![Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್… 5 ಭಯೋತ್ಪಾದಕರು ಹತ](https://www.udayavani.com/wp-content/uploads/2024/12/kashmir-1-415x234.jpg)
ಸೀರೆ ಪಾರಾಯಣ
ಸೀರೆ ಉಡಿಸಿಕೊಡಿ ಅಂತ ಅತ್ತೇನ ಕೇಳ್ಳೋಕಾಗುತ್ತಾ?
Team Udayavani, Jul 17, 2019, 5:39 AM IST
![saree](https://www.udayavani.com/wp-content/uploads/2019/07/saree-620x413.jpg)
ಸೀರೆ ಉಡೋದು ಅಂದ್ರೇನು ಪ್ಯಾಂಟು ಶರ್ಟು ಹಾಕ್ಕೊಂಡಷ್ಟು ಸುಲಭವಾ? ಸೀರೆ ಉಡೋ ಕಷ್ಟ ನಮಗಷ್ಟೇ ಗೊತ್ತು. ಫ್ಯಾನ್ಸಿ ಸೀರೆಗಾದರೆ ಹದಿನೈದರಿಂದ ಇಪ್ಪತ್ತು ನಿಮಿಷ ಬೇಕು, ಸಿಲ್ಕ್ ಆದರೆ ಇಪ್ಪತ್ತರಿಂದ ಮೂವತ್ತು ನಿಮಿಷ, ಇನ್ನು ಕಾಟನ್ ಸೀರೆ ಆದರೆ ಮೂವತ್ತರಿಂದ, ಗಂಡನ ಕಣ್ಣು ಕೆಂಪಾಗುವವರೆಗೂ! ಆದರೂ, ಸೀರೆ ನಮಗ್ಯಾಕೆ ಇಷ್ಟ ಗೊತ್ತಾ?
ಈ ಸೀರೆ ಉಡೋದಿದೆ ನೋಡಿ, ಭಯಂಕರ ರಗಳೆಯ ಕೆಲಸ. “ಸೀರೆ ಉಟ್ಟಾಗ ರಾಶಿ ಚಂದ ಕಾಣಿ¤ದ್ಯಲೇ, ಸೀರೆ ಚಂದಿ¨ªೆ…’ ಅಂತೆಲ್ಲ ಯಾರಾದರೂ ನನ್ನನ್ನು ಹೊಗಳಿದರೆ, ನಾನು ಸ್ವಲ್ಪ ಹೊತ್ತು ಸೀರೆಯ ಲೋಕದೊಳಗೆ ಹೋಗಿಬಿಡುತ್ತೇನೆ.
ನಾನು ಸೀರೆ ಉಟ್ಟಾಗಲೆಲ್ಲಾ, ನನ್ನ ಮಗಳಂತೂ, “ಅಮ್ಮಾ, ದೇವತೆಗಳು ಹೀಗೇ ಇರ್ತಾರಲ್ಲ’ ಎನ್ನುತ್ತಾಳೆ. (ಸೀರೆ ಉಟ್ಟು, ಆಭರಣ ತೊಡುವುದು ಇಂದಿನ ದಿನಗಳಲ್ಲಿ ಬಹಳ ವಿರಳವಾದ್ದರಿಂದ, ಅಮ್ಮನನ್ನು ಸೀರೆಯಲ್ಲಿ ನೋಡುವ ಮಕ್ಕಳಿಗೆ ಆಕೆ ಫೋಟೋದಲ್ಲಿನ ಸರ್ವಾಲಂಕಾರ ಭೂಷಿತೆಯಾದ ದೇವತೆಯಂತೆ ಕಾಣೋದು ಅತಿಶಯದ್ದಲ್ಲ) ಆಗೆಲ್ಲ ನಾನು, “ಹೌದಮ್ಮಾ…. ದಿನಾ ಸೀರೆ ಉಡುವ ಸಹನೆ ಇರುವುದರಿಂದಲೇ ಅವರು ದೇವರಾಗಿದ್ದು’ ಎನ್ನುತ್ತೇನೆ.
ನೀವೇ ಒಮ್ಮೆ ಯೋಚಿಸಿ ನೋಡಿ; ಸೀರೆ ಉಡುವುದನ್ನು ನಾವು ಕಡಿಮೆ ಮಾಡಿದ್ದರಿಂದಲೇ, ನಮ್ಮ ಸಹನೆಯೂ ಕಡಿಮೆಯಾಗಿ ಮೂಗಿನ ತುದಿಗೆ ಮಣಗಟ್ಟಲೆ ಕೋಪ ಸವರಿಕೊಂಡು ತಿರುಗುತ್ತೇವೆ ಅಂತ ನಿಮಗೆ ಅನ್ನಿಸುವುದಿಲ್ಲವೇ? ಸೀರೆ ಉಡಲು ತಾಳ್ಮೆ, ಏಕಾಗ್ರತೆ ಬೇಕು. ಆದರೆ, ಉಳಿದ ಬಟ್ಟೆಗಳು ಹಾಗಲ್ಲ. ಸೆಲ್ವಾರ್ ಒಳಗೆ ದೇಹವನ್ನು ತೂರಿಸಿಕೊಂಡು, ಒಂದು ಲೆಗ್ಗಿಂಗ್ ಏರಿಸಿಕೊಂಡು ದುಪ್ಪಟ್ಟಾದ ಗೊಡವೆಯೂ ಇಲ್ಲದೇ ಬಿರಬಿರ ನಡೆದುಬಿಡಬಹುದು. ಸೆಲ್ವಾರ್ ಧರಿಸುವುದರಲ್ಲಿ ಎಂಥ ನಿರಾಳತೆಯಿದೆ ನೋಡಿ!
ನನಗೂ ಅದೇ ಕಂಫರ್ಟ್ ಎನ್ನಿಸುತ್ತದೆ. ಸಿಕ್ಕ ಡ್ರೆಸ್ ತೊಟ್ಟು, ಐದು ನಿಮಿಷದಲ್ಲಿ ರೆಡಿಯಾಗಬಹುದು. ಬಳೆ, ಸರ, ಮ್ಯಾಚಿಂಗ್ ಬ್ಲೌಸ್… ಉಹೂಂ, ಯಾವುದರ ಉಪದ್ವಾéಪಗಳಿಲ್ಲ. ಯಾರಾದರೂ ಕೈ ನೋಡಿ, “ಹೇ ತಂಗಿ, ಕೈಗೆ ಬಳೇನೇ ಹಾಕಿದಿಲ್ಯಲೇ’ ಅಂದ್ರೆ, “ಅಯ್ಯೋ, ಹೌದೆ. ಮರ್ತೋಯ್ತು’ ಎಂದು ಹೇಳಿ ಹಲ್ಲು ಕಿರಿದು ಪಾರಾಗಿಯೂ ಬಿಡಬಹುದು.
ಅದೇ ಸೀರೆ ಉಟ್ಟಾಗ ಹಾಗಲ್ಲ…. ಸಾಮಾನ್ಯವಾಗಿ ಅಲಂಕಾರ ಪ್ರಿಯರಲ್ಲದವರನ್ನೂ ಮ್ಯಾಚಿಂಗ್‌ನ ಮಾಯೆ ಕಚ್ಚಿ ಹಿಡಿದು, ಬಿಡುತ್ತದೆ. ಸೀರೆಯದ್ದೇ ಬಣ್ಣದ ಬಳೆ, ಕಿವಿಯೋಲೆ, ನೇಲ್ ಪಾಲಿಶ್, ಬೊಟ್ಟು… ಇನ್ನೂ ಕೆಲವರು, ಇನ್ನೇನೇನೋ ಮ್ಯಾಚಿಂಗ್ ಮಾಡ್ಕೊàತಾರೆ.. ಅದೆಲ್ಲ ಹೇಳ್ಳೋದಲ್ಲ. ಮುಗಿಯೋದಂತೂ ಅಲ್ಲವೇ ಅಲ್ಲ!
“ಎಷ್ಟು ಹೊತ್ತು ಮಾರಾಯ್ತಿ? ನಿಂಗೆ ನಿನ್ನೆ ಹೇಳಿದ್ರೆ ಇವತ್ತು ಹೊರಟು ಮುಗೀತ್ತಿತ್ತೇನೋ’ ಅಂತೆಲ್ಲ ನಮ್ಮೆಜಮಾನರು ರೇಗೊದುಂಟು.
“ಅರೇ, ನಂಗೆ ಡ್ರೆಸ್ ಹಾಕ್ಕೊಂಡು ಬಂದ್ರೂ ನಡೆಯುತ್ತೆ. ಎಂಥ ಮಾಡವು? ನಿಮ್ಮ ಹೆಂಡತಿ ಆಗಿದ್ದಕ್ಕೆ ಸೀರೆ ಉಡೋದು. ಈಗ ನೋಡಿ, ನನ್ನನ್ನ ಎಲ್ಲರೂ ಬರೀ ಕವಿತಾ ಅಂತ ಗುರುತಿಸೋದಿದ್ರೆ ಹೇಗಿದ್ರೂ ಆಗೋದು.. ಆದ್ರೆ ಭಟ್ರ ಹೆಂಡತಿ (ಮನೆಯವರ ಹೆಸರನ್ನು ಸ್ವಲ್ಪ ಗತ್ತಿನಿಂದ, ಒತ್ತು ಕೊಟ್ಟು ಹೇಳಿ) ಹೇಗೇಗೋ ಬಂದ್ರೆ ಆಗುತ್ತೋ? ಒಳ್ಳೆ ಪಿಕೀìಸು ಕಂಡಂಗೆ ಕಾಣ್ತು ಹೇಳಿ ಯಾರಾದ್ರೂ ಅಂದ್ರೆ ನಿಮ್ಮ ಮರ್ಯಾದೆ ಹೋಗು¤. ಅದಕ್ಕೇ ನಾನು ರೆಡಿಯಾಗೋದು, ತಿಳೀತಾ?’ ಅಂತ ಲಾ ಪಾಯಿಂಟ್ ಹಾಕುತ್ತೇನೆ. ನನ್ನ ಲಾಜಿಕ್ಕಿಗೆ ನಗಬೇಕೋ, ಅಳಬೇಕೋ ಗೊತ್ತಾಗದೆ ಯಜಮಾನರು ಸುಮ್ಮನಾಗ್ತಾರೆ… (ಈ ಲಾಜಿಕ್ಕು ಲಾಯಕ್ಕುಂಟು. ನೀವೂ ಬಳಸಬಹುದಾ ನೋಡಿ. ಸೀರೆ ಉಡೋದು ಲೇಟಾದಾಗಲೆಲ್ಲ ಇದೇ ಅಸ್ತ್ರ ಬಳಸಿ ಪಾರಾಗಬಹುದು)
ಗಂಡಸರಿಗೇನು ಗೊತ್ತು?
ಸೀರೆಯಟ್ಟು ಹೊರಡುವಾಗ ಲೇಟಾದರೆ, ಈ ಗಂಡಸರೇನೋ ಕೂಗಾಡ್ತಾರೆ! ಸೀರೆ ಅಂದ್ರೇನು ಪ್ಯಾಂಟು ಶರ್ಟು ಹಾಕ್ಕೊಂಡಂಗೆ ಅಂದುಕೊಂಡಿದ್ದಾರ? ಒಮ್ಮೆ ಉಟ್ಟು ತೋರಿಸಲಿ… ಬೇಡ, ಉಡಿಸಿ ತೋರಿಸಲಿ? ನೆರಿಗೆ ಮಾಡೋದು ಈ ಜನ್ಮದಲ್ಲಿ ಅರ್ಥವಾಗಲಿಕ್ಕಿಲ್ಲ ಅವರಿಗೆ. ನಮ್ಮ ಕಷ್ಟ ನಮಗೆ ಗೊತ್ತು ಅಲ್ವ? ಫ್ಯಾನ್ಸಿ ಸೀರೆಗಳಿಗಾದರೆ ಹದಿನೈದರಿಂದ ಇಪ್ಪತ್ತು ನಿಮಿಷ ಬೇಕು, ಸಿಲ್ಕ್ ಆದರೆ ಇಪ್ಪತ್ತರಿಂದ ಮೂವತ್ತು ನಿಮಿಷ, ಇನ್ನು ಕಾಟನ್ ಸೀರೆ ಆದರೆ ಮೂವತ್ತರಿಂದ, ಗಂಡನ ಕಣ್ಣು ಕೆಂಪಾಗುವವರೆಗೂ!
ನೆರಿಗೆ ಸೆರಗು ತಾಳಮೇಳ
ನೆರಿಗೆ ಸರಿಯಾದರೆ ಸೆರಗು ಗಿಡ್ಡ, ಸೆರಗು ಸರಿಯಾಗಿ ಕೂತರೆ ಈ ನೆರಿಗೆಗಳು ಯಾಕೋ ಸರಿಬರುತ್ತಿಲ್ಲಪ್ಪಾ… ಜೊತೆಗೆ ಬೆನ್ನು ಕಾಣದಂತೆ, ಹೊಟ್ಟೆ ಕಾಣದಂತೆ ಕಂಡಕಂಡಲ್ಲಿ ಸೇಫ್ಟಿ ಪಿನ್‌ಗಳನ್ನು ಚುಚ್ಚಿಕೊಳ್ಳೋದು. ಗಡಿಬಿಡಿಯಲ್ಲಿ ಹೊರಡುವಾಗ ಸೀರೆಯ ನೆರಿಗೆಗಳೆಲ್ಲ ಉದುರಿಬಿಟ್ಟರೆ ಎಂಬ ವಿಚಿತ್ರ ಕಲ್ಪನೆ ಮೂಡಿ ಬೆವರುವುದೂ ಉಂಟು. ಈ ವಿಷಯದಲ್ಲಿ ನಮ್ಮ ಮಾನರಕ್ಷಣೆಯನ್ನು ಗಂಡನಿಗಿಂತಲೂ ಹೆಚ್ಚಿಗೆ ಸೇಫ್ಟಿ ಪಿನ್ ಎಂಬ ಒಂದು ಯಕಃಶ್ಚಿತ್ ವಸ್ತು ಮಾಡಿಬಿಡುತ್ತದೆ! ಹೀಗಾಗಿ ಸ್ತ್ರೀಕುಲ ಆ ವಸ್ತುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಅದನ್ನು ಸದಾ ತಮ್ಮೊಂದಿಗೆ ಇಟ್ಟುಕೊಂಡಿರಬೇಕು.
ಹೊಸಬರಿಗೇ ಫಜೀತಿ
ಮದುವೆಯಾಗದ, ಅಂದ್ರೆ ಸೀರೆ ಅನಿವಾರ್ಯವಲ್ಲದ ಹುಡುಗಿಯರಿಗೆ ಸೀರೆ ಉಡೋದು ಕಷ್ಟವಾಗೋದಿಲ್ಲ. ಅಪರೂಪಕ್ಕೊಮ್ಮೆ ಉಡುವಾಗ ಅಮ್ಮನೋ, ಗೆಳತಿಯರೋ, ಯಾರೂ ಇರದಿದ್ದರೆ ಪಾರ್ಲರ್ ಆಂಟಿಯಾದರೂ ನೆರವಿಗೆ ಇದ್ದೇ ಇರುತ್ತಾರೆ. ಇನ್ನು ಮದುವೆಯಾಗಿ ಹತ್ತಿಪ್ಪತ್ತು ವರ್ಷವಾದವರಿಗೆ ಸೀರೆ ಉಟ್ಟು, ಉಟ್ಟು ಅಭ್ಯಾಸವಾಗಿರುತ್ತೆ. ಅಮ್ಮ ಹೇಗೆ ಅಡುಗೆ ಮಾಡಿದರೂ ಚಂದ ಎನ್ನುವಂತೆ, ಅಭ್ಯಾಸಬಲದಿಂದಲೇ ನಾಜೂಕಾಗಿ ಸೀರೆ ಉಟ್ಟುಬಿಡ್ತಾರೆ. ಆದರೆ, ಈಗಷ್ಟೇ ಮದುವೆಯಾದ ಹುಡುಗಿಯರಿಗೆ ಹೇಳಲಾಗದ ಒ¨ªಾಟ. ಅದ್ಯಾವ ಸೊಸೆ ತಾನೇ, ಅತ್ತೆ ಹತ್ತಿರ ಸೀರೆ ಉಡಿಸಿಕೊಳ್ಳುವ, ನೆರಿಗೆ ಸರಿ ಮಾಡಿಸಿಕೊಳ್ಳುವ
ಧೈರ್ಯ ಮಾಡಿಯಾಳು ಹೇಳಿ?
ಎಲ್ಲ ಸೊಸೆಯರೂ ಹಾಗೆ ಹೆದರಬೇಕಿಲ್ಲ. ಮಗಳಿಗೆ ಸೀರೆ ಉಡಿಸಿದಷ್ಟೇ ಪ್ರೀತಿಯಿಂದ ಸೊಸೆಗೂ ಸೀರೆ ಉಡಿಸುವ ಅತ್ತೆಯರಿದ್ದಾರೆ. ಉದಾಹರಣೆಗೆ ನನ್ನನ್ನೇ ತಗೋಳಿ. ಅದೆಷ್ಟೋ ಬಾರಿ ಅತ್ತೆಯೇ ನನ್ನ ಸೀರೆ ಸರಿ ಮಾಡಿದ್ದಾರೆ. ಆಗೆಲ್ಲಾ ಮುಜುಗರದಿಂದ ಒ¨ªಾಡಿ ಬಿಡುತ್ತಿದ್ದೆ ನಾನು. ದಿನ ಕಳೆದಂತೆ, “ಈಗೀಗ ಸರಿಯಾಗಿ ಉಡ್ತೀಯ’ ಅಂತ ಅತ್ತೆಯವರಿಂದ ಹೊಗಳಿಸಿಕೊಂಡು ಬೀಗಿದ್ದೇನೆ.
ಈಗ ಬಿಡಿ, ಯೂಟ್ಯೂಬ್‌ನಲ್ಲಿ ತರಹೇವರಿಯಾಗಿ ಸೀರೆ ಉಡುವ ವಿಡಿಯೋಗಳು ಲಭ್ಯ. ಜೊತೆಗೆ ಪಾರ್ಲರ್ ಎಂಬ ಮಾಯಾಂಗನೆ ಬಣ್ಣ ಬಣ್ಣದ ಬಾಗಿಲಿನ ಹಿಂದೆ ನಮ್ಮ ಸೇವೆಗೆ ಸದಾ ಸಿದ್ಧಳಾಗಿ¨ªಾಳೆ.
ಏನೇ ಆಗಲಿ, ಸೀರೆಗೆ ಸೀರೆಯೇ ಸಾಟಿ. ಸೀರೆ ಉಟ್ಟಾಗ ನಮಗೇ ಅರಿವಿಲ್ಲದೆ ಗಂಭೀರತೆ, ತುಂಬು ಹೆಣ್ತನದ ನಯ, ನಾಜೂಕು, ವಿನಯತೆ, ಹದವಾದ ನಡಿಗೆ… ಹೀಗೆ ದಿನನಿತ್ಯ ನಾವಲ್ಲದ ಮತ್ತೂಂದು ವಿಶೇಷ ವ್ಯಕ್ತಿತ್ವ ಪರಕಾಯ ಪ್ರವೇಶ ಮಾಡಿ, ಸೀರೆಯ ಜೊತೆಗೆ ಮೈ-ಮನವನ್ನು ಸುತ್ತಿಕೊಂಡು ಬಿಡುತ್ತದೆ. ಇದೇ ನಮ್ಮ ಸೀರೆ ಸಂಸ್ಕೃತಿಯ ಮಹತ್ವವಲ್ಲವೇ? ಉಡೋದರಲ್ಲಿ ಏನೇ ರಗಳೆ ಇರಲಿ, ಕಷ್ಟವಿರಲಿ, ಒಮ್ಮೆ ಉಟ್ಟ ಮೇಲೆ ಮತ್ತೆ ಬಿಚ್ಚುವ ಮನಸ್ಸಾಗಲ್ಲ! ಹೆಣ್ಣುಮಕ್ಕಳು ಕಂಫರ್ಟ್ ಎನ್ನಿಸುವ ಯಾವುದೇ ಬಟ್ಟೆ ಹಾಕಿಕೊಳ್ಳಲಿ, ಬೆರಗಾಗುವಂತೆ ಕಾಣೋದು ಮಾತ್ರ ಸೀರೆಯಲ್ಲಿಯೇ…
-ಕವಿತಾ ಭಟ್, ಕುಮಟಾ
ಟಾಪ್ ನ್ಯೂಸ್
![Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್… 5 ಭಯೋತ್ಪಾದಕರು ಹತ](https://www.udayavani.com/wp-content/uploads/2024/12/kashmir-1-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್… 5 ಭಯೋತ್ಪಾದಕರು ಹತ](https://www.udayavani.com/wp-content/uploads/2024/12/kashmir-1-150x84.jpg)
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
![22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?](https://www.udayavani.com/wp-content/uploads/2024/12/DOKLAM-150x79.jpg)
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
![Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್](https://www.udayavani.com/wp-content/uploads/2024/12/mallya-150x89.jpg)
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
![Mangalore_Airport-NewTerminal](https://www.udayavani.com/wp-content/uploads/2024/12/Mangalore_Airport-NewTerminal-150x90.jpg)
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
![H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ](https://www.udayavani.com/wp-content/uploads/2024/12/VISA-150x84.jpg)
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.