ಒಂದೇ ಬಣ್ಣದಿ ಮೋಡಿ ಮಾಡಿ
ಸಾಲಿಡ್ ಸ್ಟೈಲ್ ಸ್ಟೇಟ್‌ಮೆಂಟ್!
Team Udayavani, Jan 22, 2020, 4:25 AM IST
ಪ್ರವಾಸಕ್ಕೆ ಹೋದಾಗ ಫೋಟೋಗಳಲ್ಲಿ ಚೆನ್ನಾಗಿ ಕಾಣಿಸಬೇಕು ಅಂತಾದರೆ ಸಾಲಿಡ್ ಕಲರ್ಡ್ ಉಡುಗೆ ತೊಡಿ! ಜನ ಜಂಗುಳಿ ಇರುವ ಪ್ರದೇಶಗಳಲ್ಲೂ ಈ ಪ್ರಕಾರದ ಉಡುಗೆ ಧರಿಸಿದವರು, ಎಲ್ಲರ ಕಣ್ಣಿಗೆ ಎದ್ದು ಕಾಣಿಸುತ್ತಾರೆ.
ವರ್ಷ ವರ್ಷ ಕಳೆದಂತೆ ಫ್ಯಾಷನ್ ಲೋಕದಲ್ಲಿ ಅದೆಷ್ಟೋ ಉಡುಪು, ಮೇಕ್‌ಅಪ್, ಪಾದರಕ್ಷೆ, ಬ್ಯಾಗ್, ಕೇಶ ವಿನ್ಯಾಸ, ಇತ್ಯಾದಿಗಳು ಮತ್ತೆಮತ್ತೆ ಟ್ರೆಂಡ್ ಆಗುತ್ತವೆ. ಆದುದರಿಂದಲೇ ಮಹಿಳೆಯರು ತಮಗಿಷ್ಟದ ವಸ್ತುಗಳನ್ನು ಹಳೆಯದಾದರೂ ಎಸೆಯಲು ಮನಸ್ಸು ಮಾಡುವುದಿಲ್ಲ. ಆ ವಸ್ತು ಮತ್ತೆ ಫ್ಯಾಷನ್ ಲೋಕದಲ್ಲಿ ಮುನ್ನೆಲೆಗೆ ಬಂದರೆ, ಮತ್ತೆ ಅದನ್ನು ಧೈರ್ಯವಾಗಿ ಬಳಸಬಹುದು ಎಂಬ ಆಸೆಯಿಂದ, ಅವರು ಕಪಾಟಿನಲ್ಲಿ ಬಟ್ಟೆ-ಬರೆಯ ಗುಡ್ಡೆಯನ್ನು ಜೋಪಾನವಾಗಿ ಇಟ್ಟಿರುತ್ತಾರೆ. ಅಂಥ ವಸ್ತುಗಳಲ್ಲಿ ಸಾಲಿಡ್ ಕಲರ್ಡ್ ಉಡುಗೆಯೂ ಇದೆ.
ಪೂರ್ತಿ ಒಂದೇ ಬಣ್ಣ
ಬಗೆ ಬಗೆಯ ಬಣ್ಣದ ಚಿತ್ರ, ನಮೂನೆ, ಆಕೃತಿ ಅಥವಾ ಚಿಹ್ನೆಗಳಿರದ, ಅಡಿಯಿಂದ ಮುಡಿವರೆಗೆ ಒಂದೇ ಬಣ್ಣವಿದ್ದರೆ ಅದು ಸಾಲಿಡ್ ಕಲರ್ಡ್ ಉಡುಗೆ. ಕೇವಲ ಕಪ್ಪು ಅಥವಾ ಬಿಳುಪು ಬಣ್ಣವೇ ಆಗಿರಬೇಕಿಲ್ಲ. ಸಂಪೂರ್ಣ ಕೆಂಪು, ನೀಲಿ, ಕಂದು, ಹೀಗೆ ಉಡುಗೆ ಪೂರ್ತಿ ಒಂದೇ ಬಣ್ಣದಲ್ಲಿರಬೇಕು.
ಬೋರಿಂಗ್ ಅಲ್ಲ
ತಲೆಯಿಂದ ಕಾಲಿನವರೆಗೆ ಒಂದೇ ಬಣ್ಣದ ಉಡುಗೆ ತೊಟ್ಟರೆ ಬೋರಿಂಗ್ ಎಂದು ಯೋಚಿಸದಿರಿ. ಈ ರೀತಿಯ ಉಡುಗೆ ಧರಿಸಿದಾಗ, ಮೈ ಮೇಲಿನ ಆ್ಯಕ್ಸೆಸರಿಗಳು ಎದ್ದು ಕಾಣುತ್ತವೆ. ಆದರೆ, ನೆನಪಿಡಿ; ಬಟ್ಟೆಯದ್ದೇ ಬಣ್ಣದ ಬ್ಯಾಗ್, ಪಾದರಕ್ಷೆ, ವಾಚ್ ಅಥವಾ ಇತರ ಆಕ್ಸೆಸರೀಸ್‌ಗಳನ್ನು ಧರಿಸಬೇಡಿ. ಮೇಲಿಂದ ಕೆಳಗೆ ಎಲ್ಲವೂ ಮ್ಯಾಚಿಂಗ್ ಇದ್ದರೆ ನೋಡಲು ಸ್ಟೈಲಿಶ್ ಅನ್ನಿಸುವುದಿಲ್ಲ ಮತ್ತು ಆಕ್ಸೆಸರೀಸ್ ಕೂಡ ಕಾಣಿಸುವುದಿಲ್ಲ! ಎಲ್ಲರ ಕಣ್ಣು ಆಕ್ಸೆಸರೀಸ್ ಮೇಲೆ ಬೀಳಬೇಕು ಎಂದಾದರೆ ಕಾಂಟ್ರಾÓr… (ವಿರುದ್ಧ ಬಣ್ಣ) ಇರಬೇಕು. ಸಾಲಿಡ್ ಕಲರ್ಡ್ ಬಟ್ಟೆಗಳ ಜೊತೆಗೆ, ಲೋಹದ ಅಂದರೆ ಮೆಟಲ್ ಆಕ್ಸೆಸರೀಸ್ ಅದ್ಧೂರಿಯಾಗಿ ಕಾಣುತ್ತದೆ.
ಎಲ್ಲೆಲ್ಲೂ ಸಾಲಿಡ್
ಸೀರೆ-ರವಿಕೆ, ಬುರ್ಖಾ, ರೋಬ್, ಟ್ರೆಂಚ್ ಕೋಟ್‌ಗಳು ಹಿಂದಿನಿಂದಲೂ ಸಾಲಿಡ್ ಕಲರ್‌ನಲ್ಲಿ ಸಿಗುತ್ತಿವೆ. ಆದರೆ, ಈಗ ಸೂಟ್, ಚೂಡಿದಾರ, ಸ್ಕರ್ಟ್, ಡ್ರೆಸ್, ಜಂಪ್ ಸೂಟ್, ಶರ್ಟ್- ಪ್ಯಾಂಟ್ ಕೂಡ ಸಾಲಿಡ್ ಕಲರ್ಡ್ ಆಗಿವೆ! ಸಾಲಿಡ್ ಕಲರ್ಡ್ ಶಿಫಾನ್ ಸೀರೆಗಳನ್ನು ಸಿನಿಮಾದಲ್ಲಿ ಹೀರೋಯಿನ್‌ಗಳು ಉಟ್ಟು, ಹಿಮ ರಾಶಿಯ ಮಧ್ಯೆ ಡ್ಯಾನ್ಸ್ ಮಾಡೋದನ್ನು ನೋಡಿರಬಹುದು. ಯಾಕಂದ್ರೆ, ಬ್ಯಾಕ್‌ಗ್ರೌಂಡ್ ಸಂಪೂರ್ಣವಾಗಿ ಬಿಳಿ ಇದ್ದಾಗ ಸಾಲಿಡ್ ಬಣ್ಣ ಸೊಗಸಾಗಿ ಕಾಣುತ್ತದೆ. (ಸಾಲಿಡ್ ಕಲರ್ ಉಡುಪಿನಲ್ಲಿ ಫೋಟೊ ತೆಗೆಸಿಕೊಳ್ಳುವಾಗ ಬಿಳಿ ಅಥವಾ ತಿಳಿ ಬಣ್ಣದ ಬ್ಯಾಕ್‌ಗ್ರೌಂಡ್ ಆಯ್ಕೆ ಮಾಡಿಕೊಳ್ಳಿ) ಹಾಗಾಗಿ ಈ ಥೀಮ್‌ಅನ್ನು ಹೆಚ್ಚಾಗಿ ಪಾರ್ಟಿ, ಮದುವೆ ರಿಸೆಪ್ಶನ್, ಅವಾರ್ಡ್ ಫಂಕ್ಷನ್‌ಗಳಿಗೆ ಇಡುತ್ತಾರೆ.
ಯೋಗಕ್ಕೂ, ವಿಹಾರಕ್ಕೂ
ದಿನ ನಿತ್ಯದ ಯೋಗ ಕ್ಲಾಸ್, ಕಾಲೇಜು ಅಥವಾ ಕ್ಯಾಶುಯಲ್ ಔಟಿಂಗ್‌ಗೆ ಹೋಗುವಾಗ ಸಿಂಪಲ್ ಆಗಿರೋ ಪಲಾಝೊ, ಹ್ಯಾರೆಮ್ ಅಥವಾ ಯೋಗ ಪ್ಯಾಂಟ್ ಧರಿಸುವವರು, ಅವುಗಳಲ್ಲೂ ಸಾಲಿಡ್ ಕಲರ್‌ಗಳನ್ನು ಆರಿಸಿಕೊಳ್ಳಬಹುದು. ಕೆಲವು ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಇರುವ ಕಾರಣ, ಇಂಥ ಪ್ಯಾಂಟ್ ಧರಿಸಲು ಅನುಮತಿ ಇರುವುದಿಲ್ಲ. ಹಾಗಿದ್ದಾಗ ಸಲ್ವಾರ್ ಕಮೀಜ…, ಚೂಡಿದಾರ್‌ನಂತೆ ಈ ಪ್ಯಾಂಟ್‌ಗಳನ್ನು ಲಾಂಗ್ ಕುರ್ತಾ ಜೊತೆ ಧರಿಸಬಹುದು.
ವಿಶೇಷ ಎಂದರೆ, ಈ ಸಾಲಿಡ್ ಕಲರ್ಡ್ ಉಡುಗೆ ಜೊತೆ ಎಲ್ಲ ತರಹದ ಹೇರ್‌ಕಟ್ ಮತ್ತು ಹೇರ್‌ಸ್ಟೈಲ್ ಚೆನ್ನಾಗಿ ಕಾಣುತ್ತದೆ. ಮಿನಿಮಲ್ ಮೇಕಪ್, ಬೋಲ್ಡ… ಮೇಕಪ್ ಎರಡೂ ಹೊಂದುತ್ತದೆ. ಪ್ರವಾಸಕ್ಕೆ ಹೋದಾಗ ಫೋಟೋಗಳಲ್ಲಿ ಚೆನ್ನಾಗಿ ಕಾಣಿಸಬೇಕು ಅಂತಾದರೆ ಸಾಲಿಡ್ ಕಲರ್ಡ್ ಉಡುಗೆ ತೊಡಿ! ಜನ ಜಂಗುಳಿ ಇರುವ ಪ್ರದೇಶಗಳಲ್ಲೂ ಈ ಪ್ರಕಾರದ ಉಡುಗೆ ಧರಿಸಿದವರು, ಎಲ್ಲರ ಕಣ್ಣಿಗೆ ಎದ್ದು ಕಾಣಿಸುತ್ತಾರೆ. ಸಾಲಿಡ್ ಕಲರ್ಡ್ ಬಟ್ಟೆಗಳು ಈಗಲೂ ಟ್ರೆಂಡ್‌ನಲ್ಲಿ ಇವೆ. ಯಾವಾಗ ಬೇಕಾದರೂ ಈ ಸ್ಟೈಲ್ ಹಳೆಯದಾಗಿ ಬಿಡಬಹುದು. ಗಾಳಿ ಬಂದಾಗ ತೂರಿಕೋ ಅನ್ನುವಂತೆ, ಇಂದೇ ಸಾಲಿಡ್ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಮಿಂಚಲು ಮುಂದಾಗಿ.
ಪಾರ್ಟಿಗೆ ಎಂಟ್ರಿ
ಪಾರ್ಟಿವೇರ್ ಎಂದೇ ಹೆಸರಾಗಿದ್ದ ಎಲ್‌ಬಿಡಿ (ಲಿಟಲ್ ಬ್ಲಾಕ್ ಡ್ರೆಸ್) ಕೂಡ ಮೇಕ್ ಓವರ್ ಪಡೆದು, ಲಿಟಲ್ ಡ್ರೆಸ್ ಆಗಿಬಿಟ್ಟಿದೆ. ಪಾರ್ಟಿ ಗೆ ಬಂದವರೆಲ್ಲ ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಶೋಕದ ವಾತಾವರಣ ಸೃಷ್ಟಿಯಾಗುತ್ತದೆ. ಅಷ್ಟೇ ಅಲ್ಲದೆ, ಯಾರ ಉಡುಗೆಯೂ ಅದ್ಧೂರಿಯಾಗಿ ಕಾಣಿಸುವುದಿಲ್ಲ. ಹಾಗಾಗಿ, ಹೆಚ್ಚಿನವರು ಸಾಲಿಡ್ ಕಲರ್ಡ್ ಡ್ರೆಸ್‌ನ ಪಾರ್ಟಿವೇರ್‌ಗಳಿಗೆ ಮಾರು ಹೋಗುತ್ತಿದ್ದಾರೆ.
-ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.