ಸೈಡ್ಸ್ ಸ್ಪೆಷಲ್…
Team Udayavani, Aug 21, 2019, 5:04 AM IST
ಹಬ್ಬಕ್ಕೆ ಏನು ಅಡುಗೆ ಮಾಡಿದ್ರಿ ಅಂತ ಕೇಳುವವರಿಗೆ, ಪ್ರತಿ ವರ್ಷವೂ ಒಂದೇ ರೀತಿ ಉತ್ತರಿಸಿದರೆ ಏನು ಚಂದ? ಈ ಬಾರಿಯ ಹಬ್ಬಕ್ಕೆ ಸಿಹಿಯಡುಗೆಯ ಜೊತೆಗೆ, ಸ್ಪೆಷಲ್ಲಾಗಿ ನೆಂಚಿಕೊಳ್ಳಲು ಹೊಸಬಗೆಯ ಖಾರದ ತಿನಿಸುಗಳನ್ನು ತಯಾರಿಸಿ.
1. ಆಲೂಗಡ್ಡೆ ಮಸಾಲೆ
ಬೇಕಾಗುವ ಸಾಮಗ್ರಿ: ಸಣ್ಣ ಗಾತ್ರದ ಆಲೂಗಡ್ಡೆ- 8-10, ಒಣಮೆಣಸು-5, ಉದ್ದಿನ ಬೇಳೆ-2 ಚಮಚ, ಕಡಲೆ ಬೇಳೆ-1 ಚಮಚ, ಕಾಳುಮೆಣಸು-1 ಚಮಚ, ಜೀರಿಗೆ, ಸಾಸಿವೆ, ಇಂಗು- ಸ್ವಲ್ಪ, ಈರುಳ್ಳಿ-1 ದೊಡ್ಡದು, ಎಣ್ಣೆ- 3 ಚಮಚ, ಉಪ್ಪು-ರುಚಿಗೆ, ಕೊತ್ತಂಬರಿ ಸೊಪ್ಪು, ಕರಿಬೇವು ಸ್ವಲ್ಪ.
ಮಾಡುವ ವಿಧಾನ: ಸಣ್ಣ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆದಿಟ್ಟುಕೊಳ್ಳಿ. ನಂತರ, ಬಾಣಲೆಗೆ ಎಣ್ಣೆ ಹಾಕಿ ಒಣಮೆಣಸು, ಕಾಳು ಮೆಣಸು, ಉದ್ದಿನ ಬೇಳೆ ಹಾಕಿ, ಕಂದು ಬಣ್ಣ ಬರುವ ತನಕ ಹುರಿದು, ಮಿಕ್ಸಿಗೆ ಹಾಕಿನುಣ್ಣಗೆ ಪುಡಿ ಮಾಡಿ ಮಸಾಲೆ ಮಾಡಿ.
ಈಗ ಪ್ರತ್ಯೇಕವಾಗಿ ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಕಡಲೆಬೇಳೆ ಹಾಕಿ ಚೆನ್ನಾಗಿ ಹುರಿಯಬೇಕು. ಸಾಸಿವೆ ಸಿಡಿದ ಕೂಡಲೇ ಹೆಚ್ಚಿಟ್ಟ ಈರುಳ್ಳಿಯನ್ನು ಹಾಕಿ, ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಸಿಪ್ಪೆ ತೆಗೆದ ಆಲೂಗಡ್ಡೆಗಳನ್ನು ಈ ಮಿಶ್ರಣಕ್ಕೆ ಹಾಕಿ, ಐದು ನಿಮಿಷ ಚೆನ್ನಾಗಿ ಹುರಿಯಿರಿ. ನಂತರ ಚಿಟಿಕೆ ಅರಶಿನ ಪುಡಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಈಗಾಗಲೇ ಪುಡಿ ಮಾಡಿಟ್ಟ ಮಸಾಲವನ್ನು ಸೇರಿಸಿ, ಸಣ್ಣ ಉರಿಯಲ್ಲಿ 10 ನಿಮಿಷ ಕಾಲ ಹುರಿದು, ಕೆಳಗಿಳಿಸಿ. ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ, ಇದರ ಮೇಲೆ ಉದುರಿಸಿದರೆ ರುಚಿಯಾದ ಆಲೂಗಡ್ಡೆ ಮಸಾಲ ರೆಡಿ. ಇದನ್ನು ಚಪಾತಿ, ರೊಟ್ಟಿ, ಅನ್ನದ ಜೊತೆ ಪಲ್ಯದಂತೆ ಬಳಸಬಹುದು.
2. ಟೊಮೇಟೊ ಚಟ್ನಿ
ಬೇಕಾಗುವ ಸಾಮಗ್ರಿ: ಟೊಮೇಟೊ-5, ಈರುಳ್ಳಿ-2, ಬೆಲ್ಲ- 1 ಸಣ್ಣತುಂಡು, ಬೆಳ್ಳುಳ್ಳಿ, ಒಣಮೆಣಸು-4, ಹುಣಸೆ ಹುಳಿ- ಲಿಂಬೆಗಾತ್ರದಷ್ಟು, ಕೊತ್ತಂಬರಿ-1 ಚಮಚ, ಜೀರಿಗೆ- ಅರ್ಧ ಚಮಚ, ಮೆಂತೆ- ಕಾಲು ಚಮಚ, ಸಾಸಿವೆ, ಕೊತ್ತಂಬರಿ ಸೊಪ್ಪು, ಕರಿಬೇವಿನಸೊಪ್ಪು, ಅಡುಗೆ ಎಣ್ಣೆ -3 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಇಂಗು.
ಮಾಡುವ ವಿಧಾನ: ಒಣಮೆಣಸು, ಕೊತ್ತಂಬರಿ, ಜೀರಿಗೆ, ಮೆಂತ್ಯೆ ಮತ್ತು ಸಾಸಿವೆಯನ್ನು ಹುರಿದು, ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಈರುಳ್ಳಿ ಮತ್ತು ಟೊಮೇಟೊವನ್ನು ಸಣ್ಣದಾಗಿ ಹೆಚ್ಚಿಡಿ. ನಂತರ ಬಾಣಲೆಗೆ ಒಂದು ಚಮಚ ಅಡುಗೆ ಎಣ್ಣೆ ಹಾಕಿ, ಹೆಚ್ಚಿಟ್ಟ ಈರುಳ್ಳಿಯನ್ನು ಸ್ವಲ್ಪ ಹೊತ್ತು ಹುರಿದು, ಹೆಚ್ಚಿಟ್ಟ ಟೊಮೇಟೊವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು, ಸ್ವಲ್ಪ ಹುಣಸೆ ರಸವನ್ನು ಸೇರಿಸಿ, ಮತ್ತೂಂದು ಬಾಣಲೆಗೆ ಹಾಕಿ ಬೇಯಲು ಇಡಿ. ಮಿಶ್ರಣ ಬೇಯುತ್ತ ಬರುತ್ತಿದ್ದಂತೆ, ಒಂದು ತುಂಡು ಬೆಲ್ಲವನ್ನು ಹಾಕಿ. ಬೆಲ್ಲ ಕರಗಿದ ನಂತರ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಈಗ ಇದಕ್ಕೆ ಈಗಾಗಲೇ ಪುಡಿ ಮಾಡಿಟ್ಟಿರುವ ಮಸಾಲ ಮತ್ತು ಉಪ್ಪು ಹಾಕಿ. ಸಾಸಿವೆ, ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿ, ಬೇಯಿಸಿಟ್ಟ ಟೊಮೇಟೊಗೆ ಸೇರಿಸಿದರೆ ಚಟ್ನಿ ರೆಡಿ.
3. ಹಾಗಲಕಾಯಿ ಪಲ್ಯ
ಬೇಕಾಗುವ ಸಾಮಗ್ರಿ: ಹೆಚ್ಚಿದ ಹಾಗಲಕಾಯಿ -1 ಕಪ್, ಹುಣಸೆಹಣ್ಣು – ಲಿಂಬೆ ಗಾತ್ರದಷ್ಟು, ಬೆಲ್ಲ -1 ತುಂಡು, ಈರುಳ್ಳಿ -2, ಒಣಮೆಣಸು- 6, ಕೊತ್ತಂಬರಿ- 3 ಚಮಚ, ಜೀರಿಗೆ-2 ಚಮಚ, ಸಾಸಿವೆ, ಉದ್ದಿನ ಬೇಳೆ -1 ಚಮಚ, ಉಪ್ಪು-ರುಚಿಗೆ, ಬೆಳ್ಳುಳ್ಳಿ, ಅಡುಗೆ ಎಣ್ಣೆ.
ಮಾಡುವ ವಿಧಾನ: ಹೆಚ್ಚಿದ ಹಾಗಲಕಾಯಿಗೆ ಸ್ವಲ್ಪ ಉಪ್ಪು ಬೆರೆಸಿ, ಕೈಯಿಂದ ಚೆನ್ನಾಗಿ ಹಿಸುಕಿ ಕಹಿ ತೆಗೆಯಿರಿ. ಸ್ವಲ್ಪ ನೀರು ಹಾಕಿ ಹೆಚ್ಚಿದ ಈರುಳ್ಳಿ ಮತ್ತು ಹಾಗಲಕಾಯಿಯನ್ನು ಬೇಯಲು ಇಡಿ. ಇದಕ್ಕೆ ಹುಣಸೆ ರಸ, ಬೆಲ್ಲ ಮತ್ತು ಉಪ್ಪನ್ನು ಸೇರಿಸಿ, ದೊಡ್ಡ ಉರಿಯಲ್ಲಿ ಬೇಯಿಸಿ. ನಂತರ ಬಾಣಲೆಯಲ್ಲಿ ಒಣಮೆಣಸು, ಕೊತ್ತಂಬರಿ, ಜೀರಿಗೆ, ಸಾಸಿವೆ, ಉದ್ದಿನ ಬೇಳೆ ಹಾಕಿ ಚೆನ್ನಾಗಿ ಹುರಿದು, ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಈಗ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಬೆಳ್ಳುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಪುಡಿ ಮಾಡಿಟ್ಟ ಮಸಾಲೆ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಬೇಯಿಸಿದ ಹಾಗಲಕಾಯಿ ಮಿಶ್ರಣವನ್ನು ಇದಕ್ಕೆ ಸೇರಿಸಿ, ಸಣ್ಣ ಉರಿಯಲ್ಲಿ ಬೇಯಿಸಿ.
– ಸುಮನಾ ಆಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.