ಕಂದನ ಪೌಡರ್ ಕದಿಯಿರಿ!
Team Udayavani, Nov 1, 2017, 12:09 PM IST
ಮಕ್ಕಳ ಕೋಮಲ ತ್ವಚೆಯ ಕ್ರೆಡಿಟ್ಟೆಲ್ಲ ಹೋಗೋದು, ಬೇಬಿ ಪೌಡರ್‌ಗೆ. ಮುಟ್ಟಿದರೆ ಹಿತವೆನಿಸುವ, “ದೇವರೇ… ಇಂಥ ತ್ವಚೆಯನ್ನೂ ನನಗೂ ಕೊಡು’ ಎಂದು ಬೇಡಿಕೊಳ್ಳುವಂತೆ ಮಾಡುವ ಮಾಂತ್ರಿಕ ಮೈಮಾಟ ಮಕ್ಕಳದ್ದು. ಪುಟಾಣಿಗಳ ಅಂದದಲ್ಲಿ ಇಷ್ಟೆಲ್ಲ ಮ್ಯಾಜಿಕ್ ಮಾಡುವ ಬೇಬಿ ಪೌಡರ್‌ನ ಬಹೋಪಯೋಗಿ ಗುಣ ನಿಮ್ಗೆ ಗೊತ್ತೇ? ಆ ಪೌಡರ್ ನಿಮ್ಮ ದೇಹಸಿರಿಯಲ್ಲೂ ಪವಾಡ ಸೃಷ್ಟಿಸಬಲ್ಲುದು. ಅದು ಹೇಗೆ?
1. ಮೇಕಪ್ ಮಾಡುವಾಗ…: ಮೇಕಪ್ ಕ್ರೀಮ್‌ಗಳಿಗೆ ದುಡ್ಡು ಚೆಲ್ಲಿ ಸಾಕಾಗಿದ್ದರೆ, ಬೇಬಿ ಪೌಡರ್‌ಅನ್ನು ತಂದಿಟ್ಟುಕೊಳ್ಳಿ. ಮಾಮೂಲಿ ಪೌಡರ್ ಲೇಪಿಸಿಕೊಂಡು ಮೇಕಪ್ ಮಾಡಿಕೊಳ್ಳುವಾಗ, ಅದಕ್ಕೆ ಸ್ವಲ್ಪ ಬೇಬಿ ಪೌಡರ್ ಬಳಸಿದರೆ ಮುಖ ಫಳಫಳನೆ ಹೊಳೆಯುತ್ತದೆ. ಅಲ್ಲದೇ, ಪೌಡರ್ ಹೆಚ್ಚು ಹೊತ್ತು ಮುಖದ ಮೇಲಿರುತ್ತದೆ.
2. ರೆಪ್ಪೆ ದಪ್ಪವೋ ದಪ್ಪ: ಬೇಬಿ ಪೌಡರ್ ಬಿಳಿ ಬಣ್ಣದ್ದೇ ಆದರೂ, ಕಡುಗಪ್ಪಿನ ಕಣೆಪ್ಪೆಯನ್ನೂ ಅಂದಗಾಣಿಸಬಲ್ಲುದು. ಕಣೆÅಪ್ಪೆಗಳಿಗೆ ಕಾಜಲ್ ಹಚ್ಚುವ ಮೊದಲು, ಬೇಬಿ ಪೌಡರ್ ಲೇಪಿತ ಬ್ರಶ್ ಅನ್ನು ರೆಪ್ಪೆಗಳ ಮೇಲೆ ಸ್ಪರ್ಶಿಸಬೇಕು. ನಂತರ ಕಾಜಲ್ ಹಚ್ಚಿಕೊಳ್ಳಬೇಕು. ಆಗ ಕಂದುಗಪ್ಪು ಬಣ್ಣಕ್ಕೆ ತಿರುಗುವ ರೆಪ್ಪೆಯ ಮೇಲೆ ಎಲ್ಲರ ಕಂಗಳೂ ಬೀಳುತ್ತವೆ. ರೆಪ್ಪೆ ದಪ್ಪವಾಗಿಯೂ ಕಾಣಿಸುತ್ತದೆ.
3. ಡ್ರೈ ಶಾಂಪೂ ಆಗಿ…: ಡ್ರೈ ಶಾಂಪೂವಿನಿಂದ ಏನೂ ಫಲ ಸಿಗದೇ ಇದ್ದಾಗಲೂ ಬೇಬಿ ಪೌಡರ್, ತಲೆಕೂದಲಿನ ಅಂದ ಹೆಚ್ಚಿಸುತ್ತದೆ. ಕೊಕೊ ಪೌಡರ್ ಜತೆಗೆ ಬೇಬಿ ಪೌಡರ್ ಅನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆರೆಸಿ, ಕೂದಲಿಗೆ ಹಚ್ಚಿಕೊಂಡರೆ ಕೇಶ ಕಾಂತಿಯ ಗತ್ತೇ ಬೇರೆ. ಕೆಂಚು ಕೂದಲು ಇದ್ದವರು, ದಾಲಿcನ್ನಿ ಪೌಡರ್ ಜತೆ ಬೇಬಿ ಪೌಡರ್ ಬೆರೆಸಿ, ಲೇಪಿಸಿಕೊಂಡರೆ, ಡಸ್ಟಿ ಲುಕ್ ಅನ್ನು ಮಾಯವಾಗಿಸಬಹುದು.
4. ವ್ಯಾಕ್ಸಿಂಗ್ ಮಿತ್ರ: ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ಳುವವರಿಗೆ ಬೇಬಿ ಪೌಡರ್ ಸಖತ್ ಕೂಲ್ ಅನುಭವ ನೀಡುತ್ತೆ. ವ್ಯಾಕ್ಸಿಂಗ್‌ಗೂ ಮೊದಲು ಕಾಲಿನ ಅಥವಾ ದೇಹದ ಮೇಲೆ ಬೇಬಿ ಪೌಡರ್ ಉದುರಿಸಿಕೊಂಡರೆ, ಚರ್ಮಕ್ಕೆ ತಂಪು ಅನುಭವ ಸಿಗುತ್ತದೆ. ಚರ್ಮದ ಹೊಳಪೂ ಹೆಚ್ಚುತ್ತದೆ.
5. ಸಾಕ್ಸ್ ಒಳಗೆ ಪೌಡರ್: ಧರಿಸಿದ ಶೂ ಇಲ್ಲವೇ ಸಾಕ್ಸ್‌ನಲ್ಲಿ ಗಾಳಿಯಾಡದೆ ಇದ್ದಾಗ, ಅವು ದುರ್ಗಂಧ ಬೀರುವುದು ಸಹಜ. ಇದನ್ನು ತಪ್ಪಿಸಲು ಬೇಬಿ ಪೌಡರ್ ಒಂದೇ ದಾರಿ. ಸಾಕ್ಸ್ ಧರಿಸುವ ಮುನ್ನ ಪಾದಗಳಿಗೆ ಇಲ್ಲವೇ ಸಾಕ್ಸಿನ ಒಳಭಾಗಕ್ಕೆ ಬೇಬಿ ಪೌಡರ್ ಉದುರಿಸಿ. ಎಷ್ಟೇ ತಾಪ ಅಧಿಕವಿದ್ದರೂ ಕಾಲು ಬೆವರುವುದಿಲ್ಲ. ಪಾದಗಳು ತಣ್ಣಗಿರುತ್ತವೆ.
6. ಬೀಚ್‌ನಲ್ಲಿ ಸ್ನಾನ ಮಾಡುವಾಗ…: ಸಮುದ್ರದ ಬೀಚ್‌ನಲ್ಲಿ ಸ್ನಾನ ಮಾಡಿ ವಾಪಸಾಗುವಾಗ, ಮೈತುಂಬಾ ಮರಳು ಅಂಟಿಕೊಂಡಿರುತ್ತದೆ. ಮನೆಗೆ ಬಂದಾದ ಮೇಲೂ ಮೈಮೇಲಿನ ಮರಳು ಕಿರಿಕಿರಿ ಮಾಡುತ್ತಲೇ ಇರುತ್ತೆ. ಆದರೆ, ಬೇಬಿ ಪೌಡರ್ ಅನ್ನು ಮೈಗೆ ಹಚ್ಚಿಕೊಂಡು, ಸಮುದ್ರ ಸ್ನಾನಕ್ಕೆ ಇಳಿದರೆ, ಮರಳು ಜಾಸ್ತಿ ಅಂಟಿಕೊಳ್ಳುವುದಿಲ್ಲ. ಕಡಿಮೆ ಸಮಯದಲ್ಲಿ ಸುಲಭವಾಗಿ ಉದುರಿ ಹೋಗುತ್ತೆ.
7. ಡಿಯೋಡ್ರಂಟ್ ಆಗುತ್ತೆ!: ಬೇರೆಲ್ಲ ಡಿಯೋಡ್ರಂಟ್‌ಗಳಿಗಿಂತ ಬೇಬಿ ಪೌಡರ್ ದಿನದ ಕೊನೆಯ ತನಕ ದೇಹಕ್ಕೆ ಪರಿಮಳವನ್ನು ಒದಗಿಸುತ್ತದೆ. ಕಂಕುಳಿನ ಭಾಗಕ್ಕೆ ಇಲ್ಲವೇ ಜಾಸ್ತಿ ಬೆವರುವ ಭಾಗಕ್ಕೆ ಬೇಬಿ ಪೌಡರ್ ಹಚ್ಚಿಕೊಂಡರೆ, ಆ ಭಾಗದಲ್ಲಿ ಕೀಟಾಣುಗಳ ಆಟ ನಡೆಯೋದಿಲ್ಲ.
8. ಬಿಸಿರಾತ್ರಿಗೂ ಮದ್ದು!: ಬೇಸಿಗೆಯ ರಾತ್ರಿಯಲ್ಲಿ ವಿಪರೀತ ಸೆಕೆಯಾಗಿ, ನಿದ್ದೆ ಬಾರದೇ ಇದ್ದರೆ, ಬೇಬಿ ಪೌಡರ್ ಅನ್ನು ಬೆಡ್‌ಶೀಟ್‌ಗೆ ಲೇಪಿಸಿಕೊಂಡು, ನಿದ್ರೆಗೆ ಜಾರಬಹುದು. ತಂಪು ಅನುಭವ ಸಿಗುವುದಲ್ಲದೇ, ಆರಾಮದಾಯಕ ರಾತ್ರಿಗೂ ಬೇಬಿ ಪೌಡರ್ ಕಾರಣವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.