತದೆ. ನಾವು ತಿನ್ನುವ ಅನ್ನ ಎಲ್ಲಿಂದ ಬರುತ್ತಿದೆ, ಅದನ್ನು ಬೆಳೆಯುವವನ ಕಷ್ಟ-ನಷ್ಟಗಳೇನು ಎಂಬುದರ ಅರಿವೂ ಆಗುತ್ತದೆ.

ಇವಲ್ಲದೆ ಈಗ ಹೆಚ್ಚುತ್ತಿರುವ ಟ್ರೆಂಡ್‌ಎಂದರೆ ಟೆರೇಸ್‌ ಕೃಷಿ ಹಾಗೂ ಕಿಚನ್‌ ಗಾರ್ಡನಿಂಗ್‌. ವಿಷಪೂರಿತ ಹಣ್ಣು ತರಕಾರಿಗಳನ್ನು ತಿಂದು ಸಾಕಾದ ಜನರು ತಮ್ಮ ಪಾಡಿಗೆ, ತಮ್ಮ ಅಗತ್ಯಕ್ಕೆ ಬೇಕಾದಷ್ಟು ಆರೋಗ್ಯಕರ ಆಹಾರವನ್ನು ಬೆಳೆದುಕೊಳ್ಳುವ ವಿಧಾನವಿದು. ಹೀಗೆ ಬೆಳೆಯುವ ತರಕಾರಿಗಳು, ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳಂತೆ ಆಕಾರ, ಬಣ್ಣದಲ್ಲಿ ಚಂದವಾಗಿ ಕಾಣಿಸದಿದ್ದರೂ ಅವುಗಳನ್ನು ಬೆಳೆಯುವುದರಿಂದ ಇರುವ ಲಾಭವನ್ನು ಮನಗಂಡು, ಪಾಟ್‌ಗಳಲ್ಲಿಯೋ, ಗೋಣಿಚೀಲಗಳಲ್ಲಿಯೋ ಬಸಳೆ, ಬೀನ್ಸ್‌, ಅಲಸಂದೆ, ಹೆಚ್ಚೇಕೆ? ಕಬ್ಬು, ದಾಳಿಂಬೆ ಇತ್ಯಾದಿಗಳನ್ನೂ ತಾರಸಿ ಮೇಲೆ ಬೆಳೆಯುವವರಿದ್ದಾರೆ. ಇದಲ್ಲದೆ ಸಮಾನ ಮನಸ್ಕರಾದ ಒಂದಷ್ಟು ಜನ ಸೇರಿ, ಹಳ್ಳಿಯಲ್ಲೊಂದಷ್ಟು ಜಾಗ ಪಡೆದು ತಮಗೆ ಬೇಕಾದ ಉತ್ಪನ್ನಗಳನ್ನು ತಾವೇ ಬೆಳೆದುಕೊಳ್ಳುತ್ತಿರುವ ಉದಾಹರಣೆಗಳೂ ಇವೆ. ಇವೆಲ್ಲವೂ ಆರೋಗ್ಯಕರ ಬೆಳವಣಿಗೆಗಳೇ.

ಇನ್ನು ಸ್ವಂತ ಮನೆ ಇದ್ದು, ಅಂಗಳದಲ್ಲಿ ಸ್ವಲ್ಪ ಜಾಗ ಸಿಕ್ಕರೂ ಅಲ್ಲಿ ಹೂವು-ಹಣ್ಣು, ತರಕಾರಿಯಿಂದ ಕೂಡಿದ ಪುಟ್ಟತೋಟ ನಿರ್ಮಿಸಿರುವವರನ್ನು ನೋಡಬಹುದು. ಹೂವಿನ ಗಿಡಗಳು, ಕರಿಬೇವು, ಕೊತ್ತಂಬರಿ ಸೊಪ್ಪು, ಪಪ್ಪಾಯಿ, ಸಪೋಟಾ, ದುಂಡು ಮಲ್ಲಿಗೆ ಬಳ್ಳಿ ಹೀಗೆ, ನಿತ್ಯದ ಪೂಜೆ-ಅಡುಗೆಗೆ ಬಳಸುವಷ್ಟು ಗಿಡ ಬೆಳೆದಿರುತ್ತದೆ ಅಲ್ಲಿ. ಆ ಗಿಡಗಳೊಂದಿಗೆ ಅದೊಂದು ರೀತಿಯ ಭಾವನಾತ್ಮಾಕ ನಂಟು ಕೂಡ… ಪರಿಚಯದ ಕೆಲವು ಕವಯತ್ರಿಯರಂತೂ ಹಿತ್ತಿಲಿನಲ್ಲಿರುವ ಮಲ್ಲಿಗೆ ಬಳ್ಳಿಯ ಬಗ್ಗೆ, ಸಂಪಿಗೆಯ ಕಂಪಿನ ಬಗ್ಗೆ, ಪಾರಿಜಾತದ ಪರಿಮಳದ ಬಗ್ಗೆ ಕವಿತೆಗಳನ್ನೂ ಬರೆಯುತ್ತಿರುತ್ತಾರೆ.

ನಾನೊಮ್ಮೆ ಮುಂಬಯಿಗೆ ಹೋಗಿದ್ದಾಗ, ಅಲ್ಲಿನ ರೈಲು ಹಳಿಗಳ ಪಕ್ಕ, ಬ್ರಿಡ್ಜ್ಗಳ ತಳಭಾಗದಲ್ಲಿ ಹರಿವೆ, ಪಾಲಕ್‌, ಮೆಂತ್ಯೆಸೊಪ್ಪು ಎಂದೆಲ್ಲ ಬೆಳೆದಿರುವುದನ್ನು ನೋಡಿ ನಿಬ್ಬೆರಗಾಗಿಬಿಟ್ಟೆ. ಒಂದು ಚೂರು ಮಣ್ಣನ್ನೂ ಇಲ್ಲಿನ ಜನರು ಹಾಳು ಮಾಡುವುದಿಲ್ಲವಲ್ಲ ಎಂದು ಅವರ ಬಗ್ಗೆ ಅಭಿಮಾನವೂ ಆಯ್ತು. ಪಟ್ಟಣಕ್ಕೆ ವ್ಯಾಪಕವಾಗಿ ವಲಸೆ ಬಂದಿರುವವರೆಲ್ಲ, ಆಗಿಂದಾಗ ಹೀಗೆ ತಮ್ಮ ಬೇರುಗಳನ್ನು, ತಮ್ಮೂರಿನ ಹಸಿರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಹೀಗೆಯೇ, ನಡುಪೇಟೆಯಲ್ಲಿ ಮನೆ ಮುಂದೆ ಅಡಿಕೆ ಮರಗಳನ್ನು ಹೋಲುವ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದರು.

ಹೀಗೆ, ವಾಣಿಜ್ಯ ಉದ್ದೇಶವಿಲ್ಲದೆ ಆಹಾರದ ಸ್ವಾವಲಂಬನೆಗೆ ಮತ್ತು ಮನಸ್ಸಂತೋಷಕ್ಕೆ ಬೆಳೆಸುವ ಈ ಪುಟ್ಟ ತೋಟಗಳು, ಮನೆಗೆ ಒಂದು ವಿಶಿಷ್ಟ ಶೋಭೆ ತಂದುಕೊಡುವುದು ಸತ್ಯ. ಕೆಲವರು, ಬಡಾವಣೆಗಳಲ್ಲಿ ತಾವು ಬೆಳೆದ ಕರಿಬೇವು, ಕೊತ್ತಂಬರಿ ಸೊಪ್ಪು ಎಂದು ಹಂಚುತ್ತಿರುವಾಗ, ದೇವರ ಪೂಜೆಗೆ ಬೇಕಾದಷ್ಟು ದಾಸವಾಳವೋ, ಮಾವಿನ ಎಲೆಗಳ್ಳೋ ನಮ್ಮ ಮನೆಯ ಮುಂದೆಯೂ ಇದೆ ಎಂದು ಸಣ್ಣದಾಗಿ ಹೆಮ್ಮೆಪಟ್ಟುಕೊಳ್ಳುತ್ತಿರುವಾಗ, ಗಾರ್ಡನಿಂಗ್‌ಎನ್ನುವುದು ಇನ್ನಷ್ಟು ವ್ಯಾಪಕವಾಗಬೇಕು ಎಂದೆನಿಸುತ್ತದೆ. ಹೂವು-ಹಣ್ಣು-ತರಕಾರಿ ಬೆಳೆಯುವ ಆಸಕ್ತಿ ಹಿಂದಿನ ಮಹಿಳೆಯರಂತೆ, ಇಂದಿನ ಹೆಣ್ಮಕ್ಕಳಲ್ಲೂ ಮೂಡಲಿ. ಎಲ್ಲಿಂದಲೋ ತಂದ ತರಕಾರಿ ಬೀಜ, ಹೂವಿನ ಗಿಡದ ರೆಂಬೆ, ಇನ್ನೆಲ್ಲೋ ಜೀವ ಪಡೆಯುವಂತಾಗಲಿ.

-ಜಯ ಶ್ರೀ ಬಿ.ಕದ್ರಿ

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.