ಅಕ್ತಂಗೀರ ಜೊತೇಲಿದ್ರೆ ಅಂತಃಕರಣ ಜಾಸ್ತಿ!


Team Udayavani, Aug 8, 2018, 6:00 AM IST

10.jpg

ಅಕ್ಕ-ತಂಗಿಯರ ಜೊತೆ ಬೆಳೆಯುವ ಗಂಡು ಮಕ್ಕಳಿಗೆ ಅಂತಃಕರಣ ಜಾಸ್ತಿ. ಎಷ್ಟೋ ಮಕ್ಕಳು ಅಮ್ಮನ ಬದಲಿಗೆ ಸೋದರಿಯರನ್ನೇ ಅತಿಯಾಗಿ ಹಚ್ಚಿಕೊಳ್ಳುವುದುಂಟು. ಒರಟುತನವೆಂಬ ಐಡೆಂಟಿಟಿಯನ್ನೇ ಮರೆತು, ಕರುಣೆ, ಸಹಾನುಭೂತಿ ಎಂಬ ಗುಣಗಳತ್ತ ಹುಡುಗರ ತಿರುಗಿ ನಿಲ್ಲಲು ಅಕ್ತಂಗಿಯರ ಒಡನಾಟವೇ ಕಾರಣ.

“ನನಗೆ ಅಷ್ಟೊಂದು ಹುಷಾರಿಲ್ಲ; ಕೆಲಸ ಮಾಡಿಕೊಡೋದು ಹೋಗಲಿ, ಒಂದು ಸಮಾಧಾನದ ಮಾತು ಆಡೋಕೂ ಇವರಿಗೆ ಬರಲ್ಲ. ಹೇಗೆ ಬರೋಕೆ ಸಾಧ್ಯ? ಬರೀ ಗಂಡುಗೋವಿಗಳ ಪಾಳ್ಯದಲ್ಲಿ ಬೆಳೆದಿದ್ದು ಇವರು. ಇನ್ನೇನಾಗುತ್ತೆ? ಒಂದು ಅಕ್ಕನೋ ತಂಗಿನೋ ಇದ್ದಿದ್ದರೆ ನನ್‌ ಕಷ್ಟ ಸ್ವಲ್ಪವಾದ್ರೂ ಅರ್ಥ ಆಗ್ತಿತ್ತು!’ ಸಾಮಾನ್ಯವಾಗಿ, ಗಂಡನನ್ನು ದೂರುತ್ತಾ ಮಹಿಳೆಯರು ಹೇಳುವ ಮಾತಿದು. ಏನೋ ಜಗಳವಾದಾಗ ಈ ರೀತಿ ತಲೆಗೊಂದು ಮಾತಾಡ್ತಾರೆ ಎಂದು ತಳ್ಳಿ ಹಾಕುವ ಹಾಗಿಲ್ಲ. ಏಕೆಂದರೆ ಅಕ್ಕ/ತಂಗಿಯರ ಜತೆ ಬೆಳೆದ ಹುಡುಗರು ಉತ್ತಮ ವ್ಯಕ್ತಿತ್ವ ಹೊಂದಿರುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ಸತ್ಯ!!

ತಡವಾಗಿ ಮದುವೆ, ವೃತ್ತಿಪರರಾದ ದಂಪತಿ, ಏರುತ್ತಿರುವ ಖರ್ಚು, ಮಗುವಿನ ಲಾಲನೆ-ಪಾಲನೆಗೆ ಬೇಕಾಗುವ ಸಮಯದ ಕೊರತೆ, ಅವಿಭಕ್ತ ಕುಟುಂಬ, ಹೆಚ್ಚಿದ ವಿದ್ಯಾಭ್ಯಾಸ ಮಟ್ಟ… ಹೀಗೆ ಅನೇಕ ಕಾರಣಗಳಿಂದ ನಾವಿಬ್ಬರು ನಮಗೊಂದು ಎನ್ನುವವರೇ ಹೆಚ್ಚಾಗಿರುವ ಈಗಿನ ದಿನಗಳಲ್ಲಿ ಎರಡು ಮಕ್ಕಳು ಬೇಕೇ ಬೇಡವೇ ಎಂಬುದು ಅವರವರ ಅನುಕೂಲ-ಆಯ್ಕೆ ಎಂಬುದು ನಿಜ.ಆದರೂ ಮನೋವಿಜ್ಞಾನಿಗಳು ಸಹೋದರ/ರಿಯರೊಂದಿಗೆ ಬೆಳೆದಾಗ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂಬುದನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಗಂಡು ಮಕ್ಕಳಿಗೆ ಸಹೋದರಿ ಇದ್ದಾಗ ಅದರಿಂದ ಹೆಚ್ಚು ಲಾಭವಿದೆ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂಬುದು ಇತ್ತೀಚಿನ ಸುದ್ದಿ.

ಇದಕ್ಕೆ ಕಾರಣ, ಗಂಡು ಮತ್ತು ಹೆಣ್ಣಿನಲ್ಲಿರುವ ಮಾನಸಿಕ ಭಿನ್ನತೆ. ದೈಹಿಕವಾಗಿ ಗಂಡು ಬಲಿಷ್ಠನಾದರೂ ಭಾವನಾತ್ಮಕವಾಗಿ ಹೆಣ್ಣು ಹೆಚ್ಚು ಬಲಶಾಲಿ. ತನ್ನವರು, ತನ್ನ ಕುಟುಂಬ ಎಂಬ ಪ್ರೀತಿ ಆಕೆಯ ಶಕ್ತಿ. ಮಾತು ಎಂಬುದು ಆಕೆಯ ವ್ಯಕ್ತಿತ್ವದ ಪ್ರಬಲ ಮತ್ತು  ಅವಿಭಾಜ್ಯ ಅಂಗ. ತನ್ನ ಭಾವನೆಗಳನ್ನು ಸಮರ್ಥವಾಗಿ ಆಕೆ ಮಾತಿನ ಮೂಲಕ ವ್ಯಕ್ತಪಡಿಸಬಲ್ಲಳು. ಗಂಡಿನದ್ದು ಪ್ರಾಯೋಗಿಕತೆಗೆ ಒತ್ತು ಕೊಡುವ ಸ್ವಭಾವ. ಭಾವನೆಗಳಿಲ್ಲ ಎಂದಲ್ಲ, ಆದರೆ ಅದನ್ನು ವ್ಯಕ್ತಪಡಿಸುವ ರೀತಿ ತಿಳಿಯದು. ಭಾವನೆಗಳನ್ನು ಭಾಷೆ, ಕೃತಿಯ ಮೂಲಕ ವ್ಯಕ್ತಪಡಿಸುವಲ್ಲಿ ಗಂಡು ಯಾವಾಗಲೂ ಹಿಂದೆ.ಗಂಡು-ಹೆಣ್ಣಿಗಿರುವ ಈ ವ್ಯತ್ಯಾಸ ಬಾಲ್ಯದಿಂದಲೇ ಕಂಡುಬಂದರೂ ವಯಸ್ಕರಾದಂತೆ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಅಕ್ಕ, ತಂಗಿಯರಿದ್ದಾಗ ಗಂಡುಮಕ್ಕಳು ಸಂವಹನವನ್ನು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಕಲಿಯುತ್ತಾರೆ ಎಂದು ಹೇಳಲಾಗಿದೆ.

“ಎ ಯಂಗ್‌ ಗರ್ಲ್ ಇಸ್‌ ಎ ಯಂಗ್‌ ಮದರ್‌ , ಎ ಯಂಗ್‌ ಬಾಯ್‌ ಇಸ್‌ ಎ ಯಂಗ್‌ ಬಾಯ್‌’ ಎನ್ನುವ ಮಾತಿನ ಹಾಗೆ, ಯಾವುದೇ ಮಕ್ಕಳನ್ನು ಅಂದರೆ ತನ್ನ ಸಹೋದರ/ರಿ ಯನ್ನು ಮಗುವಿನಂತೆ ಲಾಲಿಸುವ ಕಲೆ ಹೆಣ್ಣುಮಕ್ಕಳಿಗೆ ಪ್ರಕೃತಿದತ್ತವಾಗಿ ಬಂದಿರುತ್ತದೆ. ಹೀಗಾಗಿ ಸಹೋದರಿಯರ ಜತೆ ಬೆಳೆದ ಗಂಡು ಮಕ್ಕಳಿಗೆ ತಮ್ಮನ್ನು ಪ್ರೀತಿಸುವವರಿದ್ದಾರೆ ಎಂಬ ಸುರಕ್ಷಿತ ಭಾವ ಮೂಡುತ್ತದೆ.ಅದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. 

ವಯಸ್ಸಿನಲ್ಲಿ ಹಿರಿಯ ಅಥವಾ ಕಿರಿಯ ಸಹೋದರಿಯರಿದ್ದಾಗ ಸಕಾರಾತ್ಮಕ ಭಾವನೆಗಳು ಹೆಚ್ಚಿರುತ್ತವೆ.ಆಟವಾಡಲು,ದಿನನಿತ್ಯದ ಸಂಗತಿ ಹಂಚಿಕೊಳ್ಳಲು, ಸಲಹೆ ಪಡೆಯಲು ತನ್ನವರು ಇದ್ದಾರೆಂಬ ಭಾವನೆಯಿಂದ ಒಂಟಿತನ, ಹೆದರಿಕೆ ಕಾಡುವುದು ಕಡಿಮೆ. ಹದಿಹರೆಯದಲ್ಲಿ ತಮ್ಮ ತಂದೆತಾಯಿಗೆ ಹೇಳದ ವಿಷಯಗಳನ್ನೂ ಹಂಚಿಕೊಳ್ಳುವುದು ಸಹೋದರಿಯೊಂದಿಗೇ! ಒಂದೇ ತಲೆಮಾರಿನವರು ಎಂಬ ಅರಿವು, ತಾವಿಬ್ಬರೂ ಒಂದೇ ದೋಣಿಯ ಪಯಣಿಗರು ಎಂಬ ವಿಶ್ವಾಸ ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಹೀಗೆ, ತನ್ನದನ್ನು ಹಂಚಿಕೊಳ್ಳುತ್ತಲೇ ಇತರರ ನೋವಿಗೆ ಮಿಡಿಯುವ, ಸ್ಪಂದಿಸುವ ಸೂಕ್ಷ್ಮತೆಯನ್ನು ಬೆಳೆಸುತ್ತದೆ. ಹೀಗಾಗಿ ಹೆಣ್ಣು ಮಕ್ಕಳಿದ್ದ ಮನೆಯಲ್ಲಿ ಕರುಣೆ, ಸಹಾನುಭೂತಿ ಹೆಚ್ಚು! 

ಬಹುಪಾತ್ರ ನಿರ್ವಹಣೆ ಮಹಿಳೆಗೆ ಅನಿವಾರ್ಯ ಮಾತ್ರವಲ್ಲ, ಸಹಜ ಪ್ರತಿಭೆ. ಸಹೋದರಿಯೊಬ್ಬಳು ಯಾವುದೇ ಕೆಲಸವನ್ನೇ ಆಗಲಿ ತಾನು ಮಾಡುವುದಷ್ಟೇ ಅಲ್ಲ, ಅದನ್ನು ಮಾಡುತ್ತಾ ಸಹೋದರನಿಗೂ ಅದನ್ನು ಕೆಲಮಟ್ಟಿಗೆ ಕಲಿಸುತ್ತಾಳೆ. ಹೀಗಾಗಿ, ಸ್ವತಂತ್ರವಾಗಿ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು, ಕಷ್ಟಪಟ್ಟು ಗುರಿ ತಲುಪುವುದನ್ನು ಸಹೋದರಿಯಿಂದ ನೋಡಿ ಕಲಿಯುವುದು ಸಾಧ್ಯವಾಗುತ್ತದೆ. ಹಾಗೆಯೇ ಒಬ್ಬರನ್ನೊಬ್ಬರು ಮೀರಿಸಬೇಕೆಂಬ ಪೈಪೋಟಿಯಿಂದ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವೂ ಬೆಳೆಯುತ್ತದೆ.

ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುವಾಗ ಪರಸ್ಪರರ ಸ್ವಭಾವ, ಗುಣ, ದೋಷಗಳು ತಿಳಿದಿರುತ್ತವೆ. ಸಹಜವಾಗಿಯೇ ಸೂಕ್ಷ್ಮ ಸ್ವಭಾವದವರಾದ ಹುಡುಗಿಯರು ಸಹೋದರ ತಪ್ಪು ಮಾಡಿದಾಗ, ಸರಿಯಾಗಿ ವರ್ತಿಸದಿದ್ದಾಗ ಅದನ್ನು ನೇರವಾಗಿ ತಿಳಿಸುತ್ತಾರೆ.ಹೀಗಾಗಿ ಕೆಲವೊಮ್ಮೆ ಕೇಳುಗರ ಮನಸ್ಸಿಗೆ ಬೇಸರವಾದರೂ ಪ್ರಾಮಾಣಿಕ ಅಭಿಪ್ರಾಯ ನೀಡುವ ಸ್ವಾತಂತ್ರ್ಯ ಮತ್ತು ಸಲುಗೆ ಸಹೋದರಿಗಿದೆ. ಆ ಮೂಲಕ ತಪ್ಪನ್ನು ತಿದ್ದಿ ಒಳ್ಳೆಯ ವ್ಯಕ್ತಿತ್ವ ರೂಪಿಸುತ್ತಾರೆ.

ಅಣ್ಣ-ತಂಗಿ ಅಥವಾ ಅಕ್ಕ-ತಮ್ಮ ಒಟ್ಟಿಗೇ ಬೆೆಳೆಯುವಾಗ ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳು ಇದ್ದೇ ಇರುತ್ತವೆ. ಹೀಗಾಗಿ ಆಗಾಗ್ಗೆ ಜಗಳ-ವಾದಗಳು ಸಾಮಾನ್ಯ. ಆದರೆ ಈ ರೀತಿಯ ಭಿನ್ನಾಭಿಪ್ರಾಯಗಳಿದ್ದಾಗಲೂ ಪರಸ್ಪರರನ್ನು ಗೌರವಿಸಿ, ಪ್ರೀತಿಯಿಂದ ಕೂಡಿ ಬಾಳಲು ಸಾಧ್ಯ ಎಂಬ ಜೀವನದ ಪಾಠ ಸಿಗುವುದೂ  ಈ ಜಗಳಗಳಿಂದಲೇ. ಮನಸ್ಸಿನ ಒತ್ತಡವನ್ನು ಒಳಗೇ ಇಟ್ಟು ಕುದಿಯುವ ಬದಲು ಅದನ್ನು ಸರಿಯಾಗಿ ವ್ಯಕ್ತಪಡಿಸಿ ಪರಿಹಾರ ಕಂಡುಕೊಳ್ಳುವ ರೀತಿಯನ್ನು ಸಹೋದರಿ ಕಲಿಸುತ್ತಾಳೆ.ಹೀಗಾಗಿಯೇ ಅಕ್ಕ ತಂಗಿಯ ಜೊತೆ ಬೆಳೆದವರು ತಮ್ಮ ವೈವಾಹಿಕ ಜೀವನದಲ್ಲಿ ಹೆಚ್ಚು ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ.

 ಹೀಗೆ, ಭಾವನಾತ್ಮಕವಾಗಿ ಬೆಸೆಯಲು, ಸಂಬಂಧಗಳನ್ನು ಗಟ್ಟಿಗೊಳಿಸಲು, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹೋದರಿ ಸಹಾಯ ಮಾಡುತ್ತಾಳೆ ಎಂಬುದು ಸತ್ಯ!

ಸಿಸ್ಟರ್‌, ನನ್ನ ಅಡ್ವೈಸರ್‌!
ನಾನು ಮತ್ತು ಅಕ್ಕ, ಚಿಕ್ಕವರಿರುವಾಗ ಜಗಳ ಆಡುತ್ತಿದ್ದೆವು. ಆಟದ ಸಾಮಾನು, ಟಿ.ವಿ ರಿಮೋಟ್‌… ಹೀಗೆ ಎಲ್ಲದಕ್ಕೂ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ಕೆಲವು ಸಾರಿ ನಾನೊಬ್ಬನೇ ಇದ್ದರೆ ಒಳ್ಳೆಯದಿತ್ತು ಅನ್ನಿಸಿದ್ದೂ ಇದೆ. ಆದರೆ ಟೀನೇಜ್‌ಗೆ ಬಂದಾಗಿಂದ ನಿಧಾನವಾಗಿ ನಾವಿಬ್ಬರೂ ಕ್ಲೋಸ್‌ ಆದೆವು. ಕಾಲೇಜು ದಿನಗಳಲ್ಲಂತೂ ಅವಳೇ ನನ್ನ ಟೀಚರ್‌.ಓದುವ ರೀತಿ, ಹಾಕುವ ಬಟ್ಟೆಯಿಂದ ಹಿಡಿದು ಹುಡುಗಿಯರ ಹತ್ತಿರ ಹೇಗೆ- ಏನು ಮಾತಾಡಬೇಕು ಎಲ್ಲವನ್ನೂ ಅವಳೇ ಹೇಳಿಕೊಟ್ಟಿದ್ದು. ಮದುವೆಯಾಗಿ, ಮಕ್ಕಳಾಗಿದ್ರೂ ಈಗಲೂ ನನಗೆ ಜೋರು ಮಾಡ್ತಾಳೆ, ಒಮ್ಮೊಮ್ಮೆ ರೇಗಾಡ್ತಾಳೆ ಅನ್ನೋದು ನಿಜವಾದರೂ ಅವಳ ಅಡ್ವೆ„ಸ್‌ ಹೆಚ್ಚಾಗಿ ಸರಿ ಇರುತ್ತೆ. ಹಾಗೆ ನೋಡಿದರೆ, ಅಮ್ಮನಿಗಿಂತ ಅಕ್ಕನ ಮೇಲೇ ನಾನು ಡಿಪೆಂಡ್‌ ಆಗಿರೋದು. ಹೀಗಂದ್ರೆ ಅವಳಿಗೆ ಸಿಕ್ಕಾಪಟ್ಟೆ ಜಂಭ ಬರುತ್ತೆ, ಆದ್ರೂ ಅವಳನ್ನು ಪಡೆದ ನಾನು ರಿಯಲೀ ಲಕ್ಕಿ !
ವರುಣ್‌ ಶೆಟ್ಟಿ, ಮುಂಬೈ

ನನ್ನ ಚೈತನ್ಯ!
ಜೀವನದ ಪಥದಲ್ಲಿ ಎಲ್ಲಿ ನನಗಿಂತ ಹಿಂದೆ ಬೀಳುವೆನೋ ಎಂಬ ಚಿಂತೆಯಲ್ಲಿ ಗಡಿಬಿಡಿಯಿಂದ ಒಂದೂವರೆ ವರ್ಷದ ಅಂತರದಲ್ಲೇ ಹುಟ್ಟಿ ನನ್ನ ಬೆನ್ನ ಹತ್ತಿ ಬಂದವಳು ನನ್ನ ತಂಗಿ ಚೈತನ್ಯ! ಬುದ್ಧಿ ಬರುವ ಮೊದಲು, ಇವಳು ಬೇಡ ಎಂದು ನಾನು ಗಲಾಟೆ ಮಾಡಿದ್ದೆನಂತೆ! ಆದರೆ ಬೆಳೆಯುತ್ತಾ ಬೆಳೆಯುತ್ತಾ ಥೇಟ್‌ ಅವಳಿ- ಜವಳಿಗಳಂತೆ ಒಟ್ಟಿಗಿದ್ದೆವು. ಪೈಪೋಟಿಗೆ ಬಿದ್ದು ಸೈಕಲ್‌ ಹೊಡೆಯುವುದನ್ನು ಕಲಿತೆವು, ಕಿತ್ತಾಡಿ ಕತೆ ಪುಸ್ತಕ ಓದಿದೆವು. ಲೆಕ್ಕದಲ್ಲಿ ಬಹಳ ಬುದ್ಧಿವಂತನಾಗಿದ್ದ ನನಗೆ ಭಾವನೆಯ ಪಾಠ ಕಲಿಸಿದ್ದು ತಂಗಿ.ಅಪ್ಪ -ಅಮ್ಮನ ಮುದ್ದು ಮಗ ಮಾತ್ರ ಆಗಿದ್ದವನು ಜವಾಬ್ದಾರಿಯುತ ಅಣ್ಣನಾಗಿದ್ದೂ ಅವಳಿಂದಲೇ. ಜಗಳವಾಡುತ್ತಾ ಒಟ್ಟಿಗೇ ಕೂಗಾಡಿದೆವು, ಅತ್ತೆವು, ನಕ್ಕೆವು ಮತ್ತು ಇನ್ನಷ್ಟು ಬೆಳೆದೆವು. ಆಗ ತಂಗಿಯೊಂದಿಗೆ ಕಳೆದ ಕ್ಷಣಗಳಿಂದಾಗಿಯೇ, ಈಗ ನನ್ನ ಪತ್ನಿ ಮತ್ತು ಮಗಳನ್ನು ಹೆಚ್ಚು ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ ಎಂಬುದು ನನ್ನ ನಂಬಿಕೆ. ಅಪ್ಪ-ಅಮ್ಮನೊಂದಿಗೆ ಹಂಚಿಕೊಳ್ಳಲಾಗದ ಅನೇಕ ವಿಷಯಗಳನ್ನು ಕೇಳುವ ಗೆಳತಿ, ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಹಿರಿಯಕ್ಕ, ನಾನೆಂದರೆ ಆರಾಧಿಸುವ ಪ್ರೀತಿಯ ಪುಟ್ಟತಂಗಿ… ಹೀಗೆ ಈಗ ಸಪ್ತಸಾಗರದಾಚೆ ಇದ್ದರೂ, ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗ-ಚೈತನ್ಯ!
-ಗೌತಮ್‌ ಶಿರೂರ್‌, ಕ್ಯಾಲಿಫೋರ್ನಿಯಾ 

ಡಾ.ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.