ಸೌಂದರ್ಯಕ್ಕೆ ಸಿಂಪಲ್ ಸೂತ್ರ…
Team Udayavani, Dec 4, 2019, 4:00 AM IST
ಯಾವುದೇ ಸೌಂದರ್ಯವರ್ಧಕ ಬಳಸದೆ, ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದ ಮುಖದ ಕಾಂತಿಯನ್ನು ವೃದ್ಧಿಸಿಕೊಳ್ಳಬಹುದು. ಮನೆಯಲ್ಲಿರುವ ವಸ್ತುಗಳಿಂದ ಚರ್ಮದ ಆರೋಗ್ಯ ಹೆಚ್ಚಿಸಿಕೊಳ್ಳುವ ವಿಧಾನಗಳು ಇಲ್ಲಿವೆ-
-ಜಿಡ್ಡಿನಿಂದ ಉಂಟಾಗುವ ಮೊಡವೆಗಳಿಗೆ ಪಪ್ಪಾಯ ಹಣ್ಣಿನಿಂದ ನಯವಾಗಿ ಉಜ್ಜಿ.
-ಬೇಸಿಗೆಯಲ್ಲಿ ವಿಪರೀತ ಬೆವರುವವರು, ಮೊಸರು-ಮೈದಾ ಹಿಟ್ಟಿನ ಮಿಶ್ರಣ ಹಚ್ಚಿ, ಒಣಗಿದ ನಂತರ ಮುಖ ತೊಳೆದುಕೊಳ್ಳಿ.
-ಕಲ್ಲಂಗಡಿಯ ತಿರುಳಿನಿಂದ ಮಸಾಜ್ ಮಾಡಿದರೆ ಚರ್ಮ ಮೃದುವಾಗುತ್ತದೆ.
-ಬೆವರಿನಿಂದ ಉಂಟಾಗುವ ಗುಳ್ಳೆಗಳಿಗೆ ಗಂಧ ತೇದು ಹಚ್ಚಿ.
-ವಾರದಲ್ಲಿ ಎರಡು ಬಾರಿ ಹಸಿ ಹಾಲನ್ನು ಮುಖಕ್ಕೆ ಹಚ್ಚಿದರೆ ಒಣ ಚರ್ಮ ತೇವಾಂಶ ಪಡೆಯುತ್ತದೆ.
-ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ, ಫ್ರಿಡ್ಜ್ನಲ್ಲಿಟ್ಟ ಎಳನೀರಿನ ಕ್ಯೂಬ್ ಅಥವಾ ಟೊಮೆಟೊ ತುಂಡಿನಿಂದ ನಯವಾಗಿ ಮಸಾಜ್ ಮಾಡಿಕೊಳ್ಳಿ.
-ಸೌತೆಕಾಯಿ ತಿರುಳನ್ನು ಪೇÓr… ಮಾಡಿ, ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ಮುಖ ತೊಳೆಯಿರಿ.
-ಕಣ್ಣಿನ ಸುತ್ತಲಿನ ಕಪ್ಪನೆ ಕಲೆಗೆ ಆಲೂಗಡ್ಡೆ/ಸೌತೆಕಾಯಿ ತುಣುಕನ್ನು ಇಟ್ಟುಕೊಂಡರೆ ಪರಿಣಾಮಕಾರಿ.
-ಚಳಿಗಾಲದಲ್ಲಿ ಪ್ರತಿನಿತ್ಯವೂ ಹಸಿ ಹಾಲು ಅಥವಾ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಿದರೆ, ಚರ್ಮ ಒಣಗುವುದು, ಬಿರುಕು ಬಿಡುವುದು ಹಾಗೂ ತುರಿಕೆಯಂಥ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.
-ಬಾಳೆಹಣ್ಣಿನ ತಿರುಳನ್ನು ಮುಖಕ್ಕೆ ಉಜ್ಜುವುದರಿಂದ ಮುಖ ಹೊಳೆಯುತ್ತದೆ.
– ಲೋಳೆಸರದ ತಿರುಳನ್ನು ಮುಖಕ್ಕೆ ಹಚ್ಚಿದರೆ ಚರ್ಮ ಆರೋಗ್ಯವಾಗಿರುತ್ತದೆ. ಲೋಳೆಸರದಿಂದ ತುರಿಕೆ ಆಗುತ್ತದೆ ಎನ್ನುವವರು, ಕೊಬ್ಬರಿ ಎಣ್ಣೆಯನ್ನು ಸೇರಿಸಿ ಉಪಯೋಗಿಸಬಹುದು.
-ಅರಿಶಿಣದ ಕೊಂಬನ್ನು ತೇಯ್ದು ಸತತ ಲೇಪಿಸುವುದರಿಂದ ಮುಖದ ಮೇಲಿನ ಕೂದಲು ಉದುರುತ್ತದೆ.
-ಗ್ರಂಧಿಗೆ ಅಂಗಡಿಯಲ್ಲಿ ಸಿಕ್ಕುವ ಅಂಬಿ ಹಳದಿಯನ್ನು ತೇಯ್ದು ರಾತ್ರಿ ಮುಖಕ್ಕೆ ಹಚ್ಚಿ ಬೆಳಗ್ಗೆ ತೊಳೆದರೆ ಚರ್ಮ ಕಾಂತಿ ಪಡೆಯುತ್ತದೆ.
-ಜೇನುತುಪ್ಪ ಹಚ್ಚಿ ಹತ್ತು ನಿಮಿಷದ ನಂತರ ಮುಖ ತೊಳೆದು, ಆಮೇಲೆ ಮೇಕಪ್ ಮಾಡಿಕೊಂಡರೆ, ಮೇಕಪ್‌ನಿಂದ ಆಗುವ ಅಡ್ಡ ಪರಿಣಾಮಗಳು ಕಡಿಮೆ ಆಗುತ್ತವೆ.
-ಶೋಭಾ ದೇಸಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.