ಶ್ಯಾನೇ ಟಾಪ್ ಹೇರ್!
Team Udayavani, Jul 3, 2019, 5:00 AM IST
ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆ ಸ್ವಲ್ಪ ತ್ರಾಸದಾಯಕ. ಒದ್ದೆ ಕೂದಲು ಬೇಗ ಒಣಗದೆ, ಯಾವ ಹೇರ್‌ಸ್ಟೈಲ್ ಮಾಡುವುದಪ್ಪಾ ಅಂತ ಹುಡುಗಿಯರು ತಲೆ ಕೆಡಿಸಿಕೊಳ್ಳುವ ಕಾಲವಿದು. ಹಾಗಾಗಿಯೇ, ಮಳೆಗಾಲದಲ್ಲಿ ಮಾಡಬಹುದಾದ ಕೇಶವಿನ್ಯಾಸದ ಮಾಹಿತಿ ನಿಮಗಾಗಿ.
1. ಬ್ಯಾಲೆರಿನಾ ಬನ್
ಕೂದಲನ್ನು ಚೆನ್ನಾಗಿ ಬಾಚಿ, ಪುರ್ತಿ ಕೂದಲನ್ನು ಒಟ್ಟೂಗೂಡಿಸಿ ಮೂರು ಅಥವಾ ನಾಲ್ಕು ಸುತ್ತು ಸುತ್ತಿಕೊಂಡು, ಕುತ್ತಿಗೆಯ ಸ್ವಲ್ಪವೇ ಮೇಲೆ, ಎರಡೂ ಕಿವಿಗಳ ಮಧ್ಯದಲ್ಲಿ ಸಮನಾಗಿ ಕ್ಲಿಪ್‌ಗ್ಳ ಸಹಾಯದಿಂದ ಬನ್ ಶೇಪ್‌ನಲ್ಲಿ ಟಕ್ ಮಾಡುವ ಈ ಸ್ಟೈಲ್ ಮಳೆಗಾಲಕ್ಕೆ ಸೂಕ್ತ.
2. ಕ್ರೌನ್ ಬ್ರೆ„ಡೆಡ್ ಬನ್
ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ ಕಟ್ಟಿಕೊಳ್ಳಬೇಕು. ಅದಾದ ಮೇಲೆ ಕೂದಲನ್ನು ಮೂರು ಸಮ ಭಾಗಗಳಾಗಿ ವಿಂಗಡಿಸಿ, ಜಡೆ ಹೆಣೆದುಕೊಳ್ಳಿ. ಆ ಜಡೆಯನ್ನು ಹಣೆಗೆ ಒಂದು ಸುತ್ತು ಸುತ್ತಿ, ಹೈ ಪೋನಿ ಕಟಿ¤ಕೊಂಡಲ್ಲಿ ಹೇರ್‌ಪಿನ್ ಸಹಾಯದಿಂದ ಪಿನ್ ಮಾಡಿ. ಈ ಕೇಶ ವಿನ್ಯಾಸ, ಉದ್ದನೆಯ ಕೂದಲಿಗೆ ಹೆಚ್ಚು ಸೂಕ್ತ.
3.ಡಬಲ್ ಪ್ಲೀಟೆಡ್ ಬನ್
ಕೂದಲನ್ನು ಚೆನ್ನಾಗಿ ಬಾಚಿಕೊಂಡು, ತಲೆಯ ಕೆಳಭಾಗದಿಂದ ಸರಿಯಾಗಿ ಎರಡು ಭಾಗ ಮಾಡಿಕೊಂಡು, ಎರಡು ಜಡೆ ಹಾಕಿಕೊಳ್ಳಿ. ಈ ಜಡೆಗಳಿಂದ ತಲೆಯ ನಡುಭಾಗದಲ್ಲಿ ಬಿಗಿಯಾಗಿ ಗಂಟು ಹಾಕಿಕೊಳ್ಳಿ. ಈ ಗಂಟು ಗಟ್ಟಿಯಾಗಿರಲು ಹೇರ್‌ಪಿನ್ ಅನ್ನು ಹಾಕಿ, ಉಳಿದ ಕೂದಲನ್ನು ಗಂಟು ಹಾಕಿಕೊಂಡ ಕೂದಲಿಗೆ ಕ್ಲಾಕ್‌ವೆçಸ್ ಆಗಿ ಜೋಡಿಸಿಕೊಳ್ಳಬೇಕು. ಎಲ್ಲ ಕೂದಲನ್ನು ಜೋಡಿಸಿಕೊಂಡ ನಂತರ ಹೇರ್‌ಪಿನ್‌ನಿಂದ ಭದ್ರಗೊಳಿಸಿ.
4. ಸೈಡ್ ಫ್ರೆಂಚ್ ಪ್ಲೀಟೆಡ್ ಬನ್
ಕೂದಲನ್ನು ಸೈಡ್ ಪಾರ್ಟಿಶನ್ ಮಾಡಿಕೊಂಡು, ಹೆಚ್ಚು ಕೂದಲಿರುವ ಭಾಗದಲ್ಲಿ ಮತ್ತೆ ಮೂರು ಭಾಗ ಮಾಡಿ, ಫ್ರೆಂಚ್ ಪ್ಲೇಟ್ ಹಾಕಿ ರಬ್ಬರ್ ಬ್ಯಾಂಡ್‌ನಿಂದ ಕಟ್ಟಿ. ಉಳಿದ ಕೂದಲನ್ನು ಅದೇ ಸೈಡ್ ಬಾಚಿಕೊಂಡು ಬನ್ ಹಾಕಿಕೊಳ್ಳಿ.
5. ಪ್ರಟ್ಜೆಲ್ ಬನ್
ಕೂದಲನ್ನು ಬಾಚಿಕೊಂಡು, ಎರಡರಿಂದ ಮೂರು ಸುತ್ತು ಸುತ್ತಿ, ಕಿವಿಯ ಹತ್ತಿರ ಒಂದು ಬದಿಯಲ್ಲಿ ಲೂಸ್/ ಮೆಸ್ಸಿಯಾಗಿ ಬನ್ ಹಾಕಿಕೊಳ್ಳಬೇಕು. ಹಣೆಯಿಂದ/ಕೆನ್ನೆಯ ಬದಿಯಿಂದ ಒಂದೊಂದು ಕೂದಲನ್ನು ಕ್‌ರ್ಲ್ ಮಾಡಿಕೊಂಡು ಟೈ ಮಾಡದೆ ಹಾಗೇ ಬಿಡಬೇಕು.
6. ಟ್ರೆ„ ಟ್ವಿಸ್ಟೆಡ್ ಪೋನಿ ಬನ್
ಕೂದಲನ್ನು ಮೂರು ಪಾಲು ಮಾಡಿ, ಮೂರು ಪಾಲನ್ನೂ ಟ್ವಿಸ್ಟ್ ಮಾಡಿ ಹೇರ್‌ಪಿನ್ ಸಹಾಯದಿಂದ ಮೂರು ಸ್ಟೆಪ್ ಜಡೆ ಹಣೆದು, ಪೋನಿ ಟೈಲ್ ಹಾಕಿಕೊಳ್ಳಬೆಕು. ನಂತರ ಅದೇ ಪೋನಿಯನ್ನು ಬನ್ ಮಾಡಿಕೊಳ್ಳಬೇಕು.
-ಮೇಘನಾ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.