![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 3, 2019, 10:44 AM IST
ಈ ಬಿರು ಬೇಸಿಗೆಯಲ್ಲಿ ದೇಹವಷ್ಟೇ ತಂಪಾಗಿದ್ದರೆ ಸಾಲದು. ನಿಮ್ಮ ಫ್ಯಾಷನ್ ಸೆನ್ಸ್ ಕೂಡಾ ಕೂಲ್ ಅನ್ನಿಸುವಂತಿರಬೇಕು. ಬೇಸಿಗೆಯ ಟ್ರೆಂಡ್‌ಗೆ ತಕ್ಕಂತೆ ನಿಮ್ಮ ವಾರ್ಡ್‌ರೋಬ್ ಅನ್ನು ಅಪ್‌ಡೇಟ್ ಮಾಡೋ ಸಮಯ ಇದು…
ಬೇಸಿಗೆ ಎಂದಾಗ ಎಳನೀರು, ಹಣ್ಣಿನ ಜ್ಯೂಸು, ಮಜ್ಜಿಗೆ ನೆನಪಿಗೆ ಬರುತ್ತದೆ. ಆದರೆ ಫ್ಯಾಷನ್ ಪ್ರಿಯರಿಗೆ ಮೊದಲು ನೆನಪಿಗೆ ಬರೋದು, ಓಹೋ, ವಾರ್ಡ್‌ರೋಬ್‌ಗ ಮೇಕ್ ಓವರ್ ಕೊಡುವ ಸಮಯ ಬಂದಿದೆ ಎಂಬುದು! ಬೇಸಿಗೆಯಲ್ಲಿ ಕೂಲ್ ಆಗಿರಲು, ನೋಡುವವರಿಗೆ ಕೂಲ್ ಅನ್ನಿಸಲು ಯಾವೆಲ್ಲಾ ವಸ್ತುಗಳು ಬೇಕು ಅಂತ ಇಲ್ಲಿದೆ ನೋಡಿ ಪಟ್ಟಿ…
ಹತ್ತಿಯೇ ಉತ್ತಮ
ಹತ್ತಿಯ ಬಟ್ಟೆ ಬೇಸಿಗೆಯಲ್ಲಿ ನಮ್ಮನ್ನು ತಂಪಾಗಿರಿಸುತ್ತೆ. ಅಲ್ಲದೆ ಬೆವರನ್ನು ಹೀರಿ ನಮ್ಮನ್ನು ಡ್ರೈ ಆಗಿರಿಸುತ್ತೆ. ಹಾಗಾಗಿ, ಸ್ಟೈಲ್ ಯಾವುದೇ ಆದರೂ, ಹತ್ತಿಯ ಉಡುಪುಗಳನ್ನು ಆರಿಸಿಕೊಂಡರೆ ಒಳ್ಳೆಯದು. ಸಾಂಪ್ರದಾಯಿಕ ಉಡುಗೆ ಇಷ್ಟ ಪಡುವವರು ಖಾದಿ ಬಟ್ಟೆಯ ಕುರ್ತಾ, ಲಂಗ, ಸೀರೆ, ಚೂಡಿದಾರ್ ಧರಿಸಬಹುದು. ಅದರಲ್ಲೂ ಪೇಸ್ಟಲ್ ಬಣ್ಣಗಳು, ತಿಳಿ ಬಣ್ಣಗಳು ಕಣ್ಣಿಗೂ ತಂಪು ದೇಹಕ್ಕೂ ತಂಪು. ಪಾಶ್ಚಾತ್ಯ ಉಡುಗೆ ತೊಡುವವರು ಹತ್ತಿಯ ಅಂಗಿ, ಟಿ ಶರ್ಟ್, ಡ್ರೆಸ್, ಲಂಗ, ಜಂಪ್ ಸೂಟ್, ಡೆನಿಮ್ಸ್ (ಜೀನ್ಸ್ ಪ್ಯಾಂಟ್) ತೊಡಬಹುದು. ಜಂಪ್ ಸೂಟ್‌ಗಳಲ್ಲಿ ಸ್ಲೀವ್ ಲೆಸ್ ಆಯ್ಕೆಗಳಿವೆ. ಮೊಣಕಾಲವರೆಗೆ ಬರುವ ಜಂಪ್ ಸೂಟ್‌ಗಳಿವೆ. ಅಂತೆಯೇ ಡಂಗ್ರೀಸ್ ಕೂಡ ಇವೆ. ಇವೆಲ್ಲವೂ ಬೇಸಿಗೆಗೆ ಹೇಳಿ ಮಾಡಿಸಿದ ಉಡುಪುಗಳು.
ಟೋಪಿ ಹಾಕ್ಕೊಳ್ಳಿ
ಬಿಸಿಲಿನ ಬೇಗೆಯಿಂದ ಕಣ್ಣುಗಳಿಗೆ ರಕ್ಷಣೆ ನೀಡಲು ತಂಪು ಕನ್ನಡಕ ಧರಿಸಿ. ಹೋದಲ್ಲೆಲ್ಲ ಟೋಪಿ ಧರಿಸಿ ಓಡಾಡಲು ಸಾಧ್ಯವಿಲ್ಲ. ಆದರೆ, ರಜಾ ದಿನಗಳಲ್ಲಿ ಪಿಕ್ನಿಕ್, ಸೈಟ್ ಸೀಯಿಂಗ್, ಆಟ ಆಡುವಾಗ ಟೋಪಿ ತೊಟ್ಟು ಓಡಾಡಬಹುದು. ನೀವು ಧರಿಸಿದ ಬಟ್ಟೆಗೆ ಮ್ಯಾಚ್ ಆಗುವಂಥ ಟೋಪಿಯನ್ನೇ ಧರಿಸಿ. ಬಿಸಿಲಿನಿಂದ ರಕ್ಷಣೆಗೆ ತೆಳ್ಳಗಿರುವ ಶಾಲು ಅಥವಾ ಸ್ಕಾರ್ಫ್ ಇಟ್ಟುಕೊಂಡಿರಿ. ವಾರ್ಡ್‌ರೋಬ್‌ನಲ್ಲಿ ಥರ-ಥರದ ಸ್ಕಾರ್ಫ್ ಗಳು ಇರಲಿ. ಪ್ಲೇನ್ ಸ್ಕಾರ್ಫ್ ಗಳ ಬದಲಿಗೆ ಫ್ಲೋರಲ್ ಪ್ಯಾಟರ್ನ್, ಅನಿಮಲ್ ಪ್ರಿಂಟ್ ಮತ್ತು ಇಂಡಿಯನ್ ಡಿಸೈನ್‌ನ ವೆರೈಟಿ ಇರಲಿ. ಬೋರಿಂಗ್ ಬಟ್ಟೆ ಜೊತೆ ಸ್ಕಾರ್ಫ್ ತೊಟ್ಟಾಗ ಉಡುಪು ಇಂಟೆರೆಸ್ಟಿಂಗ್ ಆಗುತ್ತೆ! ಸ್ಕಾರ್ಫ್ ಕೇವಲ ಕತ್ತಿಗಷ್ಟೇ ಅಲ್ಲ… ತಲೆ, ಕೈಗೆ ಮತ್ತು ಸಾರೊಂಗ್ ಥರ ಸೊಂಟಕ್ಕೂ ಕಟ್ಟಿಕೊಂಡು ಫ್ಯಾಷನ್ ಸ್ಟೇಟ್‌ಮೆಂಟ್ ಮಾಡಬಹುದು!
ಸಮ್ಮರ್ ವಾರ್ಡ್‌ರೋಬ್ ಹೀಗಿರಬೇಕು…
– ಸನ್ ಗ್ಲಾಸಸ್
– ಮೈಗೆ ಅಂಟದ ದೊಡ್ಡ ಬ್ಯಾಗ್
– ಉತ್ತಮ ಎಸ್‌ಪಿಎಫ್ ಉಳ್ಳ ಸನ್‌ಸ್ಕ್ರೀನ್
– ಡಿಯೋಡರೆಂಟ್/ ಪರ್ಫ್ಯೂಮ್
– ಬಿಳಿ ಬಣ್ಣದ ಪ್ಯಾಂಟ್
– ಫ್ಲಿಪ್-ಪ್ಲಾಫ್, ಸ್ಯಾಂಡಲ್ಸ್, ಓಪನ್ ಶೂಸ್
– ಆಫ್ ಶೋಲ್ಡರ್ ಅಥವಾ ಸ್ಲೀವ್ ಲೆಸ್ ಟಾಪ್ಸ್ / ಟಿ ಶರ್ಟ್‌ಗಳು
– ಸ್ಕಾರ್ಫ್
– ಹ್ಯಾಟ್
– ಕಾಟನ್ ಜಂಪ್ ಸೂಟ್
– ವೈಟ್ ಕಾಟನ್ ಶರ್ಟ್
– ಬ್ಲೂ ಜೀನ್ಸ್
– ಪಲಾಝೋ/ಹಾರೆಮ್ ಪ್ಯಾಂಟ್
– ಖಾದಿ ಕುರ್ತಾ
– ಅದಿತಿ ಮಾನಸ ಟಿ. ಎಸ್.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.