ಬೂಟು ಕಾಲಿನ ಬ್ಯೂಟಿ!

Team Udayavani, Jun 6, 2018, 9:26 AM IST

bootu.jpg

ಮಳೆಯಿಂದ ಪಾದಗಳನ್ನು ರಕ್ಷಿಸಿಕೊಳ್ಳಬೇಕು ಮತ್ತು ಉಳಿದವರಿಗಿತ ಬಿನ್ನವಾಗಿ ಕಾಣಬೇಕು ಎನ್ನುವವರಿಗೆ ಗಮ್‌ಬೂಟ್‌ಗಳು ಬೆಸ್ಟ್‌ ಚಾಯ್ಸ. ಹೆಚ್ಚಾ ಕಮ್ಮಿ ಮೊಣಕಾಲಿನವರೆಗೂ ಬರುವ ಈ ಗಮ್‌ಬೂಟ್‌ಗಲನ್ನು ಜೀನ್ಸ್‌ ಪ್ಯಾಂಟ್‌, ಲೆಗ್ಗಿಂಗ್ಸ್‌, ಟ್ರೆಂಚ್‌ ಕೋಟ್‌ ಹಾಗೂ ಶಾರ್ಟ್‌ಗಳ ಜೊತೆ ಹಾಕಿಕೊಳ್ಳಬಹುದು.

ಮಳೆ ಶುರುವಾಗಿದೆ. ಆಫೀಸು, ಶಾಲಾ ಕಾಲೇಜಿಗೆ ಹೋಗುವವರು ತಮ್ಮ ತಮ್ಮ ಬ್ಯಾಗ್‌ನಲ್ಲಿ ಛತ್ರಿಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಮಳೆಯಿಂದ ಕೇವಲ ತಲೆಯನ್ನು ರಕ್ಷಿಸಿಕೊಂಡರೆ ಸಾಕೇ? ಇಲ್ಲ, ಕೈ- ಕಾಲುಗಳನ್ನೂ ಕಾಪಾಡಿಕೊಳ್ಳಬೇಕು. ಅದಕ್ಕೆಂದು ಹೋದÇÉೆÇÉಾ ರೈನ್‌ ಕೋಟ್‌ ಧರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಗಮ್‌ಬೂಟ್‌ಗಳು ಸಹಾಯಕ್ಕೆ ಬರುತ್ತವೆ. ನಾವು ಪಾದದ ಆರೈಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಸಮೀಕ್ಷೆಯೊಂದರ ಪ್ರಕಾರ ಮನುಷ್ಯ ಅತಿ ಹೆಚ್ಚು ನಿರ್ಲಕ್ಷಿಸುವ ದೇಹದ ಅಂಗ ಎಂದರೆ ಕಾಲುಗಳು. ಪೆಡಿಕ್ಯೂರ್‌ ಮಾಡಿಸಿಕೊಳ್ಳಲು ಬಿಡುವಿಲ್ಲ ಎಂದೋ, ಅಥವಾ ಪಾದಗಳಿಗೆ ಆರೈಕೆ ಬೇಕಿಲ್ಲ ಎಂದೋ ಜನರು ದೇಹದ ಈ ಅಂಗವನ್ನು ನಿರ್ಲಕ್ಷಿಸುತ್ತಾರೆ. 

ಗಮ್‌ಬೂಟ್‌ ಎಂದಾಗ ಕಣ್ಣ ಮುಂದೆ ಬರುವುದು ಕಟ್ಟಡ ಕಾಮಗಾರಿ ನಡೆಯುವ ಸೈಟ್‌ಗಳಲ್ಲಿ ಕೆಲಸ ಮಾಡುವವರು ತೊಟ್ಟ ಸಿಮೆಂಟ್‌ ಕೊಳೆ ಮೆತ್ತಿಕೊಂಡ ಶೂಗಳು. ಆದರೀಗ ತೋಟ, ಗ¨ªೆ ಅಥವಾ ಸೈಟ್‌ಗಳಲ್ಲಿ ಕೆಲಸ ಮಾಡುವವರು ಮಾತ್ರವಲ್ಲ, ಆಫೀಸ್‌ ಮತ್ತು ಕಾಲೇಜಿಗೆ ಹೋಗುವವರು ಸಹ ಗಮ್‌ ಬೂಟ್‌ಗಳನ್ನು ತೊಡಬಹುದು. ಏಕೆಂದರೆ ಗಮ್‌ ಬೂಟ್‌ಗಳು ಕಪ್ಪು, ಕಂದು ಅಥವಾ ಗಾಢವಾದ ಬೋರಿಂಗ್‌ ಬಣ್ಣಗಳಲ್ಲಿ ಮಾತ್ರವಲ್ಲ, ಕಣ್ಣಿಗೆ ಮುದ ನೀಡುವ ತಿಳಿ ಬಣ್ಣಗಳಲ್ಲೂ ಲಭ್ಯ ಇವೆ. ಅನಿಮಲ್‌ ಪ್ರಿಂಟ್‌, ಮಿಲಿಟರಿ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌, ಪೋಲ್ಕಾ ಡಾಟ್ಸ್‌, ಚೆಕÕ…, ಬ್ರಿಟಿಷ್‌ ಫ್ಲಾÂಗ್‌ (ಧ್ವಜ), ಅಮೆರಿಕನ್‌ ಫ್ಲಾÂಗ್‌, ಸಾಲಿಡ್‌ ಕಲರ್ಡ್‌, ಸ್ಪ್ರೆà ಪೇಂಟ್‌, ಕಾಮಿಕ್‌ ಪ್ರಿಂಟ್‌, ರೇನ್‌ಬೋ ಪ್ರಿಂಟ್‌ (ಕಾಮನ ಬಿಲ್ಲಿನ ಬಣ್ಣಗಳು), ಸ್ಕಲ್‌ (ಬುರುಡೆ) ಡಿಸೈನ್‌, ಹೀಗೆ ಮುಗಿಯದಷ್ಟು ವಿನ್ಯಾಸಗಳ ಉದ್ದ ಪಟ್ಟಿಯೇ ಇದೆ!

ಇವುಗಳನ್ನು ಕಾಲುಗಳಿಗೆ ಬಿಗಿಯಾಗಿ ಕಟ್ಟಿಕೊಳ್ಳಲು ಲೇಸ್‌, ಬಟನ್‌ (ಗುಂಡಿ), ವೆಲೊðà, ಬಕಲ…, ಜಿಪ್‌ ಮುಂತಾದ ಮಾದರಿಗ ಗಮ್‌ ಬೂಟ್‌ಗಳು ಮಾರುಕಟ್ಟೆಯಲ್ಲಿವೆ. ಇವುಗಳ ಅಂದವನ್ನು ಹೆಚ್ಚಿಸುವ ಚಿಕ್ಕ ಪುಟ್ಟ ಬೋ (ರಿಬ್ಬನ್‌ ಬಳಸಿ ಗಂಟು ಹಾಕುವ ಒಂದು ಬಗೆ), ಕ್ಲಿಪ್‌, ಕೀ ಚೈನ್‌ನಂಥ ಹ್ಯಾಂಗಿಂಗ್‌ಗಳು, ಮ್ಯಾಗ್ನೆಟ್‌ (ಅಯಸ್ಕಾಂತ), ಮಣಿಗಳು ಇತ್ಯಾದಿ ಆಯ್ಕೆಗಳೂ ಇವೆ. ಇನ್ನು ನಿಮಗೆ ಬೇಕಾದ ಬಣ್ಣ ಮತ್ತು ವಿನ್ಯಾಸದ ಗಮ್‌ ಬೂಟ್‌ಗಳೂ ಲಭ್ಯ. ನಿಮ್ಮ ಹೆಸರು, ಭಾವಚಿತ್ರ, ನಿಮ್ಮ ಸಾಕು ಪ್ರಾಣಿಯ ಹೆಸರು ಅಥವಾ ಚಿತ್ರ, ನಿಮ್ಮ ನೆಚ್ಚಿನ ಸೂಪರ್‌ ಹೀರೋನ ಚಿತ್ರವನ್ನು ಗಮ್‌ ಬೂಟ್‌ಗಳಲ್ಲಿ ಮೂಡಿಸಬಹುದು. ಇವುಗಳನ್ನು ಮಾಡಿಕೊಡುವ ಆನ್‌ಲೈನ್‌ ಸೇವೆಗಳೂ ಇವೆ.

ಹೆಚ್ಚಾಕಮ್ಮಿ ಮೊಣಕಾಲವರೆಗೂ ಬರುವ ಈ ಗಮ್‌ ಬೂಟ್‌ಗಳನ್ನು ಜೀ®Õ… ಪ್ಯಾಂಟ್‌, ಲೆಗಿಂಗÕ…, ಟ್ರೆಂಚ್‌ ಕೋಟ್‌, ಲಂಗ ಮತ್ತು  ಶಾರ್ಟ್‌ (ಗಿಡ್ಡ) ದಿರಿಸುಗಳ ಜೊತೆ ಹಾಕಿಕೊಳ್ಳಬಹುದು. ಗಮ್‌ ಬೂಟ್‌ ಫ್ಲಾಟ್‌ ಆಗಿರಬೇಕೆಂದೇನಿಲ್ಲ. ಇವುಗಳಲ್ಲೂ ಹೈ ಹೀಲ್ಡ… ಆಯ್ಕೆಗಳಿವೆ. ಧರಿಸಿದ ಬಟ್ಟೆ ಸಿಂಪಲ್‌ ಆದರೂ ಪರವಾಗಿಲ್ಲ, ಪಾದರಕ್ಷೆಗಳು ವಿಶಿಷ್ಟ ವಾಗಿದ್ದರೆ ಅತ್ಯಾಕರ್ಷಕವಾಗಿ ಕಾಣುವುದರಲ್ಲಿ ಅನುಮಾನ ಬೇಡ. ಹಾಗಾಗಿ ಮತ್ತೆ ಮಳೆ ಬಂದಾಗ ಕಾಲಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಚೆಂದವೂ ಕಾಣಬಹುದು.

– ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.