ಸಹೋದರಿಯರ ಸವಾಲ್‌


Team Udayavani, Apr 11, 2018, 6:00 PM IST

sahodariyara.jpg

ಹುಟ್ತಾ ಅಣ್ಣ ತಮ್ಮಂದಿರು, ಬೆಳೆದ ಮೇಲೆ ದಾಯಾದಿಗಳು ಎಂಬ ಮಾತು ಕೇಳಿದ್ದೇವೆ. ಆ ಮಾತು ಕೆಲವೊಮ್ಮೆ ಅಕ್ಕ-ತಂಗಿಯರಿಗೂ ಅನ್ವಯಿಸುತ್ತದೆ.ಅಕ್ಕನ ಪುಸ್ತಕ, ಬಟ್ಟೆಯನ್ನೇ ಬಳಸಿ ದೊಡ್ಡವಳಾದ ತಂಗಿಗೆ ಮುಂದೆ ಅದು ಹೆತ್ತವರು ತನಗೆ ಮಾಡಿದ ಮೋಸ ಅನಿಸುತ್ತದೆ.  ತಂಗಿಯ ಕೈ ಹಿಡಿದು ನಡೆಯುವುದನ್ನು, ಬರೆಯುವುದನ್ನು ಕಲಿಸಿದ ಅಕ್ಕನಿಗೆ, ಮದುವೆಯಾದ ನಂತರ ತಂಗಿ ತನ್ನ ನಡೆಯನ್ನು ಪಾಲಿಸುವುದು ಇಷ್ಟವಾಗದೇ ಇರಬಹುದು. ಆದರೂ, ಅಕ್ಕ-ತಂಗಿ ಎಂದರೆ ಜಗತ್ತಿನ ಶ್ರೇಷ್ಠ ಸಂಬಂಧಗಳಲ್ಲೊಂದು.

ಸಣ್ಣಪುಟ್ಟ ಮುನಿಸಿನ ನಡುವೆಯೂ ಒಬ್ಬರಿಗೊಬ್ಬರು ಆಸರೆಯಾಗುವ ಅನಂತ ಉದಾಹರಣೆಗಳಿವೆ… “ಅಮ್ಮಾ, ತಂಗಿ ಹೊರಗೆ ಓಡುತ್ತಿದ್ದಾಳೆ ಬಾ ಎತ್ತಿಕೋ’, “ಅವಳನ್ನು ಶಾಲೆಗೆ ನನ್ನೊಡನೆ ಕಳುಹಿಸಬೇಡಮ್ಮ. ಗೆಳತಿಯರು ಹೊಡೆಯಬಹುದು’, “ನನಗೆ ಬೇಡಮ್ಮ, ಅವಳು ಸಣ್ಣವಳು. ಅವಳಿಗೇ ಕೊಡು’ ಎಂದು ತನ್ನ ಪಾಲನ್ನೂ ನೀಡುವ, ತಂಗಿ ತೀಟೆ ಮಾಡಿದಾಗ ಅವಳ ಪರ ವಹಿಸಿ ತಂದೆಯ ಹೊಡೆತವನ್ನು ತಪ್ಪಿಸುವವಳೇ ಅಕ್ಕ. ಶಾಲೆಗೆ ಕೈಹಿಡಿದು ಕರೆದುಕೊಂಡು ಹೋಗಿ, ಆಟ- ಪಾಠಗಳನ್ನು ಹೇಳಿಕೊಟ್ಟಾಕೆ.

ಅಮ್ಮನಿಗೂ ಹಿರಿ ಮಗಳನ್ನು ಮೊದಮೊದಲು ಶಾಲೆಗೆ ಕಳುಹಿಸುವಾಗ ಭಯ. ಆದರೆ, ಇನ್ನೊಬ್ಬ ಮಗಳೂ ಹೊರಟು ನಿಂತಾಗ, ಅವಳನ್ನು ಶಾಲೆಯಲ್ಲಿ ಹಿರಿಮಗಳು ನೋಡಿಕೊಳ್ಳುವಳೆಂಬ ಧೈರ್ಯ. ಮೊನ್ನೆ ಮೊನ್ನೆಯವರೆಗೂ ಹೀಗೆ ಒಬ್ಬರಿಗೋಸ್ಕರ ಒಬ್ಬರಿರುವ ಅಕ್ಕ- ತಂಗಿಯರು, ಬೆಳೆಯುತ್ತಾಹೋದಂತೆ ಸಣ್ಣ ಸಣ್ಣ ವಿಷಯಕ್ಕೂ ಕಿತ್ತಾಡತೊಡಗಿದಾಗ ಆಶ್ಚರ್ಯ.

ಜಯಾಳ ಅಪ್ಪ, ಚಿಕ್ಕ ಮಗಳ ಮದುವೆಗೆ ತಮ್ಮ ನಿವೃತ್ತಿ ವೇಳೆ ದೊರಕಿದ ಹಣದಿಂದ ಸ್ವಲ್ಪ ಜಾಸ್ತಿ ಬಂಗಾರ ಹಾಕಿದಾಗ, ಹಿರಿಮಗಳು “ನನಗೆ ಯಾಕೆ ಅಷ್ಟು ಕೊಟ್ಟಿಲ್ಲ? ಕಿರಿಮಗಳು ಅಂತ ಅವಳ ಮೇಲೆ ಪ್ರೀತಿ ಜಾಸ್ತಿ ಆಗೋಯ್ತಾ? ನಾನೇನು ಅನ್ಯಾಯ ಮಾಡಿದೀನಿ?’ ಎಂದು ಮುಖ ಊದಿಸಿದ್ದಾಳೆ. ಪಕ್ಕದ ಮನೆಯ ರಿಯಾಳ ಅಪ್ಪ ನಿವೃತ್ತಿ ನಂತರ ಇದ್ದಬದ್ದ ಹಣದಲ್ಲಿ ಕಿರಿಯ ಮಗಳಿಗೆ ಸಿಂಪಲ್ಲಾಗಿ ಮದುವೆ ಮಾಡಿದರೆ, ಅಕ್ಕನಿಗೆ ಮಾಡಿದ ಅದ್ದೂರಿ ಮದುವೆಯೇ ಆಕೆಗೆ ನೆನಪಾಗುತ್ತದೆ.

ಅಕ್ಕನನ್ನು ಶಾಲಾದಿನದಲ್ಲಿ ಆಟ- ಪಾಠಗಳಲ್ಲಿ ಅನುಕರಣೆ ಮಾಡಿದಂತೆ, ಮದುವೆಯ ನಂತರವೂ ಅನುಕರಿಸಿದರೆ, ಅಕ್ಕನಿಗೆ ಅದು ತಂಗಿ ತನ್ನೊಂದಿಗೆ ಸ್ಪರ್ಧೆ ನಡೆಸಿದ್ದಾಳೇನೋ ಎಂಬ ಅನುಮಾನ ಮೂಡಿಸುತ್ತದೆ. ಅಕ್ಕ ಸೈಟು ಕೊಂಡು, ಸ್ವಲ್ಪ ದಿನದÇÉೇ ತಂಗಿ ಆಕಸ್ಮಿಕವಾಗಿ ಸೈಟ್‌ ಕೊಂಡರೂ, ನಾನು ಖರೀದಿಸಿದ್ದನ್ನು ನೋಡಿಯೇ ಅವಳು ತೆಗೆದುಕೊಂಡಿದ್ದಾಳೆ ಎಂದುಕೊಳ್ಳುತ್ತಾಳೆ.

ಅಕ್ಕ, ಮಗನಿಗೆ ಅಜಯನೆಂದು ಹೆಸರಿಟ್ಟು, ಆ ಹೆಸರು ಚಂದವೆಂದು ತನ್ನ ಮಗನಿಗೆ ವಿಜಯನೆಂದು ತಂಗಿ ಹೆಸರಿಟ್ಟರೆ ಅದನ್ನೂ ತಪ್ಪೆಂದು ಭಾವಿಸುವವರು ಇದ್ದಾರೆ! ತಂಗಿ ಗರ್ಭಿಣಿಯೆಂದು ತಿಳಿದು ವಾಕರಿಕೆ, ಸುಸ್ತು ಜಾಸ್ತಿಯೆಂದು ಅಮ್ಮ ಅವಳ ಬಳಿ ಹದಿನೈದು ದಿನ ಇದ್ದು ಆರೈಕೆ ಮಾಡಿದರೂ, ಅಕ್ಕನಿಗೆ ಸಿಟ್ಟು. ನಾನು ಗರ್ಭಿಣಿಯಿದ್ದಾಗಲೂ ಬಾರದವಳು, ತಂಗಿಗೋಸ್ಕರ ಅವಳ ಮನೆಗೆ ಓಡಿದ್ದಾಳೆ ನೋಡು ಎಂಬ ಸಿಡಿಮಿಡಿಯ ಭಾವನೆ. ಅವಳ ಹೆರಿಗೆ ಸಮಯದಲ್ಲಿ ಅಪ್ಪನಿಗಾದ ಆಪರೇಷನ್‌ನ ಕಾರಣ ತಾಯಿ ಬರಲಿಲ್ಲವೆಂಬ ಅಂಶವನ್ನು ಹೇಗೆ ಮರೆತಳ್ಳೋ?!

ರಿಯಾಳ ಅಕ್ಕನ ಮಗನಿಗೆ ಅವರಪ್ಪ ಸೈಕಲ… ಕೊಡಿಸಿದ್ದರು. ಅವರು ಕಾಲವಾದ ನಂತರ ಹುಟ್ಟಿದ ರಿಯಾಳ ಮಗಳಿಗೆ ತವರಿನವರು ಸೈಕಲ… ಕೊಡಿಸಿಲ್ಲವೆಂದು ಕೋಪ! ತನಗೆ ಹೊಸ ಬಟ್ಟೆ, ಹೊಸ ಬ್ಯಾಗು, ಪುಸ್ತಕ ಯಾವುದೂ ಇಲ್ಲ. ಎಲ್ಲವೂ ಅಕ್ಕ ಉಪಯೋಗಿಸಿ ಕೊಟ್ಟ ವಸ್ತುಗಳೇ ಎಂದು ಕೆಲವು ತಂಗಿಯರ ಕೊರಗು. ತಂಗಿ ಸಣ್ಣವಳು ಎಂದು ಅವಳನ್ನು ಎಲ್ಲರೂ ಪ್ರೀತಿಸುತ್ತಾರೆ. ನನ್ನನ್ನು ಯಾರೂ ಕೇಳುವವರೇ ಇಲ್ಲ ಎಂಬ ಮುನಿಸು ಅಕ್ಕನದು. ಈ ಸಣ್ಣಪುಟ್ಟ ದ್ವೇಷಗಳನ್ನೇ ಮದುವೆಯ ನಂತರ ಗಂಡನ ಮನೆ ಸೇರಿದ ಮೇಲೂ ಅಕ್ಕ- ತಂಗಿಯರು ಮುಂದುವರಿಸಬಹುದು.

ತಂಗಿ ದುಡಿದು ಸಂಪಾದಿಸುತ್ತಿದ್ದಾಳೆ. ನನಗೆ ಅಷ್ಟು ಓದಿಸದೇ, ಅಪ್ಪ ಬೇಗ ಮದುವೆ ಮಾಡಿಬಿಟ್ಟರು. ಅದಕ್ಕೇ ನಾನೀಗ ಮನೆಯಲ್ಲಿ ಕೂರುವಂತಾಯ್ತು ಎಂಬುದು ಅಕ್ಕನ ಕೊರಗು. ಅಕ್ಕನಿಗೆ ಒಳ್ಳೆಯ ಗಂಡನ್ನು ಹುಡುಕಿದ ಅಪ್ಪ, ತನಗೆ ಮದುವೆ ಮಾಡುವಾಗ ಅವಸರ ಮಾಡಿ ಸಿಕ್ಕಿದ ಹುಡುಗನನ್ನು ಕಟ್ಟಿದರು ಎಂಬ ಭಾವನೆ ತಂಗಿಗೆ. ಇನ್ನು ಅಕ್ಕ ತಂಗಿಯರ ಸಂಖ್ಯೆ ಎರಡನ್ನು ದಾಟಿದರಂತೂ, ಇಬ್ಬರು ಅಕ್ಕಂದಿರು ಸೇರಿ ತಂಗಿಯನ್ನು ದೂರ ಮಾಡುವುದು, ತಂಗಿಯರಿಬ್ಬರೂ ಸೇರಿ ಅಕ್ಕನನ್ನು ದೂರುವುದು ಇವೆಲ್ಲ ಮಾಮೂಲು.

ಅಕ್ಕ-ತಂಗಿಯರ ಬಾಂಧವ್ಯ ಯಾವ್ಯಾವ ಕಾರಣಕ್ಕೆ ಸಡಿಲಗೊಳ್ಳುತ್ತದೆ? ಒಬ್ಬರನ್ನು ಕಂಡಾಕ್ಷಣ ಮುಖ ತಿರುಗಿಸುವ ಮನಸ್ಸು ಇನ್ನೊಬ್ಬರಿಗೆ ಏಕೆ ಬರುತ್ತದೆ ಎಂಬುದಕ್ಕೆ ಇವೆಲ್ಲಾ ಉದಾಹರಣೆಗಳು. ಅದರರ್ಥ, ಅಕ್ಕ- ತಂಗಿಯರೆಂದರೆ ಬರೀ ಜಗಳವೇ ಎಂದಲ್ಲ. ಇಬ್ಬರೂ ಬಹಳ ಪ್ರೀತಿಯಿಂದಿರುವ ಬಹಳ ಉದಾಹರಣೆಗಳಿವೆ. ತಂಗಿಯಂದಿರ ಓದಿಗಾಗಿ ತನ್ನ ಓದನ್ನು ತ್ಯಾಗ ಮಾಡಿ, ಹಾಸಿಗೆ ಹಿಡಿದ ತಾಯಿಯ ಆರೈಕೆ ಮಾಡಿದ ಅಕ್ಕ, ತಂಗಿಯರ ಮದುವೆ ಮಾಡಿಸಿ ಕಡೆಗೆ ತಾನು ಮದುವೆಯಾಗಿರುವ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಗೆಳತಿ ತುಳಸಿಯ ಅಕ್ಕ, ಆಕೆಯ ಬಾಣಂತನಕ್ಕಾಗಿ ಎರಡು ತಿಂಗಳು ತವರಿಗೆ ಬಂದು ಸಹಾಯ ಮಾಡಿದ್ದಾಳೆ. ತಂಗಿಗೆ ಹೆರಿಗೆ ಸಮಯದಲ್ಲಿ ನಾನಾ ಬಗೆಯ ಸಲಹೆಗಳನ್ನು ನೀಡಿ ಧೈರ್ಯ ಹೇಳಿದ್ದಾಳೆ.

ತಾಯಿಯಿಲ್ಲದವರಿಗೆ ಅಕ್ಕನೇ ತಾಯಿ. ಅಂಥಾ ತಾಯಿ ಮನಸ್ಸಿನ ಅಕ್ಕನನ್ನು ಅನುಸರಿಸಿದ ತಂಗಿಯರು ಚೆನ್ನಾಗಿ ಜೀವನ ನಡೆಸಿರುವುದಕ್ಕೆ ಉದಾಹರಣೆಗಳಿವೆ. ಅಕ್ಕ ತಂಗಿಯರಿಬ್ಬರೂ ಸಂಗೀತ, ನೃತ್ಯ ಕಲಿತು ಒಟ್ಟಾಗಿ ಪ್ರದರ್ಶನ ನೀಡಿದ ನಿದರ್ಶನಗಳಿವೆ. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಹಚ್ಚಿಕೊಂಡ ಅಕ್ಕ ತಂಗಿಯರು, ಒಂದೇ ಮನೆಗೆ ಸೊಸೆಯರಾಗಿದ್ದಾರೆ. ಬಹಳ ಹಿಂದಿನ ಕಾಲದಲ್ಲಾದರೆ ಒಂದೇ ಗಂಡನನ್ನು ಕಟ್ಟಿಕೊಂಡ ಉದಾಹರಣೆಗಳೂ ಇದ್ದವೇನೋ?!

ಅಕ್ಕನ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸುವ ತಂಗಿಯರು ಬಹಳ. ಆಕಸ್ಮಿಕವಾಗಿ ಅಕ್ಕ ತೀರಿಕೊಂಡಾಗ, ಅವಳ ಮಕ್ಕಳನ್ನು ತಂದಿಟ್ಟುಕೊಂಡು, ಅಮ್ಮನಿಲ್ಲದ ಕೊರತೆ ಅವರನ್ನು ತಟ್ಟದಂತೆ ನೋಡಿಕೊಂಡು, ಅವರನ್ನು ಓದಿಸಿ, ಮದುವೆ ಮಾಡಿ, ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವ ಚಿಕ್ಕಮ್ಮಂದಿರು ಇದ್ದಾರೆ. ಅಕ್ಕ-ತಂಗಿಯರ ಕುಟುಂಬಗಳು ಒಟ್ಟಿಗೇ ಪ್ರವಾಸ ಹೋಗಿ ಸಂಭ್ರಮಿಸುವ ಚಿತ್ರಗಳಿಗೂ ಕೊರತೆಯಿಲ್ಲ. ಅಕ್ಕನನ್ನು ತಾಯಿ ಎಂದೂ, ತಂಗಿಯನ್ನು ಮಗಳೆಂದೂ ಭಾವಿಸುವ ಚೇತನಗಳೂ ನಮ್ಮ ನಡುವೆ ಇವೆ. ಅಕ್ಕ ತಂಗಿಯ ಬಾಂಧವ್ಯವೇ ಅಂಥದ್ದು. ಅಕ್ಕ- ತಂಗಿಯಾಗಿ ಹುಟ್ಟಲು ಎಷ್ಟು ಜನ್ಮದ ಪುಣ್ಯ ಮಾಡಿದ್ದಾರೋ! ಅವರಿಬ್ಬರಿಗಿಂತ ಒಳ್ಳೆಯ ಗೆಳತಿಯರು ಈ ಜಗತ್ತಿನಲ್ಲಿ ಸಿಗಲಿಕ್ಕಿಲ್ಲ. ಏನಂತೀರಾ?

ತಾಜಾ ಬಾಂಧವ್ಯಕ್ಕೆ… 
– ಮದುವೆಯವರೆಗೆ ಸರಿ ಇರುವ ಸಂಬಂಧ, ತದನಂತರ ಅಕ್ಕ- ತಂಗಿಯರ ಬಾಂಧವ್ಯವು ಪೈಪೋಟಿಗೆ ತಿರುವುದು ಬೇಡ.

– ಪರಸ್ಪರ ಕಿವಿಯಾಗುವ, ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಕೊನೆಯವರೆಗೂ ಮುಂದುವರಿಸಿ.

– ನೀವಿಬ್ಬರೂ ಒಡಹುಟ್ಟಿದವರು ಎಂಬುದು ಮೊದಲು ನೆನಪಿರಲಿ. ನಿಮ್ಮ ನಡುವೆ ಯಾರೇನೇ ಹುಳಿ ಹಿಂಡಿದರೂ, ಅವರಿಗೆ ನಿಮ್ಮ ಸಂಬಂಧ ಎಷ್ಟೊಂದು ಗಟ್ಟಿಯಿದೆ ಎಂಬುದನ್ನು ತಿಳಿಹೇಳಿ.

– ಕಷ್ಟ ಕಾಲದಲ್ಲಿ ಪರಸ್ಪರ ಕೈ ಬಿಡಬೇಡಿ. ಹೊಟ್ಟೆಕಿಚ್ಚು, ತಾರತಮ್ಯ, ಸ್ಪರ್ಧಾಭಾವ… ಇವನ್ನು ಮನಸ್ಸಿನಿಂದ ದೂರ ತಳ್ಳಿ.

– ಮದುವೆಯಾದ ಮೇಲೂ ತಂಗಿಯ ಮನೆಗೆ ಅಕ್ಕನು, ಅಕ್ಕನ ಮನೆಗೆ ತಂಗಿಯೂ ಹೋಗುವುದನ್ನು ರೂಢಿಸಿಕೊಂಡರೆ ಸಂಬಂಧ ಇನ್ನಷ್ಟು ಗಟ್ಟಿ.

– ಪರಸ್ಪರ ಭೇಟಿಯಾದಾಗಲೆಲ್ಲ, ಬಾಲ್ಯದ ಬಾಂಧವ್ಯದ ನೆನಪುಗಳನ್ನು ಮಾತಿಗೆ ಹರವಿಕೊಳ್ಳಿ.

* ಸಾವಿತ್ರಿ ಶ್ಯಾನಭಾಗ್‌ 

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.