ಉಡಲು ಸರಳ, ನೋಡಲು ಸುಂದರ
Team Udayavani, Oct 11, 2017, 12:25 PM IST
ಟ್ರೆಂಡ್ ಅನ್ನುವುದು ದಿನದಿಂದ ದಿನಕ್ಕೆ ಅಲ್ಲ, ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುವ ಕಾಲವಿದು. ಇಂದಿನ ಟ್ರೆಂಡ್ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿರುವುದು ಪಲಾಝೋ (ಪ್ಲಾಝೋ). ಈ ಪಲಾಝೊಪ್ಯಾಂಟ್ ನೋಡಲು ಸರಳ ಹಾಗೂ ಧರಿಸಲು ಕಂಫರ್ಟ್. ಇದನ್ನು ಯಾವ ವಯಸ್ಸಿನ ಸ್ತ್ರೀಯರು ಬೇಕಾದರೂ ತೊಡಬಹುದು. ಇದಕ್ಕೆ ವಯಸ್ಸಿನ ಮಿತಿ ಇಲ್ಲ.
ಪಲಾಝೊಗಳಲ್ಲಿ ಸರ್ಕಲ್ ಪಲಾಝೊ, ಅಂಬ್ರೆಲಾ ಕಟ್, ನ್ಯಾರೊ ಕಟ್, ಸ್ಟ್ರೈಟ್ ಕಟ್, ಪ್ಲೇಟೆಡ್, ನನ್ ಪ್ಲೇಟೆಡ್ ಎಂಬೆಲ್ಲಾ ವೆರೈಟಿಗಳಿವೆ. ಅಷ್ಟೇ ಅಲ್ಲದೆ, ಪ್ರಿಂಟೆಡ್ ಹಾಗೂ ಪ್ಲೇನ್‌ಗಳಲ್ಲೂ ಈ ದಿರಿಸು ಲಭ್ಯ. ಆದರೆ, ಪ್ಲೇನ್ ಪಲಾಝೊಗಳು ಟ್ರೆಂಡ್‌ನಲ್ಲಿ ಮೊದಲ ಸ್ಥಾನದಲ್ಲಿವೆ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಬಟ್ಟೆಯೇ ಹೆಚ್ಚು ಆರಾಮದಾಯಕ. ಕಾರಣ, ಪ್ರಿಂಟೆಡ್ ಪಲಾಝೊದ ಪ್ರಿಂಟ್‌ಗಳ ಬಣ್ಣ ಮಾಸಿದರೆ ಧರಿಸಲು ಚಂದ ಕಾಣುವುದಿಲ್ಲ.
ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಬೇಕಿದ್ದರೆ ಸ್ವಲ್ಪ ಗ್ರ್ಯಾಂಡ್ ಆಗಿರೋ ಪಲಾಝೊಗಳನ್ನು ಬಳಸಬಹುದು. ಆದರೆ ಪ್ರತಿ ನಿತ್ಯ ಆಫೀಸು, ಕಾಲೇಜುಗಳಿಗೆ ಹೋಗುವಾಗ ಪ್ಲೇನ್ ಪಲಾಝೊ ಧರಿಸುವುದು ಉತ್ತಮ.
ಸರ್ಕಲ್ ಪಲಾಝೊ, ಅಂಬ್ರೆಲಾ ಕಟ್ ಪಲಾಝೊಗಳು ಸಪೂರ ಮೈಕಟ್ಟಿನವರಿಗೆ ಹೇಳಿ ಮಾಡಿಸಿದ ದಿರಿಸು. ದಪ್ಪಕ್ಕೆ ಇರುವವರು ಸ್ಟ್ರೈಟ್ ಕಟ್, ನಾನ್ ಪ್ಲೇಟೆಡ್ ಪ್ಯಾಂಟ್‌ಗಳನ್ನು ತೊಟ್ಟರೆ ಚೆನ್ನಾಗಿರುತ್ತದೆ. ಈ ಪ್ಯಾಂಟನ್ನು ಕುರ್ತಿ, ಶಾರ್ಟ್ ಟಾಪ್‌ಗ್ಳೊಂದಿಗೆ ಮಿಕ್ಸ್ ಅಂಡ್ ಮ್ಯಾಚ್ ಮಾಡಿ ಧರಿಸಬಹುದು. ಪಲಾಝೊ ಕೊಳ್ಳುವಾಗ ಮೃದು ಬಟ್ಟೆಯ, ಗಾಢ ಬಣ್ಣದ ಪ್ಯಾಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.
ಐಶ್ವರ್ಯಾ ಬಿ. ಚಿಮ್ಮಲ್ಲಗಿ, ವಿಜಯಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.