ಚೆಲುವಿನ “ಸಿತಾರಾ’: ಸಿತಾರಾ ವೈದ್ಯ, ನಿರ್ದೇಶಕ ಎ. ಹರ್ಷ ಪತ್ನಿ


Team Udayavani, Jul 4, 2018, 6:00 AM IST

p-11.jpg

“ಬಿರುಗಾಳಿ’, “ಗೆಳೆಯ’, “ಓ ಪ್ರೇಮವೇ’ ಚಿತ್ರಗಳಲ್ಲಿ ಮಿಂಚಿ ಭರವಸೆ ಮೂಡಿಸಿದ್ದ ನಟಿ ಸಿತಾರಾ ವೈದ್ಯ. ನಟನೆಯಲ್ಲಿ ಸೈ ಎನಿಸಿಕೊಳ್ಳುತ್ತಿದ್ದ ವೇಳೆಯಲ್ಲೇ ಖ್ಯಾತ ನೃತ್ಯ ಸಂಯೋಜಕ, ಚಿತ್ರ ನಿರ್ದೇಶಕ, ಎ. ಹರ್ಷ ಅವರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದರು. ಅಲ್ಲಿಂದ ಈಚೆಗೆ ಅಷ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳದ ಅವರು, “ಅವಳು’ ಜೊತೆ ಹರಟೆಗೆ ಸಿಕ್ಕರು. ಅವರದ್ದು 7 ವರ್ಷಗಳ ಪ್ರೀತಿ. ಆರ್ಯ ಜೀವೋತ್ತಮ, ವಿರಾಜ್‌ ಜೀವೋತ್ತಮ ಎಂಬ ಇಬ್ಬರು ತುಂಟ ಮಕ್ಕಳಿದ್ದಾರೆ. ಸಿತಾರ ಮಾತುಗಳನ್ನು ಕೇಳಿದರೆ ಅವರು ಅಪ್ಪಟ ಗೃಹಿಣಿ ಎಂದು ತಿಳಿಯುತ್ತದೆ. ಕುಟುಂಬ ಮೌಲ್ಯವನ್ನು ಎಲ್ಲಾ ಹೆಣ್ಣು ಮಕ್ಕಳೂ ಅರಿತುಕೊಂಡಿರಬೇಕು ಎಂಬುದು ಅವರ ಅಭಿಪ್ರಾಯ… 

– ನಟನಾ ಜೀವನ ಹೇಗೆ ಆರಂಭವಾಯಿತು? 
ನಟಿ ಆಗಬೇಕೆಂಬ ಯೋಚನೆಯೇ ನನಗಿರಲಿಲ್ಲ. 10ನೇ ತರಗತಿಯಲ್ಲಿದ್ದಾಗ ಉದಯ ಟಿ.ವಿ.ಯಲ್ಲಿ ಪ್ರಸಾರವಾದ “ನೀತಿ ಚಕ್ರ’ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸಲು ಅವಕಾಶ ಬಂತು. ಅದೂ ಆಕಸ್ಮಿಕವಾಗಿ. ನಿರ್ದೇಶಕರು, ನನ್ನ ಅಜ್ಜ ಎಸ್‌.ಎಸ್‌. ವೈದ್ಯ ಅವರನ್ನು ಭೇಟಿಯಾಗಲು ಮನೆಗೆ ಬಂದಾಗ ನನ್ನನ್ನು ನೋಡಿದರು. “ತಾಯಿ ಮಗಳ ಸಂಬಂಧದ ಕುರಿತಾದ ಧಾರಾವಾಹಿ ಮಾಡುತ್ತಿದ್ದೇವೆ. ಮಗಳ ಪಾತ್ರಕ್ಕೆ ನೀನು ಹೊಂದುತ್ತೀಯ. ಅದನ್ನು ನೀನೇ ಮಾಡು’ ಎಂದು ಆಫ‌ರ್‌ ಕೊಟ್ಟರು. ಮನೆಯಲ್ಲಿ ಎಲ್ಲರಿಗೂ ಕಲೆ ಕುರಿತು ಆಸಕ್ತಿ ಇದ್ದಿದ್ದರಿಂದ ಒಪ್ಪಿದರು. ಆಗಲೇ ನಾನು ಭರತನಾಟ್ಯ ಕಲಿಯುತ್ತಿದ್ದೆ. ಶಾಲೆಗಳ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಹೀಗಾಗಿ ಭಾವಾಭಿನಯ ಕಷ್ಟ ಎನಿಸಲಿಲ್ಲ. ಸರಾಗವಾಗಿ ಕ್ಯಾಮೆರಾ ಮುಂದೆ ಅಭಿನಯಿಸಿದೆ. 

– ಮದುವೆಯಾದ ಬಳಿಕ ತೆರೆಯಿಂದ ಸಂಪೂರ್ಣ ದೂರ ಸರಿದಿರಲ್ಲ? 
“ಬಿರುಗಾಳಿ’ ಚಿತ್ರದ ನಂತರ ಮದುವೆಯಾದೆ. ಅದಕ್ಕೂ ಮೊದಲು ಕೂಡ ನಾನು ನಟನೆಯನ್ನೇ ವೃತ್ತಿಯನ್ನಾಗಿ ಪರಿಗಣಿಸಿರಲಿಲ್ಲ. ಹಾಗಾಗಿ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಂಡಿರಲಿಲ್ಲ. ಹರ್ಷ ಅವರ ಪರಿಚಯವಾದ ಮೇಲೆ ನಾನು ನಟಿಸಿದ ಎರಡೂ ಚಿತ್ರಗಳೂ ಅವರ ನಿರ್ದೇಶನದ್ದೇ. ನನಗೆ ಜೀವನದಲ್ಲಿ ಬೇರೆ ಆದ್ಯತೆಗಳು ಇದ್ದವು. ಅದರಲ್ಲಿ ಕುಟುಂಬ ನನ್ನ ಮೊದಲ ಆದ್ಯತೆಯಾಗಿತ್ತು. ಮದುವೆಯಾಗುವ ವಯಸ್ಸಿಗೆ ಮದುವೆಯಾದೆ. ಈಗ ಅಪ್ಪನ ಬ್ಯುಸಿನೆಸ್‌ ನೋಡಿಕೊಳ್ಳುತ್ತಿದ್ದೇನೆ. ಎರಡು ಪುಟ್ಟ ಮಕ್ಕಳಿವೆ. ದಿನದ ಬಹುಭಾಗ ಅವರಿಗೇ ಮೀಸಲು. ನಟನೆ ಬಗ್ಗೆ ಯಾವತ್ತೂ ನಾನು ಸೀರಿಯಸ್‌ ಆಗಿರಲಿಲ್ಲ. ಈಗಲೂ ನನಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಆಸಕ್ತಿ ಇಲ್ಲ. 

– ನಿಮ್ಮ ಮತ್ತು ಹರ್ಷ ಅವರ ಸ್ನೇಹ, ಪ್ರೀತಿ ಹೇಗೆ ಆರಂಭವಾಯಿತು. ಮದುವೆಗೆ ಕುಟುಂಬದವರು ತಕರಾರು ಮಾಡಲಿಲ್ಲವಾ?
“ಬಿರುಗಾಳಿ’ ಚಿತ್ರದಲ್ಲಿ ನಟಿಸುವಾಗ ನಮ್ಮಿಬ್ಬರ ಮಧ್ಯೆ ಪ್ರೀತಿ ಶುರುವಾಯಿತು ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಯಾಕಂದ್ರೆ, “ಬಿರುಗಾಳಿ’ ಚಿತ್ರದ ನಂತರ ನಾವು ಮದುವೆಯಾದೆವು. ಆದರೆ, ಅದಕ್ಕೂ 7 ವರ್ಷಗಳ ಮುಂಚೆಯೇ ನಮ್ಮಿಬ್ಬರ ಮಧ್ಯೆ ಪ್ರೀತಿ ಹುಟ್ಟಿತ್ತು. ಆಗಿನ್ನೂ ಹರ್ಷ ಸಿನಿಮಾ ಇಂಡಸ್ಟ್ರಿಗೇ ಬಂದಿರಲಿಲ್ಲ. ಅವರು ಸ್ಟೇಜ್‌ ಕೊರಿಯೋಗ್ರಾಫ‌ರ್‌ ಆಗಿದ್ದರು. ಉದಯ ಟಿ.ವಿ.ಯ ಕಾರ್ಯಕ್ರಮವೊಂದಕ್ಕೆ ನೃತ್ಯ ಸಂಯೋಜನೆ ಮಾಡುತ್ತಿದ್ದರು. ಅದರಲ್ಲಿ ಡ್ಯಾನ್ಸ್‌ ಮಾಡಲು ನನ್ನನ್ನೂ ಕೇಳಿಕೊಂಡಿದ್ದರು. ನಾನೂ ಒಪ್ಪಿ, ನೃತ್ಯಾಭ್ಯಾಸಕ್ಕೆ ಹೋದೆ. ಹೀಗೆ ನಮ್ಮಿಬ್ಬರಿಗೂ ಪರಿಚಯವಾಯಿತು. ಕಾರ್ಯಕ್ರಮ ಮುಗಿಯುವುದರೊಳಗೆ ಪರಸ್ಪರ ಅರ್ಥ ಮಾಡಿಕೊಂಡಿದ್ದೆವು. ಅವರೇ ಮೊದಲು ಪ್ರಪೋಸ್‌ ಮಾಡಿದ್ದು. ನಾನು, ಅಪ್ಪನನ್ನು ಕೇಳಿ, ಅವರು ಒಪ್ಪಿದರೆ ನಿಮ್ಮನ್ನೇ ಮದುವೆಯಾಗುತ್ತೇನೆ ಎಂದೆ. ಅಪ್ಪನಿಗೂ ಹರ್ಷ ಮತ್ತು ಅವರ ಕುಟುಂಬ ಬಹಳ ಇಷ್ಟವಾಯಿತು. ಖುಷಿಯಿಂದಲೇ ಮದುವೆ ಮಾಡಿಕೊಟ್ಟರು. ನಮ್ಮಿಬ್ಬರ ಸಹಜೀವನ ಪ್ರಯಾಣ ಆರಂಭವಾಗಿ 15 ವರ್ಷಗಳಾಗಿವೆ. ಮದುವೆಯಾಗಿ 8 ವರ್ಷ ಕಳೆದಿದೆ. 

– ಬಣ್ಣದ ಸೆಳೆತವನ್ನು ಕಡಿದುಕೊಳ್ಳುವುದು ಅಷ್ಟು ಸುಲಭವಲ್ಲ. ನೀವು ಹೇಗೆ ನಟನೆಯಿಂದ ದೂರ ಉಳಿದಿರಿ?
ಯಾರು, ಯಾವ ಕ್ಷೇತ್ರದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಕಡೆಗೆ ಅವರ ಕೈ ಹಿಡಿಯುವುದು ಕುಟುಂಬವೇ. ನನಗೆ ಈ ಪಾಠವನ್ನು ನನ್ನ ತಂದೆ ಬಾಲ್ಯದಿಂದಲೂ ಹೇಳುತ್ತಾ ಬಂದಿದ್ದರು. ಹಾಗಾಗಿ ನಾನು ಮದುವೆ ಸಮಯ ಬಂದಾಗ ಮದುವೆಯಾಗಲು ಹಿಂದೇಟು ಹಾಕಲಿಲ್ಲ. ಮದುವೆಯಾದ ಕೆಲವೇ ಕಾಲದಲ್ಲಿ ಗರ್ಭಿಣಿಯಾದೆ. ಖುಷಿಯಿಂದಲೇ ಈ ಹೊಸ ಜವಾಬ್ದಾರಿಗಳಿಗೆ ಒಗ್ಗಿಕೊಂಡೆ. ಈಗ, ನನ್ನ ಕುಟುಂಬದ ಜವಾಬ್ದಾರಿ ಜೊತೆಗೆ ತಂದೆಯ ಉದ್ಯಮವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದೇನೆ. ಈಗಿನ ಹುಡುಗಿಯರಿಗೆ ಹೇಳುವುದೇನೆಂದರೆ “ನೀವು ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಎಷ್ಟೇ ಎತ್ತರಕ್ಕೆ ಹೋಗಿ. ಆದರೆ, ಕುಟುಂಬ ಜೀವನವನ್ನು ಕಡೆಗಣಿಸಬೇಡಿ. ನಾಳೆ ನಿಮಗೆ ತೃಪ್ತಿ, ಸಂತೋಷ, ಭಾವನಾತ್ಮಕ ಭದ್ರತೆ ನೀಡುವುದು ನಿಮ್ಮ ಕುಟುಂಬ ಮಾತ್ರ’. 

– ಮಕ್ಕಳ ನಿರ್ವಹಣೆ ಹೇಗೆ ಮಾಡುತ್ತೀರ? 
ಹರ್ಷ ಸದಾ ಬ್ಯುಸಿಯಾಗಿರುವುದರಿಂದ ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನದೇ. ಹರ್ಷ ಕೆಲಸ ಮುಗಿಸಿ ರಾತ್ರಿ ಬರುತ್ತಾರೆ. ಮಕ್ಕಳನ್ನು ಮುದ್ದು ಮಾಡುತ್ತಾರೆ. ಏನಾದರೂ ಬೇಕಿದ್ದರೆ ಮಕ್ಕಳು ಅಪ್ಪನನ್ನೇ ಕೇಳುವುದು. ಅವರು ಏನು ಕೇಳಿದರೂ ಹರ್ಷ “ಇಲ್ಲ’ ಎನ್ನುವುದೇ ಇಲ್ಲ. ಹಾಗಾಗಿ ಅವರಿಗೆ ಅಪ್ಪನ ಹೆದರಿಕೆಯೇ ಇಲ್ಲ. ಚಿಕ್ಕವಳಿದ್ದಾಗ ನನಗೆ ಅಪ್ಪನ ಹೆದರಿಕೆ ಜೋರಿತ್ತು. ಆದರೆ, ಅಮ್ಮನ ಜೊತೆ ಅಷ್ಟೇ ಸಲುಗೆ ಇತ್ತು. ನನ್ನ ಮಕ್ಕಳ ವಿಷಯದಲ್ಲಿ ಅದು ಸಂಪೂರ್ಣ ಉಲ್ಟಾ. ನಾನು ಮಕ್ಕಳ ಪಾಲಿಗೆ ರಿಂಗ್‌ ಮಾಸ್ಟರ್‌. ನಮಗೆ ಎರಡೂ ಗಂಡು ಮಕ್ಕಳೇ. ಅವರ ಕಿತಾಪತಿ ತಡೆಯುವಷ್ಟರಲ್ಲಿ ಸಾಕ್‌ಸಾಕಾಗಿ ಹೋಗುತ್ತೆ.

– ನೀವು ಅಪೇಕ್ಷಿಸುವಷ್ಟು ಸಮಯವನ್ನು ಹರ್ಷ ಅವರು ಕುಟುಂಬಕ್ಕೆ ನೀಡುತ್ತಾರಾ? 
ಆ ವಿಷಯದಲ್ಲಿ ನಾನು, ಮಕ್ಕಳು, ಅತ್ತೆ ಮಾವ ಎಲ್ಲರೂ ಲಕ್ಕಿ ಎಂದೇ ಹೇಳಬಹುದು. ಹರ್ಷ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ಕೊಟ್ಟೇ ಕೊಡುತ್ತಾರೆ. ಶೂಟಿಂಗ್‌ ಮುಗಿದ ಕೂಡಲೇ ಬಹುತೇಕರು ತಡರಾತ್ರಿವರೆಗೂ ಪಾರ್ಟಿ ಮಾಡುತ್ತಾ, ಚರ್ಚೆ ಮಾಡುತ್ತಾ ತಡವಾಗಿ ಮನೆಗೆ ಹೋಗುತ್ತಾರೆ. ಅದರೆ, ಹರ್ಷ ಪ್ಯಾಕಪ್‌ ಆಗುತ್ತಿದ್ದಂತೆ ಕಾರು ಹತ್ತಿ ಮನೆಗೆ ಬರುತ್ತಾರೆ. ಮಕ್ಕಳ ಜೊತೆ ಮಾತಾಡಲು, ಶೂಟಿಂಗ್‌ ಸೆಟ್‌ನಲ್ಲಾದ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳಲು, ನಮ್ಮ ಬೇಕು ಬೇಡಗಳನ್ನು ಕೇಳಿಸಿಕೊಳ್ಳಲು ಅವರು ಎನರ್ಜಿಯನ್ನು ಉಳಿಸಿಕೊಂಡೇ ಮನೆಗೆ ಬರುತ್ತಾರೆ.

– ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತೀರಾ?
  ನೃತ್ಯದಲ್ಲಿ ನನಗೆ ಬಹಳ ಆಸಕ್ತಿ. ಮಕ್ಕಳನ್ನು ಶಾಲೆಗೆ ಕಳಿಸಿದ ಬಳಿಕ ಸ್ವಲ್ಪ ಸಮಯ ಯೋಗಾಭ್ಯಾಸ ಮಾಡುತ್ತೇನೆ. ಪ್ರವಾಸಕ್ಕೆ ಹೋಗುವುದು ನಮ್ಮಿಬ್ಬರಿಗೂ ಇಷ್ಟ. ಹರ್ಷಗೆ ಒಂದು ವಾರ ಎಲ್ಲಾದರೂ ಬಿಡುವು ಸಿಕ್ಕರೆ ಸುತ್ತಾಡಲು ಹೊರಡುತ್ತೇವೆ.

– ನಿಮ್ಮಬ್ಬರ ಮೆಮೋರೆಬಲ್‌ ಪ್ರವಾಸ ಯಾವುದು? 
ಸಿಂಗಾಪುರಕ್ಕೆ ನಾವಿಬ್ಬರೇ ಹೋಗಿದ್ದೆವು. ಅದು ನನಗೆ ಸದಾ ನೆನಪಿನಲ್ಲಿರುವ ಪ್ರವಾಸ.

– ನಿಮ್ಮಿಬ್ಬರಲ್ಲಿ ಯಾರು ಹೆಚ್ಚು ರೊಮ್ಯಾಂಟಿಕ್‌? 
ಹರ್ಷ ಬಹಳ ರೊಮ್ಯಾಂಟಿಕ್‌ ವ್ಯಕ್ತಿ. 15 ವರ್ಷದಿಂದ ಅವರು ನನ್ನ ಪ್ರತಿ ಹುಟ್ಟುಹಬ್ಬವನ್ನೂ ವಿಶೇಷವಾಗಿ ಆಚರಿಸುತ್ತಾರೆ. ಒಮ್ಮೆ ನನ್ನ ಹುಟ್ಟುಹಬ್ಬಕ್ಕೆ ಶಾಲೆ, ಕಾಲೇಜಿನ ಸ್ನೇಹಿತರನ್ನು ಕರೆಸಿ ನನಗೆ ಸರ್‌ಪ್ರೈಸ್‌ ನೀಡಿದ್ದರು. ಅದನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಸರ್‌ಪ್ರೈಸ್‌ ನೀಡುವುದರಲ್ಲಿ, ಖುಷಿಯ ಸಂದರ್ಭಗಳನ್ನು ಆಚರಿಸುವುದರಲ್ಲಿ ಅವರು ಬಹಳ ಕ್ರಿಯೇಟಿವ್‌. ನನಗೆ ಅಷ್ಟೆಲ್ಲಾ ಯೋಚನೆಗಳೇ ಹೊಳೆಯುವುದಿಲ್ಲ.  

– ನಿಮ್ಮ ನೆಚ್ಚಿನ ಉಡುಗೆ ತೊಡುಗೆ… 
ಸೀರೆ ನನ್ನ ನೆಚ್ಚಿನ ಉಡುಗೆ. ಸಾಂಪ್ರದಾಯಕ ಉಡುಗೆಗಳನ್ನೇ ಹೆಚ್ಚು ಇಷ್ಟ ಪಡುತ್ತೀನಿ. ಬಿಸಿನೆಸ್‌ ಮೀಟಿಂಗ್‌ಗೆ ಹೋಗುವಾಗಲೆಲ್ಲಾ ಸರಳವಾದ ಸೀರೆ, ಸೆಲ್ವಾರ್‌ ತೊಟ್ಟೇ ಹೋಗುತ್ತೇನೆ. 

– ಹರ್ಷ ಅವರಲ್ಲಿ ನಿಮಗೆ ಕಿರಿಕಿರಿಯಾಗುವ ಗುಣ ಯಾವುದು?
ಅವರು ಸದಾ ಫೋನ್‌ನಲ್ಲೇ ಇರೋದು.

– ಅವರ ನಿರ್ದೇಶನದ ಯಾವ ಚಿತ್ರ ನಿಮಗೆ ಇಷ್ಟ ಮತ್ತು ಏಕೆ?
“ಭಜರಂಗಿ’ ನನ್ನಿಷ್ಟದ ಸಿನಿಮಾ. ಆ ಚಿತ್ರ ನೋಡಿದಾಗ ಅದನ್ನು ಹರ್ಷನೇ ನಿರ್ದೇಶಿಸಿದ್ದಾ ಎಂಬ ಸಂದೇಹ ಮೂಡಿತು. ಅದರಲ್ಲಿ ಬಳಸಿರುವ ಸಂಭಾಷಣೆ, ಭಾಷೆ ಶೈಲಿ, ಅಭಿನಯ ಎಲ್ಲವೂ ಹರ್ಷ ಅವರ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿದೆ.

– ಚೇತನ ಜೆ.ಕೆ.

ಟಾಪ್ ನ್ಯೂಸ್

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.