ಡೈವಿಂಗ್ ಸ್ಕೂಲ್ : ‘ಬಾ’ ಎನ್ನುತ್ತಿದೆ ಸ್ಕೂಬಾ…
Team Udayavani, May 4, 2019, 10:07 AM IST
ಮನುಷ್ಯನ ಕುತೂಹಲಕ್ಕೆ ಪಾರವೇ ಇಲ್ಲ. ಪ್ರವಾಸದ ನೆಪದಲ್ಲಿ ನಾನಾ ಪ್ರದೇಶಗಳಿಗೆ ಭೇಟಿ ನೀಡುವವರದು ಒಂದು ಗುಂಪಾದರೆ, ಇನ್ನು ಕೆಲವರು ಸುಲಭಕ್ಕೆ ಕಾಣದ, ಕೆಲವೇ ಮಂದಿ ವೀಕ್ಷಣೆಯ ಭಾಗ್ಯ ಪಡೆದಿರುವ ಅಂಡರ್ ವಾಟರ್ ಡೈವಿಂಗ್ ಮಾಡಲು ಕಾತರಿಸುತ್ತಾರೆ.
ಅದಕ್ಕೆ ದೈಹಿಕ ಸಾಮರ್ಥ್ಯ ಮತ್ತು ವಿಶೇಷ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಅದನ್ನು ಒದಗಿಸುವ ಕೇಂದ್ರಗಳಲ್ಲೊಂದು “ಶಾರ್ಕ್ ಟೇಲ್ ಸ್ಕೂಬಾ ಡೈವಿಂಗ್ ಸೆಂಟರ್’!
ಎಲ್ಲೋ ದ್ವೀಪಕ್ಕೆ ಹೋದಾಗ, ಬೆಂಗಳೂರಿಗರಿಗೆ ಅನ್ಸುತ್ತೆ… “ಛೇ, ಬೆಂಗಳೂರಿನಲ್ಲಿ ಸಮುದ್ರವೇ ಇಲ್ಲ. ಇದ್ದಿದ್ದರೆ ನಾಲ್ಕು ಮುಳುಕು ಹೊಡೆದು, ಸ್ಕೂಬಾ ಡೈವಿಂಗ್ ಕಲಿಯಬಹುದಿತ್ತು…’ ಅಂತ. ಆದರೆ, ಈ ಕೊರತೆಯನ್ನು ನೀಗಿಸಲೆಂದೇ ಹುಟ್ಟಿಕೊಂಡಿರೋದು, ಕಲ್ಯಾಣ ನಗರದಲ್ಲಿರುವ “ಶಾರ್ಕ್ ಟೇಲ್ ಸ್ಕೂಬಾ’. ಅಂಡರ್‌ವಾಟರ್ ಸ್ಕೂಬಾ ಡೈವಿಂಗ್ ಅನುಭವವನ್ನು ಈ ಟ್ರೇನಿಂಗ್ ಶಾಲೆ ಕಟ್ಟಿಕೊಡುತ್ತದೆ.
ಶಿಸ್ತಿನ ಪಾಠ
ಶುರುವಿನಲ್ಲಿ ಮೊದಲು ಥಿಯರಿ ಕ್ಲಾಸುಗಳಿರುತ್ತವೆ. ಅಲ್ಲಿ, ಶಾಲೆಯ ವಿದ್ಯಾರ್ಥಿ ಗಳಂತೆ ಆಸಕ್ತರು ಸ್ಕೂಬಾ ಡೈವಿಂಗ್‌ನ ಮೊದಲ ಪಾಠಗಳನ್ನು ಪಠ್ಯ ಮುಖೇನ ಕಲಿಯುತ್ತಾರೆ. ಸಣ್ಣಮಟ್ಟದ ಪರೀಕ್ಷೆ ಕೂಡಾ ಬರೆಯಬೇಕಾಗುತ್ತದೆ. ಆ ಮೂಲಕ ನೀವು ಎಷ್ಟು ಚೆನ್ನಾಗಿ ಪಾಠ ಕೇಳಿದ್ದೀರಿ ಎಂಬುದು ನಿಮಗೆ ಮತ್ತು ತರಬೇತುದಾರರಿಗೆ ಮನದಟ್ಟಾಗುತ್ತದೆ.
ಆದ್ದರಿಂದ ವಿದ್ಯಾರ್ಥಿಗಳು ಗಮನ ವಹಿಸಿ ಪಾಠ ಕೇಳಬೇಕು. ಸ್ಕೂಬಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಬೇಜಾರು ಪಡುವ ಅಗತ್ಯವೇನಿಲ್ಲ. ಮತ್ತೆ ಓದಿ ವಿಷಯಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
ಆತ್ಮವಿಶ್ವಾಸ ಹೆಚ್ಚಳ
ಪಠ್ಯ ಮತ್ತು ಪರೀಕ್ಷೆ ಮುಗಿಸಿದ ನಂತರ ಮುಂದಿನದು ಪ್ರಾಕ್ಟಿಕಲ್ ಹಂತ. ಇಲ್ಲಿ ವಿದ್ಯಾರ್ಥಿಗಳು ಅಂಡರ್‌ವಾಟರ್ ದಿರಿಸು ತೊಟ್ಟು ಸ್ವಿಮ್ಮಿಂಗ್‌ಪೂಲ್‌ನಲ್ಲಿ ತರಬೇತಿ ನೀಡಲಾಗುತ್ತದೆ. ನೇರವಾಗಿ ಕಡಲಿಗೆ ಇಳಿಯುವ ಮುನ್ನ ನಿಮ್ಮ ಸಾಮರ್ಥ್ಯ ಪರೀಕ್ಷೆ ಇಲ್ಲಿಯೇ ಆಗುತ್ತದೆ. ಇದು ಕ್ರಿಕೆಟ್‌ನ ಅಭ್ಯಾಸ ಪಂದ್ಯವಿದ್ದ ಹಾಗೆ. ಇಲ್ಲಿ ಚೆನ್ನಾಗಿ ಸ್ಕೋರ್ ಮಾಡುವುದರಿಂದ ಮುಂದಿನ ಹಂತವನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು.
ಪ್ರಮಾಣೀಕೃತ ತರಬೇತಿಗಳಿವು
ಸರ್ಟಿಫೈಡ್ ಪ್ರೋಗ್ರಾಮ್‌ಗಳು ಇದಾಗಿದ್ದು, ಸ್ವಿಮ್ಮಿಂಗ್‌ಪೂಲ್‌ನಲ್ಲಿ ಸ್ಕೂಬಾ ಡೈವಿಂಗ್ ಕಲೆಯನ್ನು ಪರಿಣತರು ಇಲ್ಲಿ ಹೇಳಿಕೊಡುತ್ತಾರೆ. ಇಲ್ಲಿ ಕಲಿತು ಪರ್ಫೆಕ್ಟ್ ಆದರೆ, ಮುರ್ಡೇಶ್ವರ ಇಲ್ಲವೇ ಪಾಂಡಿಚೇರಿಯ ಸ್ಕೂಬಾ ಡೈವಿಂಗ್ ತಾಣಗಳಿಗೆ ತೆರಳುವ ಅವಕಾಶವನ್ನೂ ಒದಗಿಸಲಾಗುತ್ತದೆ. ಅಲ್ಲಿ ನಿಜವಾದ ಅಂಡರ್ ವಾಟರ್ ಡೈವಿಂಗ್ ನೀಡುವ ಅಭೂತಪೂರ್ವ ಅನುಭವವನ್ನು ನಮ್ಮದಾಗಿಸಿಕೊಳ್ಳಬಹುದು.
ಎಲ್ಲಿ?: 5ನೇ ಎ ಕ್ರಾಸ್, ಎಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ
ಸಂಪರ್ಕ: 9886795029
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.