ಚಳಿಗಾಲಕ್ಕೆ ಸಿಂಪಲ್ ಟಿಪ್ಸ್
Team Udayavani, Dec 18, 2019, 4:47 AM IST
ಚಳಿಗಾಲ ಮತ್ತು ಶುಷ್ಕ ಹವೆ, ಸೊಂಪಾದ ಕೂದಲಿಗೆ ಹಾನಿ ಮಾಡುವ ಎರಡು ಅಂಶಗಳು. ಕೂದಲು ಉದುರುವುದು, ತಲೆಹೊಟ್ಟು, ಕೂದಲು ಒಣಗಿ ತುಂಡಾಗುವುದು ಮುಂತಾದ ಸಮಸ್ಯೆಗಳು ಚಳಿಗಾಲದಲ್ಲಿಯೇ ಹೆಚ್ಚಾಗಿ ಕಾಡುವುದು. ಹಾಗಾಗಿ, ಮಾಗಿಯ ಕಾಲದಲ್ಲಿ ಕೂದಲಿನ ಆರೈಕೆ ಮಾಡುವುದು ಅಗತ್ಯ. ಚಳಿಗಾಲದಲ್ಲಿ ಈ ಕೆಳಗಿನ ಟಿಪ್ಸ್‌ಗಳನ್ನು ಅನುಸರಿಸಿದರೆ ಕೂದಲು ಆರೋಗ್ಯವಾಗಿರುತ್ತದೆ.
– ಅಗತ್ಯಕ್ಕಿಂತ ಹೆಚ್ಚು ಶ್ಯಾಂಪೂ ಬಳಸಿದರೆ ತಲೆಯ ಚರ್ಮ ಶುಷ್ಕವಾಗಿ ಹೆಚ್ಚು ಕೂದಲು ಉದುರುತ್ತದೆ. ಹಾಗಾಗಿ, ಶ್ಯಾಂಪೂವನ್ನು ನೇರವಾಗಿ ಬಳಸದೆ, ಸ್ವಲ್ಪ ನೀರು ಬೆರೆಸಿ, ಕೂದಲಿನ ಬುಡಕ್ಕೆ ಹಚ್ಚಿ.
– ಹೇರ್ ಡ್ರೈಯರ್, ಹೇರ್ ಸ್ಟ್ರೇಟ್ನರ್‌ಗಳ ಶಾಖದಿಂದ ಕೂದಲು ಮತ್ತಷ್ಟು ಡ್ರೈ ಆಗುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಸಿಂಪಲ್ ಹೇರ್‌ಸ್ಟೈಲ್‌ಗಳನ್ನು ಅನುಸರಿಸಿ.
-ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೂ ಕೂದಲು ಉದುರಬಹುದು. ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಿದ್ದಷ್ಟು ನೀರು ಕುಡಿಯಿರಿ.
-ಚಳಿ ಇದೆ ಅಂತ ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದಲೂ ಕೂದಲಿಗೆ ಹಾನಿಯಾಗುತ್ತದೆ. ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯುವುದು ಉತ್ತಮ.
– ಸ್ನಾನಕ್ಕೂ ಅರ್ಧ ಗಂಟೆ ಮುನ್ನ ಕೂದಲಿನ ಬುಡಕ್ಕೆ ಲಿಂಬೆರಸ ಅಥವಾ ಆ್ಯಪಲ್ ಸಿಡೆರ್ ವಿನೆಗರ್ ಹಚ್ಚಿದರೆ, ತಲೆಹೊಟ್ಟು ನಿವಾರಣೆಯಾಗುತ್ತದೆ.
– ಒಣ ಹವೆಯಿಂದಾಗಿ ಚರ್ಮ ಬಿರುಕು ಬಿಡುವಂತೆ ಕೂದಲಿನ ಬುಡ ಕೂಡಾ ಒಣಗುತ್ತದೆ. ಅದನ್ನು ತಡೆಯಲು, ವಾರಕ್ಕೊಮ್ಮೆ ಕೂದಲಿನ ಬುಡಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿ.
– ಗುಂಗುರು ಕೂದಲಿನವರು ಸಲ್ಫೆಟ್ ಫ್ರೀ ಶ್ಯಾಂಪೂ, ಮರದ ಬಾಚಣಿಗೆ ಬಳಸಬಹುದು.
– ಮಾರುಕಟ್ಟೆಯಲ್ಲಿರುವ ಉತ್ತಮ ಹೇರ್ ಮಾಯಿಶ್ಚರೈಸರ್‌ಗಳನ್ನು ಬಳಸಿ ಚಳಿಗಾಲದಿಂದ ರಕ್ಷಣೆ ಪಡೆಯಬಹುದು.
-ಹೇರ್ ಡ್ರೈಯರ್ ಬಳಸುವ ಬದಲು ಒಣ ಟವಲ್‌ನಿಂದ ಮೃದುವಾಗಿ ಉಜ್ಜಿದರೆ ಕೂದಲು ತುಂಡಾಗುವುದಿಲ್ಲ.
– ಕೂದಲು ಒರೆಸಲೆಂದೇ ಪ್ರತ್ಯೇಕ ಟವೆಲ್ ಬಳಸಿ.
-ಹೊರಗೆ ಹೋಗುವಾಗ ಟೊಪ್ಪಿ, ದುಪಟ್ಟಾದಿಂದ ಕೂದಲನ್ನು ಕವರ್ ಮಾಡಿಕೊಳ್ಳಿ.
-ದಾಸವಾಳ, ನೆಲ್ಲಿಕಾಯಿ, ಮೆಂತ್ಯೆ ಹಿಟ್ಟು, ಬಾಳೆಹಣ್ಣು, ಬೆಣ್ಣೆ ಹಣ್ಣು, ಮೊಸರು ಮುಂತಾದ ನೈಸರ್ಗಿಕ ಮಾಯಿಶ್ಚರೈಸರ್‌ಗಳಿಂದ ಹೇರ್‌ಪ್ಯಾಕ್ ತಯಾರಿಸಿ ಬಳಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.