ಅನುಷ್ಕಾಳ ತುಟಿಯಲ್ಲಿ “ಅದೇ’ ಇರಲಿಲ್ಲ!
Team Udayavani, Dec 20, 2017, 3:43 PM IST
ಅನುಷ್ಕಾ ತನ್ನ ತುಟಿಗೆ ಲಿಪ್‌ಸ್ಟಿಕ್ ಬಳಿದುಕೊಂಡಿದ್ದಾಳ್ಳೋ, ಇಲ್ಲವೋ ಅನ್ನೋದನ್ನು ಕ್ಯಾಮೆರಾ ಝೂಮ್ ಮಾಡಿ ನೋಡಿದರೂ ನಿಮಗೆ ಗೊತ್ತಾಗೋದಿಲ್ಲ. ಇಂಥ ಲಿಪ್ ಮೇಕಪ್‌ನ ಟ್ರೆಂಡಿಗೆ “ನ್ಯೂಡ್ ಲಿಪ್ಸ್’ ಎನ್ನುತ್ತಾರೆ. ತುಟಿ ಹೇಗಿದೆಯೋ, ಹಾಗೆ ಲಿಪ್‌ಸ್ಟಿಕ್ ಬಣ್ಣವೂ ಇರುತ್ತೆ…
ಕಳೆದ ವಾರ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ದೂರದ ಇಟಲಿಯಲ್ಲಿ ಸಪ್ತಪದಿ ತುಳಿದರು. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ “ವಿರುಷ್ಕಾ’ ಮದುವೆ ಎಂದರೆ ಕೇಳಬೇಕೆ? ಜೋಡಿಯ ಪ್ರತಿ ನಡೆಯನ್ನೂ, ಉಡುಗೆ- ತೊಡುಗೆ, ಆಭರಣವನ್ನೂ ಜನ ಕುತೂಹಲದಿಂದ ಗಮನಿಸಿದರು. ಈಗಾಗಲೇ ಮದುವೆಯ ಫೋಟೊಗಳು ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮದುವಣಗಿತ್ತಿ ಅನುಷ್ಕಾಳ ಅಲಂಕಾರವನ್ನು ಎಲ್ಲರೂ ಹೊಗಳುವವರೇ.
ಮದುವೆ ದಿನ ಮದುಮಗಳು ತುಸು ಹೆಚ್ಚೇ ಅನಿಸುವಷ್ಟು ಗಾಢವಾಗಿ ಮೇಕಪ್ ಮಾಡಿಕೊಳ್ಳೋದು ವಾಡಿಕೆ. ತುಟಿಗಳಿಗೆ ಬಳಿದ ಲಿಪ್‌ಸ್ಟಿಕ್ಕೇ ಅದನ್ನು ಹೇಳುತ್ತದೆ. ಆದರೆ, ಅನುಷ್ಕಾಳನ್ನು ನೋಡಿದವರು- “ಅಬ್ಬಬ್ಟಾ ಎಷ್ಟು ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿ¤ದ್ದಾಳೆ’ ಅಂತ ಹುಬ್ಬೇರಿಸಿದರು. ಅನುಷ್ಕಾ, ತಿಳಿ ಗುಲಾಬಿ ಬಣ್ಣದ ಲೆಹೆಂಗಾ, ಅಷ್ಟೇ ತಿಳಿಯಾದ ಮೇಕಪ್ ಹಾಗೂ ಬಿಳಿ ಮತ್ತು ಗುಲಾಬಿ ಬಣ್ಣದ ಟಸ್ಕನ್ ಹೈಡ್ರೇಂಜಸ್ ಹೂಗಳ ಕೇಶಾಲಂಕಾರದಲ್ಲಿ ಕಾಣಿಸಿಕೊಂಡರು. ಆದರೆ, ಎಲ್ಲದಕ್ಕಿಂತ ಜಾಸ್ತಿ ಹೈಲೈಟ್ ಆಗಿದ್ದು ಆಕೆಯ ಸಿಗ್ನೇಚರ್ ಸ್ಟೈಲ್ ಆದ “ನ್ಯೂಡ್ ಲಿಪ್ಸ್’.
ಅನುಷ್ಕಾ ತನ್ನ ತುಟಿಗೆ ಲಿಪ್‌ಸ್ಟಿಕ್ ಬಳಿದುಕೊಂಡಿದ್ದಾಳ್ಳೋ, ಇಲ್ಲವೋ ಅನ್ನೋದನ್ನು ಕ್ಯಾಮೆರಾ ಝೂಮ್ ಮಾಡಿ ನೋಡಿದರೂ ನಿಮಗೆ ಗೊತ್ತಾಗೋದಿಲ್ಲ. ಇಂಥ ಲಿಪ್ ಮೇಕಪ್‌ನ ಟ್ರೆಂಡಿಗೆ “ನ್ಯೂಡ್ ಲಿಪ್ಸ್’ ಎನ್ನುತ್ತಾರೆ. ತುಟಿ ಹೇಗಿದೆಯೋ, ಹಾಗೆ ಲಿಪ್‌ಸ್ಟಿಕ್ ಬಣ್ಣವೂ ಇರುತ್ತೆ.
ಕವರ್ ಪೇಜ್‌ನಲ್ಲೂ ನ್ಯೂಡ್ ಲಿಪ್ಸ್!
ಅನುಷ್ಕಾ ಹೀಗೆ ನ್ಯೂಡ್ ಲಿಪ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಮ್ಯಾಗಝಿನ್ ಕವರ್ ಪೇಜ್‌ಗಳಲ್ಲಿಯೂ ಅನುಷ್ಕಾ ಲಿಪ್‌ಸ್ಟಿಕ್ ಇಲ್ಲದೇ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮ್ಯಾಗಝಿನ್‌ಗಳ ಫೋಟೊಗಳಲ್ಲಿ ಹೈಲೈಟ್ ಆಗೋದೇ ಲಿಪ್‌ಸ್ಟಿಕ್. ಹಾಗಾಗಿ ನಟಿಯರು, ರೂಪದರ್ಶಿಯರು ಗಾಢ ಲಿಪ್‌ಸ್ಟಿಕ್‌ಗಳನ್ನೇ ಬಳಸುತ್ತಾರೆ. ಆದರೆ 2013, 2015 ಮತ್ತು 2017ರ ಫೆಮಿನಾ ಮ್ಯಾಗಝಿನ್‌ಗಳ ಕವರ್ ಪೇಜ್‌ಗಳಲ್ಲಿ ಅನುಷ್ಕಾ ನ್ಯೂಡ್ ಲಿಪ್ಸ್‌ನಲ್ಲಿ ಪೋಸ್ ನೀಡಿದ್ದಾರೆ.
ನೋ ಮೇಕಪ್ ಲುಕ್
ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಆಕೆಯ ಮೇಕಪ್ ಮಾತ್ರ ತುಂಬಾ ಸಿಂಪಲ್. ಸಹಜ, ಸರಳ ಸುಂದರಿ ಎಂದೇ ಗುರುತಿಸಲ್ಪಡುವ ಅನುಷ್ಕಾ, “ನೋ ಮೇಕಪ್ ಲುಕ್’ನಲ್ಲೇ ಭಾರೀ ಫೇಮಸ್. ಹಾಲ್ಗೆನ್ನೆಯ, ನುಣುಪಾದ ಚರ್ಮದ ಈ ಬೆಡಗಿ, ಕೇವಲ ಬೋಲ್ಡ್ ಐ ಲೈನರ್, ಮಸ್ಕರದಲ್ಲೂ ಸುಂದರವಾಗಿ ಕಾಣುತ್ತಾರೆ. ಕೆಲವೊಮ್ಮೆ ತುಟಿಗೆ ಬಣ್ಣ ಹಚ್ಚಿದ್ದಾರೋ, ಇಲ್ಲವೋ ಅಂತ ಗೊತ್ತಾಗದಷ್ಟು ತೆಳುವಾಗಿ ಲಿಪ್‌ಸ್ಟಿಕ್ ಬಳಸುವ ಅನುಷ್ಕಾ, ಲಿಪ್‌ಸ್ಟಿಕ್ ಬಣ್ಣಗಳ ಆಯ್ಕೆಯಲ್ಲೂ ಬಲುಜಾಣೆ. ತೆಳುವಾಗಿ ಹಚ್ಚಿದ ಫೌಂಡೇಶನ್, ಗಾಢವಾದ ಮಸ್ಕರ ಹಾಗೂ ತೆಳು ಲಿಪ್‌ಸ್ಟಿಕ್ ಇದು ಅನುಷ್ಕಾಳ ಮೇಕಪ್ ಮಂತ್ರ.
ನ್ಯೂಡ್ ಲಿಪ್ಸ್‌ಗಾಗಿ ಏನು ಮಾಡ್ಬೇಕು?
1. ಮೃದುವಾದ ಬ್ರಶ್‌ನಿಂದ ತುಟಿಯ ಒಣಗಿದ ಚರ್ಮವನ್ನು ಆಗಾಗ ಉಜ್ಜಿ ತೆಗೆಯಿರಿ. ಇಲ್ಲದಿದ್ದರೆ ತುಟಿ ಒಣಗಿರುವುದು ಎದ್ದು ಕಾಣಿಸಿ, ಗಾಢ ಲಿಪ್‌ಸ್ಟಿಕ್ ಬಳಸುವುದು ಅನಿವಾರ್ಯವಾಗುತ್ತದೆ.
2. ನಿಮ್ಮ ಮುಖದ ಬಣ್ಣಕ್ಕೆ ಸರಿ ಹೊಂದುವಂಥ ಲಿಪ್‌ಸ್ಟಿಕ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ.
3. ಲಿಪ್‌ಸ್ಟಿಕ್ ಬಳಸುವ ಮುನ್ನ ಲಿಪ್‌ಲೈನರ್‌ನಿಂದ ತುಟಿಯ ಸುತ್ತ ತೆಳುವಾಗಿ ಗೆರೆ ಎಳೆಯಿರಿ.
4. ಕಣ್ಣುಗಳು ಆಕರ್ಷಕವಾಗಿ ಕಾಣುವಂತೆ ಗಾಢವಾಗಿ ಮಸ್ಕರ, ಕಾಜಲ್ ಹಚ್ಚಿ. ಆಗ “ಬೋಲ್ಡ್ ಐಸ್, ನ್ಯೂಡ್ ಲಿಪ್ಸ್’ ಲುಕ್ ನಿಮ್ಮದಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.