ನಿಮ್ಮ ಪ್ರೀತಿಗೆ, “ಥ್ಯಾಂಕ್ಯೂ’ ಕಾಣಿಕೆ!
Team Udayavani, Jul 12, 2017, 11:28 AM IST
ಬದುಕಿನಲ್ಲಿ “ಥ್ಯಾಂಕ್ಯೂ’ ಎನ್ನುವ ಪದದ ಮಾಯೆ ದೊಡ್ಡದು. ನಮ್ಮೆಲ್ಲ ಶ್ರಮದ ಪೂರ್ಣವಿರಾಮದಲ್ಲಿ ಸಿಕ್ಕ ಉಡುಗೊರೆ ಈ “ಥ್ಯಾಂಕ್ಯೂ’. ದಿನಾ ಮೇಡಂ ಅವರಿಂದ ಥ್ಯಾಂಕ್ಯೂ ಸ್ವೀಕರಿಸಿದ ಒಬ್ಬ ಕಂಡಕ್ಟರ್‌ನ ಲವಲವಿಕೆಯ ಗುಟ್ಟು ಈ ಲೇಖನದಲ್ಲಿ ರಟ್ಟಾಗಿದೆ…
“ರೀ, ಚಿಲ್ಲರೆ ಕೊಡ್ರೀ. ಇಲ್ಲ ಅಂದ್ರೆ ಬೇರೆ ಬಸ್ಸಿಗೆ ಬನ್ನಿ… - ಚಿಲ್ಲರೆ ವಿಷಯವಾಗಿ ಕಂಡಕ್ಟರ್ ಪ್ರಯಾಣಿಕರೊಬ್ಬರ ಹತ್ರ ಜಗಳ ಮಾಡ್ತಾ ಇದ್ದಿದ್ ಕೇಳಿ ನನ್ನ ಎದೆ ಧಸಕ್ ಅಂತು. ಅಯ್ಯೋ ದೇವರೇ ನನ್ ಹತ್ರಾನೂ ಚಿಲ್ಲರೆ ಇಲ್ವಲ್ಲಪ್ಪಾ… ಅಷ್ಟೇ! ಇವತ್ತು ನನ್ನದೂ ಗಾನ್ ಕೇಸ್ ಅಂದುಕೊಂಡೆ. ಮೊದಲು ಯಾವಾಗಲೋ ಒಂದ್ಸಲ ಚಿಲ್ಲರೆ ಇಲ್ಲದೆ, ಚೆನ್ನಾಗಿ ಬೈಸಿಕೊಂಡದ್ದು ನೆನಪಾಯಿತು. ಅದು ಒಂಭತ್ತೂವರೆ ರಾತ್ರಿ, ಬೇರೆ ಬಸ್ ಎಷ್ಟ್… ಹೊತ್ತಿಗೋ ಯಾರಿಗ್ ಗೊತ್ತು?! ಮೊದಲೇ ತಡ ಆಗೋಯ್ತಲಪ್ಪ ಅನ್ನೋ ಟೆನ್… ಚಿಲ್ಲರೆ ಬೇರೆ ಇಲ್ಲ, ಏನಪ್ಪಾ ಮಾಡೋದು? ಅಂದುಕೊಳ್ಳುವಾಗಲೇ ಕಂಡಕ್ಟರ್ ಬಂದ.
ಇವತ್ತು ನನ್ನ ದಿನಾನೇ ಸರಿ ಇಲ್ಲ ಅಂದುಕೊಂಡೆ. ಬೈದರೆ ಕಿವುಡರ ಹಂಗೆ ಕುಳಿತರಾಯಿತು ಅಂತ ಧೈರ್ಯ ಮಾಡಿ “ಸರ್, ಚನ್ನಸಂದ್ರ ಒಂದು’ ಅಂತ ಹೇಳಿ ನೂರು ರೂಪಾಯಿ ಕೊಟ್ಟೆ. ನನ್ನನ್ನು ನೋಡಿ, “ಅರೇ ಮೇಡಂ, ನೀವಾ?! ಯಾಕೆ ಇಷ್ಟು ಹೊತ್ತು?’ ಅಂತ ಕೇಳಿದ.. ನಾ ಕಂಗಾಲು. ನನ್ ಗುರುತು ಕಂಡಕ್ಟರ್‌ಗೆ ಹೆಂಗೆ ಅಂತ..!? “ಚಿಲ್ಲರೆ ಆಮೇಲೆ ಕೊಡ್ತೀನಿ’ ಅಂತ ಹೇಳಿ, ಟಿಕೆಟ್ ಕೊಟ್ಟ.. ನಾ ಅಕ್ಷರಶಃ ಬೆಪ್ಪುತಕ್ಕಡಿಯಂತಾಗಿದ್ದೆ.
ಮನಸ್ಸು ನಿರಾಳವೇನೋ ಆಯ್ತು. ಹಿಂದೆಯೇ, ಕಂಡಕ್ಟರ್‌ಗೆ ನನ್ನ ಪರಿಚಯ ಹೇಗೆ ಅಂತ ಯೋಚನೆ ಮಾಡಿ ತಲೆ ಕೆಟ್ ಹೋಯಿತು. ನಾಲ್ಕು ಸ್ಟಾಪ್ ಆದ ಮೇಲೆ ಬಸ್ ಆಲ…ಮೋಸ್ಟ್ ಖಾಲಿ. ಒಂದು ಸ್ಟಾಪಿನಲ್ಲಿ ಹತ್ತಿದ ಕುಡುಕನೊಬ್ಬ ನನ್ನ ಹಿಂದಿನ ಸೀಟ್‌ನಲ್ಲಿ ಕೂರಲು ಬಂದ. ಅದನ್ನು ಗಮನಿಸಿದ ಕಂಡಕ್ಟರ್, “ಹಿಂದೆ ಕೂತ್ಕೊ. ಮೇಡಂ ಇರೋದು ಕಾಣÕಲ್ವಾ?’ ಅಂತ ದಬಾಯಿಸಿ ನನ್ನ ಮುಂದಿನ ಸೀಟಲ್ಲಿ ಬಂದು ಕುಳಿತು ಮಾತು ಶುರುಮಾಡಿಕೊಂಡ…
“ಏನ್ ಮೇಡಂ ಇವತ್ ಈ ರೂಟು?’
“ಎಲೆಕ್ಟ್ರಾನಿಕ್ ಸಿಟಿ ಆಫೀಸಿಗೆ ಹೋಗಿದ್ದೆ’.
“ಅಣ್ಣ ಚೆನ್ನಾಗಿದ್ದಾರಾ?’
ನಂಗೆ ಫುಲ… ಕನ್‌ಫ್ಯೂಶನ್! “ನಂಗೆ ಅಣ್ಣ ಇಲ್ಲ’ ಅಂದೆ.
“ಅಯ್ಯೋ ಮೇಡಂ, ಮತ್ತೆ ಆವತ್ ಬೈಕಲ್ಲಿ ಒಬ್ರ ಜೊತೆಗ್ ಹೋದ್ರಲ್ಲ’.
“ಅವ್ರು ನನ್ ಗಂಡ’.
“ಅವ್ರನ್ನೇ ಮೇಡಂ ಅಣ್ಣ ಅಂದಿದ್ದು’.
ನನ್ನ ಪೆದ್ದುತನಕ್ಕೆ ನನಗೇ ನಗು ಬಂತು.
“ನನ್ ಪರಿಚಯ ನಿಮಗೆ ಹೆಂಗೆ’
“ನೀವ್ ದಿನಾ ಬನಶಂಕರಿ ಗಾಡೀಲಿ ಬತ್ತೀರಲ್ಲ. ಎಷ್ಟು ಚೆಂದ ಸ್ಮೈಲ್… ಕೊಡ್ತೀರಾ, ಒಂದ್ ದಿನಾನೂ ತಪ್ಪದೆ ಥ್ಯಾಂಕÕ… ಅಂತೀರಾ… ಮರಯಕಾಗ್ತದಾ? ಬೆಳ್ ಬೆಳ್ಗೆ ಡೂಟಿ ಮಾಡ್ಬೇಕಾರೆ ನಿಮ್ಮಂಥ ನಾಕು ಪ್ಯಾಸೆಂಜರ್ ಬಂದರೆ ಸಾಕು ಮೇಡಂ, ದಿನಾಯೆಲ್ಲಾ ಚನ್ನಾಗಿರತ್ತೆ’ ಅಂದ…
ನಂಗೆ ಖರೇ ಆಶ್ಚರ್ಯ ಆಯಿತು. ಯುಎಸ್‌ಎ ಪ್ರಾಜೆಕr…ನಲ್ಲಿ ಕೆಲಸ ಮಾಡಿ, ಅವರ ಜೊತೆ ಮಾತಾಡಿ, ಚಿಕ್ಕಪುಟ್ಟದ್ದಕ್ಕೆÇÉಾ ಥ್ಯಾಂಕ್ಸ್… ಹೇಳ್ಳೋದು ರೂಢಿ ಆಗಿದ್ದು ಒಳ್ಳೆಯದಾಯಿತು ಅಂದುಕೊಂಡೆ. ದಿನಾ ಬಸ್ಸಲ್ಲಿ ಸಾವಿರಾರು ಜನ ಓಡಾಡುವಾಗ, ಸುಮ್ಮನೆ ಕೊಟ್ಟ ಒಂದು ಸ್ಮೈಲ್…, ರೂಢಿಯಲ್ಲಿ ಬಂದ ಥ್ಯಾಂಕ್ಸ್… ಇಷ್ಟು ಪರಿಣಾಮ ಬೀರಬಹುದೆಂದು ಗೊತ್ತಿರಲಿಲ್ಲ. 8 ರೂಪಾಯಿ ಚಿಲ್ಲರೆಗೆ 10ರ ನೋಟು ಕೊಟ್ಟ. ಎರಡು ರೂಪಾಯಿ ಜಾಸ್ತಿ! ಮನೆಗೆ ಬಂದು ಇಷ್ಟನ್ನೂ ಗಂಡನ ಹತ್ರ ಹೇಳಿದೆ. “ನಂಗಂತೂ ಒಂದ್ ದಿನಾನೂ ಥ್ಯಾಂಕ್ಸ್ ಹೇಳಿಲ್ಲ ನೀನು’ ಅಂದರು ಕಣ್ಣು ಮಿಟುಕಿಸುತ್ತಾ..!
ಶ್ವೇತಾ ಹೆಗಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.