ಬದುಕೆಂದರೇ ಅವಳು…


Team Udayavani, Jan 22, 2020, 4:32 AM IST

chi-8

ಅವಳಿಲ್ಲದಿದ್ದರೆ ನನ್ನಿಂದೇನೂ ಬದುಕಲಿಕ್ಕೆ ಸಾಧ್ಯವಿಲ್ಲವೆ ? ನಾನೀಗ ಮೊದಲಿಗಿಂತ ಖುಷಿಯಾಗಿದ್ದೇನೆ. ಮನೆಯಲ್ಲಿ ಯಾವುದೇ ಕಿರಿಕಿರಿ ಇಲ್ಲ. ಮಾತುಮಾತಿಗೆ ಜಗಳವಿಲ್ಲ. ಒಂದು ತಿಂಗಳಿನಿಂದ ಅದೆಷ್ಟು ಸಮಾಧಾನ ಮನೆ-ಮನದಲ್ಲಿ. ಇಷ್ಟು ಸಾಕಲ್ಲವೆ ನೆಮ್ಮದಿಯಿಂದ ಬದುಕಲು? ಬದುಕಿನ ಪ್ರತಿ ಹಂತದಲ್ಲಿಯೂ ಅವಳು ಇರಲೇಬೇಕೆನ್ನುವ ಅವಶ್ಯಕತೆ ಏನಿದೆ?

ನಿತ್ಯದ ಮಾತಿನ ಅಲರಾಂನಂತಿದ್ದ ಅವಳಿಲ್ಲದೆ ಲೇಟಾಗಿಯೇ ಎದ್ದ. ಗೀಜರ್‌ ಹಾಕಿಲ್ಲದ ಕಾರಣ ಇಂದೂ ಕೂಡ ತಣ್ಣಿರಿನಲ್ಲೇ ಸ್ನಾನ. ಬೆಂಗಳೂರಿನ ಬೆಳಗಿನ ತಂಪಿಗೆ ಒಂದು ಕ್ಷಣ ಮೈ ನಡುಗಿತ್ತು. ಆದರೆ ಬೇರೆ ದಾರಿಯೇ ಇಲ್ಲ. ಕಷ್ಟವೋ ಸುಖವೋ ಸ್ನಾನ ಮುಗಿಸಿ ಬಚ್ಚಲಿನಿಂದ ಹೊರ ಬರುವ ಹೊತ್ತಿಗೆ ಗಂಟೆ ಹತ್ತು ದಾಟುತ್ತಿತ್ತು. ಅಡುಗೆ ಮನೆಯ ಕಟ್ಟೆಯ ಮೇಲೆ ಪಾತ್ರೆಗಳು ಕೇಳುವವರಿಲ್ಲದೆ ಬಿದ್ದಿದ್ದವು. ಒಂದೊಂದೇ ಸಾಮಾನು ಸರಿಸಿ ತಡಕಿದಾಗ ಸಿಕ್ಕ ಅಳಿದುಳಿದ ಬ್ರೆಡ್ಡಿನ ತುಂಡುಗಳೂ ಕೂಡ ಆಗಲೇ ಫ‌ಂಗಸ್ಸಿಗೆ ಬಲಿಯಾಗಿದ್ದವು. ಅದನ್ನು ಕಸದ ಬುಟ್ಟಿಗೆ ಹಾಕಿ, ಮಧ್ಯೆ ಹೋಟೆಲ್‌ನಲ್ಲಿ ತಿಂಡಿ ತಿಂದರಾಯ್ತು, ಎಂದು ಬಾಗಿಲಿಗೆ ಬೀಗ ಹಾಕುವಾಗ, ಒಮ್ಮೆ ಮನೆಯೊಳಗೆ ಕಣ್ಣಾಡಿಸಿದ. “ಹೋಗಿ ಬರುವೆ’ ಎಂದು ಹೇಳುವುದನ್ನು ಕೇಳಿಸಿಕೊಳ್ಳಲೂ ಅವಳಿಲ್ಲ. ಕೆನ್ನೆಗೆ ಮುತ್ತನಿಟ್ಟು “ಬೈ ಪಪ್ಪಾ’ ಎನ್ನುತ್ತಿದ್ದ ಕಂದಮ್ಮಗಳ ಕಿಲಕಿಲ ನಗುವಿಲ್ಲ. ದೀರ್ಘ‌ ಉಸಿರೆಳೆದುಕೊಂಡು ಬಿಟ್ಟ ನಿಟ್ಟುಸಿರು, ಮತ್ತಷ್ಟು ಭಾರವೆನ್ನಿಸಿತ್ತು.

ಅಯ್ಯೋ, ಅವಳಿಲ್ಲದಿದ್ದರೆ ನನ್ನಿಂದೇನೂ ಬದುಕಲಿಕ್ಕೆ ಸಾಧ್ಯವಿಲ್ಲವೆ ? ನಾನೀಗ ಮೊದಲಿಗಿಂತ ಖುಷಿಯಾಗಿದ್ದೇನೆ. ಮನೆಯಲ್ಲಿ ಯಾವುದೇ ಕಿರಿಕಿರಿ ಇಲ್ಲ. ಮಾತುಮಾತಿಗೆ ಜಗಳವಿಲ್ಲ. ಒಂದು ತಿಂಗಳಿನಿಂದ ಅದೆಷ್ಟು ಸಮಾಧಾನ ಮನೆ-ಮನದಲ್ಲಿ. ಇಷ್ಟು ಸಾಕಲ್ಲವೆ ನೆಮ್ಮದಿಯಿಂದ ಬದುಕಲು? ಬದುಕಿನ ಪ್ರತಿ ಹಂತದಲ್ಲಿಯೂ ಅವಳು ಇರಲೇಬೇಕೆನ್ನುವ ಅವಶ್ಯಕತೆ ಏನಿದೆ? ಮದುವೆಗೂ ಮುಂಚೆ ಯಾರೂ ಇಲ್ಲದೆ ಖುಷಿಯಾಗಿಯೇ ಇದ್ದೆನಲ್ಲವೆ ? ಅವಳಿಲ್ಲದ ಜೀವನ ಅಪೂರ್ಣವೇನಲ್ಲ ಎಂದುಕೊಂಡ.  ಅವಳು ಮನೆ ಬಿಟ್ಟು ಹೋಗಿ ತಿಂಗಳು ಕಳೆದರೂ, ಕೋಪದ ಬೂದಿ ಮುಚ್ಚಿದ ಕೆಂಡದಿಂದ ಆಗಾಗ ನೆನಪುಗಳು ಹೊಗೆಯಾಡುತ್ತಿವೆ. ಈ ದುಗುಡದ ಮಧ್ಯೆಯೇ ದಾರಿಯಲ್ಲಿ ಸಿಕ್ಕಿದ ಹೋಟೆಲ್ ಹೊಕ್ಕು ತಿಂಡಿ ತಿಂದ. ಆದರೆ, ಅದ್ಯಾಕೋ ರುಚಿಸಲಿಲ್ಲ.

ಆಫೀಸು ತಲುಪಿ ಕೆಲಸದಲ್ಲಿ ಮುಳುಗಿದರೂ, ಮಧ್ಯೆಮಧ್ಯೆ ಅವಳು ಮಾಡುತ್ತಿದ್ದ ಮೆಸೇಜ್‌, ಕಾಲ್ ಗಳ ಕೊರತೆ ಕಾಡಿದ್ದಂತೂ ಸುಳ್ಳಲ್ಲ. ಆದರೂ ಗಂಡಲ್ಲವೇ, ಅಹಂ ಬಿಡಲು ಮನಸ್ಸೇ ಒಪ್ಪುತ್ತಿಲ್ಲ. ಊಟದ ಸಮಯದಲ್ಲಿ ಮತ್ತೆ ಮತ್ತೆ ಮೊಬೈಲ್‌ ನೋಡುತ್ತಾ, ಫೋನ್‌ ಮಾಡಲು ಮನಸ್ಸಾದರೂ, ನನ್ನಂತೆ ಅವಳಿಗೂ ನನ್ನ ನೆನಪಾಗೋಲ್ವಾ? ಹೆಣ್ಣು ಸ್ವಲ್ಪ ತಗ್ಗಿದರೇನು ತಪ್ಪು ? ಎಂದು ಒಳಗಿನ ಗಂಡು ಎದ್ದು ಇವನನ್ನೇ ಪ್ರಶ್ನಿಸಿದ. ಅವಳೇ ಮಾಡಲಿ ಎನ್ನುವುದು ಇವತ್ತೂ ಮುಂದುವರೆಯಿತು.

ಮಕ್ಕಳ ನಗುವಿನ, ಅಳುವಿನ, ಕಿರುಚಾಟದ ಖುಷಿಯ ಕ್ಷಣಗಳು. ಅವನ ಕಣ್ಣು ಮನಸುಗಳ ತುಂಬಾ ಅವೇ ನೆನಪುಗಳು. ಸಂಜೆಯಾಗುವ ವೇಳೆಗೆ ಅವನ ಮನದಲ್ಲಿ ಅದೆಂಥದೋ ವಿರಹದ ವೇದನೆ, ಅಗಲಿಕೆಯ ನೋವು, ಶಾಶ್ವತವಾಗಿ ಕಳೆದುಕೊಂಡರೆ ಎಂಬ ಭಯ, ಅವನಲ್ಲಿ ಹೇಳಲಾಗದ ಸಂಕಟವನ್ನು ಸೃಷ್ಟಿಸಿತ್ತು.

ಅವಳಿಲ್ಲದೆ ಬದುಕಲಾದೀತೆ? ಬದುಕಿದರೂ ನಿಜಕ್ಕೂ ಅದು ಬದುಕೇ ? ಮನೆ ಬಿಟ್ಟು ಅವಳು ಹೋಗುವಾಗ ನನಗೇಕೆ ತಡೆಯುವ ಮನಸಾಗಲಿಲ್ಲ? ನಾನಿಷ್ಟ ಪಡುವ ಫಿಲ್ಟರ್‌ ಕಾಫಿ, ಮುಂಜಾವಿನ ಸವಿ ನಿದ್ದೆಯಲಿದ್ದಾಗ ಅವಳು ಅಡುಗೆ ಮನೆಯಿಂದ ಗುನುಗುತ್ತಿದ್ದ ಹಾಡು, “ಹುಷಾರು ರೀ’ ಎಂದು ಹೇಳಿ ಬಾಗಿಲವರೆಗೂ ಬಂದು ಬೀಳ್ಕೊಡುವ ಪರಿ, ಚಿಕ್ಕ ಚಿಕ್ಕದಕ್ಕೂ ಮಕ್ಕಳಂತೆ ಕೋಪ ಮಾಡಿಕೊಳ್ಳುವಾಗ ಚೂಪಾಗುತ್ತಿದ್ದ ಅವಳ ಮೊಂಡು ಮೂಗು, ಅವನನ್ನು ಬಿಟ್ಟೂ ಬಿಡದೆ ಕಾಡಿತು.

ಅವಳೂ ನನ್ನಂತೆಯೇ ನೆನಪುಗಳಲ್ಲಿ ಒದ್ದಾಡುತ್ತಿರಬಹುದೇ…? ಪಾಪ ಹೆಣ್ಣು ಜೀವ, ಗಂಡನ ಮನೆಯೇ ಸರ್ವಸ್ವ ಎಂದು ತನ್ನವರನ್ನೆಲ್ಲಾ ಬಿಟ್ಟು ಬಂದಿರುತ್ತದೆ. ಅಲ್ಲೂ ಇಲ್ಲದ, ಇಲ್ಲೂ ಸಲ್ಲದ ಪರಿಸ್ಥಿತಿಯಲ್ಲಿ ಅದೆಷ್ಟು ನೋಯುತ್ತಿರುವಳ್ಳೋ ಎಂದು ಯೋಚಿಸುವ ಹೊತ್ತಿಗೆ ಗಂಟೆ ಸಂಜೆ ಆರು ದಾಟುತಿತ್ತು. ಆಫೀಸಿನಿಂದ ಹೊರಬಂದು ಕಾರ್‌ ಸ್ಟಾರ್ಟ್‌ ಮಾಡಿದ. ಅವನಿಗೆ ಅರಿವಿಲ್ಲದೆಯೇ ಗಾಡಿ ಅವಳ ತವರು ಮನೆಯತ್ತ ಸಾಗಿತು.
ಎಂದು ನಿನ್ನ ನೋಡುವೆ ?
ಎಂದು ನಿನ್ನ ಸೇರುವೆ ?
ನಿಜ ಹೇಳಲೇನು ? ನನ್ನ ಜೀವ ನೀನು…
ಎಂದು ಎಫ್ಎಂ ರೇಡಿಯೋ ಮಧುರವಾಗಿ ಗುನುಗುತ್ತಿತ್ತು.

– ಜಮುನಾ ರಾಣಿ ಎಚ್‌.ಎಸ್‌.

ಟಾಪ್ ನ್ಯೂಸ್

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

5-uv-fusion

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

3

Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!

2

Vitla: ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

4-uv-fusion

Childhood Times: ಕಳೆದು ಹೋದ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.