ಸೈಲೆಂಟ್‌ ಲೇಡಿಯ ಲಾಂಗ್‌ ರೈಡ್‌


Team Udayavani, Jan 17, 2018, 2:05 PM IST

17-37.jpg

ಹೆಣ್ಮಕ್ಕಳೆಂದರೆ ಮನೆಗೆಲಸ, ಅಡುಗೆ ಮನೆ, ಗಂಡನ ಆರೈಕೆ, ಬಾಣಂತನ, ಮಕ್ಕಳ ಪಾಲನೆ, ದೇವಸ್ಥಾನ ಎಂಬಿತ್ಯಾದಿ ಸಮಾಜದ ಸಿದ್ಧ ಚೌಕಟ್ಟುಗಳನ್ನು ಮೀರುವ ಯತ್ನದಲ್ಲಿರುವ ಈ ಹೆಣ್ಣುಮಗಳ ಹೆಸರು ಅರ್ಚನಾ ತಿಮ್ಮರಾಜು. ಬೈಕ್‌ ಎಂದರೆ ಪ್ರಾಣ. ಮೊಪೆಡ್‌ ಅಲ್ಲ, ಸ್ಕೂಟಿ ಅಲ್ಲ. ಗಂಡು ಮಕ್ಕಳು ಓಡಿಸೋ ಬೈಕೇ ಆಗಬೇಕು! ಅದರಲ್ಲಿ ಲಾಂಗ್‌ ರೈಡ್‌ ಹೋಗುವುದೆಂದರೆ ತುಂಬಾ ಇಷ್ಟ. ಅಚ್ಚರಿಯ ಸಂಗತಿಯೆಂದರೆ, ಅರ್ಚನಾ ಅವರಿಗೆ ಹುಟ್ಟಿನಿಂದಲೂ ಶ್ರವಣ ಮತ್ತು ಮಾತಿನ ಸಮಸ್ಯೆಯಿದೆ. ಇದೇ ಕಾರಣಕ್ಕೆ ಅನೇಕ ಬೈಕ್‌ ಕ್ಲಬ್‌ಗಳು ಅವರನ್ನು ಸೇರಿಸಿಕೊಳ್ಳಲು ಒಪ್ಪದಿದ್ದಾಗ, ಶ್ರವಣದೋಷ ಇರುವವರಿಗಾಗಿಯೇ “ಸೈಲೆಂಟ್‌ ಎಕ್ಸ್‌ಪೆಡಿಷನ್‌’ ಎಂಬ ಬೈಕ್‌ ಕ್ಲಬ್‌ ಅನ್ನು ಸ್ಥಾಪಿಸಿದವರಿವರು…

ಹೊಸ ಜೀವವೊಂದು ಜಗತ್ತಿಗೆ ಕಾಲಿಡುವ ಕ್ಷಣ ಹೆತ್ತವರಿಗೆ ಅತ್ಯಂತ ಸಂತಸದಾಯಕ ಅಂತ ಹೇಳುತ್ತಾರೆ. ನಾನು ಹುಟ್ಟುವಾಗಲೂ ಅಪ್ಪ ಅಮ್ಮ ಸಂತೋಷ ಪಟ್ಟಿದ್ದರು. ಆದರೆ, ಅವರ ಸಂತೋಷ ಬಹಳ ಕಾಲ ಉಳಿಯಲಿಲ್ಲ. ನಾನು ಹುಟ್ಟಿದ ಸ್ವಲ್ಪ ಸಮಯದಲ್ಲೇ ನನಗೆ ಶ್ರವಣದೋಷವಿರುವುದನ್ನು ವೈದ್ಯರು ಪತ್ತೆಹಚ್ಚಿದ್ದರು. ಇದು ಗೊತ್ತಾದಾಗ, ಅಪ್ಪ- ಅಮ್ಮ ಇಬ್ಬರೂ ಕೂತು ಅತ್ತಿದ್ದರಂತೆ. ಅಪ್ಪ ಭೂಗರ್ಭ ಶಾಸ್ತ್ರಜ್ಞ, ಅಮ್ಮ ಶಾಲೆ ಮುಖ್ಯಶಿಕ್ಷಕಿ. ನಾನಿನ್ನೂ ಕಾಲಿಡಲೂ ಬಾರದಷ್ಟು ಚಿಕ್ಕ ವಯಸ್ಸಿನವಳಾಗಿದ್ದಾಗಲೇ ಅಪ್ಪ- ಅಮ್ಮ ಹತ್ತಿಪ್ಪತ್ತು ವರ್ಷಗಳಷ್ಟು ಮುಂದಿನ ನನ್ನ ಭವಿಷ್ಯವನ್ನು ಪ್ಲಾನ್‌ ಮಾಡಿಟ್ಟಿದ್ದರು. ಮಿಕ್ಕವರಂತೆ ಓದು ಬರಹ ಮಾಡುವುದು ಕಷ್ಟವೆಂದು ಐದನೇ ವಯಸ್ಸಿನಲ್ಲೇ ಆರ್ಟ್‌ ಸ್ಕೂಲಿಗೆ ಸೇರಿಸಿದರು. ಹೀಗಾಗಿ ಕಲೆ ಬಿಟ್ಟರೆ ಬೇರೇನೂ ನಂಗೊತ್ತಿಲ್ಲ. ಕಲೆಯಲ್ಲಿ ಮಾಸ್ಟರ್‌ ಡಿಗ್ರಿವರೆಗೂ ಓದಿದ್ದೀನಿ. ಈಗ ಚಿತ್ರರಚನೆ, ಶಿಲ್ಪಕಲೆ, ಲೋಹ, ಮರದ ಕೆತ್ತನೆ ಹೀಗೆ ಕಲೆಯ ಬಹುತೇಕ ಪ್ರಕಾರಗಳಲ್ಲಿ ನಾನು ತೊಡಗಿಕೊಂಡಿದ್ದೀನಿ. ಹೊರಗಡೆ ಜನರಿಂದ ಆರ್ಡರ್‌ಗಳನ್ನು ಪಡೆದು ಪೂರೈಸುತ್ತೇನೆ. “ಆರ್ಟ್‌ ರೆಲ್ಮ್’ (ಅrಠಿ Rಛಿಚlಞ) ಹೆಸರಿನ ಸ್ವಂತ ಆರ್ಟ್‌ ಸ್ಟುಡಿಯೋ ಇದೆ. ಅಲ್ಲದೆ ಅದಿತಿ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಶ್ರವಣದೋಷವಿರುವ ಮಕ್ಕಳಿಗೆ ಚಿತ್ರಕಲೆ ಹೇಳಿಕೊಡುತ್ತೇನೆ. ನಾನು ಏನೇನು ತೊಂದರೆಗಳನ್ನು ಎದುರಿಸಿದೆನೋ ಅವುಗಳಿಂದ ನನ್ನ ವಿದ್ಯಾರ್ಥಿಗಳಾದರೂ ಪಾರಾಗಲಿ ಅಂತ ನನ್ನಾಸೆ.

ನನ್ನ ಫ‌ಸ್ಟ್‌ ಲವ್‌
ಸಾಮಾನ್ಯವಾಗಿ ಹುಡುಗಿಯರಿಗೆ ಬಟ್ಟೆ, ಮೇಕಪ್‌ ಮತ್ತಿತರ ಫ್ಯಾಷನೆಬಲ್‌ ವಸ್ತುಗಳ ಮೇಲೆ ಮೋಹ ಇರುತ್ತೆ. ಆದರೆ, ನಂದು ಉಲ್ಟಾ ಕೇಸು. ಬೈಕ್‌ ಕಂಡರೆ ಆಸೆ. ಮೊಪೆಡ್‌ ಅಲ್ಲ, ಸ್ಕೂಟಿ ಅಲ್ಲ. ಗಂಡು ಮಕ್ಕಳು ಓಡಿಸೋ ಬೈಕೇ ಆಗಬೇಕು ನಂಗೆ. ದಾರೀಲಿ ಒಂದಿನ ಯಮಹಾ ಆರ್‌ಎಕ್ಸ್‌100 ನೋಡಿದೆ. ಅವತ್ತೇ ಅದಕ್ಕೆ ಮರುಳಾಗಿದ್ದೆ. ಅದೇ ನನ್ನ ಫ‌ಸ್ಟ್‌ ಲವ್‌. ಬೈಕ್‌ನಲ್ಲಿ ದೂರ ಪ್ರಯಾಣ ಮಾಡೋದು ನಂಗಿಷ್ಟ. ಬೈಕ್‌ ರೈಡಿಂಗ್‌ ಅನ್ನೋದು ನನಗೆ ಸ್ವಾತಂತ್ರದ ಪ್ರತೀಕ. ಸಮಾಜದ ಕಟ್ಟಳೆ, ಸಿದ್ಧಸೂತ್ರಗಳು ಮತ್ತು ನನ್ನೆಲ್ಲಾ ಜಂಜಡ, ನೋವು, ಸಮಸ್ಯೆಗಳನ್ನು ಒಂದಷ್ಟು ಸಮಯ ಹಿಂದೆ ಬಿಟ್ಟೋಡುವ ಪ್ರಕ್ರಿಯೆ.

ಬೈಕರ್‌ ಕ್ಲಬ್‌
ಶ್ರವಣದೋಷವಿರುವವರು ಬೈಕ್‌ ಚಲಾಯಿಸಲು ಹಿಂದೇಟು ಹಾಕುತ್ತಾರೆ. ನಮ್ಮ ಬಗ್ಗೆ ಕೇರ್‌ ತೆಗೆದುಕೊಳ್ಳಲು ಸಿದ್ಧವಿಲ್ಲದಿರುವುದರಿಂದ ಬೈಕರ್‌ಗಳ ತಂಡಗಳು ನಮ್ಮಂಥವರನ್ನು ಸೇರಿಸಿಕೊಳ್ಳಲೂ ಹಿಂದೆ ಮುಂದೆ ನೋಡುತ್ತವೆ. ಅದಕ್ಕೇ ನಮ್ಮಂಥವರಿಗಾಗಿಯೇ “ಸೈಲೆಂಟ್‌ ಎಕ್ಸ್‌ಪೆಡಿಷನ್ಸ್‌’ ಎಂಬ ಪ್ರತ್ಯೇಕ ರೈಡಿಂಗ್‌ ಕ್ಲಬ್‌ ಒಂದನ್ನು ಸ್ಥಾಪಿಸಿದೆ. ಈಗ ತಾನೇ ಶುರುವಾಗಿದೆ. ಸದ್ಯ 10 ಮಂದಿ ಸದಸ್ಯರಿದ್ದಾರೆ. ಮುಂದೆ ತಿಂಗಳಿಗೊಂದು ಟ್ರಿಪ್‌ ಆಯೋಜಿಸುತ್ತಾ ಬರುತ್ತೇನೆ. ಶ್ರವಣದೋಷವಿರುವವರನ್ನು ಬೈಕಿಂಗ್‌ ನೆಪದಲ್ಲಿ ಒಗ್ಗೂಡಿಸುವುದು ನನ್ನ ಉದ್ದೇಶ. 

ಕಿರಿಕಿರಿಯಾಗುತ್ತೆ, ಸಿಟ್ಟೂ ಬರುತ್ತೆ. ಆದರೆ…
ನಾನು ಮನೆಯ ಹೊಸಿಲನ್ನು ದಾಟಿದ ಕ್ಷಣದಿಂದ ಹೆತ್ತವರ ಆತಂಕ ಶುರುವಾಗುತ್ತೆ. ಹಿಂತಿರುಗಿ ವಾಪಸು ಬರುವವರೆಗೂ ಅವರಿಗೆ ಸಮಾಧಾನವಿರೋಲ್ಲ. ಅವರೆದೆ ಹೊಡೆದುಕೊಳ್ಳುತ್ತಿರುತ್ತೆ. ಅದಕ್ಕೇ ದಿನಪೂರ್ತಿ, ನಾನೆಲ್ಲಿದ್ದೇನೆ, ಹೇಗಿದ್ದೇನೆಂದು ಎಸ್ಸೆಮ್ಮೆಸ್‌ ಕಳಿಸುತ್ತಲೇ ಇರುತ್ತೇನೆ. ಕೆಲವೊಮ್ಮೆ ನನಗೆ ಕಿರಿಕಿರಿಯಾಗುತ್ತೆ, ಸಿಟ್ಟೂ ಬರುತ್ತೆ. ಆದರೂ ಮೆಸೇಜು ಕಳಿಸುವುದನ್ನು ನಿಲ್ಲಿಸಿಲ್ಲ. ಪ್ರತಿಸಲ ನನ್ನ ಮೆಸೇಜು ಬಂದ ತಕ್ಷಣ ಅವರ ಮುಖದಲ್ಲಿ ನೆಮ್ಮದಿಯ ನಗು ಅರಳುವುದನ್ನು ನೀವೊಮ್ಮೆ ನೋಡಬೇಕು…! ನನ್ನ ಈ ರೈಡಿಂಗ್‌ ಹುಚ್ಚು ಅವರಲ್ಲಿ ಆತಂಕ ತಂದಿದೆ ನಿಜ. ಆದರೆ, ಅದರ ಹಿಂದಿನ ಉದ್ದೇಶ ಅವರಿಗೆ ಅರ್ಥವಾಗಿರುವುದರಿಂದ ಅವರೂ ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೇ, ಯಾವ ಮೂಲೆಗೆ ಹೋದರೂ ಮೆಸೇಜು ಮಾಡ್ತಿರಿ¤àನಿ ಅಂತ ಪ್ರಾಮಿಸ್‌ ಬೇರೆ ಮಾಡಿದ್ದೀನಿ.

ಜೀವನದ ಕಹಿ ಘಟನೆ 
ತುಂಬಾ ಅನುಭವಿಸಿದ್ದೀನಿ. ಭೂಮಿ ಮೇಲೆ ಮನುಷ್ಯನ ಒಟ್ಟು ಜೀವಿತ ಕಾಲಕ್ಕೆ ಹೋಲಿಸಿದರೆ ನಾವು ಬದುಕಿರೋದು ಕ್ಷಣ ಕಾಲ ಅಂತಲೇ ಹೇಳಬೇಕಾಗುತ್ತೆ. ಇಷ್ಟು ಪುಟ್ಟ ಸಮಯದಲ್ಲಿ ನಾವು ನಗುತ್ತೇವೆ, ಅಳುತ್ತೇವೆ, ಎಲ್ಲಾ ರೀತಿಯ ಅನುಭವಗಳನ್ನು ಪಡೆಯುತ್ತೇವೆ. ನಮ್ಮೊಡನೆ ಘಟಿಸುವುದನ್ನು ನಿಯಂತ್ರಿಸಲು ಆಗುವುದಿಲ್ಲವಲ್ಲ. ಬಂದದ್ದೆಲ್ಲಾ ಎದುರಿಸಲೇಬೇಕು. ಆದರೆ, ನೆನಪುಗಳನ್ನು ಕೂಡಿಡುವಾಗ ಬೇಕಾದ್ದನ್ನು ಆರಿಸುವ ಸ್ವಾತಂತ್ರ ನಮಗಿದ್ದೇ ಇರುತ್ತೆ. ಹೀಗಾಗಿ ಕಹಿ ಘಟನೆಗಳನ್ನು ನೆನಪಿಡೋಕೆ ಯಾವತ್ತೂ ಇಷ್ಟಪಡಲ್ಲ.

ಸಾರಿ, ಮಿಸ್‌!
ತುಂಬಾ ಜನ ಅಚ್ಚರಿ ಪಡುತ್ತಾರೆ. ಸ್ವತಃ ಕಿವುಡಿಯಾಗಿರುವ ನಾನು ಕಿವುಡ ಮಕ್ಕಳಿಗೆ ಹೇಗೆ ಪಾಠ ಮಾಡ್ತೀನಿ, ಅವರನ್ನು ಹೇಗೆ ಸಂಭಾಳಿಸುತ್ತೀನಿ ಅಂತ. ಶಾಲೆಯಲ್ಲಿ ಪುಟ್ಟ ಮಕ್ಕಳು ವಿಪರೀತ ಗಲಾಟೆ ಮಾಡುತ್ತಾರೆ ಅನ್ನೋದೇನೋ ನಿಜ, ಹಾಗೆಂದು ನಾನು ಯಾವತ್ತೂ ರೇಗಿದ್ದಿಲ್ಲ. ಅವರ ಕಿವಿಗೆ ಸದ್ದು ಬೀಳದಿರುವುದರಿಂದ ಅವರೆಷ್ಟು ಗಲಾಟೆ ಮಾಡ್ತಿದ್ದಾರೆ ಅಂತ ಅವರಿಗೇ ಗೊತ್ತಿರುವುದಿಲ್ಲ, ಪಾಪ. ಆವಾಗ ನಾನು ಅವರ ಕಿವಿಗಳಿಗೆ ನನ್ನ ಹಿಯರಿಂಗ್‌ ಏಡ್‌ ತೊಡಿಸುತ್ತೇನೆ. “ಅಯ್ಯೋ, ನಾವು ಇಷ್ಟು ಜೋರಾಗಿ ಗಲಾಟೆ ಮಾಡ್ತಿದ್ದೀವಾ? ಸಾರಿ ಮಿಸ್‌’ ಅಂತ ಅವೇ ಗಪ್‌ಚುಪ್ಪಾಗಿ ಬಿಡುತ್ತವೆ.  

ಬೈಕ್‌ನಲ್ಲಿ ಲಡಾಖ್‌ಗೆ…
ಎಲ್ಲಾ ಬೈಕರ್‌ಗಳ ಕನಸು ಗಂಟುಮೂಟೆ ಕಟ್ಟಿಕೊಂಡು ಲಡಾಖ್‌ವರೆಗೆ ಪ್ರಯಾಣಿಸುವುದು. ಈ ಕನಸು ನನ್ನದು ಕೂಡಾ. ಹೆಚ್ಚಾಗಿ ಗಂಡು ಮಕ್ಕಳೇ ಯಾಕೆ ಹೋಗುತ್ತಾರೆ, ನಮ್ಮಿಂದ ಯಾಕಾಗೋದಿಲ್ಲ? ಅದಕ್ಕೇ ಬೈಕ್‌ ರೈಡಿಂಗನ್ನು ಸವಾಲಾಗಿ ಸ್ವೀಕರಿಸಿದ್ದೀನಿ. ಶೀಘ್ರದಲ್ಲೇ ರಾಯಲ್‌ ಎನ್‌ಫೀಲ್ಡ್‌ ಬೈಕಿನಲ್ಲಿ ಲಡಾಖ್‌ಗೆ ಹೋಗಲಿದ್ದೇನೆ. ತಯಾರಿ ಎಲ್ಲಾ ನಡೆದಿದೆ.

ಮೀಸೆ ಇದ್ದರೆ ಸಮಸ್ಯೆ
ನಾನು ಲಿಪ್‌ ರೀಡಿಂಗ್‌ ಮಾಡ್ತೀನಿ. ಎದುರಿದ್ದವರು ಮಾತಾಡುವಾಗ ಅವರ ತುಟಿಗಳ ಚಲನೆಯನ್ನು ಗಮನಿಸಿ ಅವರೇನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ತೀನಿ. ನನ್ನ ಸಹೋದ್ಯೋಗಿಯೊಬ್ಬರಿಗೆ ಹುಲುಸಾದ ಮೀಸೆಯಿತ್ತು. ಅವರೊಂದಿಗೆ ಸಂವಹನ ನಡೆಸುವಾಗ ತುಂಬಾ ಕಷ್ಟವಾಗುತ್ತಿತ್ತು. ಅವರೇನು ಹೇಳುತ್ತಿದ್ದಾರೆಂಬುದೇ ನನಗೆ ತಿಳಿಯುತ್ತಿರಲಿಲ್ಲ. ಏಕೆಂದರೆ, ಅವರ ತುಟಿಗಳ ಚಲನೆ ಗಮನಿಸಲು ಮೀಸೆ ಅಡ್ಡ ಬರುತ್ತಿತ್ತು. ಒಂದು ದಿನ ಅವರು ಮೀಸೆಯನ್ನು ನೀಟಾಗಿ ಶೇವ್‌ ಮಾಡಿಕೊಂಡು ಬಂದಿದ್ದರು. ನನ್ನ ಕಷ್ಟ ನೋಡಿಯೇ ಅವರು ಹಾಗೆ ಮಾಡಿದ್ದೆಂದು ಬೇರೆಯವರಿಂದ ತಿಳಿಯಿತು. ಹೃದಯ ತುಂಬಿ ಬಂತು.

1 ಲಕ್ಷ ರೂ. ಪೇಂಟಿಂಗ್‌
ಎಚ್‌.ಪಿ. ಸಾಫ್ಟ್ವೇರ್‌ ಕಂಪನಿಯವರು ನನ್ನನ್ನೂ ಸೇರಿ ಹತ್ತು ಮಂದಿ ಕಲಾವಿದರನ್ನು ಕರೆಸಿ ಒಂದು ಕಲಾ ಶಿಬಿರ ಆಯೋಜಿಸಿದ್ದರು. ಅವರಲ್ಲಿ ಕಿವುಡಿ ನಾನೊಬ್ಬಳೇ ಎನ್ನುವ ಸಂಗತಿ ಬಿಡಿ, ನಾನೊಬ್ಬಳೇ ಹೆಣ್ಣುಮಗಳಾಗಿದ್ದೆ. ಅಂದು ಹರಾಜಿನಲ್ಲಿ ನಾನು ರಚಿಸಿದ ಪೇಂಟಿಂಗ್‌ ಅನ್ನು 1 ಲಕ್ಷ ರೂ.ಗಳಿಗೆ ಕಲಾಭಿಮಾನಿಯೊಬ್ಬರು ಕೊಂಡುಕೊಂಡರು. ಅದನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ದುಡ್ಡಿಗಾಗಿ ಯಾವತ್ತೂ ಬಾಯಿ ಬಿಟ್ಟವಳಲ್ಲ. ಆ 1 ಲಕ್ಷ ರೂ.ಗಳನ್ನು ಅರ್ಥಪೂರ್ಣವಾಗುವಂತೆ ಖರ್ಚು ಮಾಡಬೇಕೆನ್ನುವುದು ಮನಸ್ಸಿಗೆ ಬಂತು. ತಕ್ಷಣ 1 ಲಕ್ಷ ರೂ. ಚೆಕ್ಕನ್ನು ನಾನು ಕಲಿತ ಕಿವುಡರ ಶಾಲೆಗೆ ಸಹಾಯಧನದ ರೂಪದಲ್ಲಿ ಕೊಟ್ಟುಬಿಟ್ಟೆ. ಪ್ರಿನ್ಸಿಪಾಲರು ಒಂದು ಮಾತು ಹೇಳಿದರು: “ಈ ತನಕ ಇಲ್ಲಿ ಕಲಿತವರ್ಯಾರೂ ಕನಿಷ್ಠ ಪಕ್ಷ ಕೃತಜ್ಞತೆಯ ರೂಪದಲ್ಲಾದರೂ ಏನನ್ನೂ ಕೊಟ್ಟಿಲ್ಲ. ದೇವರು ನಿನ್ನನ್ನು ಚೆನ್ನಾಗಿಟ್ಟಿರಲಿ’. ದೇವರಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಆ ಒಂದು ಮಾತು ಸಾಕು ನನ್ನನ್ನು ಜೀವನ ಪರ್ಯಂತ ಬೆಚ್ಚಗಿಡೋಕೆ!

ನಿರೂಪಣೆ: ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Opposition leader’ letter for debate on the Constitution in both houses

Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ

Is Andhra Pradesh considering cancelling the agreement with Adani Group?

Andhra Pradesh: ಅದಾನಿ ಗ್ರೂಪ್‌ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

BJP: ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.